ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಎಚ್. ಡಿ. ರೇವಣ್ಣ ಗೆ ರಿಲೀಫ್ ಸಿಕ್ಕಿದೆ. ಎಚ್. ಡಿ. ರೇವಣ್ಣ ವಿರುದ್ಧದ ಐಪಿಸಿ ಸೆಕ್ಷನ್ 354A ಅಡಿಯ ಪ್ರಕರಣವನ್ನು ಕೋರ್ಟ್ ಕೈ ಬಿಟ್ಟಿದೆ. ವಿಳಂಬವಾಗಿ ಕೇಸ್ ದಾಖಲಿಸಿದ ಕಾರಣಕ್ಕೆ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಐಪಿಸಿ ಸೆಕ್ಷನ್ 354ಎ ಅಡಿಯ ಆರೋಪದ ಕೇಸ್ ಪರಿಗಣನೆಗೆ ಬೆಂಗಳೂರಿನ 42ನೇ ಎಸಿಜೆಎಂ ಜಡ್ಜ್ ಕೆ.ಎನ್.ಶಿವಕುಮಾರ್ ನಿರಾಕರಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಹೆಚ್.ಡಿ.ರೇವಣ್ಣ ವಿರುದ್ಧದ ಎರಡು ಸೆಕ್ಷನ್ಗಳಲ್ಲಿ ಹೈಕೋರ್ಟ್, ಸೆಕ್ಷನ್ 354 ರದ್ದುಪಡಿಸಿತ್ತು. ಇದೀಗ ಮತ್ತೊಂದು ಸೆಕ್ಷನ್ ಕೋರ್ಟ್ ಕೈಬಿಟ್ಟಿದ್ದು, ರೇವಣ್ಣಗೆ ರಿಲೀಫ್ ಸಿಕ್ಕಂತಾಗಿದೆ.






