ಬೆಳ್ತಂಗಡಿ, ಡಿ. 27: ಗುರುವಾಯನಕೆರೆ-ಮೂಡಬಿದ್ರೆ ರಸ್ತೆಯಲ್ಲಿ ಅಳವಡಿಸಲಾಗಿರುವ ದಾರಿ ದೀಪಗಳನ್ನು ಶಾಸಕ ಹರೀಶ್ ಪೂಂಜಾ ಅವರು ಲೋಕಾರ್ಪಣೆಗೊಳಿಸಿದರು.

ಸುಮಾರು ರೂ.1.00 ಕೋಟಿ ವೆಚ್ಚದಲ್ಲಿ ಗುರುವಾಯನಕೆರೆ ಮೂಡಬಿದ್ರೆ ರಸ್ತೆಯ ಕುವೆಟ್ಟುವಿನಲ್ಲಿ ಅಳವಡಿಸಲಾಗಿರುವ ಹೆದ್ದಾರಿ ದಾರಿ ದೀಪಗಳನ್ನು ಲೋಕಾರ್ಪಣೆಗೊಳಿಸಲಾಗಿದೆ. ಈ ದಾರಿದೀಪಗಳು ಪ್ರಯಾಣಿಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.






