ಪುತ್ತೂರು: ಇಲ್ಲಿನ ಖಾಸಗಿ ಸಹಕಾರಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಸುಳ್ಯದ ಯುವತಿ ಮೆದುಳಿನ ರಕ್ತ ಸ್ರಾವದಿಂದ ಮೃತಪಟ್ಟ ಘಟನೆ ನಡೆದಿದೆ. ಮೆದುಳು ನಿಷ್ಕ್ರಿಯಗೊಂಡಿದ್ದ ಹಿನ್ನೆಲೆಯಲ್ಲಿ ಆಕೆಯ ಅಂಗಾಂಗಗಳನ್ನು ದಾನ ಮಾಡಲು ಮನೆಯವರು ನಿರ್ಧರಿಸಿದ್ದ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಅಂಗಾಂಗಗಳನ್ನು ಮೈಸೂರು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಸುಳ್ಯದ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗದ ರೀತಿಯಲ್ಲಿ ಸುಳ್ಯದ ಆಂಬುಲೆನ್ಸ್ ಚಾಲಕ-ಮಾಲಕರ ಸಂಘದ ಸದಸ್ಯರು ಸಹಕಾರ ನೀಡಿ, ಝೀರೋ ಟ್ರಾಫಿಕ್ ಮೂಲಕ ಅಂಗಾಂಗ ಸಾಗಿಸಲಾಯಿತು.
ಪುತ್ತೂರು ಆದರ್ಶ ಸೊಸೈಟಿ ಉದ್ಯೋಗಿಯಾಗಿದ್ದ ಸುಳ್ಯದ ರಥಬೀದಿ ನಿವಾಸಿ ಮಮತಾ ಎಂಬವರ ಪುತ್ರಿ ಕು. ಸಿಂಧು (೨೨) ಮೃತಪಟ್ಟವರು.






