ವೇಣೂರು, ಜ. 14 : ಹಿಂದೂ ಸಂಗಮ ಆಯೋಜನಾ ಸಮಿತಿ, ವೇಣೂರು ತಾಲೂಕು, ಬಳಂಜ ಮಂಡಲ ವತಿಯಿಂದ “ನಾನು ಹಿಂದು ನಮ್ಮದು ಹಿಂದೂ ರಾಷ್ಟ್ರ” ಎಂಬ ಧೇಯ ವಾಕ್ಯದೊಂದಿಗೆ ಜ. 25 ರಂದು ನಡೆಯಲಿರುವ ಹಿಂದೂಸಂಗಮ ಶೋಭಾಯಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಹಿಂದೂ ಸಂಗಮ ಬಳಂಜ ಮಂಡಲ ಆಮಂತ್ರಣ ಪತ್ರಿಕೆಯನ್ನು ಕೆ. ವಸಂತ ಸಾಲ್ಯಾನ್ ಕಾಪಿನಡ್ಕ ಸದಾನಂದ ಉಂಗಿಲಬೈಲು, ಸುಧೀರ್ ಸುವರ್ಣ, ನವೀನ್ ಸಾಮಾನಿ, ನಿತ್ಯಾನಂದ ನೊಚ್ಚ ಸಂತೋಷ್ ಕಾಪಿನಡ್ಕ ಶ್ರೀನಿವಾಸ ರೈ ಕಾರಂದೂರು, ರಾಘವೇಂದ್ರ ಭಟ್, ಪ್ರಶಾಂತ್ ಕರಂಬಾರು, ರಮೇಶ್ ಬಜನೋಡಿ, ವಿದ್ಯಾನಂದ ಲೀಲಾವತಿ, ಪ್ರಕಾಶ್ ಆಚಾರ್ಯ, ರಕ್ಷಿತ್ ಕರಂಬಾರು, ಸೋಮನಾಥ ಶಿರ್ಲಾಲು ಸೇರಿದಂತೆ ಮತ್ತಿತ್ತರ ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಇನ್ನು, ಜ. 25 ಆದಿತ್ಯವಾರದಂದು ಅಪರಾಹ್ನ 2.30ರಿಂದ ಗುಂಡೇರಿ ಆವರಣದಿಂದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದವರೆಗೆ ಭವ್ಯ ಶೋಭಾಯಾತ್ರೆ ಹಾಗೂ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾಧ್ಯಕ್ಷತೆಯನ್ನು ಶೀತಲ್ ಜೈನ್, ಅಮೃತ ನಿವಾಸ ಶಿರ್ಲಾಲು ಇವರು ವಹಿಸಿಕೊಳ್ಳಲಿದ್ದಾರೆ.






