ಹೊಸಪಟ್ಣ: ಸಾಮಾಜಿಕ ಸೇವೆಯಲ್ಲಿ ಮುಂಚೂಣಿ ಯಲ್ಲಿರುವ ಬಂಟ್ವಾಳ ತಾಲೂಕು ಪಿಲಾತ್ತಬೆಟ್ಟು ಗ್ರಾಮದ ನಯನಾಡು ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ (ರಿ.) ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
ನೂರಾರು ಸಾಮಾಜಿಕ ಸೇವೆಗಳನ್ನು ನಡೆಸಿಕೊಂಡು ಬಂದಿರುವ ಈ ಸಂಸ್ಥೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಸಾಮಾಜಿಕ ಸೇವೆಯನ್ನು ನಡೆಸಿರುವುದು ಜಿಲ್ಲಾ ಪ್ರಶಸ್ತಿ ಬರಲು ಕಾರಣವಾಗಿದೆ. ಇದನ್ನು ಮನಗಂಡು ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ (ರಿ.), ಹೊಸಪಟ್ಣ ಹಾಗೂ ಜಂಟಿ ಸಂಸ್ಥೆಗಳಾದ ಶ್ರೀ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಮತ್ತು ಶ್ರೀ ಸತ್ಯನಾರಾಯಣ ಭಜನಾ ಮಂಡಳಿ, ಹೊಸಪಟ್ಣ ಇದರ ಸರ್ವ ಸದಸ್ಯರು ನಯನಾಡು ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ (ರಿ.)ರ ಸಾಧನೆಯನ್ನು ಅಭಿನಂದಿಸಿ ನ. ೯ರಂದು ಟ್ರಸ್ಟ್ ನ ಬೆನ್ನೆಲುಬಾದ ಗೌರವಾಧ್ಯಕ್ಷರು ನೆಲ್ವಿಸ್ಟರ್ ಪಿಂಟೋ ಇವರಿಗೆ ಸನ್ಮಾನ ಮಾಡಲಾಯಿತು. ಸನ್ಮಾನ ಕಾರ್ಯಕ್ರಮ ಶ್ರೀರಾಮ ಸಭಾಭವನ ನೈನಾಡು ಇಲ್ಲಿ ಜರುಗಿತು.
ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದಾ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀ ಲಕ್ಷ್ಮಿ ನಾರಾಯಣ ಹೆಗಡೆ , ಶ್ರೀಮತಿ ಪುಷ್ಪಲತಾ ಮೋಹನ್ ಸಾಲಿಯನ್, ಶ್ರೀಮತಿ ಲೀಲಾವತಿ ಶೆಟ್ಟಿ, ಶ್ರೀರಾಮ ಭಜನಾ ಮಂದಿರ ನೈನಾಡು ಇದರ ಗೌರವಾಧ್ಯಕ್ಷರಾದ ಜಾರಪ್ಪ ಪೂಜಾರಿ, ಶ್ರೀರಾಮ ಯುವಕ ಸಂಘದ ಗಣೇಶ್ ಹೆಗ್ಡೆ
ಗೆಳೆಯರ ಬಳಗ ಸಂಸ್ಥೆಯ ಸಂಚಾಲಕರು ಎಲಿಯಸ್ ಕ್ರಾಸ್ತ , ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಜಾರಿಗೆದಡಿ, ಗೌರವಾಧ್ಯಕ್ಷರು ಪದ್ಮನಾಭ ರೈ, ಬ್ರಾಣಿಗೇರಿ, ಶ್ರೀ ಸತ್ಯನಾರಾಯಣ ಭಜನಾ ಮಂಡಳಿಯ ಅಧ್ಯಕ್ಷ ಸತೀಶ್ ನಾಯರ್ಮೇರು ಮುಂತಾದವರು ಇದ್ದರು.
ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿಯ ಕಾರ್ಯದರ್ಶಿ ಭಾಸ್ಕರ್ ಪೂಜಾರಿ ನಾಯರ್ಮೇರು ಸಂಸ್ಥೆಯ ಹುಟ್ಟು-ಕಾರ್ಯವೈಖರಿಯ ಬಗ್ಗೆ ಪ್ರಾಸ್ತಾವಿಕಗೈದರು.
ಸಮಿತಿಯ ಪ್ರಧಾನ ಸಂಚಾಲಕರಾದ ಗಣೇಶ ಪೂಜಾರಿ ಸನ್ಮಾನಪತ್ರ ವಾಚಿಸಿದರು.





