ಕಾಲೇಜು ಉಳಿಸಿಕೊಳ್ಳಲು ತುರುವನೂರು to ಬೆಂಗಳೂರು ಪಾದಯಾತ್ರೆ : ಶಾಸಕ ಟಿ‌.ರಘುಮೂರ್ತಿ

 

 

 

 

ರಾಜ್ಯ ಬಿಜೆಪಿ ಸರ್ಕಾರ ನನ್ನ ಕ್ಷೇತ್ರಕ್ಕೆ ಅನ್ಯಾಯ ಮಾಡಿದೆ

ಚಿತ್ರದುರ್ಗ : ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಬೆಳಗಾವಿ ಜಿಲ್ಲೆ ನಿಪ್ಪಾಣಿಗೆ ಸ್ಥಳಾಂತರಿಗೊಳಿಸಿ ರಾಜ್ಯ ಬಿಜೆಪಿ ಸರ್ಕಾರ ನನ್ನ ಕ್ಷೇತ್ರಕ್ಕೆ ಅನ್ಯಾಯ ಮಾಡಿರುವುದನ್ನು ಖಂಡಿಸಿ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಗಾಂಧಿ ಮಾರ್ಗದಲ್ಲಿ ಹೋರಾಡಬೇಕೆಂಬುದು ನನ್ನ ಉದ್ದೇಶವಾಗಿರುವುದರಿಂದ ತುರುವನೂರಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸೋಮವಾರದಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳುವುದಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕರು ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ನಿಪ್ಪಾಣಿಗೆ ಸ್ಥಳಾಂತರಿಸಿರುವ ಬಿಜೆಪಿ.ಸರ್ಕಾರದ ಕ್ರಮವನ್ನು ವಿರೋಧಿಸಿ ಒನಕೆ ಓಬವ್ವ ವೃತ್ತದಲ್ಲಿ ಮೂರು ದಿನಗಳ ಕಾಲ ನಡುರಸ್ತೆಯಲ್ಲಿಯೇ ಬೆಂಬಲಿಗರೊಂದಿಗೆ ಧರಣಿ ನಡೆಸಿದ್ದೇನೆ.

ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತುಕೊಳ್ಳಲು ಅವಕಾಶ ನೀಡಲಿಲ್ಲ. ಶಾಮಿಯಾನ ಕುರ್ಚಿ ಹಾಕಿ ಧರಣಿ ನಡೆಸಲು ಪೊಲೀಸರು ಅಡ್ಡಿಪಡಿಸಿದ್ದರಿಂದ ಅನಿವಾರ್ಯವಾಗಿ ರಸ್ತೆಯಲ್ಲಿ ಧರಣಿ ನಡೆಸಬೇಕಾಯಿತು. ಇದು ಯಾರ ವಿರುದ್ದವೂ ನನ್ನ ಹಠ, ಸವಾಲಲ್ಲ. ಕೊರೋನಾ ವೈರಸ್ ಇರುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಂಡು ಹೋರಾಟ ನಡೆಸಿದ್ದೇನೆ. ಕಾನೂನು ಸುವ್ಯವಸ್ಥೆಗೆ ಎಲ್ಲಿಯೂ ಧಕ್ಕೆ ತರಲಿಲ್ಲ. ನ್ಯಾಯ ಸಿಗುವತನಕ ಹೋರಾಡುತ್ತೇನೆ ಎಂದು ಹೇಳಿದರು.

ರಾಜ್ಯದಲ್ಲಿ 463 ಕಾಲೇಜುಗಳಿದ್ದು, ಇನ್ನೂರಕ್ಕೂ ಹೆಚ್ಚು ಮೇಲ್ಪಟ್ಟ ಕಾಲೇಜುಗಳಲ್ಲಿ 100 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ.2013-14 ರಲ್ಲಿ ತುರುವನೂರಿಗೆ ಮಂಜೂರು ಮಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಯಾವುದೇ ಮೂಲಭೂತ ಸೌಕರ್ಯ ನೀಡಲಿಲ್ಲ. ಇನ್ನು ಮೂರು ತಿಂಗಳಲ್ಲಿ ಕಟ್ಟಡ ಪೂರ್ಣಗೊಳ್ಳಲಿದೆ. ಸದ್ಯಕ್ಕೆ 55 ವಿದ್ಯಾರ್ಥಿಗಳಿದ್ದಾರೆ, ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಬಡ ಮಕ್ಕಳೆ ಇಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದು ತುರುವನೂರಿನಲ್ಲಿಯೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮುಂದುವರೆಸಬೇಕು. ಇಲ್ಲದಿದ್ದರೆ ರಾಜ್ಯಪಾಲರು, ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಕಾಲೇಜು ಉಳಿಸಿಕೊಳ್ಳುತ್ತೇನೆ. ಇಲ್ಲದಿದ್ದರೆ ನಾನು ಶಾಸಕನಾಗಿದ್ದುಕೊಂಡು ಏನು ಪ್ರಯೋಜನ ಎಂದರು.

ಬಿಜೆಪಿ.ಯ ಹದಿಮೂರು ಶಾಸಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೇಕೆಂದು ಕೇಳಿರುವುದರಿಂದ ತುರುವನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಸ್ಥಳಾಂತರಿಸಿರುವುದು ಸರಿಯಲ್ಲ. ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಿಗೂ ಇದನ್ನು ಮನವರಿಕೆ ಮಾಡಿದ್ದೇನೆ.

 

 

ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವರು ಹಾಗೂ ಸಂಬಂಧಪಟ್ಟ ಸಂಸದರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಕೆಲವು ಸಚಿವರ ಜೊತೆಯೂ ಮಾತುಕತೆ ನಡೆಸಿದ್ದೇನೆ.
ಒಂದು ಸೆಕ್ಷನ್‍ನಲ್ಲಿ ಹದಿನೈದು ವಿದ್ಯಾರ್ಥಿಗಳಿದ್ದಾರೆ. ಬೇರೆ ಕೋರ್ಸ್ ತೆರೆಯುವ ಉದ್ದೇಶವೂ ಇದೆ. ನನಗೆ ಅಧಿಕಾರ ಶಾಶ್ವತವಲ್ಲ. ಕ್ಷೇತ್ರದ ಅಭಿವೃದ್ದಿ ಮುಖ್ಯ.

ಚಳ್ಳಕೆರೆಗೆ ಹಿಂದಿನ ಕಾಂಗ್ರೆಸ್ ಸರ್ಕಾರ ಇಂಜಿನಿಯರಿಂಗ್ ಕಾಲೇಜನ್ನು ಮಂಜೂರು ಮಾಡಿದೆ. ಕುಡಿಯುವ ನೀರು ಕ್ಷೇತ್ರದ ಜನತೆಗೆ ಪೂರೈಸಿದ್ದೇನೆ. ತುರುವನೂರು ಮೂಲ ಸೌಲಭ್ಯವಿಲ್ಲದ ಬರಪೀಡಿತ ಪ್ರದೇಶ. ಇಂತಹ ಸಂದಿಗ್ದ ಸ್ಥಿತಿಯಲ್ಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಕಿತ್ತುಕೊಳ್ಳುವುದಾದರೆ ಇದೆಂಥ ನ್ಯಾಯ. ನಾನು ಯಾರ ವಿರುದ್ದವೂ ಹೋರಾಡುವುದಿಲ್ಲ. ತುರುವನೂರು ಭಾಗದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕಬೇಕೆಂಬುದು ನನ್ನ ಆಸೆ

ಬುದ್ದಿಜೀವಿಗಳು, ಚಿಂತಕರು, ಸ್ವಾಮೀಜಿಗಳು, ಪತ್ರಕರ್ತರು ನನ್ನ ಧರಣಿಗೆ ಬೆಂಬಲಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ನನ್ನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತುರುವನೂರಿನಲ್ಲಿಯೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಉಳಿಸಬೇಕೆಂದು ಮನವಿ ಮಾಡಿಕೊಂಡಿದ್ದೇನೆ. ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷದಿಂದ ನಾನು ಶಾಸಕನಾಗಿರುವುದು ಹೆಮ್ಮೆಯಾಗಿದೆ. ಪಕ್ಷ ಭೇದ ಮರೆತು ಬಿಜೆಪಿ.ಸರ್ಕಾರ ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಸ್ಥಳಾಂತರಿಸಬಾರದು.

ರಾಜಕೀಯದಲ್ಲಿ ನಾನು ಮುಂದುವರೆಯಬೇಕಾದರೆ ಕಾಲೇಜನ್ನು ಉಳಿಸಿಕೊಳ್ಳಬೇಕು, ಕಳೆದ ವರ್ಷ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿಯ ಕಾಲೇಜನ್ನು ಇದೇ ರೀತಿ ಸ್ಥಳಾಂತರಿಸಲಾಯಿತು. ಅದೆ ಮಾನದಂಡ ಇಲ್ಲಿಯೂ ಅನುಸರಿಸಿ ಸ್ಥಳಾಂತರಿಸಿದರೆ ನಾನು ಶಾಸಕನಾಗಿದ್ದುಕೊಂಡು ಏನು ಸಾರ್ಥಕ ಎಂದು ಖಾರವಾಗಿ ನುಡಿದರು.

ಆಡಳಿತ ಪಕ್ಷದವರಿಗೆ ಒಂದು ಕಾನೂನು, ವಿರೋಧ ಪಕ್ಷದವರಿಗೆ ಮತ್ತೊಂದು ಕಾನೂನುನಿದೆಯೇ? ಎಂದು ರಾಜ್ಯ ಬಿಜೆಪಿ.ಗೆ ಕುಟುಕಿದ ಶಾಸಕ ಟಿ.ರಘುಮೂರ್ತಿ ಧರಣಿ, ಪ್ರತಿಭಟನೆಯಲ್ಲಿ ಕಾನೂನು ಪರಿಪಾಲನೆ ಮಾಡುತ್ತೇನೆ. ಯಾರಿಗೂ ಯಾವ ಧಕ್ಕೆಯಾಗದಂತೆ ಹೋರಾಡುತ್ತೇನೆ. ಕಾಲೇಜು ಉಳಿಯಬೇಕು. ಇಲ್ಲ ರಾಜಕೀಯ ಅಂತ್ಯವಾಗಬೇಕೆಂಬ ತೀರ್ಮಾನಕ್ಕೆ ಬಂದಿದ್ದೇನೆ. ರಾಜ್ಯ ಸರ್ಕಾರ ಕಣ್ಣು ತೆರೆಯಬೇಕೆಂದು ವಿನಂತಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು, ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ, ಮಾಜಿ ಸದಸ್ಯ ರವಿಕುಮಾರ್, ಬಾಲಕೃಷ್ಣಸ್ವಾಮಿ, ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.

[t4b-ticker]

You May Also Like

More From Author

+ There are no comments

Add yours