ವೇಣೂರು: ಬಜಿರೆ ಗ್ರಾಮದ ಹೊಸಪಟ್ಟ, ಬಜಿರೆ, ಅಜ್ಜಿಬೆಟ್ಟು ಪರಿಸರದಲ್ಲಿ ಕಳೆದ ಹಲವು ದಿನಗಳಿಂದ ಎರಡು ಚಿರತೆಗಳು ಓಡಾಟ ನಡೆಸಿ ಜನರಲ್ಲಿ ಆತಂಕ ಸೃಷ್ಟಿಸಿದ್ದು ಇದೀಗ ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿಯಲು ಬಜಿರೆಯ ಪರದ್ಯಾರು ಎಂಬಲ್ಲಿ ಗೂಡು ಇರಿಸಲಾಗಿದೆ.
ಗ್ರಾಮದಲ್ಲಿ ಚಿರತೆ ಓಡಾಟ ಕಂಡು ಬಂದ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಕಾರ್ಯಪ್ರವೃತ್ತರಾದ ಅಧಿಕಾರಿಗಳು ಇದೀಗ ಬೋನ್ ಅಳವಡಿಸಿ ಚಿರತೆ ಹಿಡಿಯಲು ಮುಂದಾಗಿದ್ದಾರೆ.






