ಮೊಳಕಾಲ್ಮುರು ಕ್ಷೇತ್ರದಲ್ಲಿ ಬಿಜೆಪಿಗೆ ಬಿಗ್ ಶಾಕ್, ಕಾಂಗ್ರೆಸ್ ಗೆ ಪ್ರಬಲ ಅಭ್ಯರ್ಥಿ ಎಂಟ್ರಿ ಸಾಧ್ಯತೆ?

 

ವಿಶೇಷ ವರದಿ: ದರ್ಶನ್ ಇಂಗಳದಾಳ್ 

ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು  ಕ್ಷೇತ್ರ ಒಂದಲ್ಲ ಒಂದು ಸುದ್ದಿಯಲ್ಲಿರುತ್ತದೆ. ರಾಜಕೀಯಕ್ಕೆ ಕೊರತೆ ಇಲ್ಲ. ಸಚಿವ ಶ್ರೀರಾಮುಲು ಹಾಲಿ ಶಾಸಕರಾಗಿದ್ದು ಈಗಾಗಲೇ ಮತ್ತೆ ಮೊಳಕಾಲ್ಮುರು ಕ್ಷೇತ್ರದಲ್ಲಿ ಸ್ವರ್ಧೆ ಇಲ್ಲ ಎಂದು ಹೇಳಿದ್ದಾಋ. ಅದಕ್ಕಾಗಿ ಮೊಳಕಾಲ್ಮುರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿ ಆಗಿದ್ದ ಮಾಜಿ ಶಾಸಕ ನೇರ್ಲಗುಂಟೆ ತಿಪ್ಪೇಸ್ವಾಮಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ಈಗ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆ ಎಂಬ ಮಾತು ಜಿಲ್ಲಾ ರಾಜಕಾರಣದಲ್ಲಿ ಕೇಳುತ್ತಿತ್ತು.

ಯೋಗೇಶ್ ಬಾಬುಗೆ ಟಿಕೆಟ್  ಆಗಬಹುದು ಎಂಬ ಮಾತುಗಳ ನಡುವೆ  ಶತಯಗಾತಯ ಅಧಿಕಾರ ಹಿಡಿಯಬೇಕು ಎಂಬ ಪಣ ತೊಟ್ಟಿರುವ ಕಾಂಗ್ರೆಸ್ ಮೊಳಕಾಲ್ಮುರು ಬಿಜೆಪಿಗೆ ಟಾಂಗ್ ನೀಡಲು ಬಿಜೆಪಿ  ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರನ್ನು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಕರೆ ತರುವ ಮೂಲಕ ಬಿಜೆಪಿ ಪಕ್ಷಕ್ಕೆ ದೊಡ್ಡ ಹೊಡೆತ ನೋಡಲು ಸಜ್ಜಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಎನ್.ವೈ. ಫ್ಯಾಮಿಲಿಗೆ ಮೊಳಕಾಲ್ಮುರು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಸಾಕಷ್ಟು ಹಿಡಿತ ಹೊಂದಿದ್ದಾರೆ. ಕಳೆದ ಬಾರಿ ಶ್ರೀರಾಮುಲು ದೊಡ್ಡ ಮಟ್ಟದಲ್ಲಿ ಲೀಡ್ ಬರಲು ಎನ್.ವೈ. ಗೋಪಾಲಕೃಷ್ಣ ಅವರ ಪಾತ್ರ  ಸಹ ದೊಡ್ಡದಿದೆ. ರಾಜಕೀಯ ಮೇಲಾಟದಲ್ಲಿ ಎನ್.ವೈ.ಜಿ ಮತ್ತೆ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವ ಮೂಲಕ   ಮೊಳಕಾಲ್ಮುರು  ಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆ ಸಹ ಕಾಂಗ್ರೆಸ್ ನೀಡಿದೆ ಎಂಬ ಮಾತು ಜಿಲ್ಲೆಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ. ಮೊಳಕಾಲ್ಮುರು ಕ್ಷೇತ್ರದಲ್ಲಿ ಎನ್.ವೈ.ಗೋಪಾಲಕೃಷ್ಣ ಅವರು ಈಗಲು ಸಹ ಹಿಡಿದ ಬಿಟ್ಟಿಲ್ಲ. ಅಭಿಮಾನಿಗಳು‌ಸಹ ಕಾಯುತ್ತಿದ್ದಾರೆ. ತಿಪ್ಪೇಸ್ವಾಮಿ ಸೇರ್ಪಡೆಯಿಂದ ಗೆಲುವು ಸಾಧಿಸಿದ್ದೇವೆ ಎಂಬ ಆತ್ಮ ವಿಶ್ವಾಸದಲ್ಲಿ ಇದ್ದ ಬಿಜೆಪಿಗೆ ಶಾಕ್ ಗ್ಯಾರೆಂಟಿ ಇದೆ. ಏಕೆಂದರೆ ಮೊಳಕಾಲ್ಮುರು ಹೇಳಿ ಕೇಳಿ ಕಾಂಗ್ರೆಸ್ ಭದ್ರಕೋಟೆ ಸಹ ಆಗಿದೆ. ಈಗಾಗಿ ಮತ್ತೆ ಜಿದ್ದಾಜಿದ್ದಿನ ಕಣವಾಗುವ ಎಲ್ಲಾ ಲಕ್ಷಣಗಳು ಇದ್ದು  ಸ್ವಲ್ಪ ದಿನಗಳಲ್ಲಿ ಯಾವ ಬೆಳವಣಿಗೆಗಳು ನಡೆಯಲಿವೆ ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಗೋಪಾಲಕೃಷ್ಣ  ಸೇರುತ್ತಾರೆ ಎಂಬದು ಎಂಬುದರ ಆಧಾರದ ಮೇಲೆ ಎಲ್ಲಾವೂ ನಿರ್ಧಾರವಾಗಲಿದೆ.

[t4b-ticker]

You May Also Like

More From Author

+ There are no comments

Add yours