ಪಡಂಗಡಿ: ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಕೆನ್ಯೊಟ್ಟು ಲ್ಯಾನ್ಸಿ ಗಿಲ್ಬೊ ಅವರ ಮನೆಯ ನಾಯಿಮರಿಯನ್ನು ಚಿರತೆ ಹೊತ್ತೊಯ್ದಿದೆ.
ಬುಧವಾರ ಮಧ್ಯರಾತ್ರಿ ನಾಯಿಗಳು ಬೊಗಳಲು ಆರಂಭಿಸಿದ್ದು, ಹೊರಬಂದು ನೋಡಿದಾಗ ಚಿರತೆ ನಮ್ಮ ನಾಯಿಮರಿಯನ್ನು ಕಚ್ಚಿಕೊಂಡು ಓಡುತ್ತಿತ್ತು ಎಂದು ಲ್ಯಾನ್ಸಿ ಗಿಲ್ಬೊ ಮಾಹಿತಿ ನೀಡಿದ್ದಾರೆ.
ಮಂಗಳವಾರ ಇದೇ ರಾತ್ರಿ ಗ್ರಾಮದ ಆಲ್ವಿನ್ ಮೋನಿಸ್ ಎಂಬವರಿಗೆ ಚಿರತೆ ಕಾಣಸಿಕ್ಕಿದ್ದು, ಅದೇ ದಿನ ಬೆಳಿಗ್ಗೆ ರಬ್ಬರ್ ತೋಟಕ್ಕೆ ಬಂದಿದ್ದು, ಕಾರ್ಮಿಕರಿಗೆ ಚಿರತೆ ಕಾಣಸಿಕ್ಕಿರುವುದಾಗಿ ಮಾಹಿತಿ ಬಂದಿದೆ. ಜನ ರಾತ್ರಿ ವೇಳೆ ಓಡಾಡಲು ಭಯ ಪಡುವ ಸ್ಥಿತಿ ನಿರ್ಮಾಣ ಆಗಿದ್ದು, ಚಿರತೆ ಗೂಡು ಅಳವಡಿಸಿಬೇಕೆಂಬ ಆಗ್ರಹ ಕೇಳಿ ಬಂದಿದೆ.






