ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದ ನಟಿಯೊಬ್ಬರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎವಿಆರ್ ಗ್ರೂಪ್ ಸಂಸ್ಥಾಪಕ ಆಗಿರುವ ಅರವಿಂದ್ ರೆಡ್ಡಿನ ಬಂಧಿಸಲಾಗಿದೆ. ಎಸಿಪಿ ಚಂದನ್ ಮತ್ತು ತಂಡದಿಂದ ಆರೋಪಿ ಅರೆಸ್ಟ್ ಮಾಡಲಾಗಿದೆ. ಶ್ರೀಲಂಕದಿಂದ ಬೆಂಗಳೂರಿಗೆ ಬರುವಾಗ ಆರೋಪಿ ಲಾಕ್ ಆಗಿದ್ದಾನೆ. ಕಳೆದ ತಿಂಗಳು 17ರಂದು ಅರವಿಂದ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
2021ರಲ್ಲಿ ಪರಿಚಯ, ನಂತರ ಪ್ರೀತಿ-ಕಾಳಜಿ, ಬಳಿಕ ಸಂಪರ್ಕ ಕಡಿತಗೊಳಿಸಿ ಕಿರುಕುಳ ಶುರುಮಾಡಿದ್ದ. ಮದುವೆ ಭರವಸೆ, ನಟಿಯ ಆತ್ಮಹತ್ಯೆ ಯತ್ನ, ಆಸ್ಪತ್ರೆ ಸೇರಿದಾಗ ಹಲ್ಲೆ ಸೇರಿದಂತೆ ಹಲವು ಆರೋಪಗಳಿವೆ.





