ಶಾಸಕಿ ಪೂರ್ಣಿಮಾ ಬಂದರೆ ಜೆಡಿಎಸ್ ಟಿಕೆಟ್ ಓಕೆ , ಪತಿ ಶ್ರೀನಿವಾಸ್ ಗೆ ದಳಪತಿಗಳು ಹೇಳಿದ್ದೇನು?

 

 

 

ಹಿರಿಯೂರು:  2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಕಾಣಲೇಬೇಕು ಎಂಬ  ಲೆಕ್ಕಾಚಾರದಲ್ಲಿ  ಜೆಡಿಎಸ್ ಭರ್ಜರಿ ರಣತಂತ್ರ ಎಣೆಯುತ್ತಿದ್ದಾರೆ.

ಜೆಡಿಎಸ್ ಪಕ್ಷದ ವರಿಷ್ಠರು ರಾಜ್ಯದ ಗದ್ದುಗೆ ಏರಬೇಕು ಎಂದು ರಾಜ್ಯದ ಉದ್ದಗಲಕ್ಕೂ  ಪಂಚರತ್ನ ರಥಯಾತ್ರೆ ಸೇರಿದಂತೆ ವಿವಿಧ ಸಮಾವೇಶಗಳನ್ನುಮಾಡುತ್ತಿದ್ದಾರೆ. ಕಾಂಗ್ರೆಸ್ , ಬಿಜೆಪಿ ಅಸಮಾಧಾನಿತ ನಾಯಕರು ಜೆಡಿಎಸ್ ಪರ್ಯಾಯ ಎಂಬ ಭಾವನೆಯಲ್ಲಿ ಇದ್ದಾರೆ ಎಂಬದು ಮತ್ತೊಂದು ಲೆಕ್ಕಚಾರವಾಗಿದೆ  

ಉತ್ತರ ಕರ್ನಾಟಕದಲ್ಲಿ ಬಲಿಷ್ಠ ವೀರಶೈವ ಲಿಂಗಾಯಿತ ಕೋಮಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುವ  ಪ್ಲಾನ್ ಮಾಡಿದ್ದಾರೆ.

 ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲೂ ಪಂಚರತ್ನ ರಥ ಯಾತ್ರೆ ಮುಂದಕ್ಕೆ ಹೋಗುತ್ತಿದೆ.ಸದಾ ಮುಂದೂಡುತ್ತಿರುವ ಗುಟ್ಟು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ವಾಗತೊಡಗಿದೆ.


ಹಿರಿಯೂರು ವಿಧಾನಸಭಾ ಕ್ಷೇತ್ರದ ಸ್ಥಳೀಯ ಅಭ್ಯರ್ಥಿಗೆ ಅದರಲ್ಲೂ ಕುಂಚಿಟಿಗ  ಒಕ್ಕಲಿಗ ಜನಾಂಗದವರಿಗೆ ಟಿಕೆಟ್ ನೀಡುವುದಾಗಿ ಮಾಜಿ ಸಿಎಂ  ಕುಮಾರಸ್ವಾಮಿ ಘೋಷಣೆ ಮಾಡಿದ್ದರು. ಮೊದಲ ಆದ್ಯತೆಯಾಗಿ ಮಾಜಿ ಜಿಪಂ ಅಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ  ಸೇರಿ  ಆಕಾಂಕ್ಷಿಗಳಾದ ಶ್ರಾವಣಗೆರೆ ಶಿವಪ್ರಸಾದ್ ಗೌಡ, ಕುಂದಲಗುರ ಕೆ.ಜಿ.ಮೂಡಲಗಿರಿಯಪ್ಪ ಮತ್ತು ಎಂ.ರವೀಂದ್ರಪ್ಪ ಈ ಮೂರು ಜನರು  ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೊನೆ ಕ್ಷಣದವರೆಗೂ ಜೆಡಿಎಸ್ ಟಿಕೆಟ್ ಅಂತಿಮ ಮಾಡದಿದ್ದರೆ ಮತದಾರರ ಬಳಿ ಹೇಗೆ ಹೋಗಬೇಕು, ಪಕ್ಷ ಸಂಘಟನೆ ಹೇಗೆ ಮಾಡಬೇಕು, ಕೊನೆ ಕ್ಷಣದಲ್ಲಿ ಟಿಕೆಟ್ ಫೈನಲ್ ಮಾಡುವ ಉದ್ದೇಶ ಜೆಡಿಎಸ್ ವರಿಷ್ಠರಿಗಿದ್ದರೆ ಸ್ಪರ್ಧಿಸುವ ಬಗ್ಗೆ ನೂರೊಂದು ಸಲ ಈ ಮೂರು ಮಂದಿ ಟಿಕೆಟ್ ಆಕಾಂಕ್ಷಿಗಳು ಯೋಚಿಸಿ ಹಿಂದೆ ಸರಿಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.


ಈ ಎಲ್ಲಾ ರಾಜಕೀಯ ಬೆಳವಣಿಗೆ  ಮಧ್ಯೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ದೇವೇಗೌಡರೊಂದಿಗೆ ಸಂಪರ್ಕದಲ್ಲಿರುವ ಕಳೆದ ಎಂಎಲ್ಸಿ ಚುನಾವಣೆಯಲ್ಲಿ ಸೋತಿರುವ  ಶಾಸಕಿ ಕೆ.ಪೂರ್ಣಿಮಾ ಅವರ ಪತಿ ಡಿ.ಟಿ.ಶ್ರೀನಿವಾಸ್ ತೆರೆ ಮರೆಯಲ್ಲಿ ಜೆಡಿಎಸ್ ಟಿಕೆಟ್ ಪ್ರಯತ್ನಿಸಿದ್ದಾರೆ. ಆದರೆ ಹಿರಿಯುರು ಜನರಿಗೆ ಮಾತ್ರ  ಶಾಸಕಿ  ಪೂರ್ಣಿಮಾ ಅವರ ಮೇಲೆ ಹೆಚ್ಚು ಪ್ರೀತಿ ಇರುವುದನ್ನು ಮನಗಂಡಿರುವ ಜೆಡಿಎಸ್ ವರಿಷ್ಠರು ಹಾಲಿ ಶಾಸಕಿ ಪೂರ್ಣಿಮಾ ಅವರನ್ನು ಕರೆದುಕೊಂಡ ಬನ್ನಿ ಅವರಿಗೆ ನೀಡಲು ಓಕೆ ಎಂದಿದ್ದಾರೆ ಎಂಬ ಮಾತು ಅಪ್ತ ಮತ್ತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.ಆದರೆ ಶತಾಯಗಾತಯ ಜೆಡಿಎಸ್ ಟಿಕೆಟ್ ಪಡೆದು ಶಾಸಕ ಆಗಲೇಬೇಕು ಎಂದು ಪಣ ತೊಟ್ಟಂತೆ  ಶಾಸಕಿ ಪತಿ ಡಿ.ಟಿ.ಶ್ರೀನಿವಾಸ್ ಸುತ್ತುತ್ತಿದ್ದಾರೆ. ಜೆಡಿಎಸ್ ಟಿಕೆಟ್ ತರುತ್ತೇನೆ ಯಾವುದೇ ಸಂಶಯ ಬೇಡ ಎನ್ನುತ್ತಿದ್ದಾರೆ ಡಿ.ಟಿ.ಶ್ರೀನಿವಾಸ್. ಆದರೆ ರಾಜಕೀಯದಲ್ಲಿ  ಏನು ಬೇಕಾದರೂ ಆಗಬಹುದು. ಒಟ್ಟಿನಲ್ಲಿ ಹಿರಿಯೂರು ಜೆಡಿಎಸ್ ಗೆ ಡಿಮ್ಯಾಂಡ್  ಹೆಚ್ಚುತ್ತಿದ್ದು ಟಿಕೆಟ್ ಯಾರ ಪಾಲಗಲಿದೆ ಎಂಬುದರ ಮೇಲೆ ಹಿರಿಯೂರು ಫಲಿತಾಂಶ ನಿರ್ಧಾರವಾಗಲಿದೆ.

 

[t4b-ticker]

You May Also Like

More From Author

+ There are no comments

Add yours