ಚಿತ್ರದುರ್ಗ ಕ್ಷೇತ್ರದ ಟಿಕೆಟ್ ಗೆ ಕೈ, ಕಮಲ,ದಳಲ್ಲಿ ಆಕಾಂಕ್ಷಿಗಳ ಭರ್ಜರಿ ಫೈಟ್

 

ಎಲೆಕ್ಷನ್ ಟಿಕೆಟ್ ಫೈಟ್ 
ಚಿತ್ರದುರ್ಗ:chitradurga  ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಕೇಂದ್ರ ಸಹ ಆಗಿರುವ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ಈ ಬಾರಿ ದಿನದಿಂದ ದಿನಕ್ಕೆ ರಂಗೇರುತ್ತಿದೆ.  ಕಾಂಗ್ರೆಸ್ , ಬಿಜೆಪಿ ,ಜೆಡಿಎಸ್ ಪಕ್ಷದಲ್ಲಿ ಟಿಕೆಟ್ ಫೈಟ್ ಫುಲ್ ಟೈಟ್ ಆಗುತ್ತಾ ಸಾಗುತ್ತಿದೆ.

ಕಾಂಗ್ರೆಸ್ (congress)
ಕಾಂಗ್ರೆಸ್ ಪಕ್ಷದಿಂದ  ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ, ಮಾಜಿ ಶಾಸಕ ಎಸ್.ಕೆ. ಬಸವರಾಜನ್ , ಮಾಜಿ ಎಂಎಲ್ಸಿ ರಘು ಆಚಾರ್ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ. ರಘು ಆಚಾರ್ ರಾಜ್ಯದಲ್ಲಿ ಒಬ್ಬರಿಗೆ ವಿಶ್ವಕರ್ಮ ಜನಾಂಗಕ್ಕೆ ಟಿಕೆಟ್ ನೀಡಬೇಕು ಎಂಬ ವಾದವನ್ನು ಮಂಡಿಸಿದ್ದು  ಸಿದ್ದು ‌ಮತ್ತು ಡಿಕೆ ಇಬ್ಬರು ಸಹ ಓಕೆ ಎಂದಿದ್ದಾರೆ ಎಂದು ರಘು ಆಚಾರ್ ಭರ್ಜರಿ ಪ್ರಚಾರ ಮತ್ತು ಟಿಕೆಟ್ ನನಗೆ ಎಂದು ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ. ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಅವರಿಗೆ ಟಿಕೆಟ್ ಗೆ ಭಾರಿ ಸರ್ಕಸ್ ಮಾಡುತ್ತಿದ್ದರು ಸಹ ಪತ್ನಿ ಕಳೆದ ಬಾರಿ ಜಿಲ್ಲಾ ಪಂಚಾಯತ ಸ್ಥಾನಕ್ಕೆ ರಾಜೀನಾಮೆ ನೀಡಿದೇ ಪಕ್ಷಕ್ಕೆ‌ ಮುಜುಗರ ಮಾಡಿದ್ದು ಒಂದು ಕಡೆಯಾದರೆ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸಿದ್ದು ಕೂಡ ಕಾಂಗ್ರೆಸ್ ಪಕ್ಷ ಸ್ಥಳೀಯ ಮತ್ತು ರಾಜ್ಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನು ಹನುಮಲಿ  ಷಣ್ಮುಖಪ್ಪ ಪರ ದುರ್ಗ ಒಂದು ಟೀಮ್ ಅವರಿಗೆ ಟಿಕೆಟ್ ನೀಡಿ ಎಂಬ ವಾದ ಮಂಡಿಸುತ್ತಿದ್ಧು ಕಾಂಗ್ರೆಸ್ ಯಾರಿಗೆ ಮಣೆ ಹಾಕಲಿದೆ ಎಂದು ತಿಳಿದಿಲ್ಲ.
ಬಿಜೆಪಿ ಪಕ್ಷ ,(BJP)
ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕ  ಜಿ.ಎಚ್‌.ತಿಪ್ಪಾರೆಡ್ಡಿ  ಅವರಿಗೆ ಟಿಕೆಟ್ ಖಾತ್ರಿಯಾಗಿದೆ.ಚಿತ್ರದುರ್ಗ ಬಿಜೆಪಿ ಪಕ್ಷವನ್ನು ಶಾಸಕರು ಸಾಕಷ್ಟು ಶ್ರಮಿಸಿದ್ದಾರೆ. ನಗರಸಭೆ, ವಿಧಾನ ಪರಿಷತ್, ಲೋಕಸಭಾ  ಚುನಾವಣೆ ಗೆಲುವಿನಲ್ಲಿ ತಿಪ್ಪಾರೆಡ್ಡಿ ಅವರ ಪಾತ್ರ ದೊಡ್ಡದಿದ್ದು. ಕ್ಷೇತ್ರದಲ್ಲಿ ಅವರಿಗೆ ಟಿಕೆಟ್ ಪಕ್ಕ ಮತ್ತು ತನ್ನದೇ ಆದ ವೋಟ್ ಬ್ಯಾಂಕ್ ತಿಪ್ಪಾರೆಡ್ಡಿ ಹೊಂದಿದ್ದಾರೆ. ಆದರೆ ಭೀಮಸಮುದ್ರ ಮೂಲಕ‌ ದಾವಣಗೆರೆ ಸಂಸದ ಪುತ್ರ ಜಿ.ಎಸ್.ಅನಿತ್ ಸಹ ಟಿಕೆಟ್ ಗೆ ಆಕಾಂಕ್ಷೆ ಆಗಿದ್ದರು ಸಹ  ಹಾಲಿ ಶಾಸಕರಿ ಟಿಕೆಟ್ ತಪ್ಪಿಸುಬಷ್ಟು ಜನಪ್ರಿಯ ಇಲ್ಲ ಎಂಬ ಮಾತು ಕ್ಷೇತ್ರದಲ್ಲಿದೆ. Karnataka
ಜೆ.ಡಿ.ಎಸ್ ಪಕ್ಷ  (JDS)
ಚಿತ್ರದುರ್ಗ ಜೆ.ಡಿ.ಎಸ್ ಗೆ ಒಂದು ರೀತಿ ಪಿಕ್ ನಿಕ್ ಸ್ಪಾಟ್ ಆಗಿದೆ.ಸದ್ಯ ಜೆಡಿಎಸ್ ಟಿಕೆಟ್ ಗೆ ಪೈಪೋಟಿ ಇಲ್ಲ. ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಜಿ  ನಗರಸಭೆ ಅಧ್ಯಕ್ಷ ಬಿ.ಕಾಂತರಾಜ್ ಗೆ ಟಿಕೆಟ್ ಎಂಬ ಮಾತಿದೆ. ಆದರೆ ಒಂದು ಮೂಲದ ಪ್ರಕಾರ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಫ್ಯಾಮಿಲಿಗೆ ಜೆಡಿಎಸ್ ಟಿಕೆಟ್ ಖಾತ್ರಿ ಮಾಡಿಕೊಂಡಿ ಕಾಂಗ್ರೆಸ್ ಪಕ್ಷದಲ್ಲಿ ಒಂದು ಕೈ ನೋಡೋಣ ಎಂಬ ಭಾವನೆಯಲ್ಲಿ‌  ಇದ್ದಾರೆ. ಆದರೆ (Election) ಕಾಂತರಾಜ್ ಮತ್ತು ಎಸ್ಕೆಬಿ ಅವರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯ ಇದ್ದು ಯಾವ ರೀತಿ ತಣಿಸುತ್ತಾರೆ ಮತ್ತು ಕಾಂತರಾಜ್ ಅವರು ಮತ್ತೆ ಟಿಕೆಟ್ ಬಿಟ್ಟು ಕೊಡುತ್ತಾರಾ ಅಥವಾ ಟಿಕೆಟ್ ಗೆ ಪಟ್ಟು ಹಿಡಿಯುತ್ತಾರೆ ಎಂಬುದು ಟಿಕೆಟ್ ಯಾರಿಗೆ ಎಂಬುದು ನಿರ್ಧಾರವಾಗಲಿದೆ. (chitradurga)
ಒಟ್ಟಿನಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಎಲ್ಲಾ ಪಕ್ಷಗಳು ಆ್ಯಕ್ಟಿವ್ ಆಗಿದ್ದು ಫ್ರೆಬ್ರವರಿ ನಂತರದಲ್ಲಿ ಒಂದು ಪೂರ್ಣ ಚಿತ್ರಣ ಸಿಕ್ಕಬಹುದು ಅಲ್ಲಿಯವರೆಗೂ ಎಲ್ಲಾರೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ಯಾರು ಯಾವ ದಾಳ ಉರುಳಿಸುತ್ತಾರೆ ಎಂಬುದು ಕಾದು ನೋಡೋಣ.(chitradurga)
 
[t4b-ticker]

You May Also Like

More From Author

+ There are no comments

Add yours