ನಾಳೆ ರಾಜಧಾನಿಯಲ್ಲಿ ಆಟೋ ಬಂದ್

 

ಬೆಂಗಳೂರು,ಮಾ.19-ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರ್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ನಿಷೇಧಿಸುವಂತೆ ಆಟೋ ಚಾಲಕರು ನಾಳೆ ಆಟೋ ಸಂಚಾರ ಬಂದ್ ಮಾಡಲಿದ್ದಾರೆ.

ರ್ಯಾಡೋಪಿ ಬೈಕ್ ಟ್ಯಾಕ್ಸಿ ನಿಷೇಧಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಯೋಜನೆಗೆ ಆಟೋ ಚಾಲಕರ ಬಂದ್ ಗೆ ಕರೆ ನೀಡಿದ್ದು ಇಂದು ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಮಧ್ಯರಾತ್ರಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಲಿದೆ.
ಬಂದ್ ನಲ್ಲಿ ೨೧ ಆಟೋ ಚಾಲಕರ ಸಂಘಟನೆಗಳು ಪಾಲ್ಗೊಳ್ಳಲಿವೆ ಆಟೋ ಸಂಚಾರವಿಲ್ಲದೆ ಜನ ಸಾಮಾನ್ಯರು ತೊಂದರೆ ಎದುರಿಸಬೇಕಾಗಲಿದೆ.

ರಾಜ್ಯದಲ್ಲಿ ಅನಧಿಕೃತ ಬೈಕ್ ಟ್ಯಾಕ್ಸಿ ನಿಷೇಧಿಸಿ, ರಾಜ್ಯ ಸರ್ಕಾರಕ್ಕೆ ಮೂರು ದಿನಗಳ ಗಡುವು ಮುಗಿದು ಬಂದ್ ನಡೆಸಿ ನಾಳೆ ಬೆಳಗ್ಗೆ 11ಗಂಟೆಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಆಟೋ ಚಾಲಕರು ನಿರ್ಧಾರ ಕೈಗೊಂಡಿದ್ದಾರೆ.

ಮೂರು ದಿನಗಳ ಕಾಲ ಆಟೋ ಚಾಲಕರು ಕಪ್ಪು ಪಟ್ಟಿ ಕಟ್ಟಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಸರ್ಕಾರ ಮಾತ್ರ ಈ ಕುರಿತು ಮಾತಾಡಿಲ್ಲ. ಈ ಕಾರಣ ಬೆಂಗಳೂರಿನ ೨೧ಆಟೋ ಚಾಲಕರ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದೆ.
ಬಂದ್ ನಿಂದಾಗಿ ಸುಮಾರು 2 ಲಕ್ಷದ 10 ಸಾವಿರ ಆಟೋಗಳ ಸಂಚಾರ ನಾಳೆ ಬಂದ್ ಆಗುತ್ತೆ ಎಂದು ಸಂಸ್ಥೆ ಹೇಳುತ್ತಿದೆ.
ಸಾರಿಗೆ ಸಚಿವ ಶ್ರೀರಾಮುಲು ಚುನಾವಣೆಯೊಳಗೆ ಚಾಲಕರಿಗೆ ಸಿಹಿ ಸುದ್ದಿ ಕೊಡುತ್ತೇವೆ ಎಂಬ ಭರವಸೆ ನೀಡಿದ್ದು ಸುಳ್ಳಾಗಿದೆ.

[t4b-ticker]

You May Also Like

More From Author

+ There are no comments

Add yours