ವೇಣೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಶಿಯೇಷನ್ ವೇಣೂರು ವಲಯದ ವಾರ್ಷಿಕ ಮಹಾಸಭೆಯು ಕ್ಷೇತ್ರ ಸಮಿತಿಯ ಸಹಕಾರದೊಂದಿಗೆ ಫೆ. ೨೮ರಂದು ವೇಣೂರು ಗಾರ್ಡನ್ ವ್ಯೂ ಕಾಂಪ್ಲೆಕ್ಸ್ನಲ್ಲಿ ವಲಯದ ಅಧ್ಯಕ್ಷ ಉಮೇಶ್ ಟೈಲರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕಾರ್ಮಿಕ ಕಾರ್ಡ್ ವಿತರಣೆ ಮತ್ತು ಡಿಜಿಟಲ್ ಐಡಿ ಕಾರ್ಡ್ ವಿತರಣೆ ನಡೆಯಿತು.
ಕ್ಷೇತ್ರ ಸಮಿತಿಯ ಅಧ್ಯಕ್ಷ ರಾಜು ಪೂಜಾರಿಯವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇವರು ಸಭೆಯ ಉದ್ಘಾಟನೆಯನ್ನು ಮಾಡಿ ಸಂಘಟನೆ ಮತ್ತು ಕಾರ್ಮಿಕ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು ಅತೀ ಹೆಚ್ಚು ಸದಸ್ಯರ ರಿನಿವಲ್ ಆಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಲಾನ್ಸಿ ಡಿಸೋಜರವರು ಕಾರ್ಯಕ್ರಮದ ಮತ್ತು ಸಂಘಟನೆ ಬಗ್ಗೆ ವಿವರಿಸಿದರು.
ಜಿಲ್ಲಾ ಸಮಿತಿ ಉಪಾಧ್ಯಕ್ಷೆ ವೇದಾವತಿ ಜನಾರ್ದನ್ ರವರು ನಮ್ಮ ವಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ರವೀಂದ್ರರವರು ಉಪಸ್ಥಿತರಿದ್ದರು. ವಲಯದ ನಿರ್ಗಮನ ಅಧ್ಯಕ್ಷರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ನೂತನ ಕಾರ್ಯಕಾರಿ ಸಮಿತಿ ರಚನೆ
ಈ ಸಭೆಯಲ್ಲಿ ಹೊಸ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಪ್ರಮೀಳಾ ಹೊಸಂಗಡಿ, ಉಪಾಧ್ಯಕ್ಷರಾಗಿ ಹರೀಶ್ ಪೂಜಾರಿ, ಕಾರ್ಯದರ್ಶಿ ಸುಪ್ರೀತಾ, ಜತೆ ಕಾರ್ಯದರ್ಶಿಯಾಗಿ ನಮಿತಾ, ಜಯಪ್ರಭಾ, ಕೋಶಾಧಿಕಾರಿ ಜಯಶ್ರೀ ಮತ್ತು ನ್ಯಾನ್ಸಿ ಅವರನ್ನು ಆಯ್ಕೆ ಮಾಡಲಾಯಿತು. ಕ್ಷೇತ್ರ ಸಮಿತಿಗೆ ಆಯ್ಕೆ ಆದವರು ರತ್ನಾಕರ್ ಹೆಗ್ಡೆ, ಉಮೇಶ್ ಟೈಲರ್, ಆನಂದ್ ಟೈಲರ್, ಸಹನಾ ಶಾಸ್ತ್ರಿ, ವಸಂತ್ ವಿ.ಕೆ. ಟೈಲರ್ ಅವರನ್ನು ಆಯ್ಕೆ ಮಾಡಲಾಯಿತು.
ಸಂಘಟನಾ ಕಾರ್ಯದರ್ಶಿಯಾಗಿ ಕರಿಮಣೇಲು ಅಂಜಲಿ, ಮೂಡುಕೋಡಿ ಅಶ್ವಿತ, ಕುಕ್ಕೇಡಿ ಆನಂದ ಟೈಲರ್, ವೇಣೂರು ಸಹನಾ ಶಾಸ್ತ್ರಿ ಬಡಕೋಡಿ, ಹೊಸಂಗಡಿ ಪ್ರಮೀಳಾ, ಬಜಿರೆ ಸವಿತಾ, ಪಡಂಗಡಿ ಪ್ರೇಮಾ, ಗರ್ಡಾಡಿ ಸುನೀತಾ, ಅಂಡಿಂಜೆ ಜಯಂತಿ, ಗುಂಡೂರಿ ಶಶಿಕಲಾ, ಕೊಕ್ರಾಡಿ ವಿಶಾಲ ಹೆಗ್ಡೆ, ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.
೨೦೦ ಕ್ಕೂ ಹೆಚ್ಚು ಮಂದಿ ಟೈಲರ್ ವೃತ್ತಿ ಬಾಂದವರು ಭಾಗವಹಿಸಿದರು. ಪ್ರಮೀಳಾ ಹೊಸಂಗಡಿ ಕಾರ್ಯಕ್ರಮ ನಿರೂಪಿಸಿದರು. ಕೊಕ್ರಾಡಿ ವಿಶಾಲ ಹೆಗ್ಡೆ ಅವರು ಪ್ರಾರ್ಥನೆಯನ್ನು ಮಾಡಿದರು. ಸಹನಾ ವರದಿ ವಾಚಿಸಿದರು. ಸುಪ್ರೀತಾ ಲೆಕ್ಕಪತ್ರ ಮಂಡಿಸಿದರು. ಆನಂದ ಟೈಲರ್ ರವರು ಬಂದ ಅತಿಥಿಗಳನ್ನು ಸ್ವಾಗತಿಸಿ ಧನ್ಯವಾದವಿತ್ತರು.





