ಗಂಡನಿಂದ ದೂರವಿದ್ದ ಮಹಿಳೆಯನ್ನು ಪ್ರೀತಿ ಹೆಸರಲ್ಲಿ ನಂಬಿಸಿ, ಲೈಂಗಿಕ ಸಂಪರ್ಕ ಬೆಳೆಸಿದ ಆರೋಪಿ ಆಕೆ ಗರ್ಭಿಣಿಯಾದಾಗ ಊಟದಲ್ಲಿ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ ಆರೋಪ ಕೇಳಿಬಂದಿದೆ. ಜಾತಿ ನಿಂದನೆ, ಹಲ್ಲೆ ಕೂಡ ನಡೆಸಿ ಮನೆಯಿಂದ ಹೊರಹಾಕಿದ್ದ ಈತ ಬಳಿಕ ಆಕೆಯನ್ನು ನಂಬಿಸಿ ಕರೆದೊಯ್ದು ಹೇಯ ಕೃತ್ಯ ನಡೆಸಿದ್ದಾನೆ ಎಂದು ದೂರು ದಾಖಲಾಗಿದೆ.