ಹಿರಿಯೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಡಾ.ಕರಿಯಪ್ಪ ಮಾಳಿಗೆ ಆಯ್ಕೆ

 

 

 

ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲೂಕಿನ ಚಿಕ್ಕೀರಣ್ಣನ ಮಾಳಿಗೆಯವರಾದ ಡಾ. ಕರಿಯಪ್ಪ ಮಾಳಿಗೆ ಅವರು ಪ್ರಸ್ತುತ ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ.ಕರಿಯಪ್ಪ ಮಾಳಿಗೆ ಅವರು ಸಂಶೋಧಕರಾಗಿ, ಉತ್ತಮ ವಾಗ್ಮಿಗಳಾಗಿ, ಸಾಹಿತಿಗಳಾಗಿ, ಸಂಘಟಕರಾಗಿ ಹೆಸರು ಪಡೆದಿದ್ದಾರೆ.
ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಆಸಕ್ತಿವಹಿಸಿರುವ ಮಾಳಿಗೆಯವರು ಅಳಿವಿನ ಅಂಚಿನಲ್ಲಿರುವ ಸಾಹಿತ್ಯ ಮತ್ತು ಸಂಸ್ಕೃತಿಗಳ ಚಿಂತನೆಯಲ್ಲಿ ತೊಡಗಿಸಿಕೊಂಡು ಹಲವಾರು ಮಹತ್ವದ ಕೃತಿಗಳನ್ನು ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಗ್ರಾಮ ಚರಿತ್ರೆ ಕೋಶ ( ಎರಡು ಸಂಪುಟ) ಚಿತ್ರದುರ್ಗ ಜಿಲ್ಲೆಯ ತತ್ವಪದಗಳು(ಎರಡು ಸಂಪುಟ) ದಲಿತ ಪದವೀಧರರ ಸಮಸ್ಯೆಗಳು. ಬಳ್ಳಾರಿ ಜಿಲ್ಲೆಯ ಅವಧೂತರು. ಅವಧೂತ ಪರಂಪರೆ. ಬಯಲು ಸೀಮೆ ಅವಧೂತರು. ವಚನಕಾರ ಮೋಳಿಗೆ ಮಾರಯ್ಯ. ಬಹುಮುಖಿ. ಸಾಹಿತ್ಯ ಸಂವೇದನೆ. ಮೊದಲಾದ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಜಾನಪದ ಮತ್ತು ಬುಡಕಟ್ಟು ಅಧ್ಯಯನ ನೆಲೆಯಲ್ಲಿ ಹಲವಾರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಸಂಶೋಧನಾ ಮಾರ್ಗದರ್ಶಕರಾಗಿಯೂ ಕಾರ್ಯನ್ಮುಖರಾಗಿದ್ದಾರೆ.

[t4b-ticker]

You May Also Like

More From Author

+ There are no comments

Add yours