ಹೊಸಂಗಡಿ: ಹೊಸಂಗಡಿಯ ಶಿವಗಿರಿ ಕಾಂಪ್ಲೆಕ್ಸಿನಲ್ಲಿ ಗಣೇಶ್ ಪೂಜಾರಿ ಕಾರಾಜೆ ಇವರ ಮಾಲಕತ್ವದ ಶ್ರೀ ದುರ್ಗಾ ಅಲ್ಯುಮೀನಿಯಂ ಫ್ಯಾಬ್ರಿಕೇಷನ್ ಫೆ. ೨೫ರಂದು ಶುಭಾರಂಭಗೊಂಡಿತು.

ಸಂಸ್ಥೆಯ ಮಾಲಕರ ಹೆತ್ತವರಾದ ಶ್ರೀಮತಿ ಗುಲಾಬಿ ಹಾಗೂ ಕೃಷ್ಣಪ್ಪ ಪೂಜಾರಿ, ದ.ಕ.ಜಿ.ಪಂ. ಮಾಜಿ ಉಪಾಧ್ಯಕ್ಷರಾದ ಧರಣೇಂದ್ರ ಕುಮಾರ್, ವೇಣೂರು ಬಿಲ್ಲವ ಸಂಘದ ಅಧ್ಯಕ್ಷರಾದ ಹರೀಶ್ ಪೊಕ್ಕಿ, ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರಾದ ನಿತೀಶ್ ಕೋಟ್ಯಾನ್, ಗ್ರಾ.ಪಂ. ಮಾಜಿ ಸದಸ್ಯರಾದ ರಾಜೇಶ್ ಪೂಜಾರಿ, ಬೆಳ್ತಂಗಡಿ ಬಿಲ್ಲವ ಸಂಘದ ನಿರ್ದೇಶಕರಾದ ವಿಶ್ವನಾಥ ಪೂಜಾರಿ, ಕಟ್ಟಡದ ಮಾಲೀಕರಾದ ಮುಕುಂದ ಪೂಜಾರಿ, ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು.
ವಕೀಲ ಸತೀಶ್ ಪಿ.ಯನ್. ಮೂಡುಕೋಡಿ, ಸಂದೇಶ್ ಯನ್.ಪಿ, ಮನ್ವಿತ್ ಭಂಡಾರಿ ಹಾಗೂ ಅನೇಕ ಹಿತೈಷಿಗಳು ಉಪಸ್ಥಿತರಿದ್ದರು. ಬಂದಂತ ಅತಿಥಿಗಳನ್ನು ಮಾಲಕರಾದ ಗಣೇಶ್ ಪೂಜಾರಿ ಕಾರಜೆ ಮತ್ತು ಮನೆಯವರು ಸತ್ಕರಿಸಿದರು.





