ಆಗಸ್ಟ್ 28 ರಂದು ರಾಜ್ಯ ಮಟ್ಟದ ಭೋವಿ ಜನ ಜಾಗೃತಿ ಸಮಾವೇಶ

 

 

 

ಚಿತ್ರದುರ್ಗ:  ರಾಷ್ಟೀಯ  ಶ್ರೀ ಸಿದ್ದರಾಮೇಶ್ವರ ಓಡ್ ಯುವ ವೇದಿಕೆವತಿಯಿಂದ ಆ. ೨೮ ರಂದು ತುಮಕೂರಿನ ಅಮಾನಿಕೆರೆ ಗಾಜಿನ ಮನೆಯಲ್ಲಿ ರಾಜ್ಯ ಮಟ್ಟದ ಭೋವಿ ಜನ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟೀಯ ಉಪಾಧ್ಯಕ್ಷರಾದ ಹೆಚ್.ಭೀಮರಾಜ್ ತಿಳಿಸಿದರು.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕಲ್ಲು ಒಡೆಯುವ ಕಟ್ಟಡ ಕಟ್ಟುವ ಮಣ್ಣು ಅಗೆಯುವ ಶ್ರಮದ ಕಾಯಕ ಜೀವಿಗಳಾಗಿರುವ ಭೋವಿ ಜನಾಂಗದಲ್ಲಿ ಜನ ಜಾಗೃತಿಯನ್ನು ಮೂಡಿಸುವ ಸಲುವಾಗಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಬಂಡವಾಳ ಶಾಹಿಗಳ ವ್ಯವಸ್ಥೆಯಲ್ಲಿ ಈ ಹಿಂದೆ ಕಲ್ಲು ಗಣೀಗಾರಿಕೆಯನ್ನು ನಡೆಸುತ್ತಿದ್ದ ಭೂವಿ ಜನಾಂಗದವರು ಇಂದು ಕೂಲಿಯಾಳುಗಳಾಗಿ ಜೀವನ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೂಲಿಯಾಳಾಗಿರುವ ಒಡ್ಡರು ಗಣಿ ಮಾಲಿಕರನ್ನಾಗಿ ಮಾಡಬೇಕು, ರಾಜಕೀಯವಾಗಿ, ಶೈಕ್ಷಣಿಕವಾಗಿ ಅವರನ್ನು ಮೇಲ್ಮಟ್ಟಕ್ಕೆ ತೆಗೆದುಕೊಂಡು ಹೋಗುವ ಸಮಾವೇಶ ಇದಾಗಬೇಕಿದೆ ಎಂದರು.
ಸಮಾವೇಶದ ಸಾನಿಧ್ಯವನ್ನು ಚಿತ್ರದುರ್ಗ ಮತ್ತು ಬಾಗಲಕೋಟೆಯ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮಶ್ವರ ಶ್ರೀಗಳು ವಹಿಸಲಿದ್ದಾರೆ. ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡೆಯೂರಪ್ಪ, ಸಿದ್ದರಾಮಯ್ಯ, ಕಾಂಗ್ರೇಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವರಾದ ನಾರಾಯಣಸ್ವಾಮಿ, ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ತೋಟಗಾರಿಕೆ ಸಚಿವ ಮುನಿರತ್ನಂ, ಸಹಕಾರ ಸಚಿವ ಸೋಮಶೇಖರ್, ಶಿಕ್ಷಣ ಸಚಿವ ನಾಗೇಶ್, ಮುಖ್ಯಮಂತ್ರಿಗಳ ಪ್ರದಾನ ಕಾರ್ಯದರ್ಶೀಗಳಾದ ಮಂಜುನಾಥ್ ಪ್ರಸಾದ್, ಶಾಸಕರುಗಳಾದ ಅರವಿಂದ ಲಿಂಬಾವಳಿ, ಚಂದ್ರಪ್ಪ, ರಘು, ಅಖಂಡ ಶ್ರೀನಿವಾಸ್ ಮೂರ್ತಿ, ವೆಂಕಟರಮಣಪ್ಪ, ಗೂಳಿಹಟ್ಟಿ ಡಿ.ಶೇಖರ್, ಹುಲಿಗೇರಿ ಮಾಜಿ ಸಂಸದರಾದ ಜನಾರ್ಧನ ಸ್ವಾಮಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಈ ಸಮಾವೇಶಕ್ಕೆ ಚಿತ್ರದುರ್ಗದಿಂದ ಸುಮಾರು ೧೦ ಸಾವಿರ ಜನರು ಹೋಗಲಿದ್ದು, ಅಲ್ಲಿ ಸುಮಾರು ೩೦ ದಿಂದ ೪೦ ಸಾವಿರ ಜನತೆ ಭಾಗವಹಿಸುವ ನಿರೀಕ್ಷೆ ಇದೆ. ಇದೇ ಸಂದರ್ಭದಲ್ಲಿ ಮಂಜುನಾಥ್ ಪ್ರಸಾದ್ ರವರು ಸೇರಿದಂತೆ ಇತರೆ ೧೦ ಜನರಿಗೆ ವಿವಿಧ ರೀತಿಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು. ಸಮಾವೇಶದಲ್ಲಿ ಭಾಗವಹಿಸುವ ವಿವಿಧ ಚುನಾಯತ ಪ್ರತಿನಿಧಿಗಳಿಗೆ ಸನ್ಮಾನ ಮಾಡಲಾಗುವುದು. ಇದರಲ್ಲಿ ಪಕ್ಷಾತೀತವಾಗಿ ಸಮಾಜದ ಮುಖಂಡರು ಬಾಂಧವರು ಭಾಗವಹಿಸಲಿದ್ದಾರೆ ಎಂದು ಭೀಮರಾಜ್ ತಿಳಿಸಿದರು.
ಗೋಷ್ಟಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ.ನಾಗರಾಜ್ ಭೋವಿ ಚಿತ್ರದುರ್ಗ. ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಪಿ.ಭರತ್ ಸಮಾಜದ ಬಾಂಧವರಾದ ವೇಣುಗೋಪಾಲ್, ಹನುಮಂತಪ್ಪ, ಗಂಗಾಧರ್, ವಕೀಲರಾದ ರುದ್ದೇಶ್, ಪ್ರಕಾಶ್, ಮಾರುತಿ, ಚಂದ್ರಶೇಖರ್, ಧನಂಜಯ, ಪಾಳ್ಯದ ಮಾರುತಿ, ಮಹಾಂತೇಶ್, ದೇವರಾಜ್ ಸೇರಿದಂತರ ಇತರರು ಭಾಗವಹಿಸಿದ್ದರು.

[t4b-ticker]

You May Also Like

More From Author

+ There are no comments

Add yours