ನಾಗರಿಕರ  ಸುಗಮ ಜೀವನಕ್ಕಾಗಿ ಕಾನೂನಿನ ಅರಿವು ಅವಶ್ಯ: ನ್ಯಾ. ಗೀತಾ ಕೆ.ಬಿ

 

 

 

 

ತುಮಕೂರು.ಅ.೩೧:ಮನುಷ್ಯನ ಜೀವನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಕಾನೂನು ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಕಾನೂನುಗಳ ಅರಿವು ಹೊಂದಿರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಗೀತಾ ಕೆ.ಬಿ ಹೇಳಿದರು.

ಜಿಲ್ಲಾ ನ್ಯಾಯಾಂಗ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್, ಹಾಗೂ ಜಿಲ್ಲಾ ವಕೀಲರ ಸಂಘ ಇವರುಗಳ ಸಹಯೋಗದಲ್ಲಿ, ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ಇಂದು ಆಯೋಜಿಸಲಾಗಿದ್ದ ‘ಕಾನೂನು ಅರಿವಿನ ಮೂಲಕ ನಾಗರೀಕರ ಸಬಲೀಕರಣ ಅಭಿಯಾನ-೨೦೨೨’ ಅಂಗವಾಗಿ ‘ಕಾನೂನು ಅರಿವು ಜಾಥಾ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾವೆಲ್ಲರೂ ‘ಕಾನೂನು ಅರಿವಿನ ಮೂಲಕ ನಾಗರೀಕರ ಸಬಲೀಕರಣ ಅಭಿಯಾನ-೨೦೨೨’ ಅಂಗವಾಗಿ ‘ಕಾನೂನು ಅರಿವು ಜಾಥಾ’ ಕಾರ್ಯಕ್ರಮವನ್ನು ಅಕ್ಟೋಬರ್ ೩೧ರಿಂದ ನವೆಂಬರ್ ೧೩ರ ವರಗೆ ಹಮ್ಮಿಕೊಂಡಿದ್ದೆವೆ, ಪ್ರತಿಯೊಬ್ಬ ನಾಗರೀಕರಲ್ಲಿ  ಪ್ರತಿನಿತ್ಯದ ಚಟುವಟಿಕೆಗಳನ್ನು ನೆಮ್ಮದಿಯಾಗಿ ನಡೆಸಲು ಬೇಕಾಗುವಷ್ಟು ಕಾನೂನು ಅರಿವು ನೀಡುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ, ಪ್ರತಿ ಪ್ರಜೆಗೂ ಹುಟ್ಟಿನಿಂದ ಸಾಯುವವರೆಗೂ ಕಾನೂನಿನ ಅಗತ್ಯತೆ ಅವಶ್ಯಕವಿದೆ. ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಅರಿವು ಇರಬೇಕು, ಅಗತ್ಯ ಕಾನೂನುಗಳ ಅರಿವು ಹೊಂದಿದ ಮನುಷ್ಯ ಯಾವುದೇ ಅಡೆತಡೆಯಿಲ್ಲದೇ ನೆಮ್ಮದಿಯಿಂದ ಜೀವಿಸಬಹುದು, ಅದಕ್ಕಾಗಿ ಕಾನೂನು ಜಾಗೃತಿ ಪಡೆಯಬೇಕು ಎಂದು ಸಲಹೆ ನೀಡಿದರು. ‘ಕಾನೂನು ಅರಿವು ಜಾಥಾ’ ತೆರಳುವ ಪ್ರತಿ ಸ್ಥಳಗಳಲ್ಲಿನ ಕಾನೂನು ಅಗತ್ಯ ಇರುವ ಪ್ರತಿಯೊಬ್ಬರಿಗೂ ಅವಶ್ಯವಿರುವ ಕಾನೂನುಗಳ ಅರಿವು ನೀಡಿ ಸಮಸ್ಯೆಗಳ ಬಗೆಹರಿಸುವಂತೆ ಕರೆ ನೀಡಿದರು.

ಜಿಲ್ಲಾಧಿಕಾರಿ ವ್ಯೆ.ಎಸ್. ಪಾಟೀಲ ಮಾತನಾಡಿ,  ಕಾನೂನುಗಳ ಅರಿವು ಪ್ರತಿಯೊಬ್ಬ ಪ್ರಜೆಯಲ್ಲೂ ಇರಬೇಕು, ಇದಕ್ಕಾಗಿ  ಕಾನೂನು ಅರಿವು ಜಾಥಾ ಕಾರ್ಯ್ಯಕ್ರಮದ ಮೂಲಕ ‘ನಾಗರೀಕರ ಸಬಲೀಕರಣ ಅಭಿಯಾನ-೨೦೨೨’ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು,  ಗ್ರಾಮೀಣ ಭಾಗದ ಜನರಿಗೆ ಕಾನೂನುಗಳ ಅರಿವಿನ ಹೆಚ್ಚು ಅವಶ್ಯಕತೆ ಇದ್ದು, ಕಂದಾಯ ವ್ಯವಸ್ಥೆಗೆ ಸಂಬAಧಿಸಿದ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ತಿಲುವಳಿಕೆ ಇರಬೇಕು, ಮಹಿಳೆಯರಿಗಾಗಿ ಇರುವ  ವಿಶೇಷ ಕಾನೂನುಗಳ ಮಾಹಿತಿ ಪಡೆದಾಗ ಹಲ್ಲೆ, ಲೈಂಗಿಕ ಕಿರುಕುಳ ಸಮಸ್ಯೆಗಳನ್ನು ತಡೆಯಲು ಮತ್ತು ಅವುಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ, ಕಾನೂನಿನ ಮುಂದೆ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನತೆಯಿಂದ ಬಾಳಬಹುದು. ಕಾನೂನು ಅರಿವು ವುಂಟಾದಾಗ ಮಾತ್ರ ಅಪರಾಧಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತವೆ. ಈ ಮೂಲಕ ಸ್ವಾಸ್ಥö್ಯ ಸಮಾಜ ನಿರ್ಮಾಣವಾಗಿ, ದೇಶದ ಅಭಿವೃದ್ಧಿಗೆ ನಾಂದಿಯಾಗುತ್ತದೆ ಎಂದು ತಿಳಿಸಿದರು.

 

 

ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ ‘ಕಾನೂನು ಅರಿವಿನ ಮೂಲಕ ನಾಗರೀಕರ ಸಬಲೀಕರಣ ಅಭಿಯಾನ-೨೦೨೨’ ಅಂಗವಾಗಿ ಹಮ್ಮಿಕೊಂಡಿರುವ ‘ಕಾನೂನು ಅರಿವು ಜಾಥಾ’ ಈ ಕಾರ್ಯಕ್ರಮದ ಪೂರ್ಣ ಪ್ರಯೋಜನ ಸಾರ್ವಜನಿಕರಿಗೆ  ದೊರಕಲಿ ಎಂದು ಶುಭ ಹರ‍್ಯೆಸಿದರು.

ಕಾನೂನು ಅರಿವು ಜಾಥಾ: ನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರಣದಿಂದ ಹೊರಟ ಕಾನೂನು ಅರಿವು ಜಾಥಾಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಗೀತಾ ಕೆ.ಬಿ, ಜಿಲ್ಲಾಧಿಕಾರಿ ವ್ಯೆ.ಎಸ್. ಪಾಟೀಲ, ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹಾಗೂ ಇನ್ನಿತರರು ಹಸಿರು ನಿಶಾನೆ ತೋರಿಸಿದರು, ಕಾನೂನು ಅರಿವಿನ ಮೂಲಕ ನಾಗರೀಕರ ಸಬಲೀಕರಣ ಅಭಿಯಾನ-೨೦೨೨’ ಅಂಗವಾಗಿ ‘ಕಾನೂನು ಅರಿವು ಕುರಿತು ಕರಪತ್ರಗಳನ್ನು ಹಂಚಲಾಯಿತು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ. ನೂರುನ್ನೀಸ, ಕಾನೂನು ಅರಿವು ಜಾಥಾದೊಂದಿಗೆ ಜಿಲ್ಲೆಯ ಹಲವಡೆ ಸಂಚರಿಸಿ ಜನರಲ್ಲಿ ಕಾನೂನು ಕುರಿತು ಅರಿವು ಮೂಡಿಸಿದರು.

ಎಲ್ಲಾ ಗೌರವಾನ್ವಿತ ನ್ಯಾಯಾಧೀಶರು, ವಕೀಲರ ಸಂಘದ ಪ್ರಧಾನ ಕಾರ್ಯಯದರ್ಶಿ ಹಿಮಾನಂದ ಡಿ.ಸಿ, ಉಪಾಧ್ಯಕ್ಷರಾದ ವೆಂಕಟೇಶ್ ಕೆ.ಸಿ, ಖಚಾಂಚಿ ಸುರೇಶ್, ಕಾರ್ಯದರ್ಶಿ ಎಲ್. ರಾಮಾಂಜಿನೇಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು, ಮತ್ತೀತರು  ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours