ಶಾಸಕ ಟಿ.ರಘುಮೂರ್ತಿ ಸಮ್ಮುಖದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಬೊಗಳರಹಟ್ಟಿ ಜಯ್ಯಣ್ಣ

 

 

 

ಚಿತ್ರದುರ್ಗ: ತಾಲೂಕಿನ ಬೊಗಳರಹಟ್ಟಿ ಗ್ರಾಮದಲ್ಲಿ ಶಾಸಕ ಟಿ.ರಘುಮೂರ್ತಿ ಅವರ ಸಮ್ಮುಖದಲ್ಲಿ ಜಯ್ಯಣ್ಣ ಮತ್ತು ಬೆಂಬಲಿಗರು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ ಅವರು ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ನೂರಕ್ಕೆ ನೂರು ಗ್ಯಾರೆಂಟಿ ಇದೆ. ಇಲ್ಲಿನ ಸ್ಥಳೀಯ ನಿವೇಶನ ಮತ್ತು ಇತರೆ ಸಮಸ್ಯೆಯನ್ನು ಜಯ್ಯಣ್ಣ ಸೇರಿ ಇತರರು ನನ್ನ ಗಮನಕ್ಕೆ ತಂದಿದ್ದಾರೆ. ಇದನ್ನು ಚುನಾವಣೆ ನಂತರ ಚರ್ಚಿಸಿ ವ್ಯವಸ್ಥೆ ಮಾಡಲಾಗುತ್ತದೆ‌. ಜಯ್ಯಣ್ಣ, ಅಶೋಕ್, ಸುರೇಶ್,ಹನುಂತರಾಯ್ , ಶ್ರೀನಿವಾಸ್, ಪ್ರದೀಪ್ ಉಮೇಶ್ ಸೇರಿ ಅನೇಕರು ಇಂದು ಕಾಂಗ್ರೆಸ್ ಸೇರಿದ್ದಾರೆ.ಇವರು ಮೂಲ ಕಾಂಗ್ರೆಸ್ ಪಕ್ಷದವರು ಅವರು ಮರಳಿ ಮನೆ ಸೇರಿದ್ದು ನಮಗೆ ಶಕ್ತಿ ಬಂದಿದ್ದು ಸಂತಸ ತಂದಿದೆ ಎಂದರು.

ಎಲ್ಲಾರೂ ಸಹ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಮತ ನೀಡುವ ಮೂಲಕ ಅತ್ಯಧಿಕ ಮತಗಳಿಂದ ಗೆಲ್ಲಿಸಲು ಪಣ ತೊಡಬೇಕು. ನಮ್ಮ ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಸಾಮಾನ್ಯ ಜನರು ಬೇಸತ್ತಿದ್ದಾರೆ. ಅನುದಾನ ವಿಚಾರದಲ್ಲಿ ತಾರತಮ್ಯ ಮಾಡಿದ್ದಾರೆ. ಮುಂದಿನ ದಿನದಲ್ಲಿ ನಮ್ಮ ಸರ್ಕಾರ ಬರಲು ಜ‌ನ ಬಯಸಿದ್ದಾರೆ. ಗ್ಯಾಸ್, ಪೆಟ್ರೋಲ್ ಡಿಸೇಲ್ ಬೆಲೆ , ಆಹಾರ ಪದಾರ್ಥಗಳ ಬೆಲೆ ಹೆಚ್ಚಿಸಿ ಜನರ ಬದುಕು ನಡೆಸುವುದು ಕಷ್ಟ ಎಂಬ ಹಂತಕ್ಕೆ ಬಿಜೆಪಿ ಸರ್ಕಾರ ತಂದು ನಿಲ್ಲಿಸಿದ್ದು ಈ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ‌.

ಚಳ್ಳಕೆರೆ ಕ್ಷೇತ್ರದ ಬೊಗಳರಹಟ್ಟಿ ನನ್ನ ಸ್ವಂತ ಊರು ಇದ್ದಂತೆ. ಸಣ್ಣ ಪುಟ್ಟ ವ್ಯತ್ಯಾಸ ಇದ್ದವು.ಅದನ್ನು ಮರೆತು ಒಂದಾಗಿ ನನಗೆ ಬೆಂಬಲಿಸುವ ಅಭಯ ನೀಡಿದ್ದಾರೆ‌. ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವ ಸಾಧ್ಯವಿದೆ. ಕ್ಷೇತ್ರದಲ್ಲಿ ಎಲ್ಲಾರೂ ನನ್ನ ಪ್ರೀತಿಯಿಂದ ಕಾಣುತ್ತಾರೆ ಪ್ರತಿಯೊಂದು ಹಳ್ಳಿಯಲ್ಲಿ ಸಹ ಅಭೂತ ಪೂರ್ವ ಬೆಂಬಲ ಜನರು ನೀಡುತ್ತಿದ್ದು ಅವರು ಪ್ರೀತಿ ಅಭಿಮಾನಕ್ಕೆ ನಾನು ಮನಸೋತಿದ್ದೇನೆ. ನಾನು ಈ ಮತ್ತಷ್ಟು ಶಾಶ್ವತ ಯೋಜನೆಗಳ ಮೂಲಕ ಚಳ್ಳಕೆರೆ ಅಭಿವೃದ್ಧಿ ನನ್ನ ಮೂಲಮಂತ್ರ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಜಿ‌.ಪಂ.ಸದ್ಯಸ್ಯ ಬಾಬುರೆಡ್ಡಿ,ಗ್ರಾ.ಪಂ.ಸದಸ್ಯರಾದ ಭರತ್,ಮಲ್ಲೇಶ್, ಮುಖಂಡರಾದ ರೆಡ್ಡಿ ಗೌಡ, ದಾಸಪ್ಪ, ಗಟ್ಟಿ ಓಬಣ್ಣ, ವೆಂಕಟೇಶ್, ಹನುಮಂತಜ್ಜ, ದುರ್ಗಪ್ಪ ಮತ್ತು ಅನೇಕರು ಇದ್ದರು.

[t4b-ticker]

You May Also Like

More From Author

+ There are no comments

Add yours