ಜೆಡಿಎಸ್ ಅಧಿಕಾರಕ್ಕೆ ಬಂದರೆ ಶಾರದ ಅವರಿಗೆ ಸಚಿವ ಸ್ಥಾನ

 

ಹೊಳೆಹೊನ್ನೂರು (ಫೆ.23) : ಜೆಡಿ​ಎಸ್‌ ಅಧಿಕಾರಿಕ್ಕೆ ಬಂದರೆ ಗ್ರಾಮಾಂತರ ಶಾಸಕರನ್ನು ಸಚಿವರನ್ನಾಗಿ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಶಿವಮೊಗ್ಗ(Shivamogga) ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್‌(JDS)ನಿಂದ ಬುಧವಾರ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆ(Pancharatna rathayatre shivamogga)ಯಲ್ಲಿ ಮಾತನಾಡಿ, ಶಿವಮೊಗ್ಗ ಗ್ರಾಮಾಂತರದ ಜನಪರ ಕಾಳಜಿಯುಳ್ಳ ನನ್ನ ತಂಗಿ ಶಾರದಾ ಪೂರಾರ‍ಯ ನಾಯ್ಕ್(Sharadha naik) ಅವರನ್ನು ಅತಿ ಹೆಚ್ಚು ಮತಗಳಿಂದ ಆರಿಸಿ ತರಬೇಕಿದೆ.

ಕುಟುಂಬದಲ್ಲಿ ₹30- .40 ಲಕ್ಷ ಖರ್ಚಾಗುವಂತಹ ಕಾಯಿಲೆಗಳು ಇವತ್ತು ಸರ್ವೇಸಾಮಾನ್ಯ. ಮಲವಗೊಪ್ಪದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ಸಂದರ್ಭದಲ್ಲಿ ಬಂದ ಎರಡು ಕುಟುಂಬಗಳು ಒಂದು ಕುಟುಂಬಕ್ಕೆ .50 ಲಕ್ಷ ಹಾಗೂ ಇನ್ನೊಂದು ಕುಟುಂಬಕ್ಕೆ .35 ಲಕ್ಷದ ಅಗತ್ಯವಿದೆ. ಈ ತರ ಬಂದಂತವರಿಗೆ ನಾನು ವೈಯಕ್ತಿಕವಾಗಿ ಎಲ್ಲಿಂದ ಹಣ ತಂದು ಕೊಡಲು ಸಾಧ್ಯ? ನಾನೇನು ದೊಡ್ಡ ಶ್ರೀಮಂತನಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿ ಬೇರೆ ರಾಜಕಾರಣಿಗಳ ತರ ಹಣ ಲೂಟಿ ಮಾಡಿ, ಆಸ್ತಿ ಸಂಪಾದನೆ ಮಾಡಿಲ್ಲ. ನಾನೂ ಒಬ್ಬ ರೈತನಾಗಿ ಬದುಕುತ್ತಿದ್ದೇನೆ ಎಂದು ಹೇಳಿದರು.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 30 ಹಾಸಿಗೆಯುಳ್ಳ ಸುಸಜ್ಜಿತ ಆರೋಗ್ಯ ಕೇಂದ್ರವನ್ನು ತೆರೆದು, ದಿನದ 24 ಗಂಟೆ ಉಚಿತ ಚಿಕಿತ್ಸೆಯನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಭಗವಂತ ಅಧಿ​ಕಾರ ಕೊಟ್ಟಾಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. .25 ಸಾವಿರ ಕೋಟಿ ಸಾಲ ಮನ್ನಾಮಾಡಿ 26 ಲಕ್ಷ ಕುಟುಂಬಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ಮಳೆಗಾಲ ಪ್ರಾರಂಭದಲ್ಲಿ ಬಿತ್ತನೆಬೀಜ ಹಾಗೂ ಗೊಬ್ಬರ ಖರೀದಿ ಮಾಡುವುಕ್ಕೆ 1 ಎಕರೆಗೆ .10 ಸಾವಿರದಂತೆ 10 ಎಕರೆ .1 ಲಕ್ಷದವರೆಗೆ ರೈತಬಂಧು ಯೋಜನೆಯಡಿ ಸರ್ಕಾರದ ವತಿಯಿಂದ ಧನಸಹಾಯ, ಸಣ್ಣಪುಟ್ಟವ್ಯಾಪಾರದಾರರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ತರಬೇತಿ ಜೊತೆಗೆ ಆರ್ಥಿಕ ಸಹಾಯ ನೀಡಲಾಗುವುದು ಎಂದು ಹೇಳಿದರು.

[t4b-ticker]

You May Also Like

More From Author

+ There are no comments

Add yours