ಮತಕೇಳುವ ನೈತಿಕತೆ ಬಿಜೆಪಿಗಿಲ್ಲ: ಮಾಜಿ ಸಚಿವ ಎಚ್.ಆಂಜನೇಯ

 

ಮಲ್ಲಾಡಿಹಳ್ಳಿ ಜಿಪಂ ವ್ಯಾಪ್ತಿಯ ಚೀರನಹಳ್ಳಿ, ಅರೇಹಳ್ಳಿ, ದಾಸರಹಳ್ಳಿಯಲ್ಲಿ ಬಿರುಸಿನ ಪ್ರಚಾರ.

ಹೊಳಲ್ಕೆರೆ;ಏ.೫
ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಬಡಜನರ ಬದುಕಿಗೆ ಬರೆ ಎಳೆದಿರುವ ಬಿಜೆಪಿ ಮತ ಕೇಳುವ ಹಕ್ಕು ಕಳೆದುಕೊಂಡಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು. (H. Anjaneya)

ಮಲ್ಲಾಡಿಹಳ್ಳಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಅರೇನಹಳ್ಳಿ, ದಾಸರಹಳ್ಳಿ, ಮೇಕೇನಹಟ್ಟಿ, ಚೀರನಹಳ್ಳಿ ಗ್ರಾಮಗಳಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಚಾರದಲ್ಲಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯಲ್ಲಿ ಅನೇಕ ಜನಪರ ಕಲ್ಯಾಣ(  H. Anjaneya) ಕಾರ್ಯಕ್ರಮಗಳನ್ನು ಜಾರಿಗೆ ತಂದು ಎಲ್ಲರ ಹಿತ ಕಾಯುವ ಕೆಲಸವಾಗುತ್ತಿತ್ತು. ಕಳೆದ ನಾಲ್ಕು ವರ್ಷಗಳ ಹಿಂದೆ ಶಾಸಕರನ್ನು ಖರೀದಿಸುವ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಬರೀ ಭ್ರಷ್ಟಚಾರದಲ್ಲಿ ಮುಳುಗಿ ಆಡಳಿತ ನಿರ್ವಹಿಸಿದ್ದೆ ದೊಡ್ಡ ಸಾಧನೆ ಎಂದು ಆರೋಪಿಸಿದರು.Holalkere

ದೇಶದ ಎಲ್ಲ ವರ್ಗದ ಜನರು ನೆಮ್ಮದಿಯಿಂದ( Holalkere) ಜೀವಿಸಬೇಕಾದರೆ ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ಮಾತ್ರ. ಬಡವರು, ನಿರ್ಗತಿಕರು, ಅಸಂಘಟಿತರು, ಅಸಹಾಯಕರು, ಮಹಿಳೆಯರು ಸೇರಿ ಎಲ್ಲ ವರ್ಗದವರು ಬಿಜೆಪಿ ದುರಾಡಳಿತದಿಂದ ತುಳಿತಕ್ಕೆ ಒಳಗಾಗಿದ್ದಾರೆ ಎಂದರು.(election)

ಈಗಾಗಲೇ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ವಿತರಣೆ ಅಭಿಯಾನದಿಂದ ಜನರಲ್ಲಿ ವಿಶ್ವಾಸಾರ್ಹ ಪ್ರತಿಕ್ರಿಯೆಗಳು ಹೊರಹೊಮ್ಮಿವೆ. ಗೃಹಿಣಿಯರಿಗೆ ಮಾಸಿಕ ೨೦೦೦ ನೀಡುವ ಮೂಲಕ ಶಕ್ತಿ ತುಂಬುವ ಕೆಲಸವಾಗಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅನೇಕ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿವೆ. ಆದರೆ, ಬಿಜೆಪಿಯ ಅವೈಜ್ಞಾನಿಕ ಯೋಜನೆಗಳು ಶಾಸಕರು ಹಾಗೂ ಬೆಂಬಲಿಗರ ಪಾಲಾಗುತ್ತಿದ್ದು, ಅರ್ಹರಿಗೆ ವಂಚನೆಯಾಗಿದೆ ಎಂದು ದೂರಿದರು.

ಬಿಜೆಪಿಯವರು ಸಂಪೂರ್ಣ ಭ್ರಷ್ಟಾಚಾರ ಮಾಡುವ ಮೂಲಕ ದೇಶವನ್ನು ಮಾರಾಟ ಮಾಡಲು ಸಜ್ಜಾಗಿದ್ದಾರೆ. ಬಿಜೆಪಿ ದುರಾಡಳಿತಕ್ಕೆ ಮುಂಬರುವ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕಿದೆ ಎಂದು ಮನವಿ ಮಾಡಿದರು.

ಜಿಪಂ ಮಾಜಿ ಉಪಾಧ್ಯಕ್ಷ ಗಂಗಾಧರ್, ಸದಸ್ಯ ಲೋಹಿತ್‌ಕುಮಾರ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಗ್ರಾಪಂ ಸದಸ್ಯರಾದ ಪ್ರಕಾಶ್, ಉಮೇಶ್, ಗಿರೀಶ್, ಮುಖಂಡರಾದ ಸತೀಶ್, ರಂಗಯ್ಯ, ಮಂಜಣ್ಣ,ಕೊಡಲಿ ಪ್ರಭಣ್ಣ ದೇವರಾಜ್, ರುದ್ರಪ್ಪ ಉಪಸ್ಥಿತರಿದ್ದರು.

ಇದನ್ನು ಓದಿ: ತೋಟದಲ್ಲಿ ಇಟ್ಟಿದ್ದ 163 ಲೀ. ಅಕ್ರಮ ಮದ್ಯ ವಶ

ಬಾಕ್ಸ್
ಕಣ್ಣೀರಿಟ್ಟ ಜನ

ಸೊಸೈಟಿಯಲ್ಲಿ ಸಿದ್ದರಾಮಯ್ಯ ಇದ್ದಾಗ ಕೊಡಿತ್ತಿದ್ದ ಅಕ್ಕಿ ಈಗ ಕಡಿಮೆ ಮಾಡಿದ್ದಾರೆ ಸ್ವಾಮಿ. ಸಿಲಿಂಡರ್ ಕೊಳ್ಳಂಗಿಲ್ಲ, ಅಡುಗೆ ಎಣ್ಣೆ ಬಳಸಂಗಿಲ್ಲ ಅಷ್ಟು ದುಬಾರಿ ಆಗೈತೆ. ನಮ್ಮ ಮಕ್ಕಳಿಗೆ ವಸತಿ ಶಾಲೆಗಳಲ್ಲಿ ಒಂದು ಸೀಟು ಸಹ ಕೊಡುತ್ತಿಲ್ಲ. ಬಡವರು, ಹಳ್ಳಿ ಜನರಾದ ನಾವು ಬದುಕೋದು ಹೇಗೆ ಸ್ವಾಮಿ ಎಂದು ಜನರು ಮಾಜಿ ಸಚಿವ ಎಚ್.ಆಂಜನೇಯ ಅವರ ಬಳಿ ಅಳಲು ತೋಡಿಕೊಂಡರು.
ಏನು ಹೆದರಬೇಡಿ, ನಿಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ನಿಮ್ಮ ಪರ ಯೋಜನೆ ರೂಪಿಸಲಾಗುವುದು. ಸಿಲಿಂಡರ್ ಬೆಲೆ ಕಡಿಮೆ ಮಾಡಲಾಗುವುದು. ಜೊತೆಗೆ ಪ್ರತಿ ಮನೆಗೆ ೨೦೦ ಯುನಿಟ್ ವಿದ್ಯುತ್, ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ, ಪ್ರತಿಯೊಬ್ಬರಿಗೂ ಹತ್ತು ಕೆ.ಜಿ.ಅಕ್ಕಿ ನೀಡಲಾಗುವುದು. ಧೈರ್ಯದಿಂದ ರ‍್ರೀ ಎಂದು ಆಂಜನೇಯ ಜನರಲ್ಲಿ ಆತ್ಮವಿಶ್ವಾಸ ತುಂಬಿದರು.

ಬಾಕ್ಸ್
ಬಿರು ಬಿಸಿಲು ಲೆಕ್ಕಕ್ಕೆ ಇಲ್ಲ

ಬೇಸಿಗೆಯ ತತ್ತರಿಸುವಂತಹ ರಣಬಿಸಿಲಿನ ಬೇಗೆಯಲ್ಲಿಯೂ ಬಳಲದೆ, ಉತ್ಸಾಹದಿಂದ ಚುನಾವಣಾ ಪ್ರಚಾರ ಕಾರ್ಯದಲ್ಲಿ ನೊಂದವರ ಸಮಸ್ಯೆಗಳನ್ನು ಆಲಿಸುತ್ತಾ ಕೆಲವೇ ದಿನಗಳಲ್ಲಿ ನೊಂದವರ ಸಂಕಷ್ಟಗಳು ದೂರವಾಗಲಿವೆ ಎಂದು ಎಲ್ಲರಲ್ಲಿ ಭರವಸೆ ತುಂಬುತ್ತಾ ಮತಯಾಚನೆ ಮಾಡಿ, ಈ ಬಾರಿ ತಾವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.

[t4b-ticker]

You May Also Like

More From Author

+ There are no comments

Add yours