ಕಲ್ಮಂಜ: ಅಂತರಬೈಲ್ನ ಶ್ರೀ ಬಡಿನಡೆ ಕ್ಷೇತ್ರದಲ್ಲಿ ಬ್ರಹ್ಮ ಹಾಗೂ ನಾಗದೇವರ ಪ್ರತಿಷ್ಠಾ ಮಹೋತ್ಸವವು ದಿನಾಂಕ 10-04-2026 ಶುಕ್ರವಾರ ದಂದು ಗುರುದೇವ ಮಠದ ಮಹಾಮಂಡಲೇಶ್ವರರಾದ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತೀಜಿ ಮಹಾರಾಜರ ಕೃಪಾಶೀರ್ವಾದಗಳೊಂದಿಗೆ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಿತು.

ಈ ಧಾರ್ಮಿಕ ಕಾರ್ಯಕ್ರಮವು ತಂತ್ರಿವರ್ಯರಾದ ವೇದಮೂರ್ತಿ ಶ್ರೀ ವಿಷ್ಣುಮೂರ್ತಿ ಹೆಬ್ಬಾರ್ ಮುಂಡ್ರುಪ್ಪಾಡಿ, ಧರ್ಮಸ್ಥಳ ಹಾಗೂ ಕಲ್ಮಂಜ ಗ್ರಾಮದ ಅಂತರಬೈಲು ಶ್ರೀ ಅನಂತೇಶ್ ಚಡಗ ಅವರ ನೇತೃತ್ವದಲ್ಲಿ ನಡೆಯಿತು.
ಕ್ಷೇತ್ರದ ಮೂಲಶಕ್ತಿಗಳಾದ ಬ್ರಹ್ಮ ಮತ್ತು ನಾಗದೇವರ ಪ್ರತಿಷ್ಠೆಗಾಗಿ ಕಾನಂಗಿನ ಕಾಡಿನ ಬೆಟ್ಟದ ತೀರ್ಥಕೊಳದಿಂದ ತೀರ್ಥವನ್ನು ವೈದಿಕ ವಿಧಿ ವಿಧಾನಗಳೊಂದಿಗೆ ಕ್ಷೇತ್ರಕ್ಕೆ ತಂದು ಕಲಶಾಭಿಷೇಕ ನೆರವೇರಿಸಿ ಪ್ರತಿಷ್ಠಾ ಕಾರ್ಯವನ್ನು ಯಶಸ್ವಿಯಾಗಿ ಊರ-ಪರಊರ ಭಕ್ತರ ಸಹಕಾರದೊಂದಿಗೆ ವೈಭವಯುತವಾಗಿ ಜರುಗಿತು.
ಈ ಸಂದರ್ಭದಲ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ತುಕಾರಾಮ ಸಾಲಿಯನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ ಗುಡಿಗಾರ್, ಸಂಯೋಜಕರಾದ ಶ್ರೀ ನವೀನ್ ಪ್ರಕಾಶ್, ಕಾರ್ಯದರ್ಶಿಗಳಾದ ಶ್ರೀ ಸುನಿಲ್ ಕನ್ಯಾಡಿ, ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಗೌಡ ಹೂಂಕ್ರೊಟ್ಟು, ಖಜಾಂಚಿಯಾಗಿರುವ ಶ್ರೀ ಮಂಜುನಾಥ್ ಗುಡಿಗಾರ್, ಶ್ರೀ ಶ್ರೀನಿವಾಸ್ ಗೌಡ ಬೆದ್ರಕಾಡು,ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.ಹಾಗೂ ಗಣ್ಯರಾದ ಶ್ರೀಮತಿ ಮತ್ತು ಶ್ರೀ ರಾಜೇಶ್ ಪೈ ಸಂಧ್ಯಾ ಗ್ರೂಪ್ಸ್ ಉಜಿರೆ, ರತ್ನಾಕರ ಹೆಗ್ಡೆ ಮಹಾವೀರ ಗ್ರೂಪ್ಸ್ ಉಜಿರೆ. ಸೇವಾ ಭಾರತಿ,ಕನ್ಯಾಡಿ ಇದರ ಅಧ್ಯಕ್ಷರಾದ ವಿನಾಯಕ ರಾವ್ ಅಜ್ಜೋಳಿಗೆ, ವೀರ ಕೇಸರಿ ಬೆಳ್ತಂಗಡಿ ಸ್ಥಾಪಕ ಅಧ್ಯಕ್ಷರಾದ ಸತೀಶ್ ಶೆಟ್ಟಿ ಧರ್ಮಸ್ಥಳ, ಶೇಖರ್.ಟಿ ನಿವೃತ್ತ ಮ್ಯಾನೇಜರ್ ಮಂಜುಶ್ರೀ ಪ್ರಿಂಟರ್ಸ್ ಉಜಿರೆ, ಹರೀಶ್ ಸಿ.ಎ ಬೆಂಗಳೂರು ಹಾಗೂ ವಿವಿಧ ಗಣ್ಯರು ಮತ್ತು ಪುರೋಹಿತ ವರ್ಗದವರು ಉಪಸ್ಥಿತರಿದ್ದರು.





