ಡಿಜಿ ಪೇ ಸಖಿಗಳಿಗೆ ಡಿಜಿ ಪೇ ಬಯೋಮೆಟ್ರಿಕ್ ಡಿವೈಸ್ ವಿತರಿಸಿದ ಜಿ.ಪಂ ಸಿಇಒ

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ಡಿ.30:
ಜಿಲ್ಲಾ ಪಂಚಾಯಿತಿಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‍ಆರ್‍ಎಲ್‍ಎಂ)-ಸಂಜೀವಿನಿ ಯೋಜನೆಯಡಿ ಡಿಜಿ ಪೇ ಸಖಿಗಳಿಗೆ ಡಿಜಿ ಪೇ ಬಯೋಮೆಟ್ರಿಕ್ ಡಿವೈಸ್‍ಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ ವಿತರಿಸಿದರು.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ಶುಕ್ರವಾರ ಡಿಜಿ ಪೇ ಸಖಿಗಳಿಗೆ ಡಿಜಿ ಪೇ ಬಯೋಮೆಟ್ರಿಕ್ ಡಿವೈಸ್ ವಿತರಿಸಲಾಯಿತು.
ಈ ಯೋಜನೆಯಡಿ ಮಹಿಳಾ ಸ್ವ ಸಹಾಯ ಗುಂಪುಗಳನ್ನು ಸಂಘಟಿಸಿ, ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳನ್ನು ರಚಿಸಲಾಗಿರುತ್ತದೆ. ಈ ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಪ್ರದೇಶದ ಕುಟುಂಬಗಳ ಹಣಕಾಸಿನ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಒದಗಿಸಲು ಒಂದು ಜಿಪಿ ಒಂದು ಬಿಸಿ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 184 ಗ್ರಾಮ ಪಂಚಾಯತಿಯ ಬಿಸಿ/ಡಿಜಿ ಪೇ ಸಖಿಗಳಿಗೆ ತರಬೇತಿ ನೀಡಲಾಗಿರುತ್ತದೆ.
ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ, ಗ್ರಾಮೀಣ ಬಡ ಜನರು ಹಣಕಾಸಿನ ವ್ಯವಹಾರಕ್ಕಾಗಿ ಬ್ಯಾಂಕುಗಳಿಗೆ ಹೋಗಿ ಕಾಲ ವ್ಯರ್ಥ ಮಾಡದೇ ಮನೆಯ ಹತ್ತಿರವೇ ಡಿಜಿ ಪೇ ಸಖಿಗಳು ಹಣ ಪಡೆಯುವ ಕಾರ್ಯವನ್ನು ಡಿಜಿ ಪೇ ಸಖಿಗಳ ಮೂಲಕ ಮಾಡಲಾಗುತ್ತಿದ್ದು, ಇದರ ಸದುಪಯೋಗವನ್ನು ಪಡೆಯುವಂತೆ ಕರೆ ನೀಡಿದರು.
ಡಿಜಿ ಪೇ ಸಖಿಗಳು ಹೆಚ್ಚು ವ್ಯವಹಾರ ಮಾಡುವುದರ ಮೂಲಕ ಹೆಚ್ಚು-ಹೆಚ್ಚು ಕಮಿಷನ್ ಪಡೆಯುವುದು ಹಾಗೂ ಕನಿಷ್ಠ ತಿಂಗಳಿಗೆ 200 ವ್ಯವಹಾರಗಳನ್ನು ಕೈಗೊಂಡಲ್ಲಿ ಯೋಜನೆಯಿಂದ ಹೆಚ್ಚುವರಿಯಾಗಿ ರೂ. 2000/-ಗಳ ಗೌರವಧನ ನೀಡಲಾಗುವುದು ಎಂದು ತಿಳಿಸಿದರು.
ಡಿಜಿ ಪೇ ಮೂಲಕ ವೃದ್ದಾಪ್ಯ ವೇತನ, ವಿಕಲಚೇತನರ ವೇತನ, ಆಯ್ದಾ ಸರ್ಕಾರಿ ಪಿಂಚಣಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ, ನರೇಗಾ ಯೋಜನೆ ಭತ್ಯೆಗಳನ್ನು ಪಾವತಿಸುವುದು, ಕಾಮನ್ ಸರ್ವಿಸ್ ಸೆಂಟರ್ (ಸಿಎಸ್‍ಸಿ) ನೊಂದಣಿ ಮಾಡಿಸಿಕೊಂಡು ಅದರ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಹಲವಾರು ಸೇವೆಗಳನ್ನ ಒದಗಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೆ.ಎಸ್ ಮಹಾಂತೇಶಪ್ಪ, ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಸಿಎಸ್‍ಸಿ ವ್ಯವಸ್ಥಾಪಕರು, ಸಂಜೀವಿನಿ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours