ಲಂಚ ಸ್ವೀಕರಿಸುವಾಗಲೇ ಸರ್ಕಾರಿ ಅಭಿಯೋಜಕಿ ಲೋಕಯುಕ್ತ ಬಲೆಗೆ

 

ದಾವಣಗೆರೆ: Lokayukta Trap
ಪೋಕ್ಸೊ ಪ್ರಕರಣದ ಆರೋಪಿಗೆ ಅನುಕೂಲ ಮಾಡಿಕೊಡಲು ಸರ್ಕಾರಿ ಅಭಿಯೋಜಕಿಯೊಬ್ಬರು ಲಂಚ ಸ್ಪೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ದಾವಣಗೆರೆ ನಗರದಲ್ಲಿ ಜರುಗಿದೆ.
ಆರೋಪಿ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಎಸ್.ಕೋಟೆಗೌಡರ್ ಲೋಕಾಯುಕ್ತ ದಾಳಿಗೆ ಒಳಗಾಗಿ ಈಗ ಜಾಲು ಪಾಲಾಗಿದ್ದಾರೆ.
ಪೋಕ್ಸೋ ಪ್ರಕರಣದ ಆರೋಪಿ ವ್ಯಕ್ತಿಯಿಂದ 1.87 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಹಣ ಹಾಗೂ ಹಣಕ್ಕೆ ಖಾತರಿಯಾಗಿ ಪಡೆದಿದ್ದ ಸಹಿ ಮಾಡಿದ ಖಾಲಿ ಚೆಕ್ ಸಮೇತ ಲೋಕಾಯುಕ್ತರು ಆರೋಪಿಯನ್ನು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲಾ ಪೋಕ್ಸೋ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಎಸ್.ಕೋಟೆಗೌಡರ್ ಲೋಕಾಯುಕ್ತ ಬಲೆಗೆ ಬಿದ್ದು ಕಂಬಿ ಎಣಿಸುವಂತಾಗಿದೆ.
ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರ್ ಪೋಕ್ಸೋ ಪ್ರಕರಣದ ಆರೋಪಿಗೆ ಸಹಾಯ ಮಾಡಲು 3 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು 1.13 ಲಕ್ಷ ರೂ.ಗಳನ್ನು ಈ ಹಿಂದೆ ಪಡೆದಿದ್ದರು. ಉಳಿದ ಬಾಕಿ ಲಂಚದ 1.87 ಲಕ್ಷ ರೂ. ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.
ಏನು ಪ್ರಕರಣ:
ದಾವಣಗೆರೆ ತಾ. ಕಿತ್ತೂರು ಗ್ರಾಮದ ಜಿ.ಟಿ.ಮದನ್ಕುಚಮಾರ ಕಿತ್ತೂರು ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ಅಪರಾಧದಡಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿ ಮದನಕುಮಾರನಿಗೆ ಸಹಾಯ ಮಾಡುವುದಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, 1.13 ಲಕ್ಷ ರೂ.ಗಳನ್ನು ಮುಂಚೆಯೇ ಪಡೆದುಕೊಂಡಿದ್ದರು. ಆರೋಪಿ ಮದನಕುಮಾರ ಪ್ರಕರಣದಲ್ಲಿ ಸಹಾಯ ಮಾಡಲು ನೀಡಬೇಕಾಗಿದ್ದ ಬಾಕಿ 1.87 ಲಕ್ಷ ರೂ.ಗೆ ಖಾತರಿಗಾಗಿ ಆತನಿಂದ ಕರ್ನಾಟಕ ಬ್ಯಾಂಕ್ಗೆಳ ಸೇರಿದ ಸಹಿ ಮಾಡಿದ ಖಾಲಿ ಚೆಕ್ ಪಡೆದಿದ್ದರು. ಆರೋಪಿ ಮದನ್ ಕುಮಾರ್ ಈ ಕುರಿತು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎನ್ನಲಾಗಿದೆ. ಆರೋಪಿ ವಿಶೇಷ ಸರ್ಕಾರಿ ಅಭಿಯೋಜಕಿ ರೇಖಾ ಕೋಟೆಗೌಡರ್ ದಾವಣಗೆರೆ ಪಿಜೆ ಬಡಾವಣೆಯ ತನ್ನ ನಿವಾಸದಲ್ಲಿ 1.87 ಲಕ್ಷ ರೂ. ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಬೀಸಿದ ಬಲೆಗೆ ಬಿದ್ದು ಈಗ ಜೈಲು ಕಂಬಿ ಹಿಂದಿದ್ದಾರೆ.

[t4b-ticker]

You May Also Like

More From Author

+ There are no comments

Add yours