ಚಿಪ್ಪು ಹಂದಿ ಭೇಟೆಯಾಡಿ ಚಿಪ್ಪು ಮಾರಟ ಮಾಡುವವರ ಇಬ್ಬರ ಬಂಧನ

 

 

 

ಚಿತ್ರದುರ್ಗ: ಚಿಪ್ಪು ಹಂದಿಯನ್ನು ಭೇಟೆಯಾಡಿ ಚಿಪ್ಪುಗಳನ್ನು ಹೊರ ರಾಜ್ಯಕ್ಕೆ ಸಾಗಿಸುತ್ತಿದ್ದ ಕಳ್ಳರನ್ನು ಬಂಧಿಸುವಲ್ಲಿ  ಚಿತ್ರದುರ್ಗ ವಲಯ ಅರಣ್ಯ ಅಧಿಕಾರಿ ಸಂದೀಪ್ ನಾಯಕ  ತಂಡ ಯಶಸ್ವಿಯಾಗಿದೆ.

ಚಿಪ್ಪು ಹಂದಿ ಭೇಟಿಯಾಡಿ ಚಿಪ್ಪುಗಳನ್ನು ಹೆಚ್ಚಿನ ಬೆಲೆಗೆ ಹೊರ ರಾಜ್ಯಗಳಿಗೆ ಸಾಗಣಿಕೆ ಮಾಡುತ್ತಿರುವ ಕುರಿತು ಬಹು ದಿನಗಳಿಂದ ಬಲೆ ಬೀಸಿದ್ದ ಬಲೆಗೆ ಕಳ್ಳರು  ಬಿದ್ದಿದ್ದಾರೆ. ಚಿಪ್ಪು ಮಾರಲು ಯತ್ನ ನಡೆಸಿದ   ರಾಮಪ್ಪ  ಬಿನ್ ದುಗ್ಗಪ್ಪ (64), ಯೋಗೇಶ್ ಬಿನ್ ಹನುಮಂತಪ್ಪ( 35 ) ಇಬ್ಬರ ಬಂಧಿತರು ಚಿತ್ರದುರ್ಗ ತಾಲೂಕಿನ ದೊಡ್ಡಪುರ ಗ್ರಾಮದವರಾಗಿದ್ದಾರೆ. ಬಂಧಿತರಿಂದ 1.5 kg ಚಿಪ್ಪು, ಎರಡು ಮೊಬೈಲ್, ಒಂದು ಬೈಕ್ ವಶಪಡಿಸಿಕೊಂಡು  ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇವರನ್ನು ಬುರುಜಿನರೊಪ್ಪ ಬಳಿಯ ಗಣೇಶ ದೇವಸ್ಥಾನ ಬಳಿ ಆರೋಪಿಗಳನ್ನು ಅರಣ್ಯ ಇಲಾಖೆ ವಶಪಡಿಕೊಂಡಿತ್ತು. ಇವರ ಬಂಧಿಸುವಲ್ಲಿ  ಚಿತ್ರದುರ್ಗ ಜಿಲ್ಲೆಯ ಗೌರವ ವನ್ಯಜೀವಿ ಪರಿಪಾಲಕ ರಘುರಾಮ್, ಉಪ ವಲಯ ಅರಣ್ಯಧಿಕಾರಿಗಳಾ್ ನವೀನ್ ಪಿ. ಹಿರೇಗೌಡರ್, ಜೆ.ರವಿ, ದಾದಾಪೀರ್ ಅರಣ್ಯ ರಕ್ಷಕರಾದ ಅಂಜಿನಪ್ಪ, ವೆಂಕಟೇಶ್ ತಂಡ ಅಳಿವಿನಂಚಿನಲ್ಲಿರುವ ಪ್ರಾಣಿಗಳ ರಕ್ಷಣೆ ಮತ್ತು ಆರೋಪಿಗಳ ಬಂಧಿಸಿದ  ಈ ತಂಡಕ್ಕೆ ಇಲಾಖೆ ಸಂತಸ  ಅಭಿನಂದನೆ ಸಲ್ಲಿಸಿದೆ.

 

[t4b-ticker]

You May Also Like

More From Author

+ There are no comments

Add yours