ಸಂಭ್ರಮದಿಂದ ಜರುಗಿದ ಕತ್ತಿಕಲ್ಲಾಂಭ ದೇವಿ ರಥೋತ್ಸವ

 

ಹೊಸದುರ್ಗ: ತಾಲೂಕಿನ ಕಬ್ಬಳ ಗ್ರಾಮದ ಗ್ರಾಮ ದೇವತೆ ಕತ್ತಿಕಲ್ಲಾಂಭ ದೇವಿಯ ರಥೋತ್ಸವ ಇಂದು ಬೆಳಗಿನ ಜಾವ ವಿಜೃಂಭಣೆಯಿಂದ ಜರಗಿತು.

ಜಾತ್ರೆಯ ಅಂಗವಾಗಿ ನಿನ್ನೆ ಬಧವಾರ ರಾತ್ರಿ ಗ್ರಾಮದ ಕತ್ತಿಕಲ್ಲಾಂಭ ದೇವಿ, ಮಹಾತಂಗಿ ದೇವರಗಳೊಂದಿಗೆ ಪುರಾತನ ಕಾಲದಿಂದಲೂ ಜಾತ್ರೆಗೆ ಅಗಮಿಸುವ ಅಜು ಬಾಜು ಗ್ರಾಮಗಳಾದ ಬೊಮ್ಮೇನಹಳ್ಳಿಕರಿಯಮ್ಮ ದೇವಿ, ಮಲ್ಲೇನಹಳ್ಳಿ ತಿರಮಲೇಶ್ವರಸ್ವಾಮಿ, ಹೊಸಹಟ್ಟಿ ಗ್ರಾಮದ ಅಂಜನೇಯ ಸ್ವಾಮಿ ದೇವರಗಳ ಕೂಡು ಬೇಟಿ ಯೊಂದಿಗೆ ಗ್ರಾಮದ ರಾಜ ಬೀದಿಗಳಲ್ಲಿ ನಾನಾ ಜನಪದ ಕಲಾಮೇಳಗಳು, ದೇವಿಯ ಭಂಟ ಚೋಮನ ಕುಣಿತದೊಂದಿಗೆ ರಾಜ ಬೀದಿ ಉತ್ಸವ ನಡೆಯಿತು.

ಇಂದು ಬೆಳಿಗ್ಗೆ ಎಲ್ಲಾ ದೇವರಗಳ ಮೂರ್ತಿಗಳನ್ನು ರಥೋತ್ಸವದಲ್ಲಿ ಕುಳ್ಳಿರಿಸಿ ಧಾರ್ಮಿಕ ಪೂಜಾ ವಿಧಿವಿದಾನಗಳನ್ನು ನೆರವೇರಿಸಿದ ನಂತರ ನೆರದಿದ್ದ ಭಕ್ತರ ರಥ ಎಳೆದು ರಥೋತ್ಸವ ನೆಡಸಲಾಯಿತು.

ಹಾಗೆಯೇ ಇಂದು ಮದ್ಯಾಹ್ನ ಅಲಾಂಕೃತವಾದ ಸಿಡಿ ಬಂಡಿಯಲ್ಲಿ ಸಿಡಿ ಮರವನ್ನು ಏರಿಸಿ ಗ್ರಾಮದಿಂದ 1ಕೀಮಿ ದೂರಲ್ಲಿರುವ ಜಾಲಿಯಮ್ಮನ ದೇವಾಲಯದ ವಿಶಾಲವಾದ ಬಯಲಿನಲ್ಲಿ ದೇವಿ ಗುರುತಿಸಿದ ವ್ಯಕ್ತಿಯನ್ನು ಮರದ ಮೇಲೆ ಹತ್ತಿಸಿ ನೆರದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಸಿಡಿ ಉತ್ಸವ ನಡೆಯಲಿದೆ.

ಉತ್ಸವದಲ್ಲಿ ಭಕ್ತರು ಸಿಡಿ ಮರಕ್ಕೆ ಸಂಕಷ್ಟ ನಿವಾರಣೆಯಾಗಲೆಂದು ಬಾಳೆ ಹಣ್ಣು, ಹೂವು, ನಾಣ್ಯಗಳನ್ನು ತೂರುವ ಮೂಲಕ ಭಕ್ತಿ ಸಮರ್ಪಿಸಿದರೆ ರೈತಾಪಿ ಜನತೆ ಟ್ರ್ಯಾಕ್ಟರ್‍ಗಳು, ಎತ್ತಿನ ಬಂಡಿಗಳಲ್ಲಿ ಪಾನಕದ ಹಂಡೆಗಳಲ್ಲಿ ಪಾನಕ ಪಲಹಾರ ತಂದು ಜಾತ್ರೆಗೆ ಅಗಮಿಸಿದ್ದ ಜನತೆಗೆ ವಿತರಣೆ ಮಾಡುವುದು ಇಲ್ಲಿನ ವಿಶೇಷತೆ.

[t4b-ticker]

You May Also Like

More From Author

+ There are no comments

Add yours