ಜನಪರ ಕಾರ್ಯಕ್ರಮ ಮೆಚ್ಚಿ ನೂರಾರು ಕಾರ್ಯಕರ್ತರು ಕೈ ಸೇರ್ಪಡೆ:ಶಾಸಕ ಟಿ.ರಘುಮೂರ್ತಿ

 

ಚಳ್ಳಕೆರೆ-29 ಆಚರಣೆ ನಮ್ಮ ಸಮಾಜದ ಪ್ರತಿಬಿಂಬ, ಆಚರಣೆ, ಸಂಪ್ರದಾಯ, ಪದ್ದತಿಗಳಿಂದ ನಮ್ಮ ಭಾರತಿಯ ಸಂಸ್ಕೃತಿ ಎಂದಿಗೂ ಶ್ರೀಮಂತ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಅವರು, ವಿಧಾನಸಭಾ ಕ್ಷೇತ್ರದ ಕಾಪರಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಮುಖಂಡರ ಸಭೆ ಮತ್ತು ವಿವಿಧ ಪಕ್ಷಗಳ ಮುಖಂಡರುಗಳ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಂಗ್ರೆಸ್ ಪಕ್ಷ ಬಡವರ ಪಕ್ಷ, ಸಿದ್ದರಾಮಯ್ಯನವರ ಆಳಿತಡಲ್ಲಿ ಉಚಿತ ಅಕ್ಕಿ, ಹಾಲು, ಬಿಸಿಯೂಟ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ನೂರಾರು ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಪಕ್ಷ ಸೇರ್ಪಡೆಯಾಗುವ ಮೂಲಕ ಮತ್ತೊಮ್ಮೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಎಲ್ಲ ಲಕ್ಷಣಗಳು ಗೋಚರವಾಗಿವೆ ಎಂದರು.
ಜೆ.ಡಿ.ಎಸ್ ಪಕ್ಷದ ಮುಖಂಡರಾದ ರಮೇಶ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಕುಮಾರ್, ವಸಂತಕುಮಾರ್, ತಿಪ್ಪೇಸ್ವಾಮಿ, ರೈತ ಸಂಘದ ಹಂಪಣ್ಣ, ಗುರುಮೂರ್ತಿ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಯಲ್ಲಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಕಾಂತ್, ಗ್ರಾಮ ಪಂಚಾಯತ್ ಸದಸ್ಯ ತಿಪ್ಪೇಸ್ವಾಮಿ, ಮುಖಂಡರಾದ ಅಂಜಿನ ಮೂರ್ತಿ, ಮಹಾಲಿಂಗಪ್ಪ, ಲಿಂಗರಾಜ್, ದುರ್ಗೇಶ್ ,ಗುರುಮೂರ್ತಿ, ಮಚ್ಚೇಂದ್ರಪ್ಪ, ಮಹಾಲಿಂಗಪ್ಪ, ಗುರುಮೂರ್ತಿ, ಪ್ರಭುದೇವ್, ಸಿದ್ದೇಶ್, ಗೋಪಿನಾಥ್, ಅಶೋಕ್, ಮಂಜುನಾಥ್, ರವಿಕುಮಾರ್, ಬಸವರಾಜ್, ಬಾಣಪ್ಪ, ರಂಗನಾಥ್, ತಿಪ್ಪೇಸ್ವಾಮಿ, ನಾಗರಾಜ್, ಮುಂತಾದವರು ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours