ಬಂಟ್ವಾಳ, ಮಾ. 19: ತಾಲೂಕಿನಾದ್ಯಂತ ಬೆಳಿಗ್ಗೆ 6 ಗಂಟೆಯಿಂದ ಆರಂಭವಾದ ಮಳೆ ಸುಮಾರು 7.30 ಗಂಟೆವರೆಗೂ ಮಳೆ ಸುರಿದಿದೆ. ಸೆಕೆಯಿಂದ ತಾಳಲಾರದೆ ಒದ್ದಾಡುತ್ತಿದ್ದ ಜನತೆಗೆ ಖುಷಿ ತಂದಿದೆ. ಯುಗಾದಿ ಹಬ್ಬಕ್ಕೆ ತಂಪೆರೆದಿದೆ.
ಆದರೆ ಅಡಿಕೆ ಕೃಷಿಕರಿಗೆ ತಲೆಬಿಸಿ ಉಂಟಾಗಿದ್ದು,ಅನೇಕ ರೈತರ ಒಣ ಅಡಿಕೆ ಮಳೆಗೆ ಒದ್ದೆಯಾದರೆ, ಇನ್ನು ಅಡಿಕೆಯ ಹಿಂಗಾರದಲ್ಲಿ ಮಳೆ ನೀರು ನಿಂತು ಫಸಲು ಹಾಳಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಭತ್ತದ ಕೃಷಿಕರಿಗೂ ಮಳೆ ಸೂಕ್ತವಲ್ಲ ಎಂದು ಹೇಳಿದ್ದು. ಮಳೆ ಒಂದಷ್ಟು ಮಂದಿಗೆ ತಂಪಾದರೆ ಕೃಷಿಕರಿಗಂತೂ ತೊಂದರೆಯಾಗಿದೆ.





