ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ಕಡೆ ದಲಿತ ಮೇಲೆ ದೌರ್ಜನ್ಯ:ಹನುಮಂತಪ್ಪ ದುರ್ಗ

 

ಚಿತ್ರದುರ್ಗ : ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ. ಸರ್ಕಾರ ಬರೀ ಸುಳ್ಳುಗಳನ್ನು ಹೇಳುತ್ತ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗುತ್ತಿರುವುದರಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ನಮ್ಮ ಬೆಂಬಲ ಎಂದು ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಹನುಮಂತಪ್ಪ ದುರ್ಗ ಹೇಳಿದರು.

ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಯಾವ ರಾಜ್ಯಗಳಲ್ಲಿ ಬಿಜೆಪಿ.ಸರ್ಕಾರ ಅಧಿಕಾರದಲ್ಲಿದೆಯೋ ಅಲ್ಲೆಲ್ಲಾ ದಲಿತರ ಮೇಲೆ ಶೋಷಣೆ ನಡೆಯುತ್ತಿದೆ. ಸಿ.ಪಿ.ಯೋಗೇಶ್ವರ್ ದಲಿತರಿಗೆ ಸರ್ಕಾರದಿಂದ ಅನುದಾನ ಕೊಡಬೇಡಿ. ಬಿಜೆಪಿ.ಗೆ ಅವರು ಓಟು ಹಾಕುವುದಿಲ್ಲ ಎಂದು ಹೇಳಿ ಅವಮಾನಿಸುತ್ತಿದ್ದಾರೆ. ಮಾರ್ಚ್ 26 ರಂದು ರಾಜ್ಯ ಸರ್ಕಾರ ಅವಸರದ ತೀರ್ಮಾನ ತೆಗೆದುಕೊಂಡು ಸದಾಶಿವ ಆಯೋಗದ ವರದಿ ಜಾರಿಗೊಳಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ರಾಜ್ಯಪಾಲರ ಅಂಕಿತ ಪಡೆದಿಲ್ಲ. ಕ್ಯಾಬಿನೆಟ್‍ನಲ್ಲಿ ಚರ್ಚಿಸಿ ಕೇಂದ್ರಕ್ಕೆ ರವಾನಿಸಿದೆ. ಪ್ರಧಾನಿ ಮೋದಿರವರು ಸರ್ಕಾರಿ ಸೌಮ್ಯದಲ್ಲಿರುವ ಸಂಸ್ಥೆಗಳನ್ನು ಖಾಸಗಿಕರಣಗೊಳಿಸಲು ಹೊರಟಿರುವುದು ಅತ್ಯಂತ ಖಂಡನೀಯ. ಶೇ. ಮೂರು ಪರ್ಸೆಂಟ್ ಇರುವ ಬ್ರಾಹ್ಮಣರಿಗೆ ಹತ್ತು ಪರ್ಸೆಂಟ್ ಮೀಸಲಾತಿಯನ್ನು ಕೇಂದ್ರ ಘೋಷಿಸಿದೆ. ಅದಕ್ಕೆ ನಮ್ಮದೇನು ತಕರಾರಿಲ್ಲ. ವೇದ ಉಪನಿಷತ್ತುಗಳನ್ನು ಜಾರಿಗೆ ತರಲು ಹೊರಟಿರುವುದರಿಂದ ದಲಿತರು ಜಾಗೃತರಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಮತ ಚಲಾಯಿಸುವಂತೆ ಮನವಿ ಮಾಡಿದರು.
ಹಿಂದಿನ ಸರ್ಕಾರ ಎಸ್ಸಿ.ಎಸ್ಟಿ.ಗಳಿಗೆ ಐದು ಲಕ್ಷ ರೂ.ಸಬ್ಸಿಡಿ ನೀಡುತ್ತಿತ್ತು. ಬಿಜೆಪಿ.ಸರ್ಕಾರ ಅದನ್ನು ಒಂದು ಲಕ್ಷ ರೂ.ಗೆ ಇಳಿಸಿತು. ಆಗ ಎಲ್ಲರೂ ಗಲಾಟೆ ಮಾಡಿದಾಗ ಎರಡು ಲಕ್ಷಕ್ಕೆ ಏರಿಸಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಜಾಸ್ತಿಯಾಗಿದೆ. ವಿಧವಾ ವೇತನ, ವೃದ್ದಾಪ್ಯ ವೇತನ ನಿಂತಿದೆ. ದಲಿತ ವಿರೋಧಿ ಬಿಜೆಪಿ.ಗೆ ತಕ್ಕ ಪಾಠ ಕಲಿಸಬೇಕಾಗಿರುವುದರಿಂದ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಕೆ.ಸಿ.ವೀರೇಂದ್ರಪಪ್ಪಿಗೆ ಮಾದಿಗ ಮಹಾಸಭಾ ಬೆಂಬಲಿಸಲಿದೆ ಎಂದು ಹನುಮಂತಪ್ಪ ದುರ್ಗ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಮಾತನಾಡುತ್ತ ಬಿಜೆಪಿ.ಸರ್ಕಾರ ಶೋಷಿತರು, ಧಮನಿತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ. ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಎಸ್ಸಿ.ಎಸ್ಟಿ.ಗಳಿಗೆ ಅನುಕೂಲವಾಗುವ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ಒಳ ಮೀಸಲಾತಿ ಜಾರಿಗೆ ತರುವ ಮೂಲಕ ಬಿಜೆಪಿ. ದಲಿತರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ. ಅಂಬೇಡ್ಕರ್ ಎಲ್ಲರಿಗೂ ಸಮಾನತೆ ನೀಡಿದ್ದಾರೆ. ಆದರೆ ಬಿಜೆಪಿ. ಸರ್ಕಾರ ಸಂವಿಧಾನದ ಆಶಯಕ್ಕೆ ವಿರುದ್ದವಾಗಿದೆ. ಕೆ.ಸಿ.ವೀರೇಂದ್ರಪಪ್ಪಿಗೆ ಬೆಂಬಲಿಸುವುದಾಗಿ ನೀವುಗಳು ತೆಗೆದುಕೊಂಡಿರುವ ತೀರ್ಮಾನ ಸರಿಯಾಗಿದೆ. ನಮ್ಮ ಸರ್ಕಾರ ರಾಜ್ಯದಲ್ಲಿ ಈ ಬಾರಿ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿ ಘೋಷಿರುವ ಐದು ಭರವಸೆಗಳನ್ನು ಈಡೇರಿಸಲಿದೆ ಎಂದರು.
ದೇವರಾಜ್, ನ್ಯಾಯವಾದಿ ಎಸ್.ಕೆ.ಸುರೇಶ್, ಟಿ.ಶಿವಮೂರ್ತಿ, ರಾಮಚಂದ್ರಪ್ಪ, ಓ.ಸೋಮಪ್ಪ, ಬಾಲು, ಮುನಿ, ಬಿ.ಆರ್.ಸತೀಶ್, ಕೆ.ರಂಗಪ್ಪ, ಟಿ.ಶೇಖರಪ್ಪ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours