ಇಂಗಳದಾಳ್ ಗ್ರಾಮದ ಅಭಿವೃದ್ದಿಗೆ 4 ಕೊಟಿ ಹಣ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

ಚಿತ್ರದುರ್ಗ: ಇಂಗಳದಾಳ್ ಗ್ರಾಮದ ಅಭಿವೃದ್ಧಿಗೆ ಸುಮಾರು ನಾಲ್ಕು ಕೋಟಿ ಹಣ ನೀಡಿದ್ದು ಚಿಕ್ಕ ಪುಟ್ಟ ರಸ್ತೆ ಕೆಲಸ  ಬಿಟ್ಟು ಉಳಿದಂತೆ ಯಾವುದೇ ಅಭಿವೃದ್ಧಿ ಕಾರ್ಯ ಬಾಕಿ ಇಲ್ಲ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

l

ತಾಲೂಕಿನ ಇಂಗಳದಾಳ್ ಗ್ರಾಮದಲ್ಲಿ ವಾಲ್ಮೀಕಿ ಭವನ ಮತ್ತು ಶೌಚಾಲಯ ಭೂಮಿ ಪೂಜೆ ಹಾಗೂ ನೂತನ  ಶ್ರೀ ಮಾರಿಕಾಂಭ  ಕಲಾ ಮತ್ತು ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಇಂಗಳದಾಳ್ ಗ್ರಾಮದಲ್ಲಿ  ವಾಲ್ಮೀಕಿ ಭವನ  ಇಲಾಖೆ ಅನುದಾನ 10 ಲಕ್ಷ ಮತ್ತು  ಶಾಸಕರ ಅನುದಾನದಲ್ಲಿ  60 ಲಕ್ಷ ಒಟ್ಟು 70 ಲಕ್ಷ ನೀಡಿದ್ದು ಸುಸಜ್ಜಿತ ಭವನವಾಗಲಿದೆ ಎಂದರು‌. ಅತಿ ಹೆಚ್ಚು‌ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಹಿಂದುಳಿದ ಜನಾಂಗ ಇರುವ ಈ ಭಾಗದ ಹಳ್ಳಿಯ ಜನರು ಮದುವೆ ಇತರೆ ಸಮಾರಂಭ ನಗರದಲ್ಲಿ  ಲಕ್ಷಾಂತರ ಹಣ ವ್ಯಯ ಮಾಡುತ್ತಾರೆ ಎಲ್ಲಾ ಹಳ್ಳಿಗಳಿಗೆ ಮಧ್ಯೆ ಇಂತಹ ದೊಡ್ಡ ಭವನ ನಿರ್ಮಾಣ ಆದರೆ ಎಲ್ಲಾರಿಗೂ ಅನುಕೂಲಾಗುತ್ತದೆ ಎಂದು ಹೆಚ್ಚಿನ ಹಣ ಕೊಟ್ಟಿದ್ದೇನೆ ಎಂದರು.
2 ಕೋಟಿ ವಚ್ಚದಲ್ಲಿ ಎರಡು ಚಕ್ ಡ್ಯಾಂ ನಿರ್ಮಣ ಮಾಡಿದ್ದು  ಎರಡಯ ಸಹ ಕೋಡಿ ಬಿದ್ದಿರುವುದು ಸಂತಸ ತಂದಿದೆ. ಒಂದು ಕೋಟಿ ವೆಚ್ಚದ ಚಕ್ ನೀಡಿದ್ದ ಟೆಂಡರ್ ಹಂತದಲ್ಲಿದ್ದು ಅದು ಪ್ರಾರಂಭವಾಗುತ್ತದೆ. ಊರಿನ ಮುಂಭಾಗ 40 ಲಕ್ಷ ವೆಚ್ಚದಲ್ಲಿ ವಿಶಾಲವಾದ ಸಿ.ಸಿ.ರಸ್ತೆ ಮಾಡಲಾಗಿದ್ದು ಗ್ರಾಮದಲ್ಲಿ ಎರಡ್ಮೂರು ರಸ್ತೆಗೆ 50 ಲಕ್ಷ ನೀಡಿದ್ದೇನೆ. ಇಂಗಳದಾಳ್ ಗ್ರಾಮ ಪಂಚಾಯತಿಗೆ 150 ಹೆಚ್ಚುವರಿ ಮನೆಗಳನ್ನು ನೀಡಿದ್ದು ಮನೆ ಅಗತ್ಯ ಇರುವವರು ಮನೆ ಕಟ್ಟಿಕೊಳ್ಳಬಹುದು ಇದಕ್ಕೆ ಗ್ರಾಮ ಸಭೆ ಮೂಲಕ ಆಯ್ಕೆ ಮಾಡಿಕೊಳ್ಳಿ ಯಾರಿಗೂ ಗ್ರಾಮ ಪಂಚಾಯತಿ ಸದಸ್ಯರಿಗೆ ಗೋಗರೆಯುವ ಅವಶ್ಯಕತೆ ಇಲ್ಲ ಎಂದು ಸೂಚಿಸಿದರು‌.
ಜಲ ಜೀವನ್ ಮಿಷನ್ ಯೋಜನೆಯಲ್ಲಿ ಮನೆ ಮನೆಗೆ ವಿ.ವಿ.ಸಾಗರದಿಂದ ಕುಡಿಯುವ ನೀರು ವ್ಯವಸ್ಥೆ ಸಹ ಮಾಡಲಾಗುತ್ತದೆ. ಫ್ಲೋರೈಡ್ ನೀರಿನಿಂದ ಆರೋಗ್ಯಗಳ ಹೆಚ್ಚು ಹಾನಿ ಎಂಬ ದೃಷ್ಟಿಯಿಂದ ನನ್ನ ಕ್ಷೇತ್ರದ 184 ಹಳ್ಳಿಗಳಿಗೆ ಮನೆಗಳಿಗೆ ನೇರವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಸರ್ಕಾರದ ಹಂತದಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆಯಲ್ಲಿ ಕುರುಮರಡಿಕೆರೆ ಸೇರಿರಲಿಲ್ಲ ಅದಕ್ಕೆ ಸಿಎಂ ಬಳಿ ಮಾತನಾಡಿ  ಕುರುಮರಡಿಕೆರೆ ಸೇರಿ ಒಟ್ಟು 10 ಕೆರೆ ಸೇರಿಸಲಾಗಿದ್ದು 2-3 ವರ್ಷದಲ್ಲಿ ಕೆರೆ ನೀರು ಸಹ ಬರುತ್ತದೆ. ಬೊರವೆಲ್ ಗಳಿಗೆ ಅಂತರ್ಜಲ ಹೆಚ್ಚಳಕ್ಕೆ ಸಹಕಾರಿ ಎಂದು ತಿಳಿಸಿದರು.
ಶ್ರೀ ಮಾರಿಕಾಂಭ ಕಲಾ ಮತ್ತು ಸಾಂಸ್ಕೃತಿಕ ಭಜನಾ ಸಂಘವನ್ನು ಸಂತೋಷದಿಂದ ಉದ್ಘಾಟಿಸಿದ್ದು  ಸಂಘದ ಸದಸ್ಯರು ನಮ್ಮ ದೇಶದ ಕಲೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಪುರಾತನ ಕಾಲದಿಂದ ಭಜಾನ ಕಾರ್ಯಕ್ರಮಗಳಿಗೆ  ಜನರ ಮನಸೋತಿದ್ದು ಮುಂದಿನ ದಿನದಲ್ಲಿ ಸರ್ಕಾರದ ಸೌಲಭ್ಯಗಳನ್ನು ಅವರಿಗೆ ಕೊಡಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಭಜನಾ ಸಂಘದ ಅಧ್ಯಕ್ಷ ಕೆಂಚಪ್ಪ, ಮಾರಿಕಾಂಭ ಸಮಿತಿ ಅಧ್ಯಕ್ಷ ಪಿ.ಕೆ.ರಾಮಣ್ಣ, ಮುಖಂಡರಾದ ಜಿ.ತಿಪ್ಪೇಸ್ವಾಮಿ,ಜಿ.ಟಿ.ಓಬಣ್ಣ, ಬಿ.ಅಶೋಕ್, ಆರ್.ಹೆಚ್.ಉಮೇಶ್, ಎಸ್. ಮಂಜುನಾಥ್, ಜಿ.ಟಿ.ನಾಗರಾಜ್, ಕೆ.ಟಿ.ಗಾದ್ರಪ್ಪ, ಪಿ.ಓ.ತಿಮ್ಮಯ್ಯ, ಹನುಮಣ್ಣ, ಮಹಂತೇಶ್ ತಳವಾರ್, ರಾಮಣ್ಣ,ಜಿ.ಟಿ. ಮಹಂತೇಶ್, ಎಲ್.ತಿಪ್ಪಯ್ಯ, ಪಾಲಯ್ಯ, ಓಬಳೇಶ್ ಇದ್ದರು.
[t4b-ticker]

You May Also Like

More From Author

+ There are no comments

Add yours