ಕಿಲಾಡಿ ಲೇಡಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಲವ್ವಿಡವ್ವಿಗೆ ಅಮಾಯಕ ವಸಂತ ನಾಯ್ಕ ಬಲಿಯಾಗಿದ್ದು, ಈ ಪ್ರಕರಣ ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿದೆ. ಇನ್ನು ಘಟನೆ ಬಳಿಕ ಸುಚಿತ್ರಾ ಹಾಗೂ ಕಮಲಾಕರನ ರಾಸಲೀಲೆಗಳು ಒಂದೊಂದಾಗಿಯೇ ಬಯಲಿಗೆ ಬರುತ್ತಿದ್ದು, ಇದೀಗ ಈ ಜೋಡಿ ಹಕ್ಕಿಗೆ ಜೈಲೇ ಗತಿಯಾಗಿದೆ.
ಸಿದ್ಧಾಪುರ ವಸಂತ್ ನಾಯ್ಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಕಮಲಾಕರ್ ಭಟ್ ಗುರೂಜಿ ಹಾಗೂ ಪ್ರೇಯಸಿ ಸುಚಿತ್ರಾಳಿಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದೆ. ಒಟ್ಟು 8 ಆರೋಪಿಗಳ ಪೈಕಿ ಮೂವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಹೀಗಾಗಿ ಇನ್ನುಳಿದ A1 ಸುಚಿತ್ರಾ ಆರೋಪಿ ಹಾಗೂ A3ಕಮಲಾಕರ ಭಟ್ ಕಮಲಾಕರ ಭಟ್ ಸೇರಿದಂತೆ 5 ಆರೋಪಿಗಳಿಗೆ ಫೆಬ್ರವರಿ 21ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಸಿದ್ದಾಪುರ JMFC ನ್ಯಾಯಾಲಯದ ನ್ಯಾಯಾಧೀಶ ಉಮೇಶ್ ಎಂ.ಪಿ ಆದೇಶ ಹೊರಡಿಸಿದ್ದಾರೆ. ಇದರಿಂದ ಐಷಾರಾಮಿ ಜೀವನ ನಡೆಸುತ್ತಿದ್ದ ಜೋಡಿ ಹಕ್ಕಿಗೆ ಜೈಲೇ ಗತಿ.






