ಮಕ್ಕಳೇ ತಯಾರಿಸಿದ ತಿಂಡಿ ತಿನಸುಗಳಿಗೆ ಫಿದಾ ಆದಾ ಪೋಷಕರು!
ಅಳದಂಗಡಿ: ಇಲ್ಲಿನ ಸೈಂಟ್ ಪೀಟರ್ ಕ್ಲೇವರ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರಪ್ರಥಮ ಬಾರಿಗೆ ಆಹಾರ ಮೇಳವನ್ನು ಆಯೋಜಿಸಲಾಗಿತ್ತು.
ಆಹಾರಮೇಳದ ಉದ್ಘಾಟನೆಯನ್ನು ಅಳದಂಗಡಿ ಆಮಂತ್ರಣ ಸೇವಾ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿಜಯ ಕುಮಾರ್ ಜೈನ್ ನೆರವೇರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಚರ್ಚ್ ಪಾಲಾನ ಮಂಡಳಿ ಉಪಾಧ್ಯಕ್ಷರಾದ ಅಲ್ಪೋನ್ಸ್ ರೋಡ್ರಿಗಸ್, ಸೈಂಟ್ ಪೀಟರ್ ಕ್ಲೇವರ್ ಆಂಗ್ಲ ಮಾಧ್ಯಮ ಶಾಲೆಯ ಉಪಾಧ್ಯಕ್ಷ ಸ್ಟೀವನ್ ಮ್ಯಾಥ್ಯೂ ಪಾಯಿಸ್, ಶಾಲಾ ಮುಖ್ಯೋಪಾಧ್ಯಾಯಿನಿ ಮೋನಿಕಾ ಎನ್. ಡಿ ಸೋಜ ಉಪಸ್ಥಿತರಿದ್ದರು.
ಆಹಾರ ಮಳಿಗೆಯಲ್ಲಿ ಮಕ್ಕಳು ತಯಾರಿಸಿದ ಬೇರೆ ಬೇರೆ ತರಹದ ತಿಂಡಿ, ತಿನಸು, ಪಾನೀಯಗಳು, ತರಕಾರಿ, ಐಸ್ ಕ್ರೀಂ, ಪಾಪೂರಿ ಹಾಗೂ ಇತರ ಆಹಾರಗಳು ಗಮನ ಸೆಳೆಯಿತು. ಪ್ರತೀ ಕೌಂಟರ್ಗಳಿಗೆ ಬೇರೆ ಬೇರೆ ಹೆಸರುಗಳನ್ನಿಟ್ಟು ಕೌಂಟರ್ ಜವಾಬ್ದಾರಿ ಶಾಲಾ ಶಿಕ್ಷಕ ವೃಂದದವರಿಗೆ ನೀಡಲಾಗಿತ್ತು.
ಈ ಎಲ್ಲಾ ಕಾರ್ಯಕ್ರಮ ಧರ್ಮಗುರುಗಳಾದ ರೆ.ಫಾ. ಎಲ್ಯಾಸ್ ಪಾಯಿಸ್ ಇವರ ಮಾರ್ಗದರ್ಶನದಲ್ಲಿ ನಡೆಯಿತು.
ಕಾರ್ಯಕ್ರಮದ ಯಶಸ್ವಿಗೆ, ದೈಹಿಕ ಶಿಕ್ಷಣ ಶಿಕ್ಷಕರು, ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಮಕ್ಕಳ ಹೆತ್ತವರು ಸಹಕರಿಸಿದರು.





