ಸಿನಿಮಾ: ಕಾಂತಾರ’ ಆರ್ಭಟಕ್ಕೆ ಹಳೇ ದಾಖಲೆಗಳೆಲ್ಲಾ ಧೂಳಿಪಟವಾಗ್ತಿದೆ. ಹೊಸ ಹೊಸ ದಾಖಲೆಗಳು ನಿರ್ಮಾಣವಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಯಾವುದೇ ಸಿನಿಮಾ ಬರೆಯದ ದಾಖಲೆಯನ್ನು ‘ಕಾಂತಾರ’ ಸಿನಿಮಾ ಮಾಡ್ತಿರೋದು ವಿಶೇಷ. ಇನ್ನು ಯಶ್ ನಟನೆಯ ‘KGF- 2’ ಹಾಗೂ ರಾಜಮೌಳಿ ನಿರ್ದೇಶನದ ‘RRR’ ಸಿನಿಮಾಗಳನ್ನು ಹಿಂದಿಕ್ಕಿ ‘ಕಾಂತಾರ’ ಸದ್ದು ಮಾಡ್ತಿದೆ.
ಸಿಲ್ವರ್ ಸ್ಕ್ರೀನ್ ಮೇಲೆ ನಿಜಕ್ಕೂ ‘ಕಾಂತಾರ’ ಸಿನಿಮಾ ಮ್ಯಾಜಿಕ್ ಮಾಡಿದೆ. ಸಿನಿಮಾ ನೋಡಿದ ಕೆಲವರು ಭಕ್ತಿ ಪರವಶರಾಗುತ್ತಿದ್ದಾರೆ, ಕೆಲವರು ಥಿಯೇಟರ್‌ನಲ್ಲೇ ಕೈ ಜೋಡಿಸಿ ಮುಗಿಯುತ್ತಿದ್ದಾರೆ. ಪರಭಾಷಿಕರು ಕೂಡ ಸಿನಿಮಾ ನೋಡಿ ಭಾವಪರಶರಾಗಿ ರೋಮಾಂಚನಗೊಳ್ಳುತ್ತಿದ್ದಾರೆ. ಇನ್ನು ಕಲೆಕ್ಷನ್ ವಿಚಾರಕ್ಕೆ ಬಂದರೆ ಸಿನಿಮಾ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ರಿಷಬ್ ಶೆಟ್ಟಿ ಪ್ರಯತ್ನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ ‘KGF- 2’ ಚಿತ್ರಕ್ಕೆ ಹೋಲಿಸಿದರೆ ‘ಕಾಂತಾರ’ ಚಿತ್ರ ಸಿನಿಮಾ ಇರಬಹುದು. ಆದರೆ ಇಂಪ್ಯಾಕ್ಟ್ ವಿಚಾರಕ್ಕೆ ಬಂದರೆ ‘KGF’ ರೀತಿಯಲ್ಲೇ ‘ಕಾಂತಾರ’ ಸದ್ದು ಮಾಡ್ತಿದೆ. ಕೆಲ ವಿಚಾರಗಳಲ್ಲಿ ‘ಕಾಂತಾರ’ ಒಂದು ಕೈ ಮೇಲೆ ಎನ್ನುವಂತಿದೆ. ಆ ಮೂಲಕ ನಾನ್ ‘KGF’ ದಾಖಲೆಗಳು ರಿಷಬ್ ಶೆಟ್ಟಿ ಸಿನಿಮಾ ಪಾಲಾಗ್ತಿದೆ.
ಹೌದು ಕೆಲವೆಡೆ ‘ಕಾಂತಾರ’ ಸಿನಿಮಾ ‘KGF- 2’ ದಾಖಲೆ ಅಳಿಸಿ ಮುನ್ನುಗ್ಗುತ್ತಿದೆ. ಚಿತ್ರಕ್ಕೆ ವಿದೇಶಗಳಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ದೂರದ ಆಸ್ಟ್ರೇಲಿಯಾದಲ್ಲಿ ಸಿನಿಮಾ 75 ಲಕ್ಷ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದೆ. ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ ಎನ್ನುವ ದಾಖಲೆ ‘KGF- 2’ ಹೆಸರಿನಲ್ಲಿತ್ತು. ‘ಕಾಂತಾರ’ ಸಿನಿಮಾ ಬಿಡುಗಡೆಯಾದ 16 ದಿನಕ್ಕೆ ಆ ದಾಖಲೆ ಧೂಳಿಪಟ ಆಗಿದೆ.
IMDbಯಲ್ಲಿ ‘KGF- 2’ ಮೀರಿಸಿದ ‘ಕಾಂತಾರ’
ಇನ್ನು IMDb ರೇಟಿಂಗ್‌ನಲ್ಲಿ ಕೂಡ ಭಾರತೀಯ ಚಿತ್ರರಂಗದಲ್ಲಿ ಮತ್ಯಾವುದೇ ಸಿನಿಮಾಗಳು ಮಾಡದ ದಾಖಲೆ ‘ಕಾಂತಾರ’ ಸಿನಿಮಾ ಹೆಸರಿನಲ್ಲಿ ದಾಖಲಾಗುತ್ತಿದೆ. ರಿಷಬ್ ಶೆಟ್ಟಿ ಚಿತ್ರ 9.5 ರೇಟಿಂಗ್ ಪಡೆದು ಮೊದಲ ಸ್ಥಾನದಲ್ಲಿದೆ. ‘KGF- 2’ ಚಿತ್ರಕ್ಕೆ 8.4 ಹಾಗೂ ರಾಜಮೌಳಿ ನಿರ್ದೇಶನದ ‘RRR’ ಚಿತ್ರಕ್ಕೆ 8 ರೇಟಿಂಗ್ ಸಿಕ್ಕಿತ್ತು. ಅದನ್ನೆಲ್ಲಾ ಮೀರಿಸಿ ‘ಕಾಂತಾರ’ ಸಿನಿಮಾ ಕಿಚ್ಚು ಹಚ್ಚಿದೆ. ‘KGF- 2’ ಸಿನಿಮಾ ಕೂಡ ಕೆಲವರು ಇಷ್ಟವಾಗಲಿಲ್ಲ ಎಂದು ಹೇಳಿದ್ದರು. ಆದರೆ ‘ಕಾಂತಾರ’ ಚಿತ್ರದ ವಿಚಾರದಲ್ಲಿ ಯಾರೊಬ್ಬರು ಚೆನ್ನಾಗಿಲ್ಲ ಎನ್ನುವುದನ್ನು ಕೇಳುವುದಕ್ಕೆ ಸಾಧ್ಯವಾಗಲಿಲ್ಲ.
ಶನಿವಾರ 15 ಕೋಟಿ ಕಲೆಕ್ಷನ್
ಸೆಪ್ಟೆಂಬರ್ 30ರಂದು ‘ಕಾಂತಾರ’ ಸಿನಿಮಾ ಬಿಡುಗಡೆಯಾಗಿತ್ತು. ಮೊದಲಿಗೆ ಕನ್ನಡದಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ನಂತರ ಬೇರೆ ಭಾಷೆಗಳಿಗೆ ಡಬ್ ಆಗಿ ತೆರೆಗಪ್ಪಳಿಸಿತ್ತು. 4 ಭಾಷೆಗಳಲ್ಲಿ ಮೊದಲ ದಿನವೇ ಸಿನಿಮಾ 15 ಕೋಟಿ ರೂ. ಕಲೆಕ್ಷನ್ ಮಾಡಿ ಧೂಳೆಬ್ಬಿಸಿದೆ. ಅಂದರೆ ಸಿನಿಮಾ ರಿಲೀಸ್ ಆದ 16ನೇ ದಿನ (ಅಕ್ಟೋಬರ್ 15) ಬರೋಬ್ಬರಿ 15 ಕೋಟಿ ರೂ. ಗಳಿಸಿ ಎಲ್ಲರ ಹುಬ್ಬೇರಿಸಿದೆ.
ಹಿಂದಿ ಬೆಲ್ಟ್‌ನಲ್ಲೂ ‘ಕಾಂತಾರ’ ಹವಾ
ಬಾಲಿವುಡ್ ಅಂಗಳದಲ್ಲೂ ‘ಕಾಂತಾರ’ ಕ್ರೇಜ್ ಜೋರಾಗಿದೆ. ಪ್ರೇಕ್ಷಕರು ನಿಧಾನವಾಗಿ ಸಿನಿಮಾ ನೋಡಲು ಮುಗಿಬೀಳುತ್ತಿದ್ದಾರೆ. ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ಹಾಗೂ ಭಾನುವಾರ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದೆ. ಅದೇ ರೀತಿ ಕಲೆಕ್ಷನ್‌ನಲ್ಲೂ ಏರಿಕೆ ಕಂಡಿದೆ. ನಟಿ ಶಿಲ್ಪಾ ಶೆಟ್ಟಿ ಕೂಡ ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಇತ್ತ ‘ಕಾಂತಾರ’ ತೆಲುಗು ವರ್ಷನ್ ಕೂಡ ಹೌಸ್‌ಫುಲ್ ಆಗ್ತಿದೆ. ಶೀಘ್ರದಲ್ಲೇ ಮಲಯಾಳಂ ವರ್ಷನ್ ಕೂಡ ತೆರೆಗಪ್ಪಳಿಸಲಿದೆ.
[t4b-ticker]
+ There are no comments
Add yours