ಕಾಶಿಪಟ್ಣ: ಇಲ್ಲಿಯ ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರಾಜ್ಯ ಸರಕಾರದ ಮುಜರಾಯಿ ಇಲಾಖೆಯ ಅನುದಾನದಿಂದ ನಿರ್ಮಾಣಗೊಂಡ ರಾಜಗೋಪುರದ ಉದ್ಘಾಟನೆ ಹಾಗೂ ನೂತನವಾಗಿ ನಿರ್ಮಾಣ ಗೊಳ್ಳಲಿರುವ ಸಭಾ ಭವನ ಹಾಗೂ ಅನ್ನ ಛತ್ರದ ಶಿಲಾನ್ಯಾಸ ಸಮಾರಂಭ ಜ. 21ರಂದು ನಡೆಯಲಿದ್ದು, ಅದರ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಊರ ಪ್ರಮುಖರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಶಿಲಾನ್ಯಾಸ ಸಮಾರಂಭದಲ್ಲಿ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದರು, ಬೆಳ್ತಂಗಡಿ ಶಾಸಕರು ಹಾಗೂ ಹಲವು ಗಣ್ಯರು ಭಾಗವಹಿಸಲಿದ್ದಾರೆ.






