ವೇಣೂರು: ಬೆಳ್ತಂಗಡಿ ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ಒಂದಾಗಿರುವ ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವೇಣೂರು ನಗರದಲ್ಲಿ ಅಕ್ರಮ ಬ್ಯಾನರ್ಗಳೇ ರಾರಾಜಿಸುತ್ತಿವೆ. ಗ್ರಾಮ ಪಂಚಾಯತ್ ಕಚೇರಿಯ ಅನತಿ ದೂರದಲ್ಲೇ ಅಕ್ರಮ ಬ್ಯಾನರ್ಗಳು ಪ್ರದರ್ಶನ ನೀಡುತ್ತಿದ್ದು, ಪಂಚಾಯತ್ನ ಆಡಳಿತ ವ್ಯವಸ್ಥೆಯ ಬಗ್ಗೆಯೇ ಪ್ರಶ್ನೆಯೆದ್ದಿದೆ.
ನಗರ ಭಾಗದಲ್ಲೇ ಈ ರೀತಿಯಾದರೆ ಒಳರಸ್ತೆಗಳಲ್ಲಿ ಅದೆಷ್ಟು ಅಕ್ರಮವಾಗಿ ಬ್ಯಾನರ್ಗಳು ರಾರಾಜಿಸುತ್ತಿರಬಹುದು ಎನ್ನುವುದು ಸಾಮಾನ್ಯವಾಗಿ ಹುಟ್ಟಿಕೊಳ್ಳುವ ಪ್ರಶ್ನೆಯಾಗಿದೆ. ಈ ಬಗ್ಗೆ ಪಂಚಾಯತ್ ಅಧಿಕಾರಿಗಳನ್ನು ನ್ಯೂಸ್ 19 ಕನ್ನಡ ಸಂಪರ್ಕಿಸಿದ್ದು, ಅಕ್ರಮ ಬ್ಯಾನರ್ ಗಳನ್ನು ತಕ್ಷಣ ತೆರವುಗೊಳಿಸುವ ಪ್ರಕ್ರಿಯೆ ಮಾಡುತ್ತೇವೆ ಎಂದಿದ್ದಾರೆ. ಈ ಮಧ್ಯೆ ಪಂಚಾಯತ್ ಸಿಬ್ಬಂದಿ ಬ್ಯಾನರ್ ಅನುಮತಿಗೆ `ಇಂದು ಬರುತ್ತಾರಂತೆ’ ಎಂಬ ಹಾರಿಕೆಯ ಉತ್ತರ ನೀಡಿದ್ದು, ಬ್ಯಾನರ್ ಅಳವಡಿಸಿ ವಾರ ಕಳೆದ ಬಳಿಕ ಅನುಮತಿ ಪಡೆಯುವ ಹೊಸ ನಿಯಮ ಜಾರಿಗೆ ಬಂದಿದ್ಯಾ? ಪಂಚಾಯತ್ನ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವ ಈ ವ್ಯವಸ್ಥೆ ವಿರುದ್ಧ ಪಂಚಾಯತ್ ಯಾವ ಕ್ರಮ ಕೈಗೊಳ್ಳುತ್ತೆ ಅನ್ನುವುದು ಕಾದು ನೋಡಬೇಕಿದೆ.





