ಮಹಾಸಭೆ-ಪದಗ್ರಹಣ ಸಮಾರಂಭ, ನೂತನ ಸಂಚಾಲಕರಾಗಿ ಹರೀಶ್ ಫಂಡಿಜೆ ಆಯ್ಕೆ
ಕುಕ್ಕೇಡಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಗ್ರಾಮ ಶಾಖೆ ಕುಕ್ಕೇಡಿ-ನಿಟ್ಟಡೆ ಇದರ ಮಹಾಸಭೆ ಹಾಗೂ ಪದಗ್ರಹಣ ಕಾರ್ಯಕ್ರಮವು ಡಿ. ೧೪ರಂದು ಕುಕ್ಕೇಡಿ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಬಿ.ಕೆ. ವಸಂತ್, ತಾಲೂಕ್ ಪ್ರಧಾನ ಸಂಚಾಲಕರಾದ ರಮೇಶ್ ಆರ್. , ತಾಲೂಕ್ ಸಂಘಟನಾ ಸಂಚಾಲಕರಾದ ಶೇಖರ್ ಕುಕ್ಕೇಡಿ, ವೇಣೂರು ಹೋಬಳಿ ಸಂಚಾಲಕರಾದ ಚರಣ್ ಕುಕ್ಕೇಡಿ ಇವರ ನೇತೃತ್ವದಲ್ಲಿ ನಡೆಸಲಾಯಿತು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು
ಗ್ರಾಮ ಶಾಖೆ ಸಂಚಾಲಕರು – ಹರೀಶ್ ಫಂಡಿಜೆ, ಸಂಘಟನಾ ಸಂಚಾಲಕರು – ಮುತ್ತಪ್ಪ ನಿಟ್ಟಡೆ, ಅರುಣ್ ಪಿಲಿಯೂರು, ಶೀನ ಪಿಲಿಯೂರು, ಜಗದೀಶ್ ನಡ್ಯಲಿಕೆ, ಖಜಾಂಚಿ – ಮನೀಶ್ ನಿಟ್ಟಡೆ, ಮಹಿಳಾ ಸಮಿತಿ – ಸರೋಜಿನಿ ನಿಟ್ಟಡೆ, ಚಂದ್ರಾವತಿ ನಿಟ್ಟಡೆ, ಚಂದ್ರಾವತಿ ಹೊಸಗುಡ್ಡೆ, ಶೋಭಾ ನೆಲ್ಲಿಗುಡ್ಡೆ ಅವರು ಆಯ್ಕೆಯಾದರು.






