ಮಂಗಳೂರು, ಡಿ. 9: ಮಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ ಮೇಕ್ ಎ ಚೇಂಜ್ ಫೌಂಡೇಶನ್ ಪ್ರಯುಕ್ತ ‘ನಶೆ ಮುಕ್ತ ಮಂಗಳೂರು’ ಅಭಿಯಾನವನ್ನು ಡಿಸೆಂಬರ್ 27 ರಂದು 102 ಕಾರ್ಯಕ್ರಮಗಳ ಸಹಿತ ಬೃಹತ್ ಮಟ್ಟದಲ್ಲಿ ಆಯೋಜಿಸಲು ಉದ್ದೇಶಿಸಿದೆ.
ಈ ಕಾರ್ಯಕ್ರಮವು ಯುವಕರಲ್ಲಿ ಮಾದಕದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸೃಜನಾತ್ಮಕ ಸಮಾಜವನ್ನು ಕಟ್ಟುವ ಉದ್ದೇಶವನ್ನು ಹೊಂದಿದ್ದು ಅಭಿಯಾನದ ಉದ್ಘಾಟನೆಯು ಡಿಸೆಂಬರ್ 27 ರಂದು ಟಿ.ಎಂ.ಎ.ಪೈ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್, ಮಂಗಳೂರಲ್ಲಿ ನಡೆಯಲಿದೆ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಎಲ್ಲಾ ಯುವಕರು, ಮುಖ್ಯವಾಗಿ ವಿದ್ಯಾರ್ಥಿಗಳು ಭಾಗವಹಿಸಲು ಆಹ್ವಾನಿಸಲಾಗಿದೆ. ತಾವು ಈ ಪ್ರಕಟಣೆಯನ್ನು ವರದಿ ಮಾಡಬೇಕಾಗಿ ವಿನಂತಿಸುತ್ತೇವೆ. ಹಾಗೂ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಕಾರ್ಯಕ್ರಮದ 3 ದಿನ ಮುಂಚಿತವಾಗಿ ಸುದ್ದಿಗೋಷ್ಠಿ ನಡೆಸಲು ತೀರ್ಮಾನಿಸಿದ್ದು ಅದಕ್ಕೂ ತಮ್ಮನ್ನು ಆಹ್ವಾನಿಸುತ್ತಿದ್ದೇವೆ.ಸುದ್ದಿಗೋಷ್ಠಿಯಲ್ಲಿ ಮಂಗಳೂರು ಯೂನಿವರ್ಸಿಟಿ ಕೊಣಾಜೆಯ ವಾಯ್ಸ್ ಆಫ್ ಸ್ಟೂಡೆಂಟ್ ಅಧ್ಯಕ್ಷರಾದ ಅಭಿಶೇಕ್ ವಾಲ್ಮಿಕಿ, ಕೆಪಿಸಿಸಿ ದ.ಕ ಪ್ರಧಾನ ಕಾರ್ಯದರ್ಶಿ ವಿಕಾಸ್ ಶೆಟ್ಟಿ, ಬಾರ್ನ್ ಅಗೇನ್ ರಿಕವರಿ ಸೆಂಟರ್ನ ಸಹ ಸ್ಥಾಪಕರಾದ ಬೀನಾ ಸಲ್ಡಾನ, ಮೇಕ್ ಎ ಚೇಂಜ್ ಫೌಂಡೇಶನ್ ನ ಫೌಂಡರ್ ಮತ್ತು ಚೇರ್ಮೇನ್ ಸುಹೈಲ್ ಕಂದಕ್, ಮಂಗಳೂರು ಎಸಿಪಿ ರವೀಶ ನಾಯ್ಕ್, ಕ್ಯಾಥೊಲಿಕ್ ಸಭಾ ಮಂಗಳೂರು ಪ್ರದೇಶದ ಅಧ್ಯಕ್ಷರಾದ ಆಲ್ವಿನ್ ಡಿಸೋಜ, ಮೇಕ್ ಎ ಚೇಂಜ್ ಫೌಂಡೇಶನ್ ನ ಅಧ್ಯಕ್ಷರಾ ಅಬ್ದುಲ್ ಅಝೀಝ್ ತಂಝೀಲ್ ಅವರು ಉಪಸ್ಥಿತರಿದ್ದರು.






