ಕೊಕ್ರಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಗುರುವಾಯನಕೆರೆ ನಾರಾವಿ ವಲಯ ಕೊಕ್ರಾಡಿ/ಸಾವ್ಯ ಕಾರ್ಯಕ್ಷೇತ್ರದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೊಕ್ರಾಡಿ ಹಾಗೂ ಅತ್ರಿಜಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಸಹಯೋಗದೊಂದಿಗೆ ಶ್ರದ್ಧಾ ಕೇಂದ್ರ ಶುಚಿತ್ವ ಕಾರ್ಯಕ್ರಮದಡಿ ಅತ್ರಿಜಾಲು ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನದ ಒಳಾಂಗಣ ಮತ್ತು ಹೊರಾಂಗಣ ಆವರಣದ ಸ್ವಚ್ಚತಾ ಕರಸೇವೆ ನಡೆಯಿತು. ೪೮ ಮಂದಿ ಭಕ್ತಾಧಿಗಳು ಭಾಗವಹಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ವಾರಿಜಾ, ದೇವಸ್ಥಾನದ ಪ್ರಧಾನ ಅರ್ಚಕರು ಬಾಲಚಂದ್ರ ಭಟ್, ಆಡಳಿತ ಮೊಕ್ತೇಸರಾದ ಅಖಿಲ್ ಕುಮಾರ್, ಸೇವಾ ಪ್ರತಿನಿಧಿ ಶಶಿಧರ ಕೆ. ಕುಲಾಲ್ ಹಾಗೂ ಒಕ್ಕೂಟದ ಮಾಜಿ ಅಧ್ಯಕ್ಷರು/ಪದಾಧಿಕಾರಿಗಳು /ಸದಸ್ಯರು ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯೆಯರು ಉಪಸ್ಥಿತರಿದ್ದರು.






