# News 19 Kannada ## Posts - [ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ದ.ಕ. ಜಿಲ್ಲೆಯಲ್ಲಿ ಬೈಕ್‌ಯಾತ್ರೆ!](https://news19kannada.com/bike-tour-in-d-c-district-to-boost-self-confidence-among-government-school-students/): ಮಂಗಳೂರು: ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮತ್ತು ಭವಿಷ್ಯದ ಶೈಕ್ಷಣಿಕ ಸವಾಲುಗಳಿಗೆ ಅವರನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿರುವ ಡ್ರೀಮ್ಸ್ ಆನ್ ವೀಲ್ಸ್ ಎಂಬ ಮಹತ್ವಾಕಾಂಕ್ಷೆಯ ಅಭಿಯಾನವನ್ನು ಬೈಕ್ ಯಾತ್ರೆಯ ಮೂಲಕ ಕೈಗೆತ್ತಿಗೊಂಡಿದ್ದಾರೆ.ಮಾಜಿ ಪತ್ರಕರ್ತ ಮತ್ತು ಸೆಂಟರ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಎನ್‌ಜಿಒದ ಸಹ-ಸಂಸ್ಥಾಪಕ ಶ್ರೀನಿವಾಸನ್ ನಂದಗೋಪಾಲ್ ಈ ವಿಶಿಷ್ಟ ಉಪಕ್ರಮವನ್ನು ಕೈಗೆತ್ತಿಕೊಂಡಿದ್ದಾರೆ ಮತ್ತು ತಮ್ಮ ಮೋಟಾರ್‌ಸೈಕಲ್‌ನಲ್ಲಿ ರಾಜ್ಯಾದ್ಯಂತ ಏಕಾಂಗಿಯಾಗಿ ಪ್ರಯಾಣಿಸಲಿದ್ದಾರೆ.ನಂದಗೋಪಾಲ್ ತಮ್ಮ ಹೋಂಡಾ CB350 ಬೈಕ್‌ನಲ್ಲಿ ವಿವಿಧ ಮೂಲೆಗಳಿಗೆ ಪ್ರಯಾಣಿಸುತ್ತಾರೆ ಮತ್ತು ಆಯ್ದ ಶಾಲೆಗಳು ಅಥವಾ ಕ್ಲಸ್ಟರ್‌ಗಳಲ್ಲಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಾರೆ.ಈ ಕಾರ್ಯಕ್ರಮವನ್ನು ವಿಶೇಷವಾಗಿ 10 ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳು ಪಿಯುಸಿ ಹಂತವನ್ನು ತಲುಪಿದಾಗ ಅವರು ಎದುರಿಸುವ ಆತ್ಮವಿಶ್ವಾಸದ ಅಂತರವನ್ನು ಪರಿಹರಿಸುವುದು, ಪರೀಕ್ಷಾ ಭಯವನ್ನು ಹೋಗಲಾಡಿಸಲು ಸಹಾಯ ಮಾಡುವುದು ಮತ್ತು ಸೂಕ್ತವಾದ ವೃತ್ತಿ ಮಾರ್ಗಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶಗಳಾಗಿವೆ. - [ನ. 29: ಬಜಿರೆ ಪಿಯಂಶ್ರೀ ಸ.ಉ.ಪ್ರಾ. ಶಾಲೆಯ ವಾರ್ಷಿಕೋತ್ಸವ ವೈಭವ](https://news19kannada.com/nov-29-bajirao-piyamshree-s-u-p-schools-anniversary-celebration/): ವೇಣೂರು: ಪಿಯಂಶ್ರೀ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬಜಿರೆ ಇಲ್ಲಿಯ ವಾರ್ಷಿಕೋತ್ಸವ ಸಮಾರಂಭವು ನ. 29ರಂದು ಬೆಳಿಗ್ಗೆ 9-00 ಗಂಟೆಯಿಂದ ಆರಂಭವಾಗಲಿದೆ.ಅಂದು ಬೆಳಿಗ್ಗೆ 9-00 ಗಂಟೆಗೆ ಧ್ವಜಾರೋಹಣ, ಬಳಿಕ ಉಪಹಾರ, ಬಹುಮಾನ ವಿತರಣೆ ನಡೆಯಲಿದೆ. ಅಪರಾಹ್ನ 2-00 ಗಂಟೆಯಿಂದ 3-00 ಗಂಟೆಯವರೆಗೆ ಅಂಗನವಾಡಿ, ಎಲ್ ಕೆಜಿ, ಯುಕೆಜಿ, 1, 2 ಮತ್ತು 3 ನೇ ತರಗತಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 3-00 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಲಿದೆ. - [ಮುಂಜಾನೆಯಿಂದಲೇ ಮೋಡಕವಿದ ವಾತಾವರಣ; ಇಂದೂ ಕೂಡಾ ಸಾಧಾರಣ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ](https://news19kannada.com/cloudy-weather-since-morning-meteorological-department-predicts-moderate-rain-today-as-well/): ಮಂಗಳೂರು: ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಿನ್ನೆ ಶನಿವಾರ ರಾತ್ರಿ ಬೆಳ್ತಂಗಡಿ ತಾಲೂಕು ತಾಲೂಕಿನ ಅಲ್ಲಲ್ಲಿ ಸಾಧಾರಣ ಮಳೆ ಬಂದಿದೆ. ಇಂದು ರವಿವಾರ ಮುಂಜಾನೆಯಿಂದಲೇ ಮೋಡಕವಿದ ವಾತಾವರಣ ಇದ್ದು, ಸಾಧಾರಣ ಮಳೆಯ ಮುನ್ಸೂಚನೆ ನೀಡಲಾಗಿದೆ. ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ?ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ,ಶಿವಮೊಗ್ಗ ಮತ್ತು ತುಮಕೂರು ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಯಾವೆಲ್ಲಾ ಪ್ರದೇಶಗಳಲ್ಲಿ ಒಣ ಹವೆ ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಸಂಪೂರ್ಣವಾಗಿ […] - [ಖಾಕಿ ತನಿಖೆ ವೇಳೆ ಬಯಲಾಯ್ತು 7.11 ಕೋಟಿ ಹಣ ದರೋಡೆಯ ಗುಟ್ಟು..!](https://news19kannada.com/the-secret-of-the-rs-7-11-crore-robbery-was-revealed-during-the-khaki-investigation/): ಪೊಲೀಸರ ತನಿಖೆ ವೇಳೆ ಬೆಂಗಳೂರಿನಲ್ಲಿ ನಡೆದ 7.11 ಕೋಟಿ ರೂ. ದರೋಡೆ ಪ್ರಕರಣದ ಗುಟ್ಟು ಹೊರಬಂದಿದೆ. ಸಾಲ ಮತ್ತು ಜೂಜಿನ ಚಟದಿಂದ ಹಣದ ಅವಶ್ಯಕತೆಯಲ್ಲಿದ್ದ ಆರೋಪಿಗಳು ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ವಾಹನ ರಾಬರಿಗೆ ಪ್ಲ್ಯಾನ್​​ ರೂಪಿಸಿದ್ದರು. ದರೋಡೆ ಹಣದಲ್ಲಿ ಸಾಲ ತೀರಿಸಿ, ಉಳಿದ ಹಣದಲ್ಲಿ ಐಶಾರಾಮಿ ಜೀವನ ನಡೆಸೋದು ಆರೋಪಿಗಳ ಕನಸಾಗಿತ್ತು ಎಂಬುದು ಬಯಲಾಗಿದೆ. ಇತ್ತ ನಗರ ಪೊಲೀಸರ ಕಾರ್ಯಕ್ಕೆ ಗೃಹ ಸಚಿವರಿಂದ ಪ್ರಶಂಸೆ ವ್ಯಕ್ತವಾಗಿದೆ. ಹಾಲಿ ಸಿಬ್ಬಂದಿಯೇ ದರೋಡೆಯ ಮಾಸ್ಟರ್ ಮೈಂಡ್​​! ಮುಖ್ಯ ಆರೋಪಿಗಳಾದ ಗೋಪಿ ಮತ್ತು ಕ್ಸೇವಿಯರ್ 17 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದರು. ಆ ಪೈಕಿ ಕ್ಸೇವಿಯರ್ ಒಂದು ವರ್ಷದ ಹಿಂದೆಯೇ ಕೆಲಸ ಬಿಟ್ಟಿದ್ದ. ಕುಡಿತ, ಜೂಜಿನ ಚಟದಿಂದಾಗಿ ಆರೋಪಿಗಳು ಹಣಕಾಸು ಸಮಸ್ಯೆಗೆ ಸಿಲುಕಿದ್ದರು. ದರೋಡೆ ಹಣದಲ್ಲಿ ಸಾಲ ತೀರಿಸಿ, ಉಳಿದ ಹಣದಲ್ಲಿ ಐಷಾರಾಮಿ ಜೀವನ ನಡೆಸುವ ಪ್ಲ್ಯಾನ್​​ ಆರೋಪಿಗಳದ್ದಾಗಿತ್ತು. ಈ ಹಿನ್ನಲೆ ಪೊಲೀಸ್ ಕಾನ್ಸ್‌ಟೇಬಲ್ ಅಣ್ಣಪ್ಪ ನಾಯ್ಕ್ ಪ್ಲ್ಯಾನ್ ಪ್ರಕಾರ ATM ವಾಹನ ದರೋಡೆ ಮಾಡಲಾಗಿದ್ದು, […] - [ಗಾಯಾಳು ಬಿಜೆಪಿ ಕಾರ್ಯಕರ್ತನ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ ಶಾಸಕ ಪೂಂಜ](https://news19kannada.com/mla-poonja-visits-injured-bjp-workers-house-to-inquire-about-his-health/): ಬೆಳ್ತಂಗಡಿ: ಮಿತ್ತಬಾಗಿಲು ಗ್ರಾಮದ ಅಡ್ಕ ನಿವಾಸಿ ಬಿಜೆಪಿ ಬೂತ್ ೧೮ರ ಕಾರ್ಯದರ್ಶಿ ರಮೇಶ್ ಗೌಡರವರು ತಾನು ಕೆಲಸ ಮಾಡುವ ಸಂದರ್ಭದಲ್ಲಿ ಬಿದ್ದು ಗಾಯಗೊಂಡಿದ್ದು, ಅವರ ಮನೆಗೆ ಶಾಸಕರಾದ ಹರೀಶ್ ಪೂಂಜರವರು ಭೇಟಿ ನೀಡಿ ಆರೋಗ್ಯ ಕ್ಷೇಮ ವಿಚಾರಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ಪಾರೆಂಕಿ, ಲಾಯಿಲ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅರವಿಂದ ಲಾಯಿಲ, ಮಲವಂತಿಗೆ ಶಕ್ತಿಕೇಂದ್ರ ಅಧ್ಯಕ್ಷರಾದ ಮದುಸೂಧನ್, ಮಿತ್ತಬಾಗಿಲು ಶಕ್ತಿಕೇಂದ್ರ ಅಧ್ಯಕ್ಷರಾದ ಸಚಿನ್ ಗೌಡ ಜೊತೆಗಿದ್ದರು. - [ಮೃತ ವಿದ್ಯಾರ್ಥಿ ತನ್ವಿತ್ ಮನೆಗೆ ಶಾಸಕ ಪೂಂಜ ಭೇಟಿ; ಮನೆಮಂದಿಗೆ ಸಾಂತ್ವಾನ](https://news19kannada.com/mla-poonja-visits-deceased-student-tanvits-house-consoles-family/): ಬೆಳ್ತಂಗಡಿ: ಇತ್ತೀಚೆಗೆ ರಿಕ್ಷಾ ಅಪಘಾತದಲ್ಲಿ ಮೃತರಾದ ವಿದ್ಯಾರ್ಥಿ ನಾವೂರು ಗ್ರಾಮದ ತನ್ವಿತ್ ಅವರ ಮನೆಗೆ ಶಾಸಕರಾದ ಹರೀಶ್ ಪೂಂಜರವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ ಪಾರೆಂಕಿ, ಲಾಯಿಲ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅರವಿಂದ್ ಲಾಯಿಲ, ಬಂಗಾಡಿ ಸಿಎ ಬ್ಯಾಂಕ್ ಅಧ್ಯಕ್ಷರಾದ ಹರೀಶ್ ಮೋರ್ತಾಜೆ, ಬಿಜೆಪಿ ದ.ಕ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ಗಣೇಶ್ ನಾವೂರು, ಶಕ್ತಿಕೇಂದ್ರ ಅಧ್ಯಕ್ಷರಾದ ಪ್ರದೀಪ್, ಮಂಡಲ ಕಾರ್ಯದರ್ಶಿ ಶ್ರೀಮತಿ ವೇದಾವತಿ, ಗ್ರಾ.ಪಂ ಸದಸ್ಯರಾದ ಶ್ರೀ ಪ್ರಿಯ ಲಕ್ಷ್ಮಣ ಜೊತೆಗಿದ್ದರು. - [ನಾವೂರು: ಶ್ರೀಮತಿ ಹರಿಣಾಕ್ಷಿಯವರ ಆರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜ](https://news19kannada.com/navur-mla-harish-poonja-inquired-about-the-health-of-mrs-harinakshi/): ಬೆಳ್ತಂಗಡಿ: ನಾವೂರು ಗ್ರಾಮದ ಪರಾರಿ ನಿವಾಸಿ ಕಾಂತಪ್ಪ ಮೂಲ್ಯರವರ ಪತ್ನಿ ಶ್ರೀಮತಿ ಹರಿಣಾಕ್ಷಿರವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಮನೆಗೆ ಶಾಸಕರಾದ ಹರೀಶ್ ಪೂಂಜರವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ಪಾರೆಂಕಿ, ಬಂಗಾಡಿ ಸಿಎ ಬ್ಯಾಂಕ್ ಅಧ್ಯಕ್ಷರಾದ ಹರೀಶ್ ಮೋರ್ತಾಜೆ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಗಣೇಶ್ ಗೌಡ, ಮಂಡಲ ಕಾರ್ಯದರ್ಶಿ ಪ್ರಭಾಕರ್ ಸವಣಾಲು, ಗ್ರಾಮ ಪಂಚಾಯತ್ ನಾವೂರು ಅಧ್ಯಕ್ಷರಾದ ಶ್ರೀಮತಿ ಸುನಂದ, ಉಪಾಧ್ಯಕ್ಷರಾದ ಶ್ರೀಮತಿ ಮಮತಾ, ಸದಸ್ಯರಾದ ಶ್ರೀಮತಿ ವೇದಾವತಿ, ಶಕ್ತಿಕೇಂದ್ರ ಅಧ್ಯಕ್ಷರಾದ ಪ್ರದೀಪ್ ಜೊತೆಗಿದ್ದರು. - [3ನೇ ವರ್ಷದ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳಕ್ಕೆ ಚಾಲನೆ](https://news19kannada.com/launch-of-the-3rd-year-kodamge-veera-vikrama-jodukare-kambala/): ಕಂಬಳ ಕ್ರೀಡೆ ಕೇವಲ ಮನೋರಂಜನೆ ಅಲ್ಲ, ಅದೊಂದು ಧಾರ್ಮಿಕ ನಂಬಿಕೆ: ಪ್ರಕಾಶ್ ಆಚಾರ್ಯ ಪೂಂಜ ಸಿದ್ದಕಟ್ಟೆ: ತುಳುನಾಡಿನ ರೈತರ ಕಂಬಳ ಕ್ರೀಡೆ ಕೇವಲ ಮನೋರಂಜನೆಗೆ ಸೀಮಿತವಾಗದೆ, ಧಾರ್ಮಿಕ ನಂಬಿಕೆಯೊಂದಿಗೆ ಬೆಸೆದುಕೊಂಡಿದೆ ಎಂದು ಪೂಂಜ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ ಹೇಳಿದ್ದಾರೆ. ಇಲ್ಲಿನ ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡು ಕರೆಯಲ್ಲಿ ಶನಿವಾರ ನಡೆದ 3ನೇ ವರ್ಷದ ವೀರ-ವಿಕ್ರಮ ಜೋಡುಕರೆ ಕಂಬಳ ಧ್ವಜಾರೋಹಣ ನೆರವೇರಿಸಿದ ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೂಡುಬಿದ್ರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಯುವರಾಜ್ ಜೈನ್ ಕಂಬಳ ಕರೆ ಉದ್ಘಾಟಿಸಿ ಮಾತನಾಡಿ, ‘ ರಾಜಾಶ್ರಯ ಮೂಲಕ ಬೆಳೆದು ಬಂದ ಕಂಬಳದ ಬಗ್ಗೆ ಶಿಲಾ ಶಾಸನಗಳಲ್ಲಿಯೂ ಉಲ್ಲೇಖವಿದೆ’ ಎಂದರು. ಉದ್ಯಮಿ ಕರುಣಾಕರ ಶೆಟ್ಟಿ ಗೋಳಿದೊಟ್ಟು, ಕೊಯಿಲ ಶ್ರೀ ಮಹಾಗಣಪತಿ ದೇವಳದ ಮೊಕ್ತೇಸರ ಎಂ. ಪದ್ಮರಾಜ್ ಬಳ್ಳಾಲ್ ಮಾವಂತೂರು, ರೋಟರಿ ಮಾಜಿ ಸಹಾಯಕ ಗವರ್ನರ್ ಇಲ್ಯಾಸ್ ಸ್ಯಾಂಕ್ಟೀಸ್, ಜಿಲ್ಲಾ ತೀಪರ್ುಗಾರ ವಿಜಯಕುಮಾರ್ ಕಂಗಿನ ಮನೆ ಶುಭ ಹಾರೈಸಿದರು. ಬಂಟ್ವಾಳ […] - [ವೇಣೂರು ವ್ಯಾಪ್ತಿಯ ಅಲ್ಲಲ್ಲಿ ದಿಢೀರ್ ಮಳೆ!](https://news19kannada.com/sudden-rains-in-scattered-areas-of-venur-area/): ವೇಣೂರು: ವೇಣೂರು ಪರಿಸರದ ಅಲ್ಲಲ್ಲಿ ಇಂದು ರಾತ್ರಿ 8.40ರ ಸುಮಾರಿಗೆ ದಿಢೀರ್ ಮಳೆಯಾಗಿದೆ.ದಿಢೀರ್ ಮಳೆಯಿಂದ ಕೃಷಿ ಕರು ಅಂಗಳ ದಲ್ಲಿ ಹಾಕಿದ್ದ ಅಡಿಕೆ ಒದ್ದೆಯಾಗಿದೆ. - [ಕುದ್ರೋಳಿಯಲ್ಲಿ ಅಧಿಕೃತ ಕಸಾಯಿಖಾನೆ ತೆರೆಯಲು ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ!](https://news19kannada.com/dyfi-protests-demanding-the-opening-of-an-official-slaughterhouse-in-kudroli/): ಮಂಗಳೂರು, ನ. 22: ಕುದ್ರೋಳಿಯಲ್ಲಿ ಅಧಿಕೃತ ಕಸಾಯಿಖಾನೆ ತೆರೆಯಲು ಒತ್ತಾಯಿಸಿ ಮತ್ತು ಸಂಸ್ಕರಿತ ಆಡು, ಕುರಿ, ದನದ ಮಾಂಸಾಹಾರಿಗಳಿಗೆ ಆಹಾರದ ಹಕ್ಕನ್ನು ನಿರಾಕರಿಸಿದ ಕ್ರಮವನ್ನು ಖಂಡಿಸಿ ಹಾಗೂ ದ.ಕ. ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಕುದ್ರೋಳಿ ಕಸಾಯಿಖಾನೆಯ ಮುಂದೆ ಪ್ರತಿಭಟನೆ ನಡೆಸಲಾಯಿತು. - [ನ. 28ರಂದು ಪ್ರಧಾನಿ ಮೋದಿ ಉಡುಪಿಗೆ, ಪ್ರಧಾನಿ ಕಚೇರಿಯಿಂದ ಅಧಿಕೃತ ಮಾಹಿತಿ, ವೇಳಾಪಟ್ಟಿ ಪ್ರಕಟ](https://news19kannada.com/prime-minister-modi-to-visit-udupi-on-nov-28-official-information-and-schedule-released-by-prime-ministers-office/): ಉಡುಪಿ, ನವೆಂಬರ್ 22: ಪ್ರಧಾನಿ ನರೇಂದ್ರ ಮೋದಿ ಅವರ ಉಡುಪಿ ಭೇಟಿಯನ್ನು ಪ್ರಧಾನಿ ಕಚೇರಿ (ಪಿಎಂಒ) ದೃಢಪಡಿಸಿದೆ.ನವೆಂಬರ್ 28ರಂದು ಪ್ರಧಾನಿ ಮೋದಿ ಉಡುಪಿಗೆ ಭೇಟಿ ನೀಡುವ ಬಗ್ಗೆ ಪ್ರಧಾನಿ ಕಚೇರಿ ರಾಜ್ಯ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದೆ.ವೇಳಾಪಟ್ಟಿಯ ಪ್ರಕಾರ, ಪ್ರಧಾನಿ ಮೋದಿ ಬೆಳಿಗ್ಗೆ 11.05 ಕ್ಕೆ ದೆಹಲಿಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ತಕ್ಷಣ ಬೆಳಿಗ್ಗೆ 11.10ಕ್ಕೆ ಹೆಲಿಕಾಪ್ಟರ್ ಮೂಲಕ ಉಡುಪಿಗೆ ತೆರಳಲಿದ್ದಾರೆ. ಅವರು ಬೆಳಿಗ್ಗೆ 11.35ಕ್ಕೆ ಆದಿ ಉಡುಪಿ ಹೆಲಿಪ್ಯಾಡ್ ತಲುಪಲಿದ್ದಾರೆ.ಈ ಹಿಂದೆ ಯೋಜಿಸಲಾಗಿದ್ದ ರೋಡ್ ಶೋ ರದ್ದಾಗಿದೆ. ಪ್ರಧಾನಿ ಮೋದಿ ಮಧ್ಯಾಹ್ನ 12 ಗಂಟೆಗೆ ನೇರವಾಗಿ ಕೃಷ್ಣ ಮಠಕ್ಕೆ ಭೇಟಿ ನೀಡಿ, ಶ್ರೀಕೃಷ್ಣ ದರ್ಶನ ಪಡೆದು, ಲಕ್ಷ ಕಾಂತ ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ.ಮೋದಿ ಮಧ್ಯಾಹ್ನ 1.35 ಕ್ಕೆ ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದು, ಅಲ್ಲಿಂದ ಮಧ್ಯಾಹ್ನ 2 ಗಂಟೆಗೆ ಗೋವಾಕ್ಕೆ ತೆರಳಲಿದ್ದಾರೆ. ಪ್ರಧಾನಿಯವರ ಭೇಟಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ರಾಜ್ಯ ಕಾರ್ಯದರ್ಶಿಗೆ […] - [ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ವಾರ್ಷಿಕೋತ್ಸವ ಎಕ್ಸೆಲಿಯಾ-2025 ಕಾರ್ಯಕ್ರಮದ ಉದ್ಘಾಟನೆ](https://news19kannada.com/venur-excel-techno-school-anniversary-excelia-2025-program-inauguration/): ಶಿಕ್ಷಣದ ಜೊತೆ ಸಮಾಜಕ್ಕೆ ಪ್ರೇರಣದಾಯಕ ಕೆಲಸ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಿ: ಡಾ. ಎಚ್. ಮಾಧವ ಭಟ್ ವೇಣೂರು: ಇಲ್ಲಿಯ ಎಕ್ಸೆಲ್ ಟೆಕ್ನೋ ಸ್ಕೂಲ್ ಇದರ ವಾರ್ಷಿಕೋತ್ಸವ ಸಮಾರಂಭ ಎಕ್ಸೆಲಿಯಾ-2025 ಕಾರ್ಯಕ್ರಮವು ಇಂದು (ನ. 22ರಂದು) ಎಕ್ಸೆಲ್‌ನ ವಿದ್ಯೋದಯ ಕ್ಯಾಂಪಸ್‌ನಲ್ಲಿ ವೈಭವಯುತವಾಗಿ ನಡೆಯಿತು.ಕಿಂದರ್ ಗಾರ್ಡನ್ ಉದ್ಘಾಟನೆ ಮಾಡಿದ ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ಎಚ್. ಮಾಧವ ಭಟ್ ಸಮಾರಂಭದ ಉದ್ಘಾಟನೆ ನೆರವೇರಿಸಿ, ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಯುತ ಶಿಕ್ಷಣ ದೊರೆಯಬೇಕು. ಶಾಲೆಯಲ್ಲಿ ಕೇವಲ ಉತ್ತಮ ಅಂಕ ಪಡೆಯುವುದು ಪರಿಪೂರ್ಣ ಶಿಕ್ಷಣವಲ್ಲ. ಬದಲಾಗಿ ಸಮಾಜಕ್ಕೆ ಪ್ರೇರಣದಾಯಕ ಕೆಲಸ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕು, ಅಂತಹ ಮೌಲ್ಯಯತ ಶಿಕ್ಷಣ ಎಕ್ಸೆಲ್ ನೀಡುತ್ತಿದೆ ಎಂದರು. ಮುಂಬೈ ಸಾಫ್ಟ್‌ವೇರ್ ಲೈನ್ಸ್ ಇಂಡಿಯಾ ಪ್ರೈ.ಲಿ.ನ ನಿರ್ದೇಶಕರಾದ ಅರುಣ್ ಹೆಗ್ಡೆ ಅವರು ನೂತನ ಕಂಪ್ಯೂಟರ್ ಲ್ಯಾಬ್‌ನನ್ನು ಉದ್ಘಾಟಿಸಿ, ಅಂದು ವಿದ್ಯೋದಯ ಸಂಸ್ಥೆ ನೀಡಿದ ಶಿಕ್ಷಣವನ್ನು ಮೆಲುಕು ಹಾಕಿದರು. ಕಂಪ್ಯೂಟರ್ ಪ್ರಯೋಗಾಲಯವು ಕಂಪ್ಯೂಟರ್‌ಗಳಿರುವ ಕೋಣೆಯಲ್ಲ, ಇದು ವಿದ್ಯಾರ್ಥಿಗಳಿಗೆ ಅನ್ವೇಷಿಸಲು ಒಂದು ಸ್ಥಳವಾಗಿದೆ. […] - [](https://news19kannada.com/742-2/): ವೇಣೂರು: ಇಲ್ಲಿಯ ಎಕ್ಸೆಲ್ ಟೆಕ್ನೋ ಸ್ಕೂಲ್ ಇದರ ವಾರ್ಷಿಕೋತ್ಸವ ಎಕ್ಸೆಲಿಯಾ-2025 ಕಾರ್ಯಕ್ರಮವು ನ. 22ರಂದು ಬೆಳಿಗ್ಗೆ 9-00 ಗಂಟೆಯಿಂದ ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ನ ವಿದ್ಯೋ ದಯ ಕ್ಯಾಂಪಸ್ ನಲ್ಲಿ ನಡೆಯುತ್ತಿದೆ.ಬೆಳಿಗ್ಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು, ಸಂಸ್ಥೆಯ ಚೇರ್‌ಮೆನ್ ಸುಮಂತ್ ಕುಮಾರ್ ಜೈನ್ ಬಿ. ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎ. ಜಯರಾಮ್ ಶೆಟ್ಟಿ, ಕೆ. ಭಾಸ್ಕರ ಪೈ, ಶೀಲಾ ಎಸ್. ಹೆಗ್ಡೆ, ಪ್ರಕಾಶ್ ಎಸ್., ಡಾ. ಶಾಂತಿಪ್ರಸಾದ್, ಕೆ. ವಿಜಯ ಗೌಡ, ಅರುಣ್ ಕ್ರಾಸ್ತ, ಸುಧೀರ್ ಭಂಡಾರಿ, ಎಚ್. ಮಹಮ್ಮದ್ ಭಾಗವಹಿಸಿದ್ದರು.ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆಯನ್ನು ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಚ್. ಮಾಧವ ಭಟ್ ನೆರವೇರಿಸಲಿದ್ದಾರೆ. ಕಂಪ್ಯೂಟರ್ ಲ್ಯಾಬ್‌ನ ಉದ್ಘಾಟನೆಯನ್ನು ಮುಂಬೈ ಸಾಪ್ಟ್‌ವೇರ್ ಲೈನ್ಸ್ ಇಂಡಿಯಾ ಪ್ರೈ. ಲಿ. ನಿರ್ದೇಶಕ ಅರುಣ್ ಹೆಗ್ಡೆ ಅವರು ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ […] - [ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿ ರವಿ ಬಿ.ಎಸ್. ನೇಮಕ](https://news19kannada.com/ravi-b-s-appointed-as-belthangady-circle-inspector/): ಬೆಳ್ತಂಗಡಿ : ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ನಿವೃತ್ತಿ ಬಳಿಕ ಖಾಲಿ ಇದ್ದ ಬೆಳ್ತಂಗಡಿ ವೃತ್ತ‌ ನಿರೀಕ್ಷಕ ಸ್ಥಾನಕ್ಕೆ ಉಪ್ಪಿನಂಗಡಿ ವೃತ್ತ ನಿರೀಕ್ಚಕ ಪೊಲೀಸ್ ಠಾಣೆಯಿಂದ ಬಂಟ್ವಾಳ ಗ್ರಾಮಾಂತರ ಠಾಣೆಗೆ ವರ್ಗಾವಣೆ ಆದೇಶವಾಗಿದ್ದ ಇನ್ಸ್‌ಪೆಕ್ಟರ್ ರವಿ.ಬಿ.ಎಸ್ ಅವರನ್ನು ನೇಮಕ ಮಾಡಿ ನ.21 ರಂದು  ಆದೇಶ ಮಾಡಲಾಗಿದೆ. ಇನ್ಸ್‌ಪೆಕ್ಟರ್ ರವಿ.ಬಿ.ಎಸ್ ಈ ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.ಬಳಿಕ ಚಿಕ್ಕಮಗಳೂರು, ಕಾರ್ಕಳ, ಸುಳ್ಯ,ಸಂಪ್ಯ,ಪುತ್ತೂರು ಗ್ರಾಮಾಂತರ ಕಡೆ ಕರ್ತವ್ಯ ನಿರ್ವಹಿಸಿ ಇನ್ಸ್‌ಪೆಕ್ಟರ್ ಆಗಿ ಭಡ್ತಿ ಹೊಂದಿ ಶೃಂಗೇರಿ,ಉಪ್ಪಿನಂಗಡಿ ವೃತ್ತ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಮಾಡುತ್ತಿದ್ದರು. - [ಕಲ್ಮಾಡಿಯ ಯುವಕ ತಡರಾತ್ರಿ ಥಾಣೆಯಲ್ಲಿ ನಡೆದ ಮೋಟಾರ್ ಸೈಕಲ್ ಅಪಘಾತದಲ್ಲಿ ಮೃತ್ಯು](https://news19kannada.com/a-youth-from-kalmadi-died-in-a-motorcycle-accident-in-thane-late-at-night/): ಉಡುಪಿ: ಉಡುಪಿಯ ಕಲ್ಮಾಡಿಯ 25 ವರ್ಷದ ಯುವಕ ಶುಕ್ರವಾರ ತಡರಾತ್ರಿ ಥಾಣೆಯಲ್ಲಿ ನಡೆದ ಮೋಟಾರ್ ಸೈಕಲ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ.ಮೃತನನ್ನು ಉಡುಪಿಯ ಕಲ್ಮಾಡಿ ಮೂಲದ ಇನಿಶ್ ಲಸ್ರಾದೊ ಎಂದು ಗುರುತಿಸಲಾಗಿದೆ. ಅವರು ಮೋಟಾರ್ ಸೈಕಲ್ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.ಇನಿಶ್ ಕಳೆದ ಮೂರು ವರ್ಷಗಳಿಂದ ಥಾಣೆಯಲ್ಲಿರುವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಕಲ್ಮಾಡಿ ಚರ್ಚ್‌ನ ಐಸಿವೈಎಂ ಘಟಕದಲ್ಲಿ ಮತ್ತು ವಿವಿಧ ಚರ್ಚ್ ಚಟುವಟಿಕೆಗಳಲ್ಲಿ ಬಹಳ ಸಕ್ರಿಯರಾಗಿದ್ದರು. - [ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ; ಮಂಗಳೂರಿನಲ್ಲೂ ಬೀದಿ ನಾಯಿಗಳ ಹಾವಳಿ ತಡೆಯಲು ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶ](https://news19kannada.com/supreme-court-directs-strict-action-to-curb-stray-dog-menace-in-mangaluru/): ಮಂಗಳೂರು: ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳ ಅನುಷ್ಠಾನದ ಕುರಿತು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಯಿತು.ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪ ಆಯುಕ್ತ (ಡಿಸಿ) ದರ್ಶನ್ ಎಚ್, ನಗರ ನಿಗಮ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಇತರ ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಬೀದಿ ನಾಯಿಗಳ ಜನಗಣತಿಯನ್ನು ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು. ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ಅವುಗಳ ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣಗಳು ಬೀದಿ ನಾಯಿಗಳನ್ನು ಹಿಡಿಯಬೇಕು, ಸಂತಾನಹರಣ ಶಸ್ತ್ರಚಿಕಿತ್ಸೆಗಳನ್ನು ನಡೆಸಬೇಕು ಮತ್ತು ಅವುಗಳನ್ನು ಗೊತ್ತುಪಡಿಸಿದ ನಾಯಿ ಆಶ್ರಯಕ್ಕೆ ಸ್ಥಳಾಂತರಿಸಬೇಕು. ಭವಿಷ್ಯದಲ್ಲಿ ಬೀದಿ ನಾಯಿಗಳು ಈ ಸಂಸ್ಥೆಗಳ ಆವರಣಕ್ಕೆ ಪ್ರವೇಶಿಸದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು. ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿಯಮಿತವಾಗಿ ವರದಿಗಳನ್ನು ಸಲ್ಲಿಸಲು ಮೇಲ್ವಿಚಾರಣಾ ಅಧಿಕಾರಿಯನ್ನು ನೇಮಿಸಬೇಕೆಂದು ಅವರು […] - [ಬಹುಬೇಡಿಕೆಯ ಉಜಿರೆ-ಪೆರಿಯಶಾಂತಿ ಸ್ಟರ್ ರಸ್ತೆಯ ಅಭಿವೃದ್ಧಿಗೆ ಇಂದು ನಡೆಯಿತು ಶಿಲಾನ್ಯಾಸ](https://news19kannada.com/the-foundation-stone-for-the-development-of-the-much-needed-ujire-periyashanti-road-was-laid-today/): ಧರ್ಮಸ್ಥಳ ದ್ವಾರದ ಬಳಿ ಸಂಸದ ಚೌಟರಿಂದ ಗುದ್ದಲಿ ಪೂಜೆ, ಡಾ. ಹೆಗ್ಗಡೆ, ಹರೀಶ್ ಪೂಂಜ ಭಾಗಿ ಧರ್ಮಸ್ಥಳ : ಬಹುಬೇಡಿಕೆಯ ಉಜಿರೆ- ಪೆರಿಯಶಾಂತಿ ಸ್ಟರ್ ರಸ್ತೆಯ 614 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಇಂದು (ನ.22) ಧರ್ಮಸ್ಥಳ ದ್ವಾರದ ಬಳಿ ಗುದ್ದಲಿ ಪೂಜೆ ನೆರವೇರಿತು. ದ.ಕ. ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಭೂಮಿಪೂಜೆ ನೆರವೇರಿಸಿದರು. ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಮಲ, ಕುಶಾಲಪ್ಪ ಗೌಡ, ಮುಗೋಡಿ ಸುಧಾಕರ ಶೆಟ್ಟಿ ಹಾಗೂ ವಿವಿಧ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು. - [ಯಡಿಯೂರಪ್ಪ ಸಿಎಂ ಆಗೋ ಮುನ್ನ ಪೂಜೆ ಸಲ್ಲಿಸಿದ್ದ ಜೇನುಕಲ್ ಸಿದ್ದೇಶ್ವರ ಸ್ವಾಮಿ ಪಾದುಕೆಗೆ ಡಿಕೆಶಿ ಮನೇಲಿ ಪೂಜೆ!](https://news19kannada.com/dk-maneli-should-worship-the-jenukal-siddeshwara-swamy-paduka-which-yediyurappa-had-worshipped-before-becoming-cm/): ಹಾಸನ: ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿರುವಂತೆಯೇ ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದೇ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಡಿಸಿಎಂ ಡಿಕೆ ಶಿವಕುಮಾರ್  ಮನೆಯಲ್ಲಿ, ಹಾಸನದ ಪುರಾಣ ಪ್ರಸಿದ್ದ ಜೇನುಕಲ್ ಸಿದ್ದೇಶ್ವರ ಸ್ವಾಮಿ ಪಾದುಕೆಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. ಡಿಕೆ ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಐವರು ಪೂಜಾರಿಗಳಿಂದ ಸುಮಾರು 1 ಗಂಟೆಗೂ ಹೆಚ್ಚು ಕಾಲ ಸಿದ್ದೇಶ್ವರ ಸ್ವಾಮಿ ಪಾದುಕೆಗೆ ವಿಶೇಷ ಪೂಜೆ ನೆರವೇರಿದೆ. ಡಿಕೆ ಶಿವಕುಮಾರ್ ಬೆಂಗಳೂರು ನಿವಾಸದಲ್ಲಿ ಜೇನುಕಲ್ ಸಿದ್ದೇಶ್ವರ ಸ್ವಾಮಿ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಪೂಜೆ ನಡೆದಿರುವುದು ಅವರ ಸಿಎಂ ಸ್ಥಾನದ ಆಕಾಂಕ್ಷೆಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗುವ ಮುನ್ನ ಇದೇ ದೇವರಿಗೆ ಪೂಜೆ ಸಲ್ಲಿಸಿದ್ದರು. - [ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ](https://news19kannada.com/mp-cllr-brijesh-chowta-visits-ballamanja-sri-anantheshwara-swamy-temple/): ಮಚ್ಚಿನ: ಮಚ್ಚಿನ ಗ್ರಾಮದ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನಕ್ಕೆ ನ. 21ರಂದು ದ.ಕ. ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಅವರು ಭೇಟಿ ನೀಡಿ ದೇವರ ಪ್ರಸಾದ ಸ್ವೀಕರಿಸಿದರು.ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮೊಕ್ತೇಸರರ ಪುತ್ರ ವಿಷು ಸಂಪಿಗೆತಾಯ, ಕುವೆಟ್ಟು ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಮಚ್ಚಿನ ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಕಾಂತ್ ಗೌಡ ನಿಡ್ಡಾಜೆ, ಮಾಣೂರು ಸಪರಿವಾರ ಶ್ರೀ ಶಾಸ್ತಾರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹೊನ್ನಪ್ಪ ಕುಲಾಲ್, ಮಚ್ಚಿನ ಪಂಚಾಯತ್ ಅಧ್ಯಕ್ಷರಾದ ರುಕ್ಮಿಣಿ, ಉಪಾಧ್ಯಕ್ಷರಾದ ಚಿದಾನಂದ ಪೂಜಾರಿ ಸೋಮಾವತಿ, ಮಚ್ಚಿನ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್, ಉಪಾಧ್ಯಕ್ಷರಾದ ಶ್ರೀಧರ್ ಪೂಜಾರಿ ಆಟ್ಲ, ಪಕ್ಷದ ಹಿರಿಯ ಕಾರ್ಯಕರ್ತರಾದ ಪದ್ಮನಾಭ ಅರ್ಕಜೆ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ವಸಂತಿ ಮಚ್ಚಿನ, ಶಕ್ತಿ ಕೇಂದ್ರ ಪ್ರಮುಖ್ ನಾರಾಯಣ ಶೆಟ್ಟಿ ನೆತ್ತರ, ಗ್ರಾಮ ಪಂಚಾಯತ್ ಸದಸ್ಯರಾದ ರಮ್ಯಶ್ರೀ, ಜಯಶ್ರೀ, ಚೇತನ್ ಪಲ್ಲತಳ, ಜಿಲ್ಲಾ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಹೇಮಂತ್ […] - [ಬಳಂಜ ಶಾಲೆಯ ಹಳೆ ವಿದ್ಯಾರ್ಥಿ ಪ್ರವೀಣ್ ಜೈನ್ ಅವರಿಗೆ ಡಾಕ್ಟರೇಟ್ ಪದವಿ](https://news19kannada.com/balanja-school-alumnus-praveen-jain-awarded-doctorate-degree/): ಬಳಂಜ: ಬೆಳ್ತಂಗಡಿ ತಾಲೂಕಿನ “ಬಳಂಜ” ಶಾಲೆಯ ಹಳೆ ವಿದ್ಯಾರ್ಥಿ ಡಾ. ಪ್ರವೀಣ್ ಜೈನ್ಅವರು ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. - [ನಾಳೆ (ನ. 22) ಕೊಡಂಗೆ ಸಿದ್ದಕಟ್ಟೆ ವೀರ-ವಿಕ್ರಮ ಜೋಡುಕರೆ ಕಂಬಳ](https://news19kannada.com/tomorrow-nov-22-kodaman-siddakatte-veera-vikrama-jodukare-kambala/): ವೇಣೂರು : ವೀರ ವಿಕ್ರಮ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ 3ನೇ ವರ್ಷದ ಸಿದ್ದಕಟ್ಟೆಯ ಕೊಡಂಗೆ ವೀರ -ವಿಕ್ರಮ ಜೋಡುಕರೆ ಕಂಬಳವು ನ. 22ರಂದು ನಡೆಯಲಿದೆ. - [ದ.ಕ. ಜಿಲ್ಲಾ ಕಾರ್ಯನಿರತ ಪತ್ರರ್ಕರ ಸಂಘದ ನೂತನ ಸಮಿತಿ ಪದಗ್ರಹಣ](https://news19kannada.com/new-committee-of-d-k-district-working-journalists-association-takes-oath/): ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 202528ನೆ ಸಾಲಿನ ನೂತನ ಸಮಿತಿಯ ಪದ್ರಹಣ ಸಮಾರಭ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆಯಿತು. ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮತ್ತು ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಅವರು ನೂತನ ಅಧ್ಯಕ್ಷರಾದ ಪುಷ್ಪರಾಜ್ ಬಿ.ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ. ಪೂಜಾರಿ, ಕೋಶಾಧಿಕಾರಿ ವಿಜಯ್ ಕೋಟ್ಯಾನ್ ಸೇರಿದಂತೆ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿದರು. ಸಂಘದ ಪೂರ್ವಾ‘ಕ್ಷ ಆನಂದ ಶೆಟ್ಟಿ ಕೆ., ಜಗನ್ನಾಥ ಶೆಟ್ಟಿ ಬಾಳ, ಹರ್ಷ ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಸಂಘದ ಮಾಜಿ ಅಧ್ಯಕ್ಷ ಆನಂದ್ ಶೆಟ್ಟಿ ಅವರು ಮಾತನಾಡಿ, ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಸಂಘವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಕಟ್ಟಿ ಬೆಳೆಸುವಂತೆ ನೂತನ ಸಮಿತಿಗೆ ಸಲಹೆ ನೀಡಿದರು. ಸರಳವಾಗಿ ನಡೆದ ಸಮಾರಂಭದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀನಿವಾಸ್ ನಾಯಕ್ ಇಂದಾಜೆ, ಉಪಾದ್ಯಕ್ಷರಾಗಿ ಮುಹಮ್ಮದ್ ಆರಿಫ್ ಪಡುಬಿದ್ರಿ, ವಿಲ್ರೆಡ್ ಡಿಸೋಜಾ, ರಾಜೇಶ್ […] - [ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಕುಂಭಶ್ರೀ ಶಾಲೆಗೆ ಹಲವು ಬಹುಮಾನ](https://news19kannada.com/zonal-level-pratibha-karanji-competition-many-prizes-for-kumbh-shree-school/): ವೇಣೂರು: ನಾರಾವಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಿಟ್ಟಡೆ ಕುಂಭಶ್ರೀ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿ ಗಳಿಸಿಕೊಂಡಿದ್ದಾರೆ.. ಎಂಟನೇ ತರಗತಿಯ ಕು. ಪ್ರಿಯಾ ಭಾವಗೀತೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಎಂಟನೇ ತರಗತಿಯ ಕು. ಚಿನ್ಮಯಿ ಆಶುಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ಚರ್ಚಾ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, ಜಾನಪದ ನೃತ್ಯ ಪ್ರಾಪ್ತಿ 8ನೇ ತರಗತಿ, ಅನನ್ಯ ಎಂಟನೇ ತರಗತಿ, P. ಸಾನ್ವಿ 8ನೇ ತರಗತಿ, ದೃಶ್ಯ 8ನೇ ತರಗತಿ, ಸಾನ್ವಿ 9 ನೇ ತರಗತಿ, ರಕ್ಷಾ 9ನೇ ತರಗತಿ ಇವರು ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.ಶಾಲಾ ಸಂಸ್ಥಾಪಕರಾದ ಗಿರೀಶ್ ಕೆ.ಹೆಚ್. ಹಾಗೂ ಸಂಚಾಲಕರಾದ ಅಶ್ವಿತ್ ಕುಲಾಲ್ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಮಮತಾ ಶಾಂತಿ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ. ಪ್ರೌಢಶಾಲಾ ವಿಭಾಗದ ಶಿಕ್ಷಕಿ ಶ್ರೀಮತಿ ಸುಚಿತ್ರ ಮತ್ತು ಕುಮಾರಿ ಅನುಷಾ ಇವರು ವಿದ್ಯಾರ್ಥಿಗಳಿಗೆ ಸಹಕರಿಸಿರುತ್ತಾರೆ. - [ದುಬೈ ಏರ್ ಶೋ; ಭಾರತೀಯ ಎಚ್‌ಎಎಲ್ ನಿರ್ಮಿತ ತೇಜಸ್ ವಿಮಾನ ಪತನ!](https://news19kannada.com/dubai-air-show-indian-hal-made-tejas-aircraft-crashes/): ದುಬೈ: ಇಲ್ಲಿ ನಡೆಯುತ್ತಿರುವ ಏರ್ ಶೋನಲ್ಲಿ ಭಾರತೀಯ ಎಚ್‌ಎಎಲ್ ನಿರ್ಮಿತ ತೇಜಸ್ ವಿಮಾನವೊಂದು ಶುಕ್ರವಾರ ಮಧ್ಯಾಹ್ನ 2:10 ರ ಸುಮಾರಿಗೆ ಅಪಘಾತಕ್ಕೀಡಾಗಿದೆ.ಸ್ಥಳೀಯ ಸಮಯ ಮಧ್ಯಾಹ್ನ 2:10 ರ ಸುಮಾರಿಗೆ ಪ್ರದರ್ಶನಕ್ಕಾಗಿ ವಿಮಾನವನ್ನು ಹಾರಿಸುತ್ತಿದ್ದಾಗ ಅಪಘಾತವಾಗಿದೆ.ವಿಮಾನದಲ್ಲಿದ್ದ ಪೈಲಟ್ ಹೊರಗೆ ಹಾರಿದ್ದಾರೆಯೇ ಎಂಬುದು ತತ್ ಕ್ಷಣ ಸ್ಪಷ್ಟವಾಗಿಲ್ಲ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಜನಸಂದಣಿಯಲ್ಲಿದ್ದವರು ನೋಡನೋಡುತ್ತಿದ್ದಂತೆ ವಿಮಾನ ಪತನವಾಗಿದ್ದು ನಿಲ್ದಾಣದ ಮೇಲೆ ಕಪ್ಪು ಹೊಗೆ ಆವರಿಸಿಕೊಂಡಿದೆ. - [ವೇಣೂರು: ಬೈಕ್ ಕಳ್ಳತನ ಪ್ರಕರಣವನ್ನು ಬೇಧಿಸಿದ ಪೊಲೀಸರು! ಇಬ್ಬರ ಬಂಧನ](https://news19kannada.com/venur-police-crack-bike-theft-case-two-arrested/): ವೇಣೂರು: ನಿಲ್ಲಿಸಿ ಹೋಗಿದ್ದ ಬೈಕ್ ಕಳ್ಳತನ ಮಾಡಿದ ಪ್ರಕರಣವನ್ನು ವೇಣೂರು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.ನ.11 ರಂದು ರಾತ್ರಿ ಕುಕ್ಕೇಡಿ ನಿವಾಸಿ ಸಂಪತ್ ಕುಮಾರ್ ಪೆಟ್ರೋಲ್ ಖಾಲಿಯಾಗಿದ ಕಾರಣದಿಂದ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟಡೆ ಗ್ರಾಮದ ಪಾಣೂರು ಗುರುನಾರಾಯಣ ಸರ್ಕಲ್ ಬಳಿ ತಮ್ಮ KA- 18-3-6348 ಬೈಕ್ ನಿಲ್ಲಿಸಿ ಹೋಗಿದ್ದರು. ಬಳಿಕ ನ. 12 ರಂದು ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಈ ಬಗ್ಗೆ ಎಲ್ಲಾ ಕಡೆ ಹುಡುಕಾಟ ನಡೆಸಿದ್ರೂ ಬೈಕ್ ಪತ್ತೆಯಾಗದ ಕಾರಣ ನ. 13 ರಂದು ವೇಣೂರು ಪೊಲೀಸ್ ಠಾಣೆಯಲ್ಲಿ 88/25 ಕಲಂ ನಲ್ಲಿ ಸಂಪತ್ ಕುಮಾರ್ ಪ್ರಕರಣ ದಾಖಲಿಸಿದ್ದರು. ವೇಣೂರು ಸಬ್ ಇನ್ಸ್‌ಪೆಕ್ಟರ್ ಓಮನ ಮತ್ತು ಸಿಬ್ಬಂದಿ ನ. 20 ರಂದು ಸಂಜೆ 6:30 ರ ಸಮಯದಲ್ಲಿ ವೇಣೂರು ಗ್ರಾಮದ ಕೆರೆಕೋಡಿ ಕರ್ತವ್ಯ ವೇಳೆ ಇಬ್ಬರು ಯುವಕರು ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಬರುತ್ತಿದ್ದಾಗ ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಯಾವುದೇ ದಾಖಲೆಗಳು ಇಲ್ಲದಿರುವುದು ಬೆಳಕಿಗೆ […] - [ಗರ್ಡಾಡಿ: ಕಣಜದ ಹುಳ ದಾಳಿ; ಇಬ್ಬರು ಮಹಿಳೆಯರಿಗೆ ಗಾಯ](https://news19kannada.com/gardadi-wasp-attack-two-women-injured/): ಗರ್ಡಾಡಿ: ರನ್ನಡಿಯಲ್ಲಿ ತೋಟದ ಕೆಲಸ ಮಾಡುತ್ತಿರುವ ವೇಳೆ ಕಣಜದ ಹುಳು ದಾಳಿ ಮಾಡಿದ ಘಟನೆ ನ.21ರಂದು ನಡೆದಿದೆ. ಇಬ್ಬರು ಮಹಿಳೆಯರಿಗೆ ಗಂಭೀರ ಗಾಯವಾಗಿದ್ದು ತಕ್ಷಣ ಬೆಳ್ತಂಗಡಿ ಸರಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ. - [ನ.22: ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ವಾರ್ಷಿಕೋತ್ಸವ](https://news19kannada.com/nov-22-venur-excel-techno-school-anniversary/): ವೇಣೂರು: ಇಲ್ಲಿಯ ಎಕ್ಸೆಲ್ ಟೆಕ್ನೋ ಸ್ಕೂಲ್ ಇದರ ವಾರ್ಷಿಕೋತ್ಸವ ಎಕ್ಸೆಲಿಯಾ-2025 ಕಾರ್ಯಕ್ರಮವು ನ. 22ರಂದು ಬೆಳಿಗ್ಗೆ 9-00 ಗಂಟೆಯಿಂದ ನಡೆಯಲಿದೆ.ಬೆಳಿಗ್ಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಸಂಸ್ಥೆಯ ಚೇರ್‌ಮೆನ್ ಸುಮಂತ್ ಕುಮಾರ್ ಜೈನ್ ಬಿ. ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎ. ಜಯರಾಮ್ ಶೆಟ್ಟಿ, ಕೆ. ಭಾಸ್ಕರ ಪೈ, ಶೀಲಾ ಎಸ್. ಹೆಗ್ಡೆ, ಪ್ರಕಾಶ್ ಎಸ್., ಡಾ. ಶಾಂತಿಪ್ರಸಾದ್, ಕೆ. ವಿಜಯ ಗೌಡ, ಅರುಣ್ ಕ್ರಾಸ್ತ, ಸುಧೀರ್ ಭಂಡಾರಿ, ಎಚ್. ಮಹಮ್ಮದ್ ಭಾಗವಹಿಸಲಿದ್ದಾರೆ.ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆಯನ್ನು ಪುತ್ತೂರು ವಿವೇಕಾನಂದ ಕಾಲೇಜಿನ ಪ್ರಾಚಾರ್ಯರಾದ ಡಾ. ಎಚ್. ಮಾಧವ ಭಟ್ ನೆರವೇರಿಸಲಿದ್ದಾರೆ. ಕಂಪ್ಯೂಟರ್ ಲ್ಯಾಬ್‌ನ ಉದ್ಘಾಟನೆಯನ್ನು ಮುಂಬೈ ಸಾಪ್ಟ್‌ವೇರ್ ಲೈನ್ಸ್ ಇಂಡಿಯಾ ಪ್ರೈ. ಲಿ. ನಿರ್ದೇಶಕ ಅರುಣ್ ಹೆಗ್ಡೆ ಅವರು ನೆರವೇರಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಎಕ್ಸೆಲ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ. ಶಿವರಾಮ್ ಹೆಗ್ಡೆ, ಮಲ್ಲಿಕಾ ಕೆ. ಹೆಗ್ಡೆ, ಸುಂದರ ಹೆಗ್ಡೆ ಬಿ.ಇ., […] - [ಸಾರ್ವಕಾಲಿಕ ದಾಖಲೆ ಬೆಲೆಗೆ ತಲುಪಿದ ಮೊಟ್ಟೆ ದರ!](https://news19kannada.com/egg-prices-hit-an-all-time-record/): ಕಳೆದ ಎರಡು ವಾರದಿಂದ ಏರಿಕೆಯನ್ನು ಕಾಣುತ್ತ ಬಂದಿದ್ದ ಮೊಟ್ಟೆ ದರ ಈಗ ಸಾರ್ವಕಾಲಿಕ ದಾಖಲೆ ಬೆಲೆ 8ಕ್ಕೆ ತಲುಪಿದೆ. ರಖಂ ಬೆಲೆಯಲ್ಲಿ ಒಂದಕ್ಕೆ 7.20 ರೂ. ಮಾರಾಟವಾಗುತ್ತಿದೆ ಎಂದು ಮೊಟ್ಟೆ ವ್ಯಾಪಾರಿಗಳು, ಲೈನ್ ಸೇಲ್ ವ್ಯಾಪಾರಸ್ಥರು ತಿಳಿಸಿದ್ದಾರೆ.ಕಳೆದ ಗುರುವಾರ ರಖಂ ಬೆಲೆಯಲ್ಲಿ ಒಂದಕ್ಕೆ 6.80 ಇತ್ತು, ಮಂಗಳವಾರ 7ಕ್ಕೆ ತಲುಪಿದ್ದರೆ ಗುರುವಾರ 7.20ಕ್ಕೆ ತಲುಪಿ ಬೆಲೆಯಲ್ಲಿ ದಾಖಲೆ ಮಾಡಿದೆ. ಈ ಹಿಂದಿನ ವರ್ಷಗಳಲ್ಲಿ ಅತೀ ಹೆಚ್ಚು ಎಂದರೆ ಎರಡು ದಿನ 6.90ಕ್ಕೆ ಮಾರಾಟವಾಗಿತ್ತು ಎಂದು ಕಳೆದ 40 ವರ್ಷಗಳಲ್ಲಿ ಮೊಟ್ಟೆ ವ್ಯಾಪಾರ ಮಾಡುತ್ತಿರುವ ಸುಂಕದಕಟ್ಟೆ ನಿತ್ಯಾನಂದ ಶೆಟ್ಟಿ ತಿಳಿಸಿದ್ದಾರೆ.ಮುಂದೆ ಹೊಸವರ್ಷ, ಕ್ರಿಸ್ಮಸ್ ಬರುವ ಕಾರಣ ಮೊಟ್ಟೆ ಬೆಲೆಯಲ್ಲಿ ಇನ್ನೂ ಏರಿಕೆಯಾಗುವ ಸಂಭವವಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಕೇಕ್‌ಗಳಿಗೆ ಮೊಟ್ಟೆ ಅತೀ ಹೆಚ್ಚು ಉಪಯೋಗವಾಗುವ ಕಾರಣ ದರ ಏರುವ ಸಾಧ್ಯತೆಯಿದೆ ಎಂಬುದು ವ್ಯಾಪಾರಿಗಳ ಲೆಕ್ಕಾಚಾರವಾಗಿದೆ.ಬೇಡಿಕೆ ಜಾಸ್ತಿ; ಮೊಟ್ಟೆ ಉತ್ಪಾದನೆ ಕಡಿಮೆ ಅಂಗನವಾಡಿ, ಶಾಲೆಗಳಿಗೆ ಮೊಟ್ಟೆ ಬಳಕೆ, ಈ ತಿಂಗಳಲ್ಲಿ ಹೆಚ್ಚು ಕಾರ್ಯಕ್ರಮಗಳು ಇರುವುದರಿಂದ […] - [ಉಡುಪಿ: ಸಮುದ್ರ ಮಧ್ಯದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ; ಐವರು ಮೀನುಗಾರರ ರಕ್ಷಣೆ](https://news19kannada.com/udupi-fishing-boat-capsizes-in-the-middle-of-the-sea-five-fishermen-rescued/): ಉಡುಪಿ: ಮೀನುಗಾರಿಕಾ ಬೋಟ್ ಸಮುದ್ರ ಮಧ್ಯದಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಲಾಗಿದೆ. ಈ ಘಟನೆಯಲ್ಲಿ ಮೀನು, ಮೀನಿನ ಬಲೆಗಳು ಸೇರಿದಂತೆ ಇತರ ಸಲಕರಣೆಗಳು ಸಮುದ್ರಪಾಲಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಸಾಸ್ತಾನಾ ಕೋಡಿಕನ್ಯಾನದ ರವೀಂದ್ರ ಎನ್. ಪೂಜಾರಿ ಅವರಿಗೆ ಸೇರಿದ ‘ವೀರಕಲ್ಕುಡ’ ಎಂಬ ಹೆಸರಿನ ಬೋಟು, ನವೆಂಬರ್ 17ರ ಸಂಜೆ ತಂಡೇಲ್ (ಮುಖಂಡ) ಮತ್ತು ನಾಲ್ವರು ಮೀನುಗಾರರೊಂದಿಗೆ ಮಲ್ಪೆ ಬಂದರಿನಿಂದ ಹೊರಟಿತ್ತು. ಅವರು ಪಣಂಬೂರು ಎನ್‌ಎಂಪಿಎ ಬಂದರು ಮತ್ತು ತಣ್ಣೀರುಬಾವಿ ಮಾರ್ಗದ ಮೂಲಕ ಮೀನುಗಾರಿಕೆ ನಡೆಸುತ್ತ, ನವೆಂಬರ್ 18ರಂದು ಸಮುದ್ರದಲ್ಲಿಯೇ ಇದ್ದು, ನಂತರ ಮಂಗಳೂರಿನಿಂದ ಪಶ್ಚಿಮಕ್ಕೆ ಸುಮಾರು 17 ನಾಟಿಕಲ್ ಮೈಲಿ ದೂರದಲ್ಲಿ ಈ ಬೋಟ್ ಮೀನುಗಾರಿಕೆ ನಡೆಸುತ್ತಿತ್ತು ಎನ್ನಲಾಗಿದೆ.ನವೆಂಬರ್ 19 ರಂದು ಮೀನುಗಾರಿಕೆ ನಡೆಸುತ್ತಿದ್ದಾಗ, ಸಮುದ್ರ ಅಲೆಗಳ ಹೊಡೆತಕ್ಕೆ ಬೋಟಿನ ಕೆಳಭಾಗದ ಫೈಬರ್ ರಚನೆಗೆ ಹಾನಿಯಾಗಿದ್ದು, ನೀರು ರಭಸವಾಗಿ ಒಳನುಗ್ಗಿದೆ ಎನ್ನಲಾಗಿದೆ. ಬೋಟ್ ಮುಳುಗಲು ಪ್ರಾರಂಭಿಸುತ್ತಿದ್ದಂತೆಯೇ, ಸಮೀಪದಲ್ಲಿದ್ದ ‘ವೀರ ಮಾರುತಿ’ ಎಂಬ ಇನ್ನೊಂದು ಮೀನುಗಾರಿಕಾ ಬೋಟಿನ ಮೀನುಗಾರರು ತಕ್ಷಣವೇ ಸ್ಥಳಕ್ಕೆ ಧಾವಿಸಿ […] - [ಸೇವಾಭಾರತಿಯ 3 ಯೋಜನೆಗಳಿಗೆ ಸಂಚಾಲಕರುಗಳ ನೇಮಕ](https://news19kannada.com/appointment-of-coordinators-for-3-seva-bharati-projects/): ಬೆಳ್ತಂಗಡಿ: ಸೇವಾಭಾರತಿಯ ಪ್ರಮುಖ ಮೂರು ಯೋಜನೆಗಳಿಗೆ ಸಂಚಾಲಕರನ್ನು ಇತ್ತೀಚೆಗೆ ನೇಮಕ ಮಾಡಲಾಗಿದೆ. ಸೇವಾಧಾಮ ಯೋಜನೆಯ ಸಂಚಾಲಕರಾಗಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ ಸೃಷ್ಟಿ ಪುರಂದರ ರಾವ್ ರವರನ್ನು ಮುಂದುವರೆಸಲಾಗಿದೆ. ಆರೋಗ್ಯಮ್ ಯೋಜನೆಗೆ ನೇತ್ರಾವತಿಯ ಅಖಿಲೇಶ್ ಶೆಟ್ಟಿಯವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಗಿದ್ದು, ಸಬಲಿನಿ ಯೋಜನೆಗೆ ಇತ್ತೀಚೆಗೆ ಶ್ರೀ ದುರ್ಗಾ ಮಾತೃ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ಪಿಜತ್ತನಡ್ಕದ ಶ್ರೀಮತಿ ಮಮತಾ ಬಿ ಯವರನ್ನು ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.ಸೇವಾಧಾಮ ಯೋಜನೆಯಡಿಯಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ಸೌತಡ್ಕದಲ್ಲಿ ಸೇವಾಧಾಮ ಪುನಶ್ಚತನ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಸಬಲಿನಿ ಯೋಜನೆಯಡಿ ಉಚಿತ ಟೈಲರಿಂಗ್ ತರಬೇತಿಗಳನ್ನು ನೀಡುತ್ತಿದ್ದು, ಆರೋಗ್ಯಮ್ ಯೋಜನೆಯಡಿ ರಕ್ತದಾನ ಶಿಬಿರಗಳು ಹಾಗೂ ಆಂಬುಲೆನ್ಸ್ ಸೇವೆ ಅನುಷ್ಠಾನಗೊಳ್ಳುತ್ತಿದೆ. - [ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಕ್ಲೈಮ್ಯಾಕ್ಸ್ ಹಂತಕ್ಕೆ!](https://news19kannada.com/the-case-of-burying-hundreds-of-bodies-reaches-climax/): 3,932 ಪುಟಗಳ ಪ್ರಾಥಮಿಕ ಹಂತದ ದೋಷಾರೋಪ ಪಟ್ಟಿಯನ್ನ ಕೋರ್ಟ್​ಗೆ ಸಲ್ಲಿಸಿದ SIT ಧರ್ಮಸ್ಥಳದಲ್ಲಿ ನೂರಾರು ಶವ ಹೂತಿದ್ದಾರೆಂದು ಅಪಪ್ರಚಾರ ಪ್ರಕರಣದ ತನಿಖೆ ಕ್ಲೈಮ್ಯಾಕ್ಸ್ ತಲುಪಿದೆ. SIT ಬೆಳ್ತಂಗಡಿ ನ್ಯಾಯಾಲಯಕ್ಕೆ 3,932 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ. ಪ್ರಮುಖ ಆರೋಪಿ ಚಿನ್ನಯ್ಯ ಹಾಗೂ ಮಹೇಶ್ ಶೆಟ್ಟಿ ತಿಮರೋಡಿ ಸೇರಿ ಹಲವರ ಹೇಳಿಕೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಂಪೂರ್ಣ ತನಿಖೆಗಾಗಿ SIT ಕಾಲಾವಕಾಶ ಕೇಳಿದೆ. ಮಂಗಳೂರು, ನವೆಂಬರ್​ 20: ಧರ್ಮಸ್ಥಳದ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಕೊನೆಗೂ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಆರು ತಿಂಗಳ ಹೈಡ್ರಾಮಾ, ನಾಲ್ಕು ತಿಂಗಳ ತನಿಖೆಗೆ ಸಂಬಂಧಿಸಿದಂತೆ ಗುರುವಾರ ತನಿಖಾಧಿಕಾರಿ ಜಿತೇಂದ್ರ ಕುಮಾರ್ ನೇತೃತ್ವದಲ್ಲಿ ಚಾರ್ಜ್​ಶೀಟ್  ಹಾಗೂ ಸುಳ್ಳು ಸಾಕ್ಷ್ಯ ವರದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕೋರ್ಟ್​ಗೆ ಸಲ್ಲಿಸಲಾಗಿದೆ. ಸದ್ಯ ಎಸ್​​ಐಟಿ ತನಿಖೆಯ ವರದಿ ಹಲವರಲ್ಲಿ ನಡುಕ ಹುಟ್ಟಿಸಿದ್ದು, ಪ್ರಕರಣದ ಮುಂದಿನ ಬೆಳವಣಿಗೆ ಸಾಕಷ್ಟು ಕುತೂಹಲ ಮೂಡಿಸಿದೆ. 3,932 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದ ತಂಡ 7 ಫೈಲ್​ಗಳುಳ್ಳ 3,932 […] - [ಬಿರುಕು ಬಿಟ್ಟ ಹಿಮ್ಮಡಿಯನ್ನು ಗುಣಪಡಿಸಲು ಸಹಕಾರಿ ಈ ಮನೆಮದ್ದುಗಳು](https://news19kannada.com/these-home-remedies-can-help-heal-cracked-heels/): ಚಳಿಗಾಲದಲ್ಲಿ ವಾತಾವರಣ ಕೂಲ್‌ ಆಗಿರುವುದರೊಂದಿಗೆ ಶೀತ, ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳು, ಚರ್ಮ ಒಣಗುವುದು, ತುಟಿ ಒಡೆಯುವುದು ಸೇರಿದಂತೆ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಜೊತೆಗೆ ಈ ಚಳಿಗಾಲದಲ್ಲಿ ಅನೇಕರ ಹಿಮ್ಮಡಿಯೂ ಬಿರುಕು ಬಿಡುತ್ತದೆ. ಈ ಸಮಸ್ಯೆಯನ್ನು ಕೆಲವೊಂದು ಮನೆಮದ್ದುಗಳ ಮೂಲಕ ಪರಿಣಾಮಕಾರಿಯಾಗಿ ನಿವಾರಿಸಬಹುದು. ಆ ಮನೆಮದ್ದುಗಳ್ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಚಳಿಗಾಲ ಈಗಾಗಲೇ ಆರಂಭವಾಗಿಬಿಟ್ಟಿದೆ. ಈ ಚಳಿಗಾಲದಲ್ಲಿ ಅನಾರೋಗ್ಯ, ತ್ವಚೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಅದೇ ರೀತಿ ಪಾದದ ಆರೈಕೆಯ ಬಗ್ಗೆಯೂ ಗಮನ ವಹಿಸಬೇಕು. ಏಕೆಂದರೆ ಚಳಿಗೆ ಅನೇಕರ ಹಿಮ್ಮಡಿ ಬಿರುಕು ಬಿಡುತ್ತದೆ. ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ ಇದಾಗಿದ್ದು, ಇದರಿಂದ ಇಡೀ ಪಾದದ ಸೌಂದರ್ಯವೇ ಕೆಡುತ್ತದೆ. ಬಿರು ಬಿಟ್ಟ ಈ ಹಿಮ್ಮಡಿಯನ್ನು ಸರಿಪಡಿಸಲು, ಪಾದಗಳ ಸೌಂದರ್ಯವನ್ನು ಕಾಪಾಡಲು ಅನೇಕರು ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತಾರೆ. ಹೀಗೆ ನಿಮ್ಮ ಹಿಮ್ಮಡಿಯೂ ಬಿರುಕು ಬಿಟ್ಟಿದ್ಯಾ, ಇದಕ್ಕೆ ದುಬಾರಿ […] - [ಮೂಡಬಿದ್ರೆ, ಬೆಳುವಾಯಿ, ಅಳಿಯೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನ. 22ರಂದು ವಿದ್ಯುತ್ ನಿಲುಗಡೆ](https://news19kannada.com/power-outage-in-areas-around-moodbidri-beluvai-and-aliyur-on-nov-22/): ಮಂಗಳೂರು, ನ.20: ನವೆಂಬರ್ 22 ರಂದು ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ 110/11 ಕೆವಿ ಮೂಡಬಿದ್ರೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಬೆಳುವಾಯಿ, ಅಳಿಯೂರು ಮತ್ತು ಶಿರ್ತಾಡಿ ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಕಾನ, ಕಲ್ಲೋಳಿ, ನಡಿಗುಡ್ಡೆ, ಕಾಂತಾವರ ಕ್ರಾಸ್, ಬೆಳುವಾಯಿ, ಬನ್ನಡ್ಕ, ಕಾಯರ್ ಕಟ್ಟೆ, ಆಜಾದ್ ನಗರ, ಕರಿಯನಂಗಡಿ, ಮಲೆಬೆಟ್ಟು, ಮಂಜನಕಟ್ಟೆ, ಕಾಯದೆ, ಕೆಸರಗದ್ದೆ, ಪೆಲಕುಂಜ, ಮೂಡಾಯಿಕಾಡು, ಬೆಳುವಾಯಿ ಚರ್ಚ್‍, ಇರ್ವತ್ತೂರು ಕ್ರಾಸ್, ಗುಂಡುಕಲ್ಲು, ಮೂಡುಮಾರ್ನಾಡು, ಕೆಲ್ಲಪುತ್ತಿಗೆ ದರೆಗುಡ್ಡೆ, ಅರಸುಕಟ್ಟೆ, ಪಣಪಿಲ, ಅಳಿಯೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. - [ವಾಹನ ಸವಾರರಿಗೆ ಭರ್ಜರಿ ಆಫರ್, ಮತ್ತೊಮ್ಮೆ ಟ್ರಾಫಿಕ್ ಫೈನ್ 50% ರಿಯಾಯಿತಿ ಘೋಷಣೆ](https://news19kannada.com/great-offer-for-motorists-50-discount-on-traffic-fines-announced-again/): ಬೆಂಗಳೂರು: ಕರ್ನಾಟಕ ಸರ್ಕಾರವು ವಾಹನ ಸವಾರರಿಗೆ ಬಾಕಿ ಇರುವ ಸಂಚಾರ ದಂಡದ ಮೇಲೆ 50% ರಿಯಾಯಿತಿ ಘೋಷಿಸಿದೆ. ಈ ಸಂಬಂಧ ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ರಂಗಪ್ಪ ಕರಿಗಾರ ಅವರು ಇಂದು (ನವೆಂಬರ್ 20) ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಸೌಲಭ್ಯವು ನಾಳೆಯಿಂದ ಅಂದರೆ ನವೆಂಬರ್ 21 ರಿಂದ ಡಿಸೆಂಬರ್ 12 ರವರೆಗೆ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ಚಾಲಕರು ತಮ್ಮ ಬಾಕಿ ದಂಡವನ್ನು ಅರ್ಧ ಮೊತ್ತಕ್ಕೆ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಸಂಚಾರ ದಂಡ ರಿಯಾಯಿತಿ ಕುರಿತಂತೆ ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ, ಸರ್ಕಾರವು ಅದನ್ನು ಅಂಗೀಕರಿಸಿ ತಕ್ಷಣ ಜಾರಿಗೆ ತರಲು ಆದೇಶ ಹೊರಡಿಸಿದೆ.  - [CSEET ಪರೀಕ್ಷೆಯಲ್ಲಿ ಎಕ್ಸೆಲ್ ವಿದ್ಯಾರ್ಥಿಗಳ ಅಮೋಘ ಸಾಧನೆ](https://news19kannada.com/excel-students-excel-in-cseet-exam/): ಬೆಳ್ತಂಗಡಿ: ಎಕ್ಸೆಲ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ CSEET ಬರೆದ ವಾಣಿಜ್ಯ ವಿಭಾಗದ 60 ವಿದ್ಯಾರ್ಥಿಗಳ ಪೈಕಿ 43 ವಿದ್ಯಾರ್ಥಿಗಳು ತಮ್ಮ ಪ್ರಥಮ ಪ್ರಯತ್ನದಲ್ಲಿ ಮುಂದಿನ ಹಂತಕ್ಕೆ (CS Executive) ಅರ್ಹತೆಯನ್ನು ಪಡೆದಿರುತ್ತಾರೆ. ಆಯಿಷಾತ್ ಖಸ್ಟೋನ ಮತ್ತು ರಿಯಾ ದೇವ್ ಇವರು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯನ್ನು ಹೊಂದಿ, ಉಳಿದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಸಾಧಕರಿಗೆ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾ‌ರ್ ಜೈನ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ| ನವೀನ್ ಕುಮಾರ್ ಮರಿಕೆ, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರಸನ್ನ ಭೋಜ ಮತ್ತು ಉಪನ್ಯಾಸಕ ವೃಂದದವರು ಶುಭ ಹಾರೈಸಿದರು. - [ಪಡಂಗಡಿ: ಶ್ರೀಮತಿ ಸುಕೇಶಿನಿ ಅವರಿಗೆ 'ಕಾಯಕ ದೀಕ್ಷಾಮಣಿ' ಪ್ರಶಸ್ತಿ ಪ್ರದಾನ](https://news19kannada.com/padangady-smt-sukeshini-presented-with-kayaka-deekshamani-award/): ಪಡಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ತಾಲೂಕಿನ ನೌಕರರ ಯೂನಿಯನ್ ಅಧ್ಯಕ್ಷರು ಆಗಿರುವ ಶ್ರೀಮತಿ ಸುಕೇಶಿನಿ. ಎ. ಇವರಿಗೆ ಮಡಂತ್ಯಾರು ಪ್ಯಾಕ್ಸ್ ಅಧ್ಯಕ್ಷರು ಆದ ಜೋಯೆಲ್ ಮೆಂಡೋನ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕಾಯಕ ದೀಕ್ಷಾಮಣಿ ಪ್ರಶಸ್ತಿ ಗೌರವ ಪ್ರದಾನ ಮಾಡಲಾಯಿತು. - [ವಿಶ್ವ ಶಾಲಾ‌ ಮಕ್ಕಳ ವಾಲಿಬಾಲ್ ಪಂದ್ಯ: ಭಾರತದ ಬಾಲಕಿಯರ ತಂಡಕ್ಕೆ ಕಾರ್ಕಳದ ಶಗುನ್ ಎಸ್. ವರ್ಮ ಹೆಗ್ಡೆ ಆಯ್ಕೆ](https://news19kannada.com/world-school-childrens-volleyball-match-karkalas-shagun-s-for-the-indian-girls-team-verma-hegdes-choice/): ಕಾರ್ಕಳ : ಚೀನಾದ ಶಾಂಗ್ಲೋದಲ್ಲಿ ಡಿ.3 ರಿಂದ 13 ವರೆಗೆ ನಡೆಯಲಿರುವ ವಿಶ್ವ ಶಾಲಾ ಮಕ್ಕಳ 15 ವರ್ಷ ಒಳಗಿನ ವಯೋಮಿತಿಯ ವಾಲಿಬಾಲ್ ಪಂದ್ಯಾಟದಲ್ಲಿ ಭಾರತದ ಬಾಲಕಿಯರ ತಂಡ ಭಾಗವಹಿಸಲಿದ್ದು, ಈ ತಂಡಕ್ಕೆ ಕಾರ್ಕಳ ಕ್ರೈಸ್ತಕಿಂಗ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಶಗುನ್ ಎಸ್. ವರ್ಮ ಹೆಗ್ಡೆ ಆಯ್ಕೆಯಾಗಿದ್ದಾರೆ. ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ಅ.ಅ.24 ರಿಂದ ರಾಂಚಿಯಲ್ಲಿ ನಡೆದ ಅಯ್ಕೆ ತರಬೇತಿ ಶಿಬಿರದಲ್ಲಿ ಅಂತಿಮವಾಗಿ ಶಗುನ್ ಆಯ್ಕೆ ನಡೆದಿದ್ದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವ 12 ಆಟಗಾರರಲ್ಲಿ ಶಗುನ್ ವರ್ಮ ಹೆಗ್ಡೆ ಏಕೈಕ ಆಟಗಾರ್ತಿ ಆಗಿದ್ದಾರೆ. - [ಲಾಯಿಲ: ರಸ್ತೆಗಳ ಕಾಂಕ್ರಿಟ್ ಕಾಮಗಾರಿ ಪೂರ್ಣ](https://news19kannada.com/laila-concrete-work-of-roads-is-complete/): ಬೆಳ್ತಂಗಡಿ: ಲಾಯಿಲ ಗ್ರಾಮದ ಬಹುಬೇಡಿಕೆಯ ವಿಮುಕ್ತಿ ವಿಶೇಷ ಶಾಲೆ ಹಾಗೂ ಪಿಲಿ ಪಂಜರ ದೈವಸ್ಥಾನ ಸಂಪರ್ಕಿಸುವ ರಸ್ತೆಯು ಲಾಯಿಲ ಗ್ರಾಮ ಪಂಚಾಯತಿಯ ಸದಸ್ಯರಾದ ಸುಗಂಧಿ ಜಗನ್ನಾಥ್, ಅರವಿಂದ್ ಲಾಯಿಲ ಹಾಗೂ ಗಣೇಶ್ ಲಾಯಿಲ ಇವರ ೨.೫೦ ಲಕ್ಷ ಅನುದಾನದಲ್ಲಿ ಕಾಂಕ್ರೀಟೀಕರಣಗೊಳಿಸಲಾಗಿದೆ. - [ಬಿಹಾರದಲ್ಲಿ ಹತ್ತನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್​ ಕುಮಾರ್](https://news19kannada.com/nitish-kumar-sworn-in-as-bihar-chief-minister-for-the-tenth-time/): ಬಿಹಾರದ ನೂತನ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಜಯ ಸಾಧಿಸಿದ ನಂತರ, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯ ಸಮಯ ಬಂದಿದೆ. ನಿತೀಶ್ ಕುಮಾರ್ ಸರ್ಕಾರದಲ್ಲಿ ಬಿಜೆಪಿ ಕೋಟಾದಿಂದ ಇಬ್ಬರು ಉಪಮುಖ್ಯಮಂತ್ರಿಗಳು ಇರುತ್ತಾರೆ. ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಮತ್ತೊಮ್ಮೆ ನಿತೀಶ್ ಕುಮಾರ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ನಿತೀಶ್ ಅವರ ಸಂಪುಟದಲ್ಲಿ ಯಾವ ಪಕ್ಷದ ಕೋಟಾದಿಂದ ಯಾವ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ನಿರ್ಧಾರವನ್ನೂ ಅಂತಿಮಗೊಳಿಸಲಾಗಿದೆ. - [ಬಂಟ್ವಾಳ: ಬುರ್ಖಾ ಧರಿಸಿ ಗ್ರಾಹಕರಂತೆ ಅಂಗಡಿಗೆ ಬಂದ ಪತ್ನಿಯಿಂದಲೇ ಚೂರಿ ಇರಿತ!](https://news19kannada.com/bantwal-man-stabbed-by-wife-who-came-to-shop-wearing-burqa-and-pretended-to-be-a-customer/): ಬಂಟ್ವಾಳ: ಗ್ರಾಹಕರ ಸೋಗಿನಲ್ಲಿ ಬುರ್ಖಾ ಧರಿಸಿ ಓರ್ವ ಹೆಂಗಸು, ಕೃಷ್ಣ ಕುಮಾರ್ ಸೋಮಯಾಜಿ ಎಂಬವರಿಗೆ ಕತ್ತಿಯಿಂದ ಹಲ್ಲೆ ಮಾಡಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಏನಿದು ಘಟನೆ?ದಿನಾಂಕ: 19.11.2025 ರಂದು ರಾತ್ರಿ ಸುಮಾರು 7.00 ಗಂಟೆ ವೇಳೆಗೆ, ಸೋಮಯಾಜಿ ಟೆಕ್ಸ್ ಟೈಲ್ಸ್ ಮಾಲಕ ಕೃಷ್ಣ ಕುಮಾರ್ ಸೋಮಯಾಜಿಯವರು ಅಂಗಡಿಯಲ್ಲಿದ್ದಾಗ, ಬುರ್ಖಾ ಧರಿಸಿ ಗ್ರಾಹಕರ ಸೋಗಿನಲ್ಲಿ ಬಂದ ಓರ್ವ ಹೆಂಗಸು, ಕೃಷ್ಣ ಕುಮಾರ್ ಸೋಮಯಾಜಿಯವರಿಗೆ ಕತ್ತಿಯಿಂದ ಹಲ್ಲೆ ನಡೆಸಿರುತ್ತಾರೆ.ಈ ವೇಳೆ ಅಲ್ಲಿಂದ ಓಡಿದ ಕೃಷ್ಣ ಕುಮಾರ್ ಸೋಮಯಾಜಿಯವರನ್ನು ಆಟೋ ರಿಕ್ಷಾವೊಂದರಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆತಂದು ಅಲ್ಲಿ ಚಿಕಿತ್ಸೆ ಕೊಡಿಸಿರುತ್ತಾರೆ. ಪ್ರಸ್ತುತ ಗಾಯಾಳು ಮಂಗಳೂರಿನ ಎ.ಜೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದು, ಪ್ರಾಣಾಪಾಯದಿಂದ ಪಾರಾಗಿರುತ್ತಾರೆ. - [ಧರ್ಮಸ್ಥಳ ಲಕ್ಷದೀಪೋತ್ಸವ: ಸಾಹಿತ್ಯ ಸಮ್ಮೇಳನದ 93ನೇ ಅಧಿವೇಶನ](https://news19kannada.com/dharmasthala-lakshdeepotsava-93rd-session-of-sahitya-sammelana/): ಹಣ ಮತ್ತು ಬಹುಮಾನಕ್ಕಾಗಿ ಸಾಹಿತ್ಯ ರಚನೆ ಸಲ್ಲದು. ಸಮಾಜ ಕಲ್ಯಾಣಕ್ಕಾಗಿ ಪ್ರೀತಿಯಿಂದ ಸಾಹಿತ್ಯ ರಚನೆ ಮಾಡಬೇಕು: ಹಿರಿಯ ಸಾಹಿತಿ ಪ್ರೊ. ಪ್ರೇಮಶೇಖರಉಜಿರೆ: ಹಣ ಮತ್ತು ಬಹುಮಾನಕ್ಕಾಗಿ ಸಾಹಿತ್ಯ ರಚನೆ ಸಲ್ಲದು. ಸಮಾಜ ಕಲ್ಯಾಣಕ್ಕಾಗಿ ಪ್ರೀತಿಯಿಂದ ಸಾಹಿತ್ಯ ರಚನೆ ಮಾಡಬೇಕು ಎಂದು ಹಿರಿಯ ಸಾಹಿತಿ ಪ್ರೊ. ಪ್ರೇಮಶೇಖರ ಹೇಳಿದರು.ಅವರು ಧರ್ಮಸ್ಥಳದಲ್ಲಿ ಲಕ್ಷö್ಮದೀಪೋತ್ಸವ ಸಂದರ್ಭದಲ್ಲಿ ಬುಧವಾರ ಆಯೋಜಿಸಿದ ಸಾಹಿತ್ಯ ಸಮ್ಮೇಳನದ ೯೩ನೆ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.ಇತ್ತೀಚೆಗೆ ಸಾಹಿತಿಗಳು ಬದುಕಿನ ವಾಸ್ತವದ ಬಗ್ಗೆ ಸಾಹಿತ್ಯಕೃತಿಗಳಲ್ಲಿ ಪ್ರತಿಬಿಂಬಿಸುವುದಿಲ್ಲ. ಏನು ನಡೆಯುತ್ತಿದೆಯೋ ಅದಕ್ಕೆ ವಿರುದ್ಧವಾಗಿ ಬರೆಯುತ್ತಾರೆ. ದೇಶದ ಅಸ್ತ್ವಿತ್ವ. ಭವಿಷ್ಯದ ಬಗ್ಗೆ ಮುಂದಿನ ಸವಾಲುಗಳ ಬಗ್ಗೆ ಸಾಹಿತ್ಯ ಕೃತಿಗಳ ಮೂಲಕ ಸಮಾಜವನ್ನು ಜಾಗೃತಿಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.ಬಹುಮಾನಕ್ಕಾಗಿ, ಕೀರ್ತಿಗಾಗಿ ಹಾಗೂ ಹಣ ಸಂಪಾದನೆಗಾಗಿ ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನ ಹೊಸ ವಿಚಾರಗಳು, ಹೊಸ ಪಾತ್ರಗಳು, ಹೊಸ ಸನ್ನಿವೇಶಗಳು ದೊರಕಿದಾಗ ಪರಕಾಯ ಪ್ರವೇಶ ಮಾಡಿ ಸಾಹಿತ್ಯ ಕೃತಿಗಳನ್ನು ಸಮಾಜಕಲ್ಯಾಣಕ್ಕಾಗಿ ಪ್ರೀತಿಯಿಂದ ಬರೆಯಬೇಕು. ಆಗ ಮಾತ್ರ ಮಿದುಳು ಸಕ್ರಿಯವಾಗಿ ಸಾಹಿತಿಗಳು […] - [ಬೆಳ್ತಂಗಡಿ: ಮಹಾತ್ಮಗಾಂಧಿ, ಬ್ರಹ್ಮಶ್ರೀ ನಾರಾಯಣಗುರುಗಳ ವರ್ಕಳ ಸಂವಾದದ ಶತಮಾನೋತ್ಸವ ಕಾರ್ಯಕ್ರಮ: ಪೂರ್ವಭಾವಿ ಸಭೆ](https://news19kannada.com/belthangady-centenary-program-of-the-varkala-samvad-of-mahatma-gandhi-and-brahmashri-narayana-guru-preliminary-meeting/): ಬೆಳ್ತಂಗಡಿ : ವರ್ಕಳದ ಶಿವಗಿರಿ ಮಠ ಹಾಗೂ ಮಂಗಳೂರು ನಾರಾಯಣ ಗುರು ಅಧ್ಯಯನ ಪೀಠದ ಸಹಯೋಗದಲ್ಲಿ ಮಹಾತ್ಮಗಾಂಧೀಜಿ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ ವರ್ಕಳ ಸಂವಾದದ ಶತಮಾನೋತ್ಸವ ಹಾಗೂ ನಾರಾಯಣ ಗುರುಗಳ ಮಹಾನಿರ್ವಾಣ ಶತಮಾನೋತ್ಸವ ಕಾರ್ಯಕ್ರಮವು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ಉಪಸ್ಥಿತಿಯಲ್ಲಿ ಡಿ. 3ರಂದು ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಬಗ್ಗೆ ಬೆಳ್ತಂಗಡಿ ತಾಲೂಕಿನ ವಿವಿಧ ಸಮುದಾಯದಗಳ ಮುಖಂಡರುಗಳ ಕೂಡುವಿಕೆಯೊಂದಿಗೆ ಪೂರ್ವಭಾವಿ ಸಭೆಯು ಬೆಳ್ತಂಗಡಿ ನಾರಾಯಣಗುರು ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳು ಹಾಗೂ ಶಿವಗಿರಿ ಮಠದ ಜ್ಞಾನತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕಾರ್ಯಕ್ರಮದ ಸಂಚಾಲಕರು ರಕ್ಷಿತ್ ಶಿವರಾಂ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿ ತಾಲೂಕಿನಿಂದ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದರು. ಈ ಸಂದರ್ಭದಲ್ಲಿ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸುರತ್ಕಲ್, ಗೆಜ್ಜೆ ಗಿರಿ ಕ್ಷೇತ್ರದ ಗೌರವ ಅಧ್ಯಕ್ಷರಾದ ಪಿತಾಂಬರ ಹೆರಾಜೆ, ಜಿಲ್ಲಾ ಧಾರ್ಮಿಕ […] - [ಕಾರ್ಕಳ: ಪಲ್ಟಿಯಾದ ಖಾಸಗಿ ಬಸ್; ಓರ್ವ ಮೃತ್ಯು](https://news19kannada.com/karkala-private-bus-overturns-one-dead/): ಹಲವರಿಗೆ ಗಾಯ; ಬುಧವಾರ ರಾತ್ರಿ ದುರ್ಘಟನೆ ಕಾರ್ಕಳ: ಮಂಗಳೂರಿನಿಂದ ಕಾರ್ಕಳ ಮೂಲಕ ದಾವಣಗೆರೆ ಸಾಗುತ್ತಿದ್ದ ಶ್ರೀ ದುರ್ಗಾಂಬಾ ಬಸ್ ಬುಧವಾರ ರಾತ್ರಿ ಪಲ್ಟಿಯಾಗಿ ಓರ್ವ ಮೃತಪಟ್ಟ ಘಟನೆ ಜೋಡುಕಟ್ಟೆ ಎಂಬಲ್ಲಿ ನಡೆದಿದೆ.ಬಸ್‌ನಲ್ಲಿ ಒಟ್ಟು 9 ಮಂದಿ ಪ್ರಯಾಣಿಕರಿದ್ದು, ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಇಬ್ಬರು ಚಾಲಕರಿದ್ದು ಓರ್ವ ಸ್ಥಳದಲ್ಲೇ ಮೃತಾಪಟ್ಟಿದ್ದರೆ, ಮತ್ತೋರ್ವ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ. ಅಪಘಾತದಿಂದಾಗಿ ಬಸ್ಸಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ.ರಸ್ತೆ ಕಾಮಗಾರಿ ಪ್ರಗತಿಯಲ್ಲಿರುವ ಬಗ್ಗೆ ಡೈವರ್ಸನ್ ಬೋರ್ಡ್ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ಎನ್ನುವ ಆರೋಪ ಕೇಳಿ ಬರುತ್ತಿದೆ. - [ಇಂದು ಮಹಾಪರ್ವ ದಿನವಾದ ಅಮಾವಾಸ್ಯೆ, ಕಾರ್ತಿಕ ಮಾಸ ಅಂತ್ಯ](https://news19kannada.com/today-is-mahaparva-day-amavasya-the-end-of-kartika-month/): ಇಂದು ದಿನಾಂಕ 20-11-2025, ಗುರುವಾರ. ಈ ದಿನವು ವಿಶ್ವಾ ವಸು ನಾಮ ಸಂವತ್ಸರ, ದಕ್ಷಿಣಾಯಣ, ಕಾರ್ತಿಕ ಮಾಸ, ಶರದೃತು, ಕೃಷ್ಣಪಕ್ಷ ಮತ್ತು ಅಮಾವಾಸ್ಯಾ ತಿಥಿಯನ್ನು ಒಳಗೊಂಡಿದೆ. ಇಂದು ವಿಶಾಖ ನಕ್ಷತ್ರ, ಶೋಭನ ಯೋಗ ಮತ್ತು ನಾಗವಾನ್ ಕರಣ ಇರಲಿದೆ. ದಿನದ ರಾಹುಕಾಲವು ಮಧ್ಯಾಹ್ನ 1 ಗಂಟೆ 31 ನಿಮಿಷದಿಂದ 2 ಗಂಟೆ 58 ನಿಮಿಷದ ತನಕ ಇರುತ್ತದೆ. ಯಾವುದೇ ಶುಭ ಕಾರ್ಯಗಳನ್ನು ಪ್ರಾರಂಭಿಸಲು ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲವು ಮಧ್ಯಾಹ್ನ 12 ಗಂಟೆ 5 ನಿಮಿಷದಿಂದ 1 ಗಂಟೆ 30 ನಿಮಿಷದ ತನಕ ಲಭ್ಯವಿರುತ್ತದೆ. ಇದು ಮಹಾಪರ್ವ ದಿನವಾದ ಅಮಾವಾಸ್ಯೆಯಾಗಿದೆ. ಈ ಅಮಾವಾಸ್ಯೆಯೊಂದಿಗೆ ಕಾರ್ತಿಕ ಮಾಸವು ಇಂದು ಮುಕ್ತಾಯಗೊಳ್ಳುತ್ತದೆ. ನಾಳೆಯಿಂದ ಶುಕ್ಲಪಕ್ಷ ಪ್ರಾರಂಭವಾಗಲಿದ್ದು, ನಾವು ಮಾರ್ಗಶಿರ ಮಾಸಕ್ಕೆ ಪಾದಾರ್ಪಣೆಯನ್ನು ಮಾಡುತ್ತಿದ್ದೇವೆ.  - [ವಲಯ ಮಟ್ಟದ ಪ್ರತಿಭಾ ಕಾರಂಜಿ; ವೇಣೂರು ಸರಕಾರಿ ಪ್ರೌಢಶಾಲೆಗೆ ಸಮಗ್ರ ಬಹುಮಾನ](https://news19kannada.com/zonal-level-talent-fountain-comprehensive-prize-for-venur-government-high-school-students/): ವೇಣೂರು: ನಾರಾವಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವೇಣೂರು ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)ದ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಬಹುಮಾನ ಗಳಿಸಿದ್ದಾರೆ.ಅನಘ ಜೈನ್ – (ಗಝಲ್ ಪ್ರಥಮ), ಧನುಶ್ರೀ – (ಕಾವ್ಯವಾಚನ ಪ್ರಥಮ), ಶಭರಿ – (ಆಶುಭಾಷಣ ಪ್ರಥಮ), ನಯಾಜ್ – (ಹಿಂದಿ ಭಾಷಣ ಪ್ರಥಮ), (ಮಯೂರ್ – ಮಿಮಿಕ್ರಿ ಪ್ರಥಮ), ಧವಳ್ – (ಚರ್ಚಾ ಸ್ಪರ್ಧೆ ಪ್ರಥಮ), ಅಮೋಘ – (ತುಳು ಭಾಷಣ ಪ್ರಥಮ), ನರಸಿಂಹ ಕಾಮತ್ ಮತ್ತು ಪ್ರಾಪ್ತಿ- (ರಸಪ್ರಶ್ನೆ ಪ್ರಥಮ), ಶರತ್ (ಚಿತ್ರಕಲೆ ಪ್ರಥಮ) ತೇಜಸ್ವಿ (ರಂಗೋಲಿ ಪ್ರಥಮ), ಧನುಶ್ರೀ (ಕನ್ನಡ ಭಾಷಣ ದ್ವಿತೀಯ), ಶ್ರೀನಿಕ (ಇಂಗ್ಲೀಷ್ ಭಾಷಣ ದ್ವಿತೀಯ), ಶಬರಿ (ಜನಪದ ಗೀತೆ ತೃತೀಯ) ಮೇಘ ಶ್ಯಾಮ (ಭಗವದ್ಗೀತೆ ಧಾರ್ಮಿಕ ಪಠಣ ತೃತೀಯ) ಹಾಗೂ ಲಹರಿ (ಪ್ರಬಂಧ ದ್ವಿತೀಯ) ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.ವಿಜೇತರಾದ ವಿದ್ಯಾರ್ಥಿಗಳನ್ನು ಉಪಪ್ರಾಂಶುಪಾಲರು, ಶಿಕ್ಷಕ ವೃಂದ, ಹಾಗೂ ಎಸ್‌ಡಿಎಂಸಿ ಅಭಿನಂದನೆ ಸಲ್ಲಿಸಿದ್ದಾರೆ. - [ಉಜಿರೆ ರುಡ್‌ಸೆಡ್‌ನಲ್ಲಿ ಮದುಮಗಳ ಶೃಂಗಾರ ಉಚಿತ ತರಬೇತಿ](https://news19kannada.com/free-bridal-grooming-training-at-ujire-rudsed/): ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಇವರ ಸಹಕಾರದಲ್ಲಿ ಉಜಿರೆ ಸಿದ್ದವನದ ರುಡ್‌ಸೆಡ್ ಸಂಸ್ಥೆಯಲ್ಲಿ ಆರುದಿನಗಳ ಮದುಮಗಳ ಶೃಂಗಾರ ಉಚಿತ ತರಬೇತಿಯು ನ. 24ರಿಂದ ನ. 29ರವರೆಗೆ ನಡೆಯಲಿದೆ.ತರಬೇತಿಯಲ್ಲಿ ಮೆಹಂದಿ, ಮೇಕಪ್, ಹೇರ್ ಸ್ಟೈಲ್, ಸಾರಿ ಡ್ರಾಪಿಂಗ್ ಬಗ್ಗೆ ತರಬೇತಿ ನೀಡಲಾಗುತ್ತದೆ. 18 ರಿಂದ 50 ವರ್ಷದ ಒಳಗಿನವರು ತರಬೇತಿ ಪಡೆಯಬಹುದಾಗಿದ್ದು, ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣ ಉಚಿತವಾಗಿರುತ್ತದೆ. ಜೊತೆಗೆ ಸಂಸ್ಥೆಯ ಸಮವಸ್ತ್ರ ನೀಡಲಾಗುತ್ತದೆ. ಬ್ಯಾಂಕಿನಿಂದ ಲಭಿಸುವ ಸಾಲದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಭಾಗವಹಿಸಿಸುವವರು ಈ‎ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು‎ ಸಲ್ಲಿಸಬಹುದು.https://forms.gle/9LUE1UvHMAv21vRS7   ಹೆಚ್ಚಿನ‎ ಮಾಹಿತಿಗಾಗಿ ಕಛೇರಿ ಸಂಖ್ಯೆ 9591044014,‎ 6364561982, 9980885900, 9448348569, 9380626695, 8296770307,‎ 8861514706, 9902594791‎ ಹಾಗೂ ಸಂಸ್ಥೆಯ ವೆಬ್‌‎ ಸೈಟ್‌ನ್ನು‎ ಸಂಪರ್ಕಿಸಿ. https://www.rudsetujire.com  Training center‎ Location‎ : https://maps.app.goo.gl/iQhbzzA9k3CrMuAv6 - [ಕರ್ನಾಟಕ ಜಾನಪದ ಪರಿಷತ್ತು; ಬೆಳ್ತಂಗಡಿ ಘಟಕದ ಸಾನ್ವಿ ಧರ್ಮಸ್ಥಳ ರಾಜ್ಯಮಟ್ಟಕ್ಕೆ](https://news19kannada.com/karnataka-janapada-parishad-belthangady-units-saanvi-dharmasthala-to-state-level/): ಬೆಳ್ತಂಗಡಿ: ಕರ್ನಾಟಕ ಸರಕಾರದ “ಕನ್ನಡ ಮತ್ತು ಸಂಸ್ಕೃತಿ ಇಲಾಖೆ” ದಕ್ಷಿಣ ಕನ್ನಡ ಜಿಲ್ಲೆ ತುಳುಭವನ ಮಂಗಳೂರಿನಲ್ಲಿ ಆಯೋಜಿಸಿದ 14 ರಿಂದ 18 ವರ್ಷ ವಯೋಮಿತಿಯ ಕಿಶೋರ ವಿಭಾಗದ ಜಾನಪದ ಗೀತೆ ಸ್ಪರ್ಧೆಯಲ್ಲಿ ಸಾನ್ವಿ ಃ ಧರ್ಮಸ್ಥಳ ಇವರು ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ದ.ಕ. ಬೆಳ್ತಂಗಡಿ ತಾಲೂಕು ಘಟಕದ ಕಾರ್ಯದರ್ಶಿ ಶ್ರೀದೇವಿ ಸಚಿನ್ ಧರ್ಮಸ್ಥಳ ಮುಂಡ್ರುಪ್ಪಾಡಿ ಇವರ ಸುಪುತ್ರಿ ಮತ್ತು ನಿನಾದ ಕ್ಲಾಸಿಕಲ್ ವಿದ್ಯಾರ್ಥಿನಿ. ಇವರನ್ನು ಬೆಳ್ತಂಗಡಿ ತಾಲೂಕು ಘಟಕದ ಗೌರವಾಧ್ಯಕ್ಷರಾದ ಬಿ. ಭುಜಬಲಿ ಧರ್ಮಸ್ಥಳ ಮತ್ತು ಅಧ್ಯಕ್ಷ ವಿಜಯ ಕುಮಾರ್ ಜೈನ್ ಅಳದಂಗಡಿ ಅಭಿನಂದಿಸಿದ್ದಾರೆ. - [ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ₹1 ಸಾವಿರ ಹೆಚ್ಚಳ : ಲಕ್ಷ್ಮೀ ಹೆಬ್ಬಾಳ್ಳ‌ರ್ ಭರವಸೆ](https://news19kannada.com/anganwadi-workers-honorarium-to-be-increased-by-1000-lakshmi-hebballar-promises/): ತುಮಕೂರು: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಮುಂದಿನ ಬಜೆಟ್‌ನಲ್ಲಿ ಮತ್ತೆ ₹1 ಸಾವಿರ ಹೆಚ್ಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭರವಸೆ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ (ಐಸಿಡಿಎಸ್) ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗೌರವ ಧನ ಹೆಚ್ಚಳದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಚರ್ಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಯರು, ಸಹಾಯಕಿಯರಲ್ಲಿ ಶೇ.70ರಷ್ಟು ಮಂದಿ ಗೃಹಲಕ್ಷ್ಮಿನೆರವು ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಸಹಕಾರ ಬ್ಯಾಂಕ್‌ನಲ್ಲಿ 30 ಸಾವಿರದಿಂದ 5 ಲಕ್ಷದ ವರೆಗೆ ಸಾಲ ವಿತರಿಸಲು ಯೋಜನೆ ರೂಪಿಸಲಾಗಿದೆ ಎಂದರು. - [ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಆತಂಕ: ಅಯ್ಯಪ್ಪ ಭಕ್ತರಿಗೆ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ](https://news19kannada.com/brain-eating-amoeba-scare-in-kerala-health-department-issues-guidelines-for-ayyappa-devotees/): ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಹಾವಳಿ ಜೋರಾಗಿದೆ. ಹೀಗಾಗಿ ಶಬರಿಮಲೆಗೆ ಹೋಗುವ ಕರ್ನಾಟಕದ ಭಕ್ತರು ಎಚ್ಚರ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಆ ಮೂಲಕ ಭಕ್ತರ ಆರೋಗ್ಯ ರಕ್ಷಣೆಗೆ ಮುಂದಾಗಿದೆ. ಹಾಗಾದರೆ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಏನು ಎಂಬ ಮಾಹಿತಿ ಇಲ್ಲಿದೆ. ಈಗಾಗಲೇ ಕೇರಳದಲ್ಲಿ ನೂರಾರು ಜನರಿಗೆ ಬಾಧಿಸುತ್ತಿರುವ ಈ ವೈರಸ್‌, ರಾಜ್ಯದಿಂದ ಶಬರಿ ಮಲೆಗೆ ಹೋಗುವ ಭಕ್ತರ ಟೆನ್ಷನ್​ಗೆ ಕಾರಣವಾಗಿದೆ. ಹೀಗಾಗಿ ಭಕ್ತರ ಆರೋಗ್ಯ ರಕ್ಷಣೆಗೆ ಮುಂದಾಗಿರುವ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆಗೆ ಮಾಡಿದೆ. ಆರೋಗ್ಯ ಇಲಾಖೆಯ ಮಾರ್ಗಸೂಚಿಯಲ್ಲಿ ಏನಿದೆ?  ಸಾಮಾನ್ಯವಾಗಿ ನಿಂತ ನೀರು, ಕೊಳಗಳು ಮತ್ತು ಸರೋವರಗಳಲ್ಲಿ ಈ ಅಮೀಬಾ ಬೆಳೆಯುತ್ತೆ. ಒಂದು ವೇಳೆ ಅಂತಹ ನೀರಿನಲ್ಲಿ ಈಜಾಡಿದರೆ, ಆ ಅಮೀಬಾವು ಮೂಗಿನ ಮೂಲಕ ನಮ್ಮ ಮೆದುಳನ್ನ ಹೊಕ್ಕು ನೇರವಾಗಿ ಕೇಂದ್ರ ನರವ್ಯೂಹಕ್ಕೆ ಹಾನಿಯುಂಟು ಮಾಡುತ್ತದೆ. ಕೆಲವೊಮ್ಮೆ ಸೋಂಕಿನ ಪ್ರಮಾಣ ಹೆಚ್ಚಾದರೆ ಸಾವು ಕೂಡ ಸಂಭವಿಸಬಹುದು. - [ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ತನ್ವೀರ್ ಅಹಮದ್ ಉಲ್ಲಾ ಭೇಟಿ](https://news19kannada.com/tanveer-ahmed-ullah-visited-sdm-multispeciality-hospital-ujira/): ಉಜಿರೆ: ಅಂಕಣಕಾರರಾಗಿ, ಕವಿಯಾಗಿ, ರಾಜಕಾರಣಿಯಾಗಿ, ಉದ್ಯಮಿಯಾಗಿ, ಶಿಕ್ಷಕರಾಗಿ, ವಕೀಲರಾಗಿ ಮತ್ತು ರಾಷ್ಟ್ರೀಯ ಚಿಂತಕರಾಗಿ ಗುರುತಿಸಿಕೊಂಡಿರುವ ಬೆಂಗಳೂರಿನ ತನ್ವೀರ್ ಅಹಮದ್ ಉಲ್ಲಾ ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನದಲ್ಲಿ ಇಸ್ಲಾಂ ಧರ್ಮದಲ್ಲಿ ಸಮನ್ವಯತೆ ವಿಷಯದಲ್ಲಿ ಉಪನ್ಯಾಸ ನೀಡಲಿರುವ ತನ್ವೀರ್ ಅಹಮದ್ ಉಲ್ಲಾ ಅವರು ಪಾದಯಾತ್ರೆಯ ಮೂಲಕ ಬೆಂಗಳೂರಿನಿಂದ ಆಗಮಿಸಿದ್ದರು. ಈ ಸಂದರ್ಭದಲ್ಲಿ ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಆರಂಭಿಸಿದ ನನಗೆ ದಾರಿಯುದ್ದಕ್ಕೂ ಧರ್ಮಸ್ಥಳ ವಿಶೇಷವಾಗಿ ಕಾಣಿಸಿತು. ನೊಂದವರ ಕಣ್ಣೀರಿನಲ್ಲಿ ಆಶಾದಾಯಕವಾಗಿ, ಪ್ರೀತಿಸುವವರ ಹೃದಯದಲ್ಲಿ ಪ್ರೀತಿಯಾಗಿ, ಓದುವ ಮಕ್ಕಳ ಪುಸ್ತಕದಲ್ಲಿ, ಮರುಅರಣ್ಯೀಕರಣದ ಮರಗಳ ಗೂಡಿನಲ್ಲಿರುವ ಹಕ್ಕಿಯ ಮರಿಗಳಲ್ಲಿ ನನಗೆ ಪೂಜ್ಯರ ಸಮಾಜ ಸೇವೆಯ ಮೂಲಕ ಧರ್ಮಸ್ಥಳ ಕಂಡಿತು.ಈ ಆಸ್ಪತ್ರೆಗೆ ಬಂದು ಇಲ್ಲಿನ ಹೈಟೆಕ್ ಸೌಲಭ್ಯವಿರುವ ಡಯಾಲಿಸಿಸ್ ಕೇಂದ್ರದಲ್ಲಿ ಸಿಗುತ್ತಿರುವ ಉಚಿತ ಡಯಾಲಿಸಿಸ್ ಸೇವೆ ನೋಡಿದಾಗ ಧರ್ಮಸ್ಥಳ ನನಗೆ ಒಂದು ಅನನ್ಯ ಕ್ಷೇತ್ರವಾಗಿ ಕಾಣಿಸಿತು. […] - [ಪಾದಯಾತ್ರೆಯಿಂದ ಅನನ್ಯ ಅನುಭವ: ತನ್ವೀರ್ ಅಹ್ಮದ್ ಉಲ್ಲಾ](https://news19kannada.com/hiking-is-a-unique-experience-tanveer-ahmed-ullah/): ಉಜಿರೆ: ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಹಾಗೂ ಕುಟುಂಬವರ್ಗದವರ ಆಶೀರ್ವಾದ ಮತ್ತು ಶುಭ ಹಾರೈಕೆಗಳೊಂದಿಗೆ ಪಾದಯಾತ್ರೆ ಸುಗಮವಾಗಿ ಅನನ್ಯ ಅನುಭವ ನೀಡಿದೆ ಎಂದು ಅಂಕಣಕಾರ ಅಹಮ್ಮದ್ ಉಲ್ಲಾ ಹೇಳಿದರು.ಅವರು ಮಂಗಳವಾರ ಪಾದಯಾತ್ರೆಯಲ್ಲಿ ಧರ್ಮಸ್ಥಳ ತಲುಪಿದಾಗ  ಅವರನ್ನು ಪ್ರವೇಶದ್ವಾರದಿಂದ ಸ್ವಾಗತಿಸಿ ಭವ್ಯ ಮೆರವಣಿಗೆಯಲ್ಲಿ ಬೀಡಿಗೆ ಕರೆತರಲಾಯಿತು. ಬಳಿಕ ಅವರು ಹೆಗ್ಗಡೆಯವರೊಂದಿಗೆ ಪಾದಯಾತ್ರೆ ಬಗ್ಯೆ ತನ್ನ ಅನುಭವ ಹಂಚಿಕೊಂಡರು.ದಾರಿಯುದ್ಧಕ್ಕೂ ಹೆಗ್ಗಡೆಯವರು ಹಾಗೂ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಯೆ ಜನರ ಶ್ರದ್ಧಾ-ಭಕ್ತಿ ಹಾಗೂ ಅಭಿಮಾನದ ಮಾತುಗಳನ್ನು ಆಲಿಸಿ ಸಂತಸವಾಯಿತು. ಇಡೀ ರಾಜ್ಯದ ಜನತೆ ಧರ್ಮಸ್ಥಳದ ಅಭಿಮಾನಿಗಳು ಹಾಗೂ ಭಕ್ತರು. ನಾವೆಲ್ಲರೂ ನಿಮ್ಮ ಪವಿತ್ರ ಕ್ಷೇತ್ರದ ಫಲಾನುಭವಿಗಳು ಎಂದು ಸಂತಸ ವ್ಯಕ್ತಪಡಿಸಿದರು. - [ಮಾಜಿ ಶಾಸಕ ಮೊದೀನ್ ಬಾವಾರ ವಾಟ್ಸಾಪ್ ಹ್ಯಾಕ್! ಹಣಕ್ಕಾಗಿ ಬೇಡಿಕೆ](https://news19kannada.com/former-mla-modiin-bawaras-whatsapp-hacked-demand-for-money/): ಮಂಗಳೂರು: ಮಾಜಿ ಶಾಸಕ ಮೊದೀನ್ ಬಾವಾ ಅವರ ವಾಟ್ಸಾಪ್ ಸಂಖ್ಯೆಯನ್ನು ಸೈಬರ್ ವಂಚಕರು ಹ್ಯಾಕ್ ಮಾಡಿದ್ದಾರೆ. ವಂಚಕರು ಅವರ ಪ್ರೊಫೈಲ್ ಬಳಸಿ ಅವರ ಸಂಪರ್ಕ ಪಟ್ಟಿಯಲ್ಲಿರುವ ಹಲವಾರು ಜನರಿಂದ ಲಕ್ಷಾಂತರ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಮೂಲಗಳ ಪ್ರಕಾರ, ಪತ್ರಕರ್ತರು, ಪೊಲೀಸ್ ಅಧಿಕಾರಿಗಳು ಮತ್ತು ಬಾವಾ ಅವರಿಗೆ ತಿಳಿದಿರುವ ಇತರರು ಅವರ ಸಂಖ್ಯೆಯಿಂದ ತುರ್ತು ಆರ್ಥಿಕ ಸಹಾಯಕ್ಕಾಗಿ ಸಂದೇಶಗಳನ್ನು ಕಳುಹಿಸಿದ್ದಾರೆ. ಹ್ಯಾಕರ್‌ಗಳು ನನಗೆ ನಿಮ್ಮ ಸಹಾಯ ಬೇಕು ಎಂದು ಸಂದೇಶ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.ಏನಾಯಿತು, ಬಾವಾ? ಎಂದು ಕೆಲವರು ಕೇಳಿದಾಗ ಹ್ಯಾಕರ್‌ಗಳು ಇಂಗ್ಲಿಷ್‌ನಲ್ಲಿ ವಿವರವಾದ ಕಥೆಗಳನ್ನು ಕಳುಹಿಸಿದ್ದರು, ನಂತರ ಬೇರೆ ಯುಪಿಐ ಐಡಿಗೆ ಹಣವನ್ನು ವರ್ಗಾಯಿಸಲು ವಿನಂತಿಸಿದರು. ವಿಷಯ ತಿಳಿದ ಹಲವಾರು ಜನರು ಬಾವಾ ಅವರನ್ನು ನೇರವಾಗಿ ಕರೆ ಮಾಡಿದಾಗ ವಾಟ್ಸಪ್ ಹ್ಯಾಕ್ ಆಗಿರುವುದು ಗೊತ್ತಾಗಿದೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. - [ಗುಂಡೂರಿ: ಡಿ. 18ರಂದು ದೊಂಪದಬಲಿ ನೇಮೋತ್ಸವ](https://news19kannada.com/gunduri-dompadabali-nemotsava-on-december-18th/): ವೇಣೂರು: ಗುಂಡೂರಿ ಗ್ರಾಮದ ತುಂಬೆದಲೆಕ್ಕಿಯಲ್ಲಿ ಡಿ. 18ರಂದು ದೊಂಪದಬಲಿ ನೇಮೋತ್ಸವ ಜರಗಲಿದೆ.ಅಂದು ಬೆಳಿಗ್ಗೆ 10-00 ಗಂಟೆಯಿಂದ ನವಕ ಕಲಶಾಭಿಷೇಕ, ಪಂಚಪರ್ವ ನಡೆಯಲಿದೆ. ಸಂಜೆ 5-00 ಗಂಟೆಗೆ ಗುತ್ತುಗಳಿಂದ ಶ್ರೀ ದೈವಗಳ ಭಂಡಾರ ಆಗಮನವಾಗಲಿದೆ. ಬಳಿಕ ರಾತ್ರಿ ಶ್ರೀ ಮಾರವಾಂಡಿ, ಶ್ರೀ ಕೊಡಮಣಿತ್ತಾಯ, ಶ್ರೀ ಮೈಸಂತಾಯ ಹಾಗೂ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ಜರಗಲಿದೆ. - [ಕನ್ಯಾಡಿ ಸೇವಾಭಾರತಿಯಿಂದ MESCOM ಅಧ್ಯಕ್ಷರ ಭೇಟಿ](https://news19kannada.com/mescom-presidents-visit-from-kanyadi-seva-bharathi/): ಮಂಗಳೂರು: MESCOM ಅಧ್ಯಕ್ಷರಾದ ಕೆ. ಹರೀಶ್ ಕುಮಾರ್ ರವರನ್ನು ಸೇವಾಧಾಮದ ಸಂಸ್ಥಾಪಕರಾದ ಕೆ. ವಿನಾಯಕ ರಾವ್ ಮತ್ತು ತಂಡವು ನವೆಂಬರ್ 18 ರಂದು ಭೇಟಿ ನೀಡಿ ಸೇವಾಭಾರತಿಯ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕನ್ಯಾಡಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡಕ್ಕೆ CSR ಅನುದಾನವನ್ನು ಒದಗಿಸಿಕೊಡುವಂತೆ ಮನವಿ ಮಾಡಲಾಯಿತು. ಶ್ರೀಯುತರು ಕಟ್ಟಡ ನಿರ್ಮಾಣ ಶೀಘ್ರ ನೆರವೇರುವಂತೆ ಶುಭ ಹಾರೈಸಿದರು. - [ವೇಣೂರು ಸಿಎ ಬ್ಯಾಂಕ್ ಮಾಜಿ ನಿರ್ದೇಶಕ ರಾಜೇಂದ್ರ ರಾವ್ ನಿಧನ](https://news19kannada.com/venur-ca-bank-former-director-rajendra-rao-passes-away/): ವೇಣೂರು: ಕುಕ್ಕೇಡಿ ಗ್ರಾಮದ ಪಾಣೂರು ನಿವಾಸಿ ವೇಣೂರು ಸಿಎ ಬ್ಯಾಂಕ್ ಮಾಜಿ ನಿರ್ದೇಶಕರಾಗಿದ್ದ ರಾಜೇಂದ್ರ ರಾವ್ ಅವರು ಇಂದು ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಸಾಮಾಜಿಕವಾಗಿ ಗುರುತಿಸಿಕೊಂಡಿದ್ದ ಅವರು ಪಾಣೂರು ತುಳು ಒಕ್ಕೂಟದ ಸಂಚಾಲಕರೂ ಆಗಿದ್ದರು. ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಇವರ ನಿಧನಕ್ಕೆ ವೇಣೂರು ಸಿಎ ಬ್ಯಾಂಕ್ ಅಧ್ಯಕ್ಷರಾದ ಸುಂದರ ಹೆಗ್ಡೆ ಬಿ.ಇ. ತೀವ್ರ ಸಂತಾಪ ಸೂಚಿಸಿದ್ದಾರೆ. - [ಕುಂಭನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ಬೆಳ್ಮಣ್; ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ-ಸ್ವಸಹಾಯ ಸಂಘಗಳ ಒಕ್ಕೂಟದ ಉದ್ಘಾಟನೆ](https://news19kannada.com/kumbhanidhi-credit-co-operative-society-n-belman-inauguration-of-collective-shree-lakshmi-puja-union-of-self-help-societies/): ಬೆಳ್ಮಣ್ : ಕುಂಭನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ.) ಬೆಳ್ಮಣ್ ಇದರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಮತ್ತು ಸ್ವಸಹಾಯ ಸಂಘಗಳ ಒಕ್ಕೂಟದ ಉದ್ಘಾಟನ ಕಾರ್ಯಕ್ರಮವು ನ. 16ರಂದು ಕುಲಾಲ ಭವನ ನಾನಿಲ್ತಾರ್ ಮುಲ್ಲಡ್ಕ ಮುಂಡ್ಕೂರು ಇಲ್ಲಿ ಜರಗಿತು.ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರಿಂದ ದೀಪ ಪ್ರಜ್ವಲನೆಗೊಳಿಸಿ ಆಶೀರ್ವಚನ ನೀಡಿದ ಅವರು, ಜಾತಿ ಭೇದಭಾವವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣಬೇಕು, ಬೇರೆ ಸಮುದಾಯಗಳ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕು ಮತ್ತು ದೇವಸ್ಥಾನಕ್ಕೆ ಹೋಗುವುದರಿಂದ ಮಾತ್ರ ಶುದ್ದತೆ ಬರುವುದಿಲ್ಲ, ಮೊದಲು ಮನಸ್ಸನ್ನು ಶುದ್ಧವಾಗಿವಂತೆ ಭಕ್ತಾಭಿಮಾನಿಗಳಿಗೆ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷರಾದ ಕುಶ ಆರ್. ಮೂಲ್ಯ ಇನ್ನಾ ವಹಿಸಿ ಮಾತನಾಡಿ, ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮುಂದೆಯೂ ಸಹಕಾರ ಕೋರಿದರು. ಶಾಸಕ ವಿ. ಸುನಿಲ್ ಕುಮಾರ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉದಯ ಶೆಟ್ಟಿ ಮುನಿಯಾಲ್ ಉಪಾಧ್ಯಕ್ಷರು ಜಿಲ್ಲಾ ಗ್ಯಾರಂಟಿ ಸಮಿತಿ, ಶೋಧನ ಕುಮಾರ್ ಶೆಟ್ಟಿ ಕಟ್ಟಡ […] - [ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಮುಂದೂಡುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ](https://news19kannada.com/kerala-government-moves-supreme-court-seeking-postponement-of-drastic-revision-of-voter-list/): ಕೇಂದ್ರ ಚುನಾವಣಾ ಆಯೋಗ ಕೇರಳದಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿ ತೀವ್ರ ವಿಶೇಷ ಪರಿಷ್ಕರಣೆ(SIR)ಮುಂದೂಡುವಂತೆ ಒತ್ತಾಯಿಸಿ, ಕೇರಳ ಸರ್ಕಾರ ಸುಪ್ರೀಂಕೋರ್ಟ್​ ಮೊರೆ ಹೋಗಿದೆ. ಕೇರಳದಲ್ಲಿ ಸ್ಥಳೀಯ ಸಂಸ್ಥೆಚುನಾವಣೆಗಳು ಸನ್ನಿಹಿತವಿದ್ದು, ಈ ಸಂದರ್ಭದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದು ಸೂಕ್ತವಲ್ಲ ಎಂದು ಸರ್ಕಾರ ಹೇಳಿದೆ. - [ಹಸೆಮಣೆ ಏರಲು ಸಜ್ಜಾದ RCB ನಾಯಕಿ..!; ಮದುವೆ ಯಾವಾಗ?](https://news19kannada.com/rcb-captain-ready-to-step-into-the-limelight-when-is-the-wedding/): ಕನ್ನಡಿಗರ ಹೆಮ್ಮೆಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಟೀಂ ಇಂಡಿಯಾದ ಮಹಿಳಾ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಅವರು ತಮ್ಮ ಪ್ರಿಯಕರನೊಂದಿಗೆ ಆಗಾಗ ಕಾಣಿಸಿಕೊಂಡಿದ್ದು ಜಗತ್ತಿಗೆ ಗೊತ್ತಿದೆ. ಇದೀಗ ಸ್ಮೃತಿ ಮಂಧಾನ ಅವರು ತಮ್ಮ ಸ್ನೇಹಿತನೊಂದಿಗೆ ಮದುವೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಇದಕ್ಕೆ ಪೂರಕವಾಗಿ ಅವರ ವೆಡ್ಡಿಂಗ್ ಕಾರ್ಡ್ಸ್ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಟೀಂ ಇಂಡಿಯಾದ ಸ್ಟಾರ್ ಆಟಗಾರ್ತಿ ಆಗಿರುವ ಸ್ಮೃತಿ ಮಂಧಾನ ಅವರು ಬಹುದಿನಗಳಿಂದ ಮ್ಯೂಸಿಕ್ ಡೈರೆಕ್ಟರ್ ಗೆಳೆಯ ಪಶಾಲ್ ಮುಚ್ಚಲ್ ಅವರೊಂದಿಗೆ ಸುತ್ತಾಡಿದ್ದು ಗುಟ್ಟಾಗೇನು ಉಳಿದಿಲ್ಲ. ಅದೆಷ್ಟೋ ಬಾರಿ ಸ್ಮೃತಿ ಆಟ ನೋಡಲು ಸ್ವತಃ ಗೆಳೆಯ ಪಶಾಲ್ ಮುಚ್ಚಲ್ ಮೈದಾನ ಬಂದಿದ್ದರು. ಅದರ ವಿಡಿಯೋ ಫೋಟೋಗಳು ವೈರಲ್ ಆಗಿದ್ದವು. ಇದೀಗ ಇವರಿಬ್ಬರು ಮದುವೆ ಆಗುತ್ತಿದ್ದಾರೆ. ಇದೇ ನವೆಂಬರ್ 23ರಂದು ಮದುವೆ ನಡೆಯಲಿದೆ ಎಂಬ ಸುದ್ದಿ ಹೊರ ಬಿದ್ದಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಬಳಿಕ […] - [ಕಟೀಲು ಯಕ್ಷಗಾನದ ತಿರುಗಾಟ ಪ್ರಾರಂಭ, ಈ ಬಾರಿ ನೂತನವಾಗಿ ಏಳನೇ ಮೇಳ ಸೇರ್ಪಡೆ!](https://news19kannada.com/the-kateel-yakshagana-tour-begins-with-a-new-seventh-festival-added-this-time/): ಕಟೀಲು : ಕಟೀಲು  ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಈ ವರ್ಷದ ತಿರುಗಾಟ ಪ್ರಾರಂಭಗೊಂಡಿದೆ. ಆದ್ದರಿಂದ ಮೇಳದ ಪ್ರಥಮ ಪ್ರದರ್ಶನ ಕಟೀಲು ಕ್ಷೇತ್ರದ ರಥಬೀದಿಯ ಸರಸ್ವತಿ ಸದನದಲ್ಲಿ ರವಿವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು. ಕಟೀಲು ಮೇಳದ ಈ ಬಾರಿಯ ವಿಶೇಷ ನೂತನವಾಗಿ ಏಳನೇ ಮೇಳ ಸೇರ್ಪಡೆ. ಒಂದು ರಂಗಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ ಎಲ್ಲೆಡೆ ಕಾಣುತ್ತಿರುತ್ತೇವೆ. ಆದರೆ ಏಳು ರಂಗಸ್ಥಳ, ಏಳೂ ರಂಗಸ್ಥಳದಲ್ಲಿ ಹಿಮ್ಮೇಳ, ಮುಮ್ಮೇಳ ಕಲಾವಿದರನ್ನು ಕಾಣಲು ಸಿಗುವುದು ಅಪೂರ್ವ. ಆದ್ದರಿಂದ ಮೇಳಗಳ ತಿರುಗಾಟ ಆರಂಭದ ಪ್ರಥಮ ಪ್ರದರ್ಶನ ಏಳೂ ಮೇಳಗಳು ಜೊತೆಯಾಗಿ ನಡೆಸಿಕೊಟ್ಟಿತು. ಯಕ್ಷಗಾನ ತಿರುಗಾಟ ಆರಂಭ ಯಕ್ಷಗಾನ ತಿರುಗಾಟ ಆರಂಭದ ಹಿನ್ನೆಲೆಯಲ್ಲಿ ಕಲಾವಿದರು ಶ್ರೀದೇವಿಯ ಸಮ್ಮುಖದಲ್ಲಿ ಗಜ್ಜೆಕಟ್ಟಿ ಕುಣಿದರು. ಬಳಿಕ ಕಲಾವಿದರು ದೇವಸ್ಥಾನದ ರಥಬೀದಿಯಲ್ಲಿ ಹಾಕಲಾಗಿದ್ದ ಏಳೂ ರಂಗಸ್ಥಳಗಳಲ್ಲಿ ಪೂರ್ವರಂಗ ಕುಣಿತವನ್ನು ಪ್ರದರ್ಶಿಸಿದರು. ತಿರುಗಾಟದ ಪ್ರಥಮ ಪ್ರದರ್ಶನವಾಗಿ ವಾಡಿಕೆಯಂತೆ ಏಳೂ ಮೇಳದ ಕಲಾವಿದರು ಜೊತೆಯಾಗಿ ‘ಪಾಂಡವಾಶ್ವಮೇಧ’ ಪ್ರಸಂಗವನ್ನು ಪ್ರದರ್ಶಿಸಿದರು. ಇಂದಿನಿಂದ ಏಳೂ ಮೇಳಗಳು ಕರಾವಳಿಯ ವಿವಿಧ ಕಡೆಗಳಲ್ಲಿ ತಿರುಗಾಟವನ್ನು […] - [ಜನರ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯಸಭಾ ನಿಧಿ ಬಳಕೆ: ಡಾ. ಹೆಗ್ಗಡೆ](https://news19kannada.com/rajya-sabha-funds-to-be-used-for-peoples-development-dr-heggade/): ಡಾ ಹೆಗ್ಗಡೆಯವರ ರಾಜ್ಯಸಭಾ ನಿಧಿಯ ರೂ. 2 ಕೋಟಿ ವೆಚ್ಚದಲ್ಲಿ ಕಾಮಗಾರಿ ಶಿಲಾನ್ಯಾಸ-ಸಿರಿ ಕೆಫೆ-ಸಿರಿ ಮಳಿಗೆ ಉದ್ಘಾಟನೆ ಬೆಳ್ತಂಗಡಿ: ಗ್ರಾಮದ ಅಗತ್ಯತೆ ಮತ್ತು ಗ್ರಾಮೀಣ ಜನರ ಜೀವನ ಸ್ಥಿತಿಗತಿ ಬಗ್ಗೆ ಗ್ರಾಮಾಭಿವೃದ್ದಿ ಯೋಜನೆ ಮೂಲಕ ನಿತ್ಯ ವರದಿ ಬರುತ್ತಿದ್ದು, ಇದರಂತೆ ಇಲ್ಲಿಂದ ೮೦೦ ಕಿ.ಮೀ. ದೂರದ ಬೀದರ್ ಜಿಲ್ಲೆಯ ಸ್ಥಿತಿ ಕುರಿತು ಮಾಹಿತಿ ದೊರೆತ ಕಾರಣ ಅಲ್ಲಿಯ ಜನರ ಜೀವನ ಸುಧಾರಣೆ ಅಗಬೇಕು ಎನ್ನುವುದು ನನ್ನ ಭಾವನೆ ಆಗಿತ್ತು. ಅದಕ್ಕಾಗಿ ರಾಜ್ಯಸಭಾ ಪ್ರದೇಶಾಭಿವೃದ್ಧಿ ನಿಧಿಯಿಂದ ಬೀದರ್ ಜಿಲ್ಲೆಗೆ ಹೈನುಗಾರಿಕೆಗೆ 10 ಕೋಟಿ ರೂ. ಬಳಕೆ ಮಾಡಿದ್ದು ಇದರಿಂದ ನಿತ್ಯ 18 ಸಾವಿರ ಲೀಟರ್ ಉತ್ಪತ್ತಿಯಾಗುತ್ತಿದ್ದ ಹಾಲು ಪ್ರಸ್ತುತ ಒಂದು ಲಕ್ಷದ ನಲುವತ್ತು ಸಾವಿರ ಲೀಟರ್ ಹಾಲು ಉತ್ಪತ್ತಿಯಾಗುತ್ತಿದೆ. ಇದರಿಂದ ಜನರ ಜೀವನ ಮಟ್ಟ ಸುಧಾರಣೆಯಾಗಿದೆ. ಇದೇ ರೀತಿ ಜನರ ಜೀವನ ಮಟ್ಟ ಸುಧಾರಣೆ ಅಗತ್ಯತೆ ಮನಗಂಡು ಮುಂದೆಯೂ ರಾಜ್ಯಸಭಾ ನಿಧಿ ಬಳಸಲಾಗುವುದು ಎಂದು ರಾಜ್ಯಸಭಾ ಸಂಸದ, ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ […] - [ಹಟ್ಟಾಜೆಗುತ್ತು ಪ್ರಭಾಕರ ಹೆಗ್ಡೆ ಅವರಿಗೆ ಕೃಷಿ ಸಿಂಧೂರ ಪ್ರಶಸ್ತಿ](https://news19kannada.com/agriculture-sindoor-award-to-hattajeguttu-prabhakar-hegde/): ವೇಣೂರು: ಕೃಷಿ ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆಗಾಗಿ ಬಜಿರೆ ಗ್ರಾಮದ ಹಟ್ಟಾಜೆಗುತ್ತು ವಿ. ಪ್ರಭಾಕರ ಹೆಗ್ಡೆ ಅವರು ಕೃಷಿ ಸಿಂಧೂರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಮಡಂತ್ಯಾರ್ ನಲ್ಲಿ ಜರಗಿದ 72ನೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ೨೦೨೫ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ನಿವೃತ್ತ ಶಿಕ್ಷಕರಾಗಿರುವ ಇವರು ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿಕೊಂಡಿದ್ದರು. ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡುತ್ತಿದ್ದಾರೆ. - [ಬಜಿರೆಯ ಹಲ್ಲಂದೋಡಿ ಶಶಿಕುಮಾರ್ ಇಂದ್ರ ಅವರಿಗೆ `ಕೃಷಿ ಸಿಂದೂರ ಪ್ರಶಸ್ತಿ'](https://news19kannada.com/shashikumar-indra-a-resident-of-hallandodi-bajirao-has-been-awarded-the-agricultural-sindoor-award/): ವೇಣೂರು: ಕೃಷಿ ಕ್ಷೇತ್ರದಲ್ಲಿ ಮಾಡಿರುವ ಅಭೂತಪೂರ್ವ ಸಾಧನೆ ಮತ್ತು ಅವಿಷ್ಕಾರಗಳಿಗಾಗಿ ಬಜಿರೆ ಗ್ರಾಮದ ಹಲ್ಲಂದೋಡಿ ಬಿ. ಶಶಿಕುಮಾರ್ ಇಂದ್ರ ಅವರಿಗೆಕೃಷಿ ಸಿಂದೂರ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಮಡಂತ್ಯಾರಿನಲ್ಲಿ ಜರಗಿದ ೭೫ನೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ ೨೦೨೫ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇವರು ದ.ಕ. ಜಿಲ್ಲಾ ಸಂಸ್ಕಾರ ಭಾರತಿಯಲ್ಲಿ ಅನ್ಯನ್ಯ ಜವಾಬ್ದಾರಿಗಳನ್ನು ವಹಿಸಿಕೊಂಡು ಹಲವಾರು ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಸಂಯೋಜನೆ ಮಾಡಿ ಉತ್ತಮ ಸಂಘಟಕರು ಎಣಿಸಿಕೊಂಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಇವರು ಹಲವಾರು ಅವಿಷ್ಕಾರಗಳ ಮೂಲಕ ಕೃಷಿಕರಿಗೆ ಉತ್ತೇಜನ ನೀಡುತ್ತಿದ್ದಾರೆ. - [ಬೆಳ್ತಂಗಡಿ: 18 ಅಡಿ ಎತ್ತರದಿಂದ ಬಿದ್ದಿದ್ದ ಪೈಂಟರ್ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು](https://news19kannada.com/belthangady-painter-dies-after-falling-from-18-feet-height-due-to-ineffective-treatment/): ಬೆಳ್ತಂಗಡಿ : ಬೆನ್ನು ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೈಂಟರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬೆಳ್ತಂಗಡಿಯಲ್ಲಿ ನ.17ರಂದು ನಡೆದಿದೆ. ಉಜಿರೆ ರೆಂಜಾಳ ನಿವಾಸಿ ಪ್ರಮೋದ್ ಗೌಡ (37) ಮೃತ ದುರ್ದೈವಿ. ಕಳೆದ ಒಂದು ತಿಂಗಳ ಹಿಂದೆ ಪೈಂಟಿಂಗ್ ಕೆಲಸ ಮಾಡುತ್ತಿದ್ದ ಪ್ರಮೋದ್ ಗೌಡ ಅವರು 18 ಅಡ್ಡಿ ಎತ್ತರದಿಂದ ಬಿದ್ದು ಬೆನ್ನು ಮೂಳೆ ಮುರಿತಕ್ಕೊಳಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಮವಾರದಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. - [ಬಜಿರೆಯ ನಿರ್ಪರಿ ಕ್ರಾಸ್ ರೋಡ್‌ಗೆ ಕಾಂಕ್ರಿಟ್: ಶಾಸಕರಲ್ಲಿ ಮನವಿ](https://news19kannada.com/concrete-for-nirpari-cross-road-in-bajirao-appeal-to-mlas/): ವೇಣೂರು: ಬಜಿರೆ ಗ್ರಾಮದ ನಿರ್ಪರಿ ಕ್ರಾಸ್ ರೋಡ್ (ನಡ್ಯಟ್ಟ ರಸ್ತೆ) ಕಾಂಕ್ರೀಟೀಕರಣ ಮಾಡಬೇಕೆಂಬ ಬಹುದಿನದ ಬೇಡಿಕೆ ಇಲ್ಲಿನ ನಾಗರಿಕರದ್ದು. ಆ ಭಾಗದ ಪಂಚಾಯತ್ ಸದಸ್ಯರು ಹಾಗೂ ಜಯರಾಜ್ ವಿ.ಎಸ್., ಮತ್ತು ಭಾಸ್ಕರ ಗೌಡ ಅವರು ಜೊತೆಗೂಡಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರಿಗೆ ಮನವಿ ನೀಡಿದರು. ಶಾಸಕರು ರೂ. 10ಲಕ್ಷ ಅನುದಾನವನ್ನು ಈ ರಸ್ತೆಯ ಕಾಂಕ್ರಿಟೀಕರಣಕ್ಕೆ ನೀಡುವುದಾಗಿ ಭರವಸೆ ನೀಡಿದ್ದಾರೆ. - [ಭಾರತದ ರಾಷ್ಟ್ರೀಯ ಪ್ರಾಣಿಯಾಗಿ ಹುಲಿಯನ್ನು ಆಯ್ಕೆ ಮಾಡಿಕೊಂಡದ್ದರ ಹಿಂದಿದೆ ಈ ಕಾರಣ](https://news19kannada.com/this-is-the-reason-behind-choosing-the-tiger-as-indias-national-animal/): ನಮ್ಮ ರಾಷ್ಟ್ರೀಯ ಪ್ರಾಣಿ ಯಾವುದೆಂದು ಸಣ್ಣ ಮಕ್ಕಳನ್ನು ಕೇಳಿದ್ರು ಕೂಡ ಹೇಳುವ ಉತ್ತರ ಹುಲಿ. ಹೌದು, ಭಾರತದ ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಯೂ ಹಳದಿ ಹಾಗೂ ಕಿತ್ತಳೆ ಚರ್ಮದ ಮೇಲೆ ಕಪ್ಪು ಪಟ್ಟೆಗಳನ್ನು ಹೊಂದಿದ್ದು ತನ್ನ ಶಕ್ತಿ ಹಾಗೂ ಚುರುಕುತನದಿಂದಲೇ ಹೆಸರುವಾಸಿಯಾಗಿದೆ. ಆದರೆ ಹುಲಿಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಆಯ್ಕೆ ಮಾಡಿಕೊಂಡದ್ದು ಯಾಕೆಂದು ಒಮ್ಮೆಯಾದ್ರೂ ಯೋಚಿಸಿದ್ದೀರಾ. ಇದಕ್ಕೆ ಉತ್ತರ ಇಲ್ಲಿದೆ. ಕಾಡಿನ ರಾಜ ಸಿಂಹವಿರುವಾಗ ಭಾರತದ ರಾಷ್ಟ್ರೀಯ ಪ್ರಾಣಿಯಾಗಿ ಹುಲಿಯನ್ನೇ ಯಾಕೆ ಆಯ್ಕೆ ಮಾಡಲಾಯಿತು, ಹೀಗೊಂದು ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಆದರೆ ನಾವೆಲ್ಲರೂ ಸಣ್ಣವರಿರುವಾಗಲೇ ಶಿಕ್ಷಕರು ರಾಷ್ಟ್ರೀಯ ಪ್ರಾಣಿ ಹುಲಿ ಅಥವಾ ಬೆಂಗಾಲ್ ಟೈಗರ್  ಎಂದೇ ಹೇಳಿಕೊಟ್ಟದ್ದು. ಈ ಪ್ರಾಣಿಯನ್ನೇ ಯಾಕೆ ಆಯ್ಕೆ ಮಾಡಲಾಯಿತು ಎನ್ನುವ ಪ್ರಶ್ನೆಯನ್ನು ನಾವು ಕೇಳಲೇ ಇಲ್ಲ. ಆದರೆ ಹುಲಿಯು ತನ್ನ ಸೌಂದರ್ಯ ಹಾಗೂ ಶಕ್ತಿಶಾಲಿಯಾಗಿರುವ ಕಾರಣವೇ ರಾಷ್ಟ್ರ ಪ್ರಾಣಿಯಾಗಿದೆ ಎಂದುಕೊಂಡಿದ್ದೇವೆ. ಆದರೆ ಈ ಪ್ರಾಣಿಯ ಆಯ್ಕೆಯ ಹಿಂದೆ ಈ ಕಾರಣಗಳು ಇವೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ರಾಷ್ಟ್ರೀಯ […] - [ಗಡಿಪಾರಿನಿಂದ ಮಹೇಶ್ ಶೆಟ್ಟಿ ತಿಮರೋಡಿ ಪಾರು!](https://news19kannada.com/mahesh-shetty-escapes-deportation-by-flying-high/): ಧರ್ಮಸ್ಥಳದ ಬುರುಡೆ ಪ್ರಕರಣ ಹಾಗೂ ಸೌಜನ್ಯ ಪ್ರಕರಣದಲ್ಲಿ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಮಂಗಳೂರಿನಿಂದ ಗಡಿಪಾರು ಮಾಡಿ ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದರು. ಆದ್ರೆ, ಇದಕ್ಕೆ ಇದೀಗ ಹೈಕೋರ್ಟ್ ಬ್ರೇಕ್ ಹಾಕಿದೆ. ಇದರಿಂದ ಮಹೇಶ್ ಶೆಟ್ಟಿ ತಿಮರೋಡಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಧರ್ಮಸ್ಥಳದ ಬುರುಡೆ ಪ್ರಕರಣ ಹಾಗೂ ಸೌಜನ್ಯ ಪ್ರಕರಣದಲ್ಲಿ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು (Mahesh Shetty Thimarody) ಮಂಗಳೂರಿನಿಂದ ಗಡಿಪಾರು ಮಾಡಿ ಸಪ್ಟೆಂಬರ್ 20ರಂದೇ ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದರು. - [ಬಾಂಗ್ಲಾದೇಶದಲ್ಲಿ ನಿರಾಯುಧ ಪ್ರತಿಭಟನಾಕಾರರ ಕೊಲೆ, ಶೇಖ್ ಹಸೀನಾಗೆ ಮರಣದಂಡನೆ..!](https://news19kannada.com/sheikh-hasina-sentenced-to-death-for-killing-unarmed-protesters-in-bangladesh/): ನಿರಾಯುಧ ಪ್ರತಿಭಟನಾಕಾರರನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ  ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ತೀರ್ಪು ನೀಡಿದೆ. ಅವರನ್ನು ದೋಷಿ ಎಂದು ನ್ಯಾಯಾಲಯ ಕರೆದಿದೆ.  ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಬೇಕೆಂದು ಪ್ರಾಸಿಕ್ಯೂಟರ್‌ಗಳು ಕೋರಿದ್ದಾರೆ. 78 ವರ್ಷದ ಹಸೀನಾ ಅವರು ಆಗಸ್ಟ್ 2024 ರಲ್ಲಿ ಅಧಿಕಾರದಿಂದ ಕೆಳಗಿಳಿಯಲು ಕಾರಣವಾದ ವ್ಯಾಪಕ ದಂಗೆಗೆ ಸಂಬಂಧಿಸಿದಂತೆ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷ ನಡೆದ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಯ ಸಮಯದಲ್ಲಿ ನಡೆದ ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದಂತೆ ಶೇಖ್ ಹಸೀನಾ ವಿರುದ್ಧ ಗೈರುಹಾಜರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಇದು ಶೇಖ್ ಹಸೀನಾ ಅವರ ಸರ್ಕಾರದ ಪತನಕ್ಕೆ ಕಾರಣವಾಯಿತು ಮತ್ತು ಅವರು ದೇಶವನ್ನು ಬಿಟ್ಟು ಪಲಾಯನ ಮಾಡಬೇಕಾಯಿತು. ಆರ್ಥಿಕ ಸಂಕಷ್ಟ, ಭ್ರಷ್ಟಾಚಾರ ಮತ್ತು ಉದ್ಯೋಗ ಕೊರತೆಯಿಂದ ಉಂಟಾದ ವಿದ್ಯಾರ್ಥಿಗಳ ನೇತೃತ್ವದ ದಂಗೆಯಿಂದಾಗಿ ಶೇಖ್ ಹಸೀನಾ ಅವರ ಸರ್ಕಾರ ಜುಲೈ 2024 ರಲ್ಲಿ ಪತನಗೊಂಡಿತು. ಆಗಸ್ಟ್ 5 ರಂದು ಅವರು ಭಾರತಕ್ಕೆ ಪಲಾಯನ ಮಾಡಿದರು ಮತ್ತು […] - [ವೇಣೂರು: ಗಾಂಧಿನಗರದಲ್ಲಿ ಮೊರಾಸ್ ರೈಸ್ ಮಿಲ್ ಉದ್ಘಾಟನೆ](https://news19kannada.com/venur-moras-rice-mill-inaugurated-in-gandhinagar/): ಮೊರಾಸ್ ಕುಟುಂಬದ ಆತ್ಮೀಯತೆಯನ್ನು ಹಾಡಿಹೊಗಳಿದ ಅತಿಥಿ ಗಣ್ಯರು!ವೇಣೂರು: ಬಹಳಷ್ಟು ನಿರಂತರ ಶ್ರಮವಹಿಸಿ ಒಂದು ಉತ್ತಮ ಹೆಸರುವಾಸಿಯಾಗಿ ಮೊರಾಸ್ ಕುಟುಂಬ ಸಮಾಜದಲ್ಲಿ ಗುರುತಿಸಿಕೊಂಡಿದೆ. ಊರಿನೊಂದಿಗಿನ ಅವರ ಬಾಂಧವ್ಯ ನಿರಂತರ ಮುಂದುವರಿಯಲಿ, ಅವರ ಉದ್ಯಮಗಳು ಯಶಸ್ವಿಯಾಗಲಿ ಎಂದು ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ವಂ.ಫಾ. ಎಡ್ವಿನ್ ಸಂತೋಷ್ ಮೋನಿಸ್ ಆಶೀರ್ವದಿಸಿದರು.ವೇಣೂರು ಕರಿಮಣೇಲು ಗ್ರಾಮದ ಗಾಂಧಿನಗರದಲ್ಲಿ ವಲೇರಿಯನ್ ಶಾಲಿನಿ ಮೊರಾಸ್ ಮಾಲಕತ್ವದ ಮೊರಾಸ್ ರೈಸ್‌ಮಿಲ್‌ನ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.ಮುಖ್ಯ ಅತಿಥಿಯಾಗಿದ್ದ ವೇಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುಂದರ ಹೆಗ್ಡೆ ಬಿಇ ಅವರು ಮಾತನಾಡಿ, ಮೊರಾಸ್ ಕುಟುಂಬದ ಆತ್ಮೀಯತೆಯನ್ನು ಮೆಲುಕು ಹಾಕಿದರು. ಆತ್ಮನಿರ್ಭರ ಭಾರತದ ಅಡಿಯಲ್ಲಿ ಸ್ವಂತ ಉದ್ಯಮಕ್ಕೆ ಸಮಾಜದಲ್ಲಿ ಉತ್ತಮ ಬೆಲೆ ಸಿಕ್ಕಂತಾಗುತ್ತದೆ. ರೈಸ್ ಮಿಲ್ ಉದ್ಯಮವನ್ನು ಸವಾಲಿನ ರೀತಿಯಲ್ಲಿ ಮುಂದುವರಿಸಿ ಇದೀಗ ಸುಸಜ್ಜಿತ ಮಿಲ್ ನಿರ್ಮಿಸಿರುವ ಇವರ ಸಾಧನೆ ಯಶಸ್ವಿ ಕಾಣಲಿ ಎಂದರು. ವೇಣೂರು ಸಿಎ ಬ್ಯಾಂಕ್ ನಿವೃತ್ತ ಪ್ರಬಂಧಕ ಎಚ್. ಮಹಮ್ಮದ್ ವೇಣೂರು ಮಾತನಾಡಿ, ಹಿಂದಿನ ಕಷ್ಟದ ಕಾಲದಲ್ಲಿ […] - [ಶೀತಗಾಳಿ ನಡುವೆಯೂ ಹಲವು ಜಿಲ್ಲೆಗಳಲ್ಲಿ 5 ದಿನ ಮಳೆ, ಕರಾವಳಿ ಜಿಲ್ಲೆಗಳಿಗೆ ಹವಮಾನ ಇಲಾಖೆ ನೀಡಿದ ಮುನ್ಸೂಚನೆ ಏನು?](https://news19kannada.com/despite-the-cold-winds-many-districts-will-see-5-days-of-rain-what-is-the-forecast-of-the-meteorological-department-for-coastal-districts/): ಸದ್ಯ ರಾಜ್ಯದ ಬಹುತೇಕ ಭಾಗಗಳಲ್ಲಿ ಇದೀಗ ಚಳಿ ಆವರಿಸಿದ್ದು, ಈ ನಡುವೆಯೇ ಮುಂದಿನ ಮೂರು ದಿನ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಕೆಲವೆಡೆ ಚಳಿ ನಡುವೆಯೂ ಮಳೆಯಾಗಿದೆ. ಇನ್ನೈ ಇಂದು ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣ ಹವೆ ಇರಲಿದ್ದು, ದಕ್ಷಿಣ ಒಳನಾಡಿನ ಕೋಲಾರ, ಚಾಮರಾಜನಗರ, ಮೈಸೂರು ಮತ್ತು ರಾಮನಗರ ಜಿಲ್ಲೆಗಳ ಅಲ್ಲಲ್ಲಿ ಪ್ರತ್ಯೇಕವಾಗು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಮತ್ತೊಂದೆಡೆ ಬಳ್ಳಾರಿ, ಬೆಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೂ ಬೆಂಗಳೂರಿನ ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಡಿಗ್ರಿ ಸೆಲ್ಸಿಯಸ್‌ ಹಾಗೂ 17 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ, ದಕ್ಷಿಣ […] - [ಬೆಳ್ತಂಗಡಿ: ರಿಕ್ಷಾ ಪಲ್ಟಿಯಾಗಿ ಬಾಲಕ ಮೃತ್ಯು, ಹಲವರಿಗೆ ಗಾಯ](https://news19kannada.com/belthangady-boy-dies-several-injured-in-rickshaw-overturn/): ಬೆಳ್ತಂಗಡಿ: ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿ ಓರ್ವ ಬಾಲಕ ಸಾವನ್ನಪ್ಪಿದ ಹೃದಯ ವಿದ್ರಾಹಕ ಘಟನೆ ನ.16 ರಂದು ರಾತ್ರಿ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕುತ್ರೋಟ್ಟು – ಟಿ.ಬಿ.ಕ್ರಾಸ್ ರಸ್ತೆಯ ಹೊಕ್ಕಿಲ ಎಂಬಲ್ಲಿ ನಡೆದಿದೆ. ನಾವೂರಿನ ಶಶಿ ಎಂಬವರ ಆಟೋ ಪಲ್ಟಿ ಆಗಿದ್ದು, ಐದು ಮಂದಿಗೆ ಗಾಯವಾಗಿದೆ. ಆಟೋದಲ್ಲಿದ್ದ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುಂಡಡ್ಕ ನಿವಾಸಿ ಗಣೇಶ್ ಪುತ್ರ ತನ್ವಿತ್(12) ಮೃತಪಟ್ಟ ಬಾಲಕನಾಗಿದ್ದಾನೆ. ಆಟೋ ಪಲ್ಟಿಯಾದ ರಭಸಕ್ಕೆ ಗಾಯಗೊಂಡಿದ್ದ ತನ್ವಿತ್ ನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆಟೋದಲ್ಲಿದ್ದ ಐದು ಮಂದಿಗೆ ಗಾಯವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವಕ್ಕೆ ಆಟೋದಲ್ಲಿ ಹೋಗುತ್ತಿದ್ದಾಗ ನಡೆದ ಘಟನೆಯಾಗಿದೆ.ಬೆಳ್ತಂಗಡಿ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ. - [ಯುವವಾಹಿನಿ ವೇಣೂರು ಘಟಕ: ಪದಗ್ರಹಣ ಸಮಾರಂಭದ ಉದ್ಘಾಟನೆ](https://news19kannada.com/yuva-vahini-venur-unit-inauguration-of-the-oath-taking-ceremony-translate-a-conversation/): ವೇಣೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ವೇಣೂರು ಘಟಕದ ಪದಗ್ರಹಣ ಸಮಾರಂಭ, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನ. 16ರಂದು ಕೊಕ್ರಾಡಿಯ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾಂಗಣದಲ್ಲಿ ನಡೆಯುತ್ತಿದೆ. ಸಮಾರಂಭದಲ್ಲಿ ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ, ಸತ್ಕಾರ್ಯಗಳಿಂದ ಎಲ್ಲರ ಮನಸ್ಸು ಗೆಲ್ಲಲು ಸಾಧ್ಯ. ಸತ್ಕಾರ್ಯಗಳಿಂದ ಸಮಾಜ ದಲ್ಲಿ ಉನ್ನತಿ ಕಾಣಲಿದ್ದೇವೆ ಎಂದರು. ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಶುಭಕರ ಪೂಜಾರಿ ಸಾವ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾ ಗಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಮರೋಡಿ ದೇವಸ್ಥಾನದ ಪ್ರ. ಕಾರ್ಯದರ್ಶಿ ಜಯಂತ್ ಕೋಟ್ಯಾನ್, ಪೆರಾಡಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸತೀಶ್ ಕೆ., ಅಂಡಿಂಜೆ ಗ್ರಾ.ಪಂ. ಅಧ್ಯಕ್ಷ ನಿತೀನ್ ಮುಂಡೇವು ಭಾಗವಹಿಸಿದರು. ಗೌರವ ಉಪಸ್ಥಿತಿಯಲ್ಲಿ ಪಿಡಿಒ ರಾಘವೇಂದ್ರ ಪಾಟೀಲ್, ಸುಧಾಕರ್ ಡಿ., ಅಶೋಕ್ ಕುಮಾರ್ ಪಡ್ಪು, ಮಂಜಪ್ಪ ಪೂಜಾರಿ ಕೊಕ್ರಾಡಿ , ವೇಣೂರು ಘಟಕದ […] - [ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕ ಗ್ರಾಮೀಣ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ವಸಂತಿ ಸಿ. ಪೂಜಾರಿ ನೇಮಕ](https://news19kannada.com/vasanthi-c-poojary-appointed-as-general-secretary-of-congress-district-womens-unit-rural-division/): ಅಳದಂಗಡಿ: ಅಳದಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ವಸಂತಿ ಸಿ. ಪೂಜಾರಿ ಕುದ್ಯಾಡಿ ಅವರನ್ನು ಭಾರತೀಯ ರಾಷ್ಟ್ರಿಯ ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕ ಗ್ರಾಮೀಣ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಡಿಸಿಸಿ ಮಾಜಿ ಸದಸ್ಯೆಯಾಗಿರುವ ಇವರು ನಾವರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆಯಾಗಿ, ಬೆಳ್ತಂಗಡಿ ನಗರ ಬ್ಲಾಕ್ ಮಹಿಳಾ ಘಟಕದ ಮಾಜಿ ಉಪಾಧ್ಯಕ್ಷರಾಗಿ ಸಾಮಾಜಿಕವಾಗಿ ಸೇವೆ ಸಲ್ಲಿಸಿದ್ದರು. - [ಗೆಜ್ಜೆಗಿರಿಯಲ್ಲಿ ಯಾತ್ರಿನಿವಾಸಕ್ಕೆ ಭೂಮಿಪೂಜೆ: ಶಿರ್ಲಾಲು ಗರಡಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ](https://news19kannada.com/groundbreaking-ceremony-for-the-pilgrimage-site-in-gejjegiri-invitation-letter-released-at-shirlalu-garadi/): ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಭಕ್ತರ ಅನುಕೂಲಕ್ಕೋಸ್ಕರ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸದ ಶಿಲಾನ್ಯಾಸ ನವೆಂಬರ್ 23 ತಾರೀಖಿನಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಶಿರ್ಲಾಲು ಗರಡಿ ವಠಾರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಗೆಜ್ಜೆಗಿರಿ ಕ್ಷೇತ್ರದ ತಾಲೂಕು ಪ್ರಧಾನ ಸಂಚಾಲಕರಾದ ನಿತ್ಯಾನಂದ ನಾವರ, ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ(ರಿ) ಬೆಳ್ತಂಗಡಿ ಅಧ್ಯಕ್ಷರಾದ ಜಯವಿಕ್ರಮ ಕಲ್ಲಾಪು ಉಪಾಧ್ಯಕ್ಷರಾದ ಸುಂದರ ಪೂಜಾರಿ, ಮಾಜಿ ಅಧ್ಯಕ್ಷರಾದ ಚಿದಾನಂದ ಪೂಜಾರಿ ಎಲ್ಲಕ್ಕ, ಸಿಎ ಬ್ಯಾಂಕ್ ಶಿರ್ಲಾಲು ಅಧ್ಯಕ್ಷ ಸುಧೀರ್ ಆರ್ ಸುವರ್ಣ, ಗರಡಿ ಆಡಳಿತ ಸಮಿತಿಯ ಗೌರವಾಧ್ಯಕ್ಷ ರಮಾನಂದ ಗುಡ್ಡಾಜೆ, ಅಧ್ಯಕ್ಷ ವಿಶ್ವನಾಥ ಸಾಲಿಯಾನ್, ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಕಟ್ಟ, ಕೋಶಾಧಿಕಾರಿ ಚಿದಾನಂದ ಇಂಚರ, ಸದಸ್ಯರುಗಳಾದ ಯಶೋಧರ ಸುವರ್ಣ, ರಮೇಶ್ ಪೂಜಾರಿ, ಚಂದ್ರಶೇಖರ ಸೂರ್ಲೋಡಿ, ರಮೇಶ್ ಸಿಎ ಬ್ಯಾಂಕ್, ಪ್ರಶಾಂತ್ ಇಂದ್ರಪ್ರಸ್ಥ, ನಂದ ಕುಮಾರ್, ರಮೇಶ್ ಆಚಾರಿಬೆಟ್ಟು,ದಿವಾಕರ ಜಾರಿಗೆದಡಿ, ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಶಿರ್ಲಾಲು ಅಧ್ಯಕ್ಷ ಸದಾಶಿವ ಪೂಜಾರಿ ಊರ ಯುವಬಿಲ್ಲವ ವೇದಿಕೆ ಅಧ್ಯಕ್ಷ […] - [ಬಳಂಜ: ನಾರಾಯಣ ಪೂಜಾರಿ ಐತನಡ್ಕ ಅವರಿಗೆ "ರೈತ ಸಿಂಧೂರ "ಪ್ರಶಸ್ತಿ](https://news19kannada.com/balanja-narayana-poojary-aitanadka-receives-rayatha-sindoor-award/): ಬಳಂಜ: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ಬಳಂಜ ಪಂಚಾಯತ್ ಒಳಪಟ್ಟ ನಾಲ್ಕೂರು ಗ್ರಾಮದ ನಾರಾಯಣ ಪೂಜಾರಿ ಐತನಡ್ಕ ಮಜಲು “ರೈತ ಸಿಂಧೂರ “ಪ್ರಶಸ್ತಿ ಪಡೆದುಕೊಂಡಿದ್ದಾರೆ. - [ಉಜಿರೆಯಲ್ಲಿ ನರ್ಸಿಂಗ್ ಕಾಲೇಜು, ಕೃಷಿ ಕಾಲೇಜು ಪ್ರಾರಂಭ: ಡಾ. ವೀರೇಂದ್ರ ಹೆಗ್ಗಡೆ](https://news19kannada.com/nursing-college-agriculture-college-to-be-opened-in-ujire-dr-veerendra-heggade/): ಉಜಿರೆ: ಧರ್ಮಸ್ಥಳದ ವತಿಯಿಂದ ಉಜಿರೆಯಲ್ಲಿ ಈ ವರ್ಷ ನರ್ಸಿಂಗ್ ಕಾಲೇಜು ಪ್ರಾರಂಭಿಸಲಾಗುವುದು. ನೂರು ಎಕರೆ ಪ್ರದೇಶದಲ್ಲಿ ಕೃಷಿ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು. ಕೃಷಿ ಕಾಲೇಜಿಗಾಗಿ ನೂರು ಎಕರೆ ಪ್ರದೇಶ ದೊರಕಿದಲ್ಲಿ ತಕ್ಷಣ ಕಾಲೇಜು ಸ್ಫಾಪನೆಯ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಹೆಗ್ಗಡೆಯವರು ಹೇಳಿದರು.ಲಕ್ಷದೀಪೋತ್ಸವ ಪ್ರಾರಂಭದ ದಿನವಾದ ಶನಿವಾರ ಉಜಿರೆಯಿಂದ ಧರ್ಮಸ್ಥಳಕ್ಕೆ ಬಂದ ಸಾವಿರಾರು ಪಾದಯಾತ್ರಿಗಳನ್ನು ಅಮೃತವರ್ಷಿಣಿ ಸಭಾ ಭವನದಲ್ಲಿ ಉದ್ದೇಶಿಸಿ ಅವರು ಮಾತನಾಡಿದರು.ತನ್ನ ಬಗ್ಗೆ ಹಾಗೂ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಭಕ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ತೋರುವ ಪ್ರೀತಿ-ವಿಶ್ವಾಸ, ಭಕ್ತಿ, ಶ್ರದ್ಧೆ, ವಿಶ್ವಾಸ ಮತ್ತು ಗೌರವ ಹಾಗೂ “ನಾವೆಲ್ಲರೂ ಸದಾ ನಿಮ್ಮ ಜೊತೆ ಇದ್ದೇವೆ” ಎಂದು ನೀಡುವ ಭರವಸೆ ಮತ್ತು ವಿಶ್ವಾಸ ತನಗೆ ಹೆಚ್ಚಿನ ಸೇವಾ ಕಾರ್ಯ ಮಾಡಲು ಉತ್ಸಾಹ, ಪ್ರೇರಣೆ ಮತ್ತು ನವ ಚೈತನ್ಯ ನೀಡುತ್ತದೆ ಎಂದು ಅವರು ಹೇಳಿದರು.ಪ್ರಸ್ತುತ ಜನರಲ್ಲಿ ಅನೇಕ ಸಂದೇಹಗಳು, ಸಂಶಯಗಳು ಮೂಡಿಬಂದು ಅನಾವಶ್ಯಕ ಅಪಾದನೆಗಳು ಕೇಳಿ […] - [ನಿಟ್ಟಡೆ ಕುಂಭಶ್ರೀ ವಿದ್ಯಾಸಂಸ್ಥೆ: ವಲಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಉದ್ಘಾಟನೆ](https://news19kannada.com/nittade-kumbhasree-vidyasirshana-inauguration-of-zonal-level-talent-fountain-competition/): ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಮತ್ತು ಕಾಲೇಜು, ನಿಟ್ಟಡೆ ಇಲ್ಲಿ ನ. 15ರಂದು ವಲಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಭವ್ಯವಾಗಿ ನಡೆಯಿತು. ಕಾರ್ಯಕ್ರಮವನ್ನು ಜೈನ ಕಾಲೇಜಿನ ಉಪನ್ಯಾಸಕರಾದ ಮಹಾವೀರ ಜೈನ್ ಮೂಡುಕೋಡಿ ಅವರು ಉದ್ಘಾಟಿಸಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವತ್ತ ಈ ವಿದ್ಯಾಸಂಸ್ಥೆ ಸದಾ ಮುಂದಿದೆ ಎಂದು ಶ್ಲಾಘಿಸಿದರು. ಬೆಳ್ತಂಗಡಿ ತಾಲೂಕಿನ ಶಿಕ್ಷಣಾಧಿಕಾರಿ ಶ್ರೀಮತಿ ತಾರಾಕೇಸರಿ ಅವರು ಹಾಗೂ ನಿಟ್ಟಡೆ ಕ್ಲಸ್ಟರ್ ಸಿಆರ್‌ಪಿ ಶ್ರೀಮತಿ ಆರತಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ಕಾಶಿನಾಥ್ ಹೆಗ್ಡೆ ಅವರು ಮಾತನಾಡಿ, ಸಂಸ್ಥೆಯು ಶಿಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಉತ್ತಮ ಮಟ್ಟಕ್ಕೆ ಬೆಳೆಯುತ್ತಿದೆ, ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಶಾಲಾ ಸಂಸ್ಥಾಪಕರಾದ ಗಿರೀಶ್ ಕೆ.ಹೆಚ್. ಈ ಕಾರ್ಯಕ್ರಮವು ಪೋಷಕರ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪರಿಶ್ರಮದಿಂದ ನಡೆಯುತ್ತಿದೆ ಎಂದು ತಿಳಿಸಿದರು. ಕುಕ್ಕೆಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಅನಿತಾ ಕೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಚಂದ್ರಶೇಖರ್, ಕಾಲೇಜಿನ ಶಿಕ್ಷಕ-ರಕ್ಷಕ […] - [ವೇಣೂರಿನಲ್ಲಿ ನ. 17ರಂದು ಮೊರಾಸ್ ರೈಸ್‌ಮಿಲ್ ಶುಭಾರಂಭ](https://news19kannada.com/moras-rice-mill-to-be-inaugurated-in-venur-on-nov-17/): ವೇಣೂರು: ಇಲ್ಲಿಯ ಕರಿಮಣೇಲು ಗ್ರಾಮದ ಗಾಂಧಿನಗರದಲ್ಲಿ ವಲೇರಿಯನ್ ಶಾಲಿನಿ ಮೊರಾಸ್ ಮಾಲಕತ್ವದ ಮೊರಾಸ್ ರೈಸ್‌ಮಿಲ್ ನ. 17ರಂದು ಬೆಳಿಗ್ಗೆ 10-00 ಗಂಟೆಗೆ ಶುಭಾರಂಭಗೊಳ್ಳಲಿದೆ.ಸಮಾರಂಭದಲ್ಲಿ ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ವಂ. ಎಡ್ವಿನ್ ಸಂತೋಷ್ ಮೋನಿಸ್ ಅವರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಕ್ಷಿತ್ ಶಿವರಾಮ್, ಮಲ್ಲಿಕಾ ಕಾಶಿನಾಥ್ ಹೆಗ್ಡೆ, ಸುಂದರ ಹೆಗ್ಡೆ ಬಿಇ, ಡೆನ್ನಿಸ್ ಸಿಕ್ವೇರಾ, ಹರೀಶ್ ನಾಯ್ಕ್, ಅರುಣ್ ಕ್ರಾಸ್ತಾ, ಎ. ಜಯರಾಮ ಶೆಟ್ಟಿ, ಎನ್. ಸೀತಾರಾಮ ರೈ, ಎಚ್. ಮಹಮ್ಮದ್ ವೇಣೂರು, ಜೆರೋಮಿಯಸ್ ಮೊರಾಸ್, ಪಿ. ಧರಣೇಂದ್ರ ಕುಮಾರ್ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ವಲೇರಿಯನ್ ಶಾಲಿನಿ ಮೊರಾಸ್ ತಿಳಿಸಿದ್ದಾರೆ. - [ನ. 16: ಮೂಡಬಿದ್ರೆಯಲ್ಲಿ ಬೃಹತ್ ಆಧಾರ್ ನೋಂದಣಿ - ತಿದ್ದುಪಡಿ ಶಿಬಿರ](https://news19kannada.com/nov-16-massive-aadhaar-registration-correction-camp-in-moodbidri/): ಅಪಘಾತ ಹಾಗೂ ಆರೋಗ್ಯ ವಿಮೆ ಸವಲತ್ತು ಪಡೆಯುವ ಅವಕಾಶ ಮೂಡುಬಿದಿರೆ: ಪವರ್ ಫ್ರೆಂಡ್ಸ್ ಬೆದ್ರ, ದ.ಕ. ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ.) ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಹಯೋಗದಲ್ಲಿ ಅಂಚೆ ಜನಸಂಪರ್ಕ ಅಭಿಯಾನ ಬೃಹತ್ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಅಪಘಾತ ಹಾಗೂ ಆರೋಗ್ಯ ವಿಮೆ ಶಿಬಿರವು ನ. 16ರಂದು ಮೂಡುಬಿದಿರೆಯ ಕನ್ನಡ ಭವನದಲ್ಲಿ ಬೆಳಿಗ್ಗೆ 9-00 ಗಂಟೆಯಿಂದ 4-00 ಗಂಟೆಯವರೆಗೆ ನಡೆಯಲಿದೆ. ಸಾರ್ವಜನಿಕರು ಸಮರ್ಪಕ ಮೂಲ ದಾಖಲೆಗಳೊಂದಿಗೆ ಆಗಮಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ. - [ಬೆಳ್ತಂಗಡಿ ತಾ.ನ ಬಿಲ್ಲವ ಸಮಾಜ ಬಾಂಧವರಿಗೆ ಬಿಡ್ಡಿಂಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಯುವವಾಹಿನಿ ಟ್ರೋಫಿ - 2026](https://news19kannada.com/underarm-cricket-tournament-yuva-vahini-trophy-2026-a-bidding-type-event-for-the-members-of-the-billava-community-of-belthangady-taluka/): ಬೆಳ್ತಂಗಡಿ : ಯುವವಾಹಿನಿ (ರಿ.) ಬೆಳ್ತಂಗಡಿ ಘಟಕ ಆಶ್ರಯದಲ್ಲಿ ಯುವವಾಹಿನಿ ಮಹಿಳಾ ಸಂಚಾಲನ ಸಮಿತಿ ಬೆಳ್ತಂಗಡಿ ತಾಲೂಕು ಆತಿಥ್ಯದಲ್ಲಿ ದಶಮಾನೋತ್ಸವ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ ಬಿಲ್ಲವ ಸಮಾಜ ಬಾಂಧವರಿಗೆ 8 ತಂಡಗಳ ಬಿಡ್ಡಿಂಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಯುವವಾಹಿನಿ ಟ್ರೋಪಿ – 2026 ಜನವರಿ 04ರಂದು ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಅದೇ ರೀತಿಯಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಕೂಡಾ ನಡೆಯಲಿದೆ. ಇನ್ನು, ದಶಮಾನೋತ್ಸವ ಅಂಗವಾಗಿ ಅಶಕ್ತ ಕುಟುಂಬಗಳಿಗೆ ನೆರವಿಗಾಗಿ ಯುವವಾಹಿನಿ ದಶ ಸ್ಪಂದನ ಕಾರ್ಯಕ್ರಮಕ್ಕೆ ಕೂಡಾ ಚಾಲನೆ ದೊರಕಲಿದೆ. - [ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ;  ಇಂದು ಪಾದಯಾತ್ರೆಯಲ್ಲಿ ಸಾಗಿ ಬಂದ ಸಾವಿರಾರು ಭಕ್ತರು](https://news19kannada.com/lakshmi-deepotsava-in-dharmasthala-thousands-of-devotees-marched-today/): ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ 5 ದಿನಗಳ ಕಾಲ ಲಕ್ಷದೀಪೋತ್ಸವ  ನಡೆಯಲಿದೆ.  ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವವು ಇಂದಿನಿಂದ ನವೆಂಬರ್ 20ರವರೆಗೆ ನಡೆಯಲಿದ್ದು, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ದೇವಾಲಯವನ್ನು ಸಂಪೂರ್ಣವಾಗಿ ಅಲಂಕರಿಸಲಾಗಿದೆ. ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಈ ಪ್ರಸಿದ್ಧ ಉತ್ಸವದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದಾರೆ. ಇಂದು ಪಾದಾಯಾತ್ರೆಯಲ್ಲಿ ಸಾಗಿ ಬಂದ ಸಾವಿರಾರು ಭಕ್ತರುಚತುರ್ದಾನ ಪರಂಪರೆಯ ನಾಡಿನ ಪರಮಪಾವನ ಪುಣ್ಯಕ್ಷೇತ್ರ ಧರ್ಮಸ್ಥಳ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಪಾದಯಾತ್ರೆಯಲ್ಲಿ ಸಾಗಿ ಬಂದರು. ವಾಯ್ಲಿನ್ ಆದ್ಯ ಕೇರಳ, ಚೆಂಡೆ ಹಾಗೂ ವಿವಿಧ ವಿನೋದಾವಳಿಗಳು ಮೆರಗು ನೀಡಿತು. ಪುಸ್ತಕ ಮಳಿಗೆಗಳು, ಆರೋಗ್ಯ, ಶಿಕ್ಷಣ, ಕೃಷಿ, ವಾಣಿಜ್ಯ, ಜೀವವಿಮೆ, ಸರ್ಕಾರದ ವಿವಿಧ ಇಲಾಖಾ ಮಳಿಗೆಗಳು, ಅಂಚೆ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಗ್ರಾಮೀಣ ಕರಕುಶಲ ಕೈಗಾರಿಕೆಗಳು, ವಸ್ತç ಮಳಿಗೆಗಳು, ಆಯುರ್ವೇದ ಔಷಧಿ ಮಳಿಗೆಗಳು, ಪೂಜಾ ಸಾಮಾಗ್ರಿಗಳು, ಸಿರಿಧಾನ್ಯಗಳು, ಅಡಿಕೆ ಹಾಳೆತಟ್ಟೆ ತಯಾರಿ, […] - [ ನಾಳೆ (ನ.16) ಯುವವಾಹಿನಿ ವೇಣೂರು ಘಟಕದ ಪದಗ್ರಹಣ](https://news19kannada.com/tomorrow-nov-16-the-oath-taking-ceremony-of-the-yuva-vahini-venur-unit/): ವೇಣೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ವೇಣೂರು ಘಟಕದ ಪದಗ್ರಹಣ ಸಮಾರಂಭ, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನ. 16ರಂದು ಕೊಕ್ರಾಡಿಯ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾಂಗಣದಲ್ಲಿ ಸಂಜೆ 5-30ರಿಂದ ನಡೆಯಲಿದೆ.ಸಮಾರಂಭದಲ್ಲಿ ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದು, ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಶುಭಕರ ಪೂಜಾರಿ ಸಾವ್ಯ ಅಧ್ಯಕ್ಷತೆ ವಹಿಸಲಿದ್ದಾರೆ.ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಪದಪ್ರಧಾನ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾದ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ ಆರ್., ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ಬೆಳ್ತಂಗಡಿ ಶ್ರೀ ಗು.ನಾ.ಸ್ವಾ.ಸೇ. ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಮರೋಡಿ ದೇವಸ್ಥಾನದ ಪ್ರ. ಕಾರ್ಯದರ್ಶಿ ಜಯಂತ್ ಕೋಟ್ಯಾನ್, ಪೆರಾಡಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸತೀಶ್ ಕೆ., ಕಂಬಳ ಕೋಣಗಳ ಯಜಮಾನ ಗಣೇಶ್ ನಾರಾಯಣ ಪಂಡಿತ್, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಅಂಡಿಂಜೆ ಗ್ರಾ.ಪಂ. […] - [ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ 28 ಕೃಷ್ಣ ಮೃಗಗಳ ಅನುಮಾನಾಸ್ಪದ ಸಾವು!](https://news19kannada.com/suspicious-death-of-28-black-rhinos-at-kittur-channamma-kiru-zoo/): ಬೆಳಗಾವಿ: ಜಿಲ್ಲೆಯ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಶನಿವಾರ ಒಂದೇ ದಿನ 20 ಕೃಷ್ಣಮೃಗಗಳು ಮೃತಪಟ್ಟಿವೆ. ಇದರೊಂದಿಗೆ ಕಳೆದ ಎರಡು ದಿನಗಳ ಅವಧಿಯಲ್ಲಿ ಒಟ್ಟು 28 ಕೃಷ್ಣಮೃಗಗಳು ಮೃತಪಟ್ಟಂತಾಗಿದ್ದು, ಮೃತದೇಹದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಬ್ಯಾಕ್ಟೀರಿಯಾ ಸೋಂಕಿನಿಂದ ಕೃಷ್ಣಮೃಗಗಳು ಸಾವನ್ನಪ್ಪಿರುವ ಶಂಕೆಯೂ ವ್ಯಕ್ತವಾಗಿದೆ. ಇಂದು ಒಂದೇ ದಿನ 20 ಕೃಷ್ಣ ಮೃಗಗಳ ಸಾವು ನವೆಂಬರ್ 13 ರಂದು ಮೃಗಾಲಯದಲ್ಲಿ 8 ಕೃಷ್ಣ ಮೃಗಗಳ ಸಾವು ಸಂಭವಿಸಿತ್ತು. ಆದರೆ, ಇಂದು ಒಂದೇ ದಿನ 20 ಕೃಷ್ಣ ಮೃಗಗಳು ಸಾವನ್ನಪ್ಪಿರುವುದು ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಏಕಾಏಕಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಬ್ಯಾಕ್ಟೀರಿಯಾ ಇನ್ಫೆಕ್ಷನ್ ಶಂಕೆ ಪ್ರಾಥಮಿಕ ಮಾಹಿತಿಯ ಪ್ರಕಾರ, ಕೃಷ್ಣ ಮೃಗಗಳು ಬ್ಯಾಕ್ಟೀರಿಯಾ ಸೋಂಕಿನಿಂದ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಎರಡು ದಿನಗಳ ಹಿಂದೆ ಮೃತಪಟ್ಟ ಮೃಗಗಳ ಮೃತದೇಹಗಳನ್ನು ವಿಶ್ಲೇಷಣೆಗೆ ಲ್ಯಾಬ್ ಗೆ ಕಳುಹಿಸಲಾಗಿತ್ತು. - [ಧರ್ಮಸ್ಥಳ ಲಕ್ಷ ದೀಪೋತ್ಸವಕ್ಕೆ ಚಾಲನೆ; ಶಾಸಕ ಪೂಂಜರಿಂದ ರಾಜ್ಯಮಟ್ಟದ ವಸ್ತುಪ್ರದರ್ಶನ ಉದ್ಘಾಟನೆ](https://news19kannada.com/dharmasthala-lakshadeepotsava-celebrations-state-level-exhibition-inaugurated/): ಧರ್ಮಸ್ಥಳ: ಕನ್ನಡ ನಾಡಿನ ಪಾವನ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಅಂಗವಾಗಿ ಧರ್ಮಸ್ಥಳದ ಪ್ರೌಢ ಶಾಲಾ ವಠಾರದಲ್ಲಿ ಆಯೋಜಿಸಿದ ರಾಜ್ಯಮಟ್ಟದ ವಸ್ತು ಪ್ರದರ್ಶನವನ್ನು ನ.15 ರಂದು ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಅವರು ಉದ್ಘಾಟಿಸಿ ಶುಭ ಹಾರೈಸಿದರು.ಶ್ರೀ ಕ್ಷೇತ್ರ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ರಾಜ್ಯಮಟ್ಟದ ವಸ್ತು ಪ್ರದರ್ಶನದ ಪ್ರತಿ ಸ್ಟಾಲ್‌ಗಳನ್ನು ವೀಕ್ಷಿಸಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಸುರ್ಯಗುತ್ತು, ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್, ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ಎನ್. ಜನಾರ್ದನ್, ಎಸ್‌ಡಿಎಂ ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ. ಜನಾರ್ದನ್, ಹೆಗ್ಗಡೆಯವರ ಆಪ್ತ ಸಹಾಯಕ ವೀರೂ ಶೆಟ್ಟಿ, ಅನಂತ ಭಟ್ ಮುಚ್ಚಿಮಲೆ, ಯತೀಶ್ ಬಳೆಂಜ ಮೊದಲಾದವರು ಭಾಗವಹಿಸಿದ್ದರು. - [ಪಣಂಬೂರು ಸಿಗ್ನಲ್ ಬಳಿ ಸರಣಿ ಅಪಘಾತ, ಮೂವರು ಸ್ಥಳದಲ್ಲೇ ಸಾವು](https://news19kannada.com/three-die-on-the-spot-in-a-series-of-accidents-near-panambur-signal/): ಮಂಗಳೂರು: ಸರಣಿ ಅಪಘಾತ ನಡೆದು ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರಿನ ಪಣಂಬೂರು ಬಳಿ ನ.15 ರ ಬೆಳಗ್ಗೆ ನಡೆದಿದೆ. ಪಣಂಬೂರು ಸಿಗ್ನಲ್ ನ ಬಳಿ ಎದುರಿನಲ್ಲಿ ಒಂದು ಟ್ಯಾಂಕರ್ ನಿಂತಿದ್ದು, ಅದರ ಹಿಂಭಾಗದಲ್ಲಿ ಆಟೊ ರಿಕ್ಷಾ ನಿಂತಿತ್ತು. ಅದರ ಹಿಂದಿನಿಂದ ಬಂದ ಟ್ಯಾಂಕರ್ ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿ ರಿಕ್ಷಾ ಎದುರಿನಲ್ಲಿ ನಿಂತಿದ್ದ ಕಾರಿಗೆ ಅಪ್ಪಳಿಸಿ ಬಳಿಕ ಮುಂದೆ ನಿಂತಿದ್ದ ಮತ್ತೊಂದು ಟ್ಯಾಂಕರ್ ಗೆ ಅಪ್ಪಳಿಸಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಸಂದರ್ಭ ಆಟೊ ರಿಕ್ಷಾ ಎರಡು ಟ್ಯಾಂಕರ್ ಗಳ ನಡುವೆ ಸಿಲುಕಿ ಅಪ್ಪಚ್ಚಿಯಾಗಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಹಾಗೂ ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. - [ನಾರಾವಿ: ಸಂತ ಅಂತೋನಿ ಶಿಕ್ಷಣ ಸಂಸ್ಥೆ; ಚಿಣ್ಣರ ಕಲರವ- ಕ್ರೀಡಾಸಂಗಮ ವಿಶಿಷ್ಟ ಕಾರ್ಯಕ್ರಮ](https://news19kannada.com/naravi-saint-anthonys-educational-institution-chinnara-kalarava-krydas-sangam-unique-event/): ನಾರಾವಿ: ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳು ಒಟ್ಟು ಸೇರಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಅವರ ಜನ್ಮ ದಿನಾಚರಣೆಯ ಅಂಗವಾಗಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಚಿಣ್ಣರ ಕಲರವ- ಕ್ರೀಡಾಸಂಗಮ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜೆರೋಮ್ ಡಿಸೋಜಾ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು. ಅಂತರರಾಷ್ಟ್ರೀಯ ತ್ರೋಬಾಲ್ ಆಟಗಾರ್ತಿ, ವಿಲೋನ ಡಿಸೋಜ ಕಾರ್ಯಕ್ರಮವನ್ನು ಉದ್ಘಾಟಿಸಿದರು. - [ನ. 16: ಪೂಂಜ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಸಂಭ್ರಮ](https://news19kannada.com/of-16-dipotsava-celebration-in-the-month-of-kartika-at-poonja-temple/): ಆರಂಬೋಡಿ: ತಾಲೂಕಿನ ಪೂಂಜದ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನ.16 ರಂದು ರಾತ್ರಿ 7:00 ಗಂಟೆಗೆ ಕಾರ್ತಿಕ ಮಾಸದ ಪೂಂಜ ದೀಪೋತ್ಸವ ನಡೆಯಲಿದೆ. ಈ ನಿಟ್ಟಿನಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಂಧ -ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. - [ಮೂಡುಕೋಡಿ ಪರಿಸರದಲ್ಲಿ ಚಿರತೆ ಕಾಟ, ಬೋನ್ ಅಳವಡಿಕೆ](https://news19kannada.com/leopard-threat-bone-grafting-in-moodukodi-environment/): ವೇಣೂರು: ಇಲ್ಲಿಯ ಗ್ರಾ.ಪಂ. ವ್ಯಾಪ್ತಿಯ ಮೂಡುಕೋಡಿ ಪರಿಸರದಲ್ಲಿ ಆಗಾಗ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರ ಮನವಿ ಮೇರೆಗೆ ವೇಣೂರು ಅರಣ್ಯ ಇಲಾಖೆ ಬೋನ್ ಅಳವಡಿಸಿದೆ. - [ನಿಟ್ಟಡೆ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಳವು](https://news19kannada.com/bike-stolen-from-nittadee-roadside/): ವೇಣೂರು: ಠಾಣಾ ವ್ಯಾಪ್ತಿಯ ನಿಟ್ಟಡೆಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಕಳವುಗೈದ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆಕುಕ್ಕೇಡಿ ಗ್ರಾಮದ ನಿವಾಸಿ ಸಂಪತ್ ಕುಮಾರ್ ಎಂಬವರ ಬೈಕ್ ಕಳ್ಳತನವಾಗಿದೆ. ಇವರು ನ೧೦ ರಂದು ರಾತ್ರಿ ಮನೆಗೆ ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಪೆಟ್ರೋಲ್ ಮುಗಿದ ಕಾರಣ ಬೈಕ್ ಅನ್ನು ನಿಟ್ಟಡೆ ಗ್ರಾಮದ ಪಾಣೂರು ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿ ಮನೆಗೆ ಹೋಗಿದ್ದು ನ ೧೧ರಂದು ಬೆಳಗ್ಗೆ ಬಂದು ನೋಡಿದಾಗ ನಿಲ್ಲಿಸಿದ್ದ ಬೈಕ್ ಅಲ್ಲಿರಲಿಲ್ಲ. ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಸಿಗದ ಹಿನ್ನಲೆಯಲ್ಲಿ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.ಎರಡು ದಿನಗಳ ಹಿಂದೆ ಉಜಿರೆಯಲ್ಲಿ ಬೈಕ್ ನಿಲ್ಲಿಸಿ ತರಕಾರಿ ತೆಗೆದುಕೊಂಡು ಬರುವ ವೇಳೆಗೆ ಬೈಕ್ ಕಳ್ಳತನವಾಗಿತ್ತು. ಪೊಲೀಸರು ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. - [ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಗಳಿಸಿದ ಪಂಚಮಿ ಮಾರೂರು](https://news19kannada.com/panchami-marur-who-gained-popularity-through-reality-shows/): ಮಂಗಳೂರು: ಪಂಚಮಿ ಮಾರೂರು ಅವರು 2015 ರಲ್ಲಿ ಭಾರತ ಸರ್ಕಾರದಿಂದ ಅಸಾಧಾರಣ ಸಾಧನೆಗಾಗಿ ರಾಷ್ಟ್ರೀಯ ಬಾಲ ಪ್ರಶಸ್ತಿಯನ್ನು ಪಡೆದು ಇದೀಗ ಒಂದು ದಶಕ ಕಳೆದಿದೆ. ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅವರನ್ನು ಸನ್ಮಾನಿಸಲಾಯಿತು, ಅಲ್ಲಿ ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅದೇ ದಿನ, ಆಗಿನ ರಾಜ್ಯಪಾಲ ವಜುಭಾಯಿ ವಾಲಾ ಅವರು ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು. ಪಾರ್ಶ್ವನಾಥ ಮತ್ತು ದೀಪಶ್ರೀ ಅವರ ಪುತ್ರಿ ಮತ್ತು ಯತೀಶ್ ಎಂ ಅವರ ಪತ್ನಿ ಪಂಚಮಿ, ಪ್ರಸ್ತುತ ವಾಣಿಜ್ಯ ಪದವಿ ಮುಗಿಸಿದ ನಂತರ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಪ್ರಥಮ್ ಮಾರೂರ್ ಅವರ ಸಹೋದರಿ. ಬಹುಮುಖ ಕಲಾವಿದೆಪಂಚಮಿ ವೈವಿಧ್ಯಮಯ ವೇದಿಕೆಗಳಲ್ಲಿ 1800 ಕ್ಕೂ ಹೆಚ್ಚು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅವರು ಯಕ್ಷಗಾನ, ಭರತನಾಟ್ಯ, ಜಾನಪದ ಮತ್ತು ಪಾಶ್ಚಿಮಾತ್ಯ ನೃತ್ಯ, ಗಾಯನ, ಸಾರ್ವಜನಿಕ ಭಾಷಣ, ಎನ್‌ಸಿಸಿ ಮತ್ತು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಉದಯ ಟಿವಿಯ ಚಿಣ್ಣರ ಲೋಕ, […] - [ಕನ್ನಡದ ನಟಿಗೆ ಲೈಂಗಿಕ ಕಿರುಕುಳ; ನಿರ್ಮಾಪಕ ಅರವಿಂದ್ ವೆಂಕಟೇಶ ರೆಡ್ಡಿ ಬಂಧನ](https://news19kannada.com/kannada-actress-sexually-harassed-producer-arvind-venkatesh-reddy-arrested/): ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದ ನಟಿಯೊಬ್ಬರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎವಿಆರ್ ಗ್ರೂಪ್ ಸಂಸ್ಥಾಪಕ ಆಗಿರುವ ಅರವಿಂದ್ ರೆಡ್ಡಿನ ಬಂಧಿಸಲಾಗಿದೆ. ಎಸಿಪಿ ಚಂದನ್ ಮತ್ತು ತಂಡದಿಂದ ಆರೋಪಿ ಅರೆಸ್ಟ್ ಮಾಡಲಾಗಿದೆ. ಶ್ರೀಲಂಕದಿಂದ ಬೆಂಗಳೂರಿಗೆ ಬರುವಾಗ ಆರೋಪಿ ಲಾಕ್ ಆಗಿದ್ದಾನೆ. ಕಳೆದ ತಿಂಗಳು 17ರಂದು ಅರವಿಂದ್ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. 2021ರಲ್ಲಿ ಪರಿಚಯ, ನಂತರ ಪ್ರೀತಿ-ಕಾಳಜಿ, ಬಳಿಕ ಸಂಪರ್ಕ ಕಡಿತಗೊಳಿಸಿ ಕಿರುಕುಳ ಶುರುಮಾಡಿದ್ದ. ಮದುವೆ ಭರವಸೆ, ನಟಿಯ ಆತ್ಮಹತ್ಯೆ ಯತ್ನ, ಆಸ್ಪತ್ರೆ ಸೇರಿದಾಗ ಹಲ್ಲೆ ಸೇರಿದಂತೆ ಹಲವು ಆರೋಪಗಳಿವೆ. - [ಹೈನುಗಾರಿಕೆಯಲ್ಲಿ ಮಹತ್ವರ ಸಾಧನೆ; ಶ್ರೀಮತಿ ಆಶಾ ಅವರಿಗೆ ಕ್ಷೀರ ರತ್ನ ಪ್ರಶಸ್ತಿ](https://news19kannada.com/significant-achievement-in-dairy-farming-mrs-asha-receives-ksheera-ratna-award/): ವೇಣೂರು: ಸಾವ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಇದರ ಅಧ್ಯಕ್ಷರೂ ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರೂ ಆದ ಶ್ರೀಮತಿ ಆಶಾ ಅವರಿಗೆ ಕ್ಷೀರ ಕ್ಷೇತ್ರದಲ್ಲಿ ಮಾಡಿದ ಅಭೂತಪೂರ್ವ ಸಾಧನೆಯನ್ನು ಗುರುತಿಸಿ ಕ್ಷೀರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಮಡಂತ್ಯಾರ್ ನಲ್ಲಿ ಜರಗಿದ ದ.ಕ. ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರಧಾನ ನಡೆದಿದೆ. ವೇಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸುಂದರ ಹೆಗ್ಡೆ ಬಿಇ ಹಾಗೂ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ. - [ಬಂಟ್ವಾಳದಲ್ಲಿ ಭೀಕರ ರಸ್ತೆ ಅಪಘಾತ; ಉಡುಪಿ ಕೃಷ್ಣ ಮಠಕ್ಕೆ ಹೊರಟಿದ್ದ ಬೆಂಗಳೂರಿನ ಮೂವರು ಸಾವು](https://news19kannada.com/terrible-road-accident-in-bantwal-three-people-from-bengaluru-on-their-way-to-udupi-krishna-mutt-die/): ದಕ್ಷಿಣ ಕನ್ನಡದ ಬಂಟ್ವಾಳದ ಬಿಸಿರೋಡ್ ವೃತ್ತದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು,ಸರ್ಕಲ್​ಗೆ ಇನ್ನೋವಾ ಕಾರು ಗುದ್ದಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಬೆಂಗಳೂರಿನಿಂದ ಉಡುಪಿ ಮಠಕ್ಕೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವೈಜ್ಞಾನಿಕ ಸರ್ಕಲ್ ಅಪಘಾತಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಸಿರೋಡಿನ ಸರ್ಕಲ್ನಲ್ಲಿ ಇನ್ನೋವಾ ಕಾರೊಂದು ಎನ್.ಜಿ ಸರ್ಕಲ್ಗೆ ಗುದ್ದಿದ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಕಾರಿನಲ್ಲಿದ್ದ ರಮ್ಯ(23), ರವಿ‌(64), ನಂಜಮ್ಮ(75) ಮೃತ ದುರ್ದೈವಿಗಳು. ಮೃತರು ಬೆಂಗಳೂರಿನ ಪೀಣ್ಯದವರಾಗಿದ್ದು, ಉಡುಪಿ ಶ್ರೀಕೃಷ್ಣ ಮಠಕ್ಕೆ ಕೃಷ್ಣನ ದರ್ಶನಕ್ಕೆಂದು ಹೊರಟಿದ್ದರು. ಕಾರಿನಲ್ಲಿ ಇದ್ದ ಪ್ರಯಾಣಿಕರಲ್ಲಿ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಕೀರ್ತಿ, ಸುಶೀಲಾ, ಬಿಂದು ಹಾಗೂ ಪ್ರಶಾಂತ್ ಎಂಬ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿರೋಡು – ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ನಿರ್ಮಾಣವಾದ ನೂತನ‌ ಸರ್ಕಲ್ […] - [ಗುಂಡೂರಿ ಹಾಲು ಉ.ಸ. ಸಂಘದ ಸದಸ್ಯ ಆನಂದ ಸಾಲಿಯಾನ್ ಕೆಂಪ್ಲಬರಿ ಅವರಿಗೆ ಕ್ಷೀರ ರತ್ನ ಪ್ರಶಸ್ತಿ ಪ್ರದಾನ](https://news19kannada.com/gunduri-milk-association-member-anand-salian-kemplabari-was-awarded-the-ksheera-ratna-award/): ಬೆಳ್ತಂಗಡಿ: ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾದ ಆನಂದ ಸಾಲಿಯಾನ್ ಕೆಂಪ್ಲಬರಿ ಅವರಿಗೆ ಕ್ಷೀರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಡoತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ನೇತೃತ್ವದಲ್ಲಿ ನಡೆದ 72ನೇ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹ 2025 ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. - [ಸಾಲುಮರದ ತಿಮ್ಮಕ್ಕ ಇಂದು ವಿಧಿವಶ, ಗಣ್ಯರ ಸಂತಾಪ](https://news19kannada.com/thimmakka-a-native-of-saalumarda-passed-away-today-dignitaries-mourn/): ನಾಡಿನ ಹಸಿರು ಹೆಚ್ಚಿಸಿದ, ಪರಿಸರ ಮೇಲೆ ಅಪಾರ ಕಾಳಜಿ ಹೊಂದಿದ್ದ ಸಾಲು ಮರ ತಿಮ್ಮಕ್ಕ ಅವರು ಇಂದು ಅನಾರೋಗ್ಯ ಕಾರಣದಿಂದ 114 ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಶುಕ್ರವಾರ ವಿಧಿವಶರಾಗಿದ್ದಾರೆ. ಇವರ ನಿಧನಕ್ಕೆ ರಾಜಕೀಯ ಗಣ್ಯರು ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಾಲುಮರದ ತಿಮ್ಮಕ್ಕ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ನವೆಂಬರ್ 14ರಂದು ನಿಧನರಾದರು. 2023 ರ ಅಕ್ಟೋಬರ್‌ನಲ್ಲಿ ಶ್ವಾಸನಾಳದ ಆಸ್ತಮಾದ ತೀವ್ರ ಉಲ್ಬಣದಿಂದಾಗಿ ಅಕ್ಟೋಬರ್ 3 ರಂದು ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಗೆ ಸಾಲುಮರದ ತಿಮ್ಮಕ್ಕರನ್ನು ದಾಖಲಾಗಿತ್ತು. ಅಲ್ಲಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಎದೆನೋವು ಕಾಣಿಸಿಕೊಂಡ ಕಾರಣ, ಆಂಜಿಯೋಗ್ರಾಮ್ ಮಾಡಲಾಗಿದ್ದು ಎಡ ಮುಂಭಾಗದ ಅಪಧಮನಿ ನಿರ್ಬಂಧಿತವಾಗಿರುವುದು ಪತ್ತೆಯಾಗಿತ್ತು. ಇದರ ನಂತರ ಆಂಜಿಯೋಪ್ಲ್ಯಾಸ್ಟಿ ನಡೆಸಲಾಯಿತು. ತೀವ್ರ ಅನಾರೋಗ್ಯದಿಂದಾಗಿ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರ ನಮ್ಮನ್ನ ಅಗಲಿದ್ದಾರೆ. - [ಕುಂಭಶ್ರೀ ಆಂಗ್ಲಮಾಧ್ಯಮ ಶಾಲೆ: ಪ್ರತಿಭಾ ಕಾರಂಜಿ ಪೂರ್ವಸಿದ್ದತಾ ಸಭೆ](https://news19kannada.com/kumbhasree-english-medium-school-pratibha-karanji-preparatory-assembly/): ವೇಣೂರು: ಕುಂಭಶ್ರೀ ಆಂಗ್ಲಮಾಧ್ಯಮ ಶಾಲೆ ಮತ್ತು ಕಾಲೇಜು ನಿಟ್ಟಡೆ ವೇಣೂರು ಇಲ್ಲಿ ನ. ೧೫ರಂದು ಪ್ರತಿಭಾ ಕಾರಂಜಿ ಸ್ಪರ್ಧೆಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಪೂರ್ವಸಿದ್ದತಾ ಸಭೆ ನಡೆಯಿತು. ಶಾಲಾ ಸಂಸ್ಥಾಪಕ ಗಿರೀಶ್ ಕೆ.ಎಚ್.ರವರ ಮಾರ್ಗದರ್ಶನದಲ್ಲಿ ನಡೆದ ಈ ಸಭೆಯಲ್ಲಿ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಚಂದ್ರಶೇಖರ್, ಕುಂಭಶ್ರೀ ವೈಭವ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಕುಂಭಶ್ರೀ ವೈಭವ ಸಮಿತಿಯ ಅಧ್ಯಕ್ಷರಾದ ಅಶ್ವಿತ್ ಕುಲಾಲ್ ಹಾಗೂ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು. ಶಾಲಾ ಸಂಚಾಲಕರಾದ ಅಶ್ವಿತ್ ಕುಲಾಲ್ ಉಪಸ್ಥಿತರಿದ್ದು, ಆ ದಿನದ ಖರ್ಚು ವೆಚ್ಚದ ಬಗ್ಗೆ ವಿವರಿಸಿದರು. ಒಟ್ಟಿನಲ್ಲಿ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರ ಮತ್ತು ಸದಸ್ಯರುಗಳು ಅಂತಿಮ ತೀರ್ಮಾನದಂತೆ ಪ್ರತಿ ಪೋಷಕರ ಸಹಾಯದಿಂದ ಈ ಕಾರ್ಯಕ್ರಮವನ್ನು ನಡೆಸುವುದೆಂದು ತೀರ್ಮಾನಿಸಿದರು. ಸಭೆಯಲ್ಲಿ ಎಲ್ಲಾ ಮುಖ್ಯೋಪಾಧ್ಯಾಯನಿಯರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. - [ಕುತ್ಲೂರು ಬಿಲ್ಲವ ಮಹಿಳಾ ವೇದಿಕೆ: ನೂತನ ಅಧ್ಯಕ್ಷರಾಗಿ ಉಷಾ ಮರ್ದೊಟ್ಟು ಆಯ್ಕೆ](https://news19kannada.com/kuthlur-billava-womens-forum-usha-mardottu-elected-as-new-president/): ಕುತ್ತೂರು: ಬಿಲ್ಲವ ಮಹಿಳಾ ವೇದಿಕೆಯ ಮಹಾಸಭೆಯು ಸಂಘದ ವಠಾರದಲ್ಲಿ ನಡೆಯಿತು. ಮಹಿಳಾ ವೇದಿಕೆಯ ನೂತನ ಅಧ್ಯಕ್ಷರಾಗಿ ಉಷಾ ಮರ್ದೊಟ್ಟು ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಿಶಾಲಾಕ್ಷಿ ಹಲೆಕ್ಕಿ, ಕಾರ್ಯದರ್ಶಿಯಾಗಿ ಸುಭಿಕ್ಷ ಪಲೆಯಟ್ಟು, ಕೋಶಾಧಿಕಾರಿಯಾಗಿ ಸುಜಾತ ಸದ್ಗುರು ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. - [ಈ ವಿಚಾರಕ್ಕೆ ಮುನ್ನಲೆಗೆ ಬಂದ ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿ](https://news19kannada.com/the-mangalore-kasargod-national-highway-has-come-to-the-forefront-of-this-issue/): ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲ ವಿಸ್ತರಣೆಯಾಗುತ್ತಲಿವೆ. ಈ ನಡುವೆಯೇ ಕೆಲ ಹೆದ್ದಾರಿಗಳು ಟೋಲ್‌ ಶುಲ್ಕ ವಿಚಾರವಾಗಿ ಸುದ್ದಿಯಲ್ಲಿರುತ್ತವೆ. ಹಾಗೆಯೇ ಇದೀಗ ಮಂಗಳೂರು-ಕಾಸರಗೋಡು NH ಮುನ್ನಲೆಗೆ ಬಂದಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. ರಾಜ್ಯದಲ್ಲಿ ಈಗಾಗಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ವಾಹನ ಸಂಚಾರಕ್ಕೆ ಮುಕ್ತವಾಗಿದ್ದು, ಟೋಲ್‌ ಕೂಡ ಸಂಗ್ರಹ ಮಾಡಲಾಗುತ್ತಿದೆ. ಇನ್ನೂ ಇದು ಉದ್ಘಾಟನೆಯಾದ ಆರಂಭದಿಂದಲೂ ಟೋಲ್‌ ವಿಚಾರಕ್ಕೆ ವಾಹನ ಸವಾರರು ಹಾಗೂ ಅಲ್ಲಿನ ಸಿಬ್ಬಂದಿ ನಡುವೆ ಮಾರಾಮಾರಿ ಘಟನೆಗಳು ನಡೆದಿವೆ. ಅಲ್ಲದೆ, ಇದೀಗ ಸುರಕ್ಷತೆಯಿಲ್ಲ ಎಂಬ ವಿಚಾರಕ್ಕೂ ಆಗಾಗ ಈ ಎಕ್ಸ್‌ಪ್ರೆಸ್‌ ವೇ ಸುದ್ದಿಯಾಗುತ್ತಲಿದೆ. ಅಲ್ಲದೆ, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ಕರ್ನಾಟಕ ಭಾಗದಲ್ಲಿ ಕಾಮಗಾರಿ ಮುಕ್ತಾಯವಾಗಿದ್ದು, ವಾಹನ ಸಂಚಾರಕ್ಕೂ ಅವಕಾಶ ಕಲ್ಪಿಸಿಕೊಡಲಾಗಿದೆ. ಈಗಾಗಲೇ ಟೋಲ್‌ ಶುಲ್ಕವನ್ನು ಕೂಡ ರಿವೀಲ್ ಮಾಡಲಾಗಿದೆ. ಈ ಎಕ್ಸ್‌ಪ್ರೆಸ್‌ ವೇ ಇನ್ನೂ ಉದ್ಘಾಟನೆ ಆಗಿಲ್ಲ. ಇದಕ್ಕೂ ಕಾರಣ ಇದೆ. ಕರ್ನಾಟಕ ಭಾಗದಲ್ಲಿ ಮಾತ್ರ ಮುಕ್ತಾಯವಾಗಿದೆ. ಆದರೆ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಕಾಮಗಾರಿ ಬಾಕಿ ಉಳಿದ ಕಾರಣ ಉದ್ಘಾಟನೆ […] - [ಇಂದು ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ: ಗೆಲುವಿನ ಬಿ‘ಹಾರ’ ಎನ್​ಡಿಎಗಾ, ಮಹಾಘಟಬಂಧನಕ್ಕಾ?](https://news19kannada.com/bihar-assembly-election-results-today-will-bihars-victory-go-to-nda-or-grand-alliance/) - [ನಾಳೆ ರಾಜ್ಯಾದ್ಯಂತ ಶಾಲೆಗಳಲ್ಲಿ ಪೋಷಕರು-ಶಿಕ್ಷಕರ ಸಮ್ಮೇಳನ](https://news19kannada.com/parent-teacher-conferences-to-be-held-in-schools-across-the-state-tomorrow/): ಮಂಗಳೂರು: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವ ಪ್ರಮುಖ ಉಪಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ 1559 ಶಿಕ್ಷಣ ಸಂಸ್ಥೆಗಳಲ್ಲಿ ನವೆಂಬರ್ 14 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1-30 ರವರೆಗೆ ಜಿಲ್ಲಾ ಮಟ್ಟದ ಪಾಲಕ-ಶಿಕ್ಷಕರ ಸಮ್ಮೇಳನ ನಡೆಯಲಿದೆ. ಪೋಷಕರು ಮತ್ತು ಶಿಕ್ಷಣ ವ್ಯವಸ್ಥೆಯ ನಡುವಿನ ಸಂಪರ್ಕವನ್ನು ಬಲಪಡಿಸುವುದು, ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿಶ್ವಾಸ ಮೂಡಿಸುವುದು ಮತ್ತು ವಿವಿಧ ಸರ್ಕಾರಿ ಶಿಕ್ಷಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಪೋಷಕರು ಕಲಿಕಾ ವಾತಾವರಣವನ್ನು ಸುಧಾರಿಸಲು ಕಾಳಜಿಗಳನ್ನು ವ್ಯಕ್ತಪಡಿಸಲು ಮತ್ತು ಸಲಹೆಗಳನ್ನು ನಿಡಲು ಸಹ ಅವಕಾಶವನ್ನು ನೀಡಲಾಗಿದೆ. ಸಮ್ಮೇಳನ ಸಮಯದಲ್ಲಿ, ಚರ್ಚೆಗಳು ವಿದ್ಯಾರ್ಥಿಗಳ ಪ್ರಗತಿ, ಹಾಜರಾತಿ, ಪರೀಕ್ಷಾ ಸಿದ್ಧತೆ ಮತ್ತು ವಿವಿಧ ಶಿಕ್ಷಣ ಸಂಬಂಧಿತ ಕಾರ್ಯಗಳ ಬಗ್ಗೆ ಜಾಗೃತಿಯನ್ನು ಒಳಗೊಂಡಿರುತ್ತವೆ. ರಾಜ್ಯಾದ್ಯಂತ ಏಕಕಾಲದಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. - [ಕರಾವಳಿಯ ಒಂದೇ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಏಳು ಜೋಡಿ ಅವಳಿ ಮಕ್ಕಳು!](https://news19kannada.com/seven-pairs-of-twins-studying-in-the-same-school-on-the-coast/): ಮಂಗಳೂರು: ಕೆಲವು ಶಾಲೆಗಳಲ್ಲಿ ಎರಡು ಅಥವಾ ಮೂರು ಜೋಡಿ ಅವಳಿ ಮಕ್ಕಳು ಒಟ್ಟಿಗೆ ಅಧ್ಯಯನ ಮಾಡುತ್ತಿರುವುದನ್ನು ನೀವು ಕೇಳಿರಬಹುದು. ಆದರೆ ಕರಾವಳಿ ಮಂಗಳೂರಿನಲ್ಲಿ ಈ ಶಾಲೆಯಲ್ಲಿ ಬರೋಬ್ಬರಿ ಏಳು ಜೋಡಿ ಅವಳಿ ಮಕ್ಕಳು ಒಂದೇ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ ಅಂದರೆ ನೀವು ನಂಬಲೇಬೇಕು!ಹೌದು, ವಾಮಂಜೂರಿನ ತಿರುವೈಲು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಒಂದೇ ಸಂಸ್ಥೆಯಲ್ಲಿ ಏಳು ಜೋಡಿ ಅವಳಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ನಿಜಕ್ಕೂ ಅಪರೂಪದ ಘಟನೆಯಾಗಿದೆ. ಝುವಾ ಮತ್ತು ಜಿಯಾಮ್ (೩ ನೇ ತರಗತಿ), ದಿಶಾ ಮತ್ತು ದಿತ್ಯ (೨ ನೇ ತರಗತಿ), ಸಾಕ್ಷಿ ಮತ್ತು ರಾಜೇಶ್ವರಿ (೨ ನೇ ತರಗತಿ), ಗಂಗಾ ಮತ್ತು ಜಮುನಾ (೧ ನೇ ತರಗತಿ), ಧಿ ಮತ್ತು ಶಾ (೫ ನೇ ತರಗತಿ), ಪ್ರಣಮ್ ಮತ್ತು ಪ್ರಥಮ್ (೬ ನೇ ತರಗತಿ), ಮತ್ತು ಶಾನ್ ಮತ್ತು ನಿಧಿಶಾ (೫ ನೇ ತರಗತಿ). ಅವರಲ್ಲಿ ಆರು ಜೋಡಿಗಳು ಸ್ಥಳೀಯ ಪ್ರದೇಶದವರಾಗಿದ್ದರೆ, ಒಂದು ಜೋಡಿ ಬಳ್ಳಾರಿಯಿಂದ […] ## Pages - [Home](https://news19kannada.com/) - [Privacy Policy](https://news19kannada.com/privacy-policy/): Who we are Suggested text: Our website address is: http://news19kannada.com. Comments Suggested text: When visitors leave comments on the site we collect the data shown in the comments form, and also the visitor’s IP address and browser user agent string to help spam detection. An anonymized string created from your email address (also called a hash) may be provided to the Gravatar service to see if you are using it. The Gravatar service privacy policy is available here: https://automattic.com/privacy/. After approval of your comment, your profile picture is visible to the public in the context of your comment. Media Suggested […] - [Contact](https://news19kannada.com/contact/) [comment]: # (Generated by Hostinger Tools Plugin)