ಕುಂಜತ್ತಬೈಲು: ಕುಲಾಲರ ಕರ್ಮರನ್ ಗೋತ್ರದ ನಾಗಮೂಲ ದೈವಾಧಿಗಳ ಕುಟೀರದಲ್ಲಿ ನಾಗದೇವರ ವರ್ಷಾವಧಿ ಪೂಜೆ ಹಾಗೂ ಪರಿವಾರ ದೈವಗಳ ಕಾವಾವಧಿ ಪರ್ವಸೇವೆಯು ಮಾ. 26ರಂದು ನಡೆಯಲಿದೆ ಎಂದು ಕುಲಾಲರ ಕರ್ಮರನ್ ಗೋತ್ರದ ನಾಗಮೂಲ ದೈವಾಧಿಗಳ ಆಡಳಿತ ಟ್ರಸ್ಟ್ ತಿಳಿಸಿದೆ.
ಅಂದು ಬೆಳಿಗ್ಗೆ 7-30ಕ್ಕೆ ಗಣಹೋಮ, ೯ ಗಂಟೆಗೆ ನಾಗದೇವರಿಗೆ ಪೂಜೆ, 10-30ರಿಂದ ವೆಂಕಟರಮಣ ದೇವರ ಮುಡಿ ಕಟ್ಟುವುದು, ಪೂರ್ವಾಹ್ನ 11-30ಕ್ಕೆ ನಾಗಮೂಲ ದೈವಗಳ ಪರ್ವ ಸೇವೆ ಮತ್ತು ಸಂಜೆ 4-30 ರಿಂದ ಕುಟುಂಬ ದೈವಗಳಿಗೆ ಪರ್ವ ಸೇವೆ ನಡೆಯಲಿದೆ. ಅನ್ನದಾನಕ್ಕೆ ಸಹಕಾರ ನೀಡುವವರು ಹೆಸರನ್ನು ನೋಂದಾಯಿಸಬಹುದು. ಕುಟುಂಬಸ್ಥರು ಹೆಚ್ಚಿನ ಮಾಹಿತಿಗೆ 9341608047, 9141063608 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.





