ಶಿರ್ಲಾಲು: ಗ್ರಾ.ಪಂ.ಅರಿವು ಕೇಂದ್ರ ಶಿರ್ಲಾಲು ಇದರ ವಿಶೇಷ ಚೇತನರ ಸ್ನೇಹಿ ಅಭಿಯಾನ ಹಾಗೂ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವನ್ನು ಹಾಗೂ ಮಕ್ಕಳ ಗ್ರಾಮಸಭೆಯು ದಿನಾಂಕ ಶಿರ್ಲಾಲು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿದರು ಹಾಗೂ ಮಾನವ ಹಕ್ಕುಗಳ ಬಗ್ಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿರ್ಲಾಲು ಹಾಗೂ ಕರಂಬಾರು ಶಾಲೆಗಳಿಂದ ೬೦ ವಿದ್ಯಾರ್ಥಿಗಳು ಭಾಗವಹಿಸಿದ್ದರು ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೇಲ್ವಿಚಾರಕರಾದ ಶ್ರೀಮತಿ ವಾಣಿಶ್ರೀ ಸಭೆಯಲ್ಲಿ ಉಪಸ್ಥಿತರಿದ್ದು ಇವರು ಮಾನವ ಹಕ್ಕುಗಳು ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಯ ಬಗ್ಗೆ ಮಾಹಿತಿ ಡಿದರು. ವೇಣೂರು ಪೊಲೀಸ್ ಇಲಾಖೆಯ ಪಿ ಯಸ್ ಐ ಓಮನ ಇವರು ಸಭೆಯಲ್ಲಿ ಉಪಸ್ಥಿತರಿದ್ದು ಪೋಕ್ಸೋ ಕಾಯ್ದೆ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಮಾಹಿತಿಯನ್ನು ಡಿದರು ಕೌಲರ್ ಆದ ಶ್ರೀಮತಿ ಉಷಾ ಇವರು ಪರಿಸರ ರಕ್ಷಣೆಯ ಕರ್ತವ್ಯ, ವಿಕಾಸ ಹೊಂದುವ ಹಕ್ಕುಗಳ ಬಗ್ಗೆ ತಿಳಿಸಿದರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾ ಯಮ್ ಮತ್ತು ಉಪಾಧ್ಯಕ್ಷರು,ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪಂಚಾಯತ್ ಸಿಬ್ಬಂದಿ ವರ್ಗದವರು ಗ್ರಂಥಾಲಯ ಮೇಲ್ವಿಚಾರಕರು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು ಗ್ರಾಮ ಪಂಚಾಯತ್ ಕಾರ್ಯದರ್ಶಿಯವರು ಧನ್ಯವಾದವಿತ್ತರು.






