ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಅಮೃತ ಆರೋಗ್ಯ ಅಭಿಯಾನದಡಿ ಆರೋಗ್ಯ ತಪಾಸಣೆ

 

ವಿಶೇಷ ವರದಿ: ರವಿ ಉಗ್ರಾಣ 

ಚಿತ್ರದುರ್ಗ: ಮಹಾತ್ಮಗಾಂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಗ್ರಾಮ ಪಂಚಾಯಿತಿ ಅಮೃತ ಆರೋಗ್ಯ ಅಭಿಯಾನದಡಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಸ್ಥಳದಲ್ಲೇ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕೂಲಿ ಕಾರ್ಮಿಕರ ಮಧುಮೇಹ, ರಕ್ತದೊತ್ತಡ ಹಾಗೂ ರಕ್ತಹೀನತೆಯ ರೀಡಿಂಗ್‌ಗಳನ್ನು ದಾಖಲಿಸಿ, ವ್ಯತ್ಯಾಸ ಕಂಡುಬಂದಲ್ಲಿ ಅಗತ್ಯ ಔಷಧ ಒದಗಿಸಲಾಗುತ್ತಿದೆ.
ಸರಕಾರದ ಆದೇಶದನ್ವಯ ಕಳೆದ ೨೨ ರಿಂದ ಈ ವಿಶೇಷ ಆರೋಗ್ಯ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಜೂನ್ ೨೧ ರವರೆಗೆ ಜಿಲ್ಲೆಯ ಎಲ್ಲಾ ೧೮೯ ಗ್ರಾಮ ಪಂಚಾಯಿತಿಗಳಲ್ಲೂ ಆರೋಗ್ಯ ಶಿಬಿರ ನಡೆಯಲಿದೆ. ಈವರೆಗೆ ಸುಮಾರು ೪೦ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಈ ಶಿಬಿರ ಕೈಗೊಳ್ಳುವ ಮೂಲಕ ಕೂಲಿಕಾರರ ಆರೋಗ್ಯ ತಪಾಸಣೆ ನಡೆಸಲಾಗಿದೆ.
ಸರಕಾರದಿಂದ ಕೈಗೊಂಡಿರುವ ಈ ವಿಶೇಷ ಆರೋಗ್ಯ ಅಭಿಯಾನವು ಕೂಲಿಕಾರರ ಮೆಚ್ಚುಗೆಗೆ ಪಾತ್ರವಾಗಿದೆ. ತಾವಿರುವ ಸ್ಥಳಕ್ಕೆ ಬಂದು ತಮ್ಮ ಆರೋಗ್ಯ ತಪಾಸಣೆ ನಡೆಸಿ, ಸಲಹೆ, ಸೂಚನೆ ನೀಡುವುದರ ಜತೆಯಲ್ಲಿ ಉಚಿತ ಔಷಧೋಪಚಾರ ಮಾಡುತ್ತಿರುವುದು ಸಾರ್ವಜನಿಕರು ಕೂಡ ಪ್ರಶಂಸೆ ವ್ಯಕ್ತಪಡಿಸುತ್ತಾರೆ.
ಕೋಟ್/- ಉದ್ಯೋಗ ಖಾತ್ರಿ ಯೋಜನೆಯಡಿ ಶ್ರಮವಹಿಸಿ ಕೆಲಸ ಮಾಡುವ ನಾವು ನಮ್ಮ ಆರೋಗ್ಯದ ಬಗ್ಗೆ ಗಮನಹರಿಸುವುದು ಕಡಿಮೆ. ಆದರೆ ಗ್ರಾಮ ಪಂಚಾಯಿತಿಯವರು ನಾವು ಕೆಲಸ ಮಾಡುವ ಜಾಗಕ್ಕೆ ಬಂದು ಆರೋಗ್ಯ ಇಲಾಖೆ ಮೂಲಕ ನಮ್ಮ ಆರೋಗ್ಯ ತಪಾಸಣೆ ನಡೆಸುತ್ತಿರುವುದು ಒಳ್ಳೆಯದಾಗಿದೆ.
ಸುಧಾ, ಉದ್ಯೋಗ ಖಾತ್ರಿ ಯೋಜನೆ ಫಲಾನುಭವಿ, ಕೋಗುಂಡೆ
ಕೋಟ್/- ಉದ್ಯೋಗ ಖಾತ್ರಿ ಕೆಲಸ ಮಾಡುತ್ತಿರುವ ಜಾಗಕ್ಕೆ ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆಯವರು ಬಂದು ನಮ್ಮ ದೇಹದಲ್ಲಿನ ಸಕ್ಕರೆ, ರಕ್ತದೊತ್ತಡ, ರಕ್ತಹೀನತೆ ಮಟ್ಟವನ್ನು ಪರೀಕ್ಷಿಸಿ, ಔಷಧ ಕೊಡುತ್ತಿರುವುದು ತುಂಬಾ ಅನುಕೂಲವಾಗಿದೆ.
ಅಂಜಿನಮ್ಮ, ಉದ್ಯೋಗ ಖಾತ್ರಿ ಯೋಜನೆ ಫಲಾನುಭವಿ, ಕೋಗುಂಡೆ
ಸರಕಾರ ಆಯೋಜಿಸಿರುವ ಈ ಅಮೃತ ಆರೋಗ್ಯ ಅಭಿಯಾನ ತುಂಬಾ ಉಪಯುಕ್ತವಾಗಿದೆ. ಗ್ರಾಮ ಪಂಚಾಯಿತಿ ಅಮೃತ ಆರೋಗ್ಯ ಅಭಿಯಾನದಡಿ ಮೇ.೨೨ ರಿಂದ ಜೂನ್ ೨೧ ರವರೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೂಲಿಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ, ಅಗತ್ಯವಿದ್ದಲ್ಲಿ ಅವರ ಔಷದೋಪಚಾರ ನಡೆಸಲಾಗುತ್ತಿದೆ.
ಬಿ.ಟಿ.ಧನಂಜಯ, ಸಹಾಯಕ ನಿರ್ದೇಶಕ, ಉದ್ಯೋಗ ಖಾತ್ರಿ ಯೋಜನೆ, ಚಿತ್ರದುರ್ಗ ತಾಪಂ.
ಕೋಟ್/- ಚಿತ್ರದುರ್ಗ ಜಿಲ್ಲೆಯಲ್ಲಿ ೧೮೯ ಗ್ರಾಮ ಪಂಚಾಯಿತಿಗಳಿದ್ದು, ೧.೭೫ ಲಕ್ಷ ಉದ್ಯೋಗ ಖಾತ್ರಿ ಜಾಬ್ ಕಾರ್ಡ್ ಹೊಂದಿದ ಕೂಲಿ ಕಾರ್ಮಿಕರಿದ್ದಾರೆ. ಇವರು ಕೆಲಸ ಮಾಡುವ ಜಾಗದಲ್ಲೇ ಅಮೃತ ಆರೋಗ್ಯ ಅಭಿಯಾನದಡಿ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಈಗಾಗಲೇ ಸುಮಾರು ೪೦ ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯ ಶಿಬಿರ ನಡೆಸಲಾಗಿದೆ. ಈ ವರ್ಷ ೮೮ ಸಾವಿರ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸುವ ಗುರಿ ಹೊಂದಲಾಗಿದೆ. ಸಣ್ಣಪುಟ್ಟ ಆರೋಗ್ಯ ತಪಾಸಣೆ ಕಂಡುಬಂದಲ್ಲಿ ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಗಂಭೀರ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ.

 


ಎಂ.ಎಸ್.ದಿವಾಕರ್, ಸಿಇಓ, ಜಿಪಂ, ಚಿತ್ರದುರ್ಗ
ಬಾಕ್ಸ್-
ಉದ್ಯೋಗ ಖಾತ್ರಿ ಕೂಲಿಕಾರರ ಮಧುಮೇಹ, ರಕ್ತದೊತ್ತಡ ಹಾಗೂ ರಕ್ತಹೀನತೆ ರೀಡಿಂಗ್‌ಗಳನ್ನು ನಮೂನೆಗಳಲ್ಲಿ ಪಡೆದು, ಭವಿಷ್ಯದಲ್ಲಿ ಪಂಚತಂತ್ರ ೨.೦ ತಂತ್ರಾಂಶದಲ್ಲಿ ದಾಖಲಿಸಲು ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.

[t4b-ticker]

You May Also Like

More From Author

+ There are no comments

Add yours