ಬಿಜೆಪಿ ತೊರೆದು ಜೆಡಿಎಸ್ ಸೇರಿದ ಮಾಜಿ ಶಾಸಕ ಬಸವರಾಜ್ ಮಂಡಿಮಠ

 

ಚಳ್ಳಕೆರೆ-29 ಬಿಜೆಪಿಯ ಹಿರಿಯ ದುರೀಣ, ಮಾಜಿ ಶಾಸಕ ಜಿ.ಬಸವರಾಜಮಂಡಿಮಠ ಭಾನುವಾರ ಮಂಡಿಮಠ ಮಿಲ್ ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರಿದರು.

ಈ ಸಂದರ್ಭದಲ್ಲಿ ಮಾತನಾಡಿ ಜಿಡಿಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ನಿಂದ ಮತದಾರ ರೋಸಿದ್ದಾನೆ‌. ಈ ಭಾರಿ ಚಿತ್ರದುರ್ಗ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಜಯಸಾಧಿಸಿ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಗೆ ಅಧಿಕಾರ ನೀಡುವರು.
ತಾಲ್ಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ಮಾತನಾಡಿ, ಇಂದು ಪಕ್ಷಕ್ಜೆ ಸೇರ್ಪಡೆಯಾದ ಕಾರ್ಯಕರ್ತರಿಗೆ ಬೇರೆ ಪಕ್ಷ ಮುಖಂಡರು ಬೇದರಿಕೆ ಹಾಕುವ ಬಗ್ಗೆ ಮಾಹಿತಿ ಇದೆ. ಅದಕ್ಕೆ ಯಾರೂ ಎದರುವುದು ಬೇಡ. ನಿಮ್ಮ ಬೆಂಬಲಕ್ಕೆ‌ ನಾವು ಇದ್ದೇವೆ. ಇಂದು ಪಕ್ಷಕ್ಕೆ ನೂರಾರು ಕಾರ್ಯಕರ್ತರು, ಮುಖಂಡರೊಂದಿಗೆ challakere ಸೇರ್ಪಡೆಯಾದ ಮಾಜಿ ಶಾಸಕ ಜಿ.ಬಸವರಾಜಮಂಡಿಮಠರವರಿಂದ ಮತಷ್ಟು ಭೀಮಬಲ ಬಂದಿದೆ. ಇಂದಿನಿಂದ ಪಕ್ಷದ ಸಂಘಟನೆಯಲ್ಲಿ ಎಲ್ಲರೂ ಅವರ ಮಾರ್ಗದರ್ಶನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಪಕ್ಷವನ್ನು ಬಲಪಡಿಸಬೇಕು ಎಂದು ಹೇಳಿದರು.JDS
ಅಭ್ಯರ್ಥಿ ಎಂ.ರವಿಶ್ ಕುಮಾರ ಮಾತನಾಡಿ, ಕಳೆದ ಚುನಾವಣೆಯಲ್ಲಿ ನಾನು ಕಡಿಮೆ ಅಂತರದಲ್ಲಿ ಪರಾಭವಗೊಂಡೆ ಈ ಭಾರಿಯ ಮಾಜಿ ಶಾಸಕ ಬೆಂಬಲದಿಂದ ಜಯಸಾಧಿಸುವ ವಿಶ್ವಾಸ ವ್ಯಕ್ತವಾಗಿದೆ. ಹಲವಾರು ಜನಪ್ರಿಯ ಕಾರ್ಯಗಳ ಮೂಲಕ ಜನರ ವಿಶ್ವಾಸ ಗಳಿಸಿರುವೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಜನರು 2023ರ ಚುನಾವಣೆಯಲ್ಲಿ ನನಗೆ ಬಹುಮತಗಳಿಂದ ಜನಶೀಲರನ್ನಾಗಿ ಮಾಡುವ ವಿಶ್ವಾದವಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಜನರ ಆಡಳಿತ, ಪಕ್ಷದ ಸಿದ್ದಾಂತಗಳು ಮೆಚ್ಚಿ ವಿವಿಧ ಪಕ್ಷದ ನೂರಾರು ಕಾರ್ಯಕರ್ತರು ನಮ್ಮ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಜೆಡಿಎಸ್ ಪಕ್ಷದ ಬಡವರ ಪಕ್ಷ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ಆಗಬೇಕಿದೆ ಅವುಗಳನ್ನು ಪೂರೈಸುವ ದೃಷ್ಠಿಯಿಂದ ನಾನು ಈ ಭಾರಿಯ ಚುನಾವಣೆಯಲ್ಲಿ ಜಯಿಸುವಂತೆ ಆಶೀರ್ವದಿಸಿ ಎಂದರು.
ವಿವಿಧ ಪಕ್ಷಗಳಿಂದ ಜಯಣ್ಣ, ಭೂತಲಿಂಗಪ್ಪ, ರಾಮಣ್ಣ, ಚಂದ್ರಪ್ಪ, ಶಾಂತಣ್ಣ, ಗುರುಸಿದ್ದಪ್ಪ, ಜಯಣ್ಣ, ನಾಗಣ್ಣ, ತಿಪ್ಪೇಸ್ವಾಮಿ, ಗುರುಸ್ವಾಮಿ, ಆನಂದ, ಶ್ರೀಧರ, ರಾಜಪ್ಪ, ಗುರಪ್ಪ, ಸೂರಪ್ಪ, ಪ್ರದೀಪ್, ಚನ್ನಪ್ಪ, ಶ್ರೀನಪ್ಪ, ಜಯಣ್ಣ, ಶ್ರೀನಿವಾಸ್ ಸೇರಿದಂತೆ ಹಲವಾರು ಮುಖಂಡರು ಸೇರ್ಪಡೆಯಾದರು.
ಈ ಕಾರ್ಯಕ್ರಮದಲ್ಲಿ ಕರ್ಯಾಧ್ಯಕ್ಷ ಆನಂದಪ್ಪ, ನಗರಸಭಾ ಸದಸ್ಯರಾದ ಸಿ..ಶ್ರೀನಿವಾಸ, ಕೆ.ಸಿ.ನಾಗರಾಜು, ನಾಗಮಣಿ, ನಿರ್ಮಲ, ಕವಿತಾನಾಯಕಿ, ವಿಶುಕುಮಾರ್, ಪ್ರಮೋದ್ ಮುಖಂಡರಾದ ಮಂಜುನಾಥ, ಶ್ರೀಧರಚಾರ್, ಶ್ರೀನಿವಾಸ್, ರಮೇಶ್, ಚಂದ್ರಯ್ಯ ಮೊದಲಾದವರು ಇದ್ದರು.

[t4b-ticker]

You May Also Like

More From Author

+ There are no comments

Add yours