ಮಂಗಳೂರು: ದಸರಾ ನಮ್ಮ ನಾಡ ಹಬ್ಬ.ಆದರೂ ಕ್ರಿಶ್ಚಿಯನ್ ಶಾಲೆಗಳಲ್ಲಿ ಪರೀಕ್ಷೆಗಳನ್ನು ಇಟ್ಟಿದ್ದಾರೆ. ಕ್ರಿಶ್ಚಿಯನ್ ಶಾಲೆಗಳಲ್ಲಿ ಶೇ.90 ರಷ್ಟು ಹಿಂದು ವಿದ್ಯಾರ್ಥಿಗಳು, ಶಿಕ್ಷಕರಿದ್ದಾರೆ. ಹೀಗಾಗಿ ಕ್ರಿಶ್ಚಿಯನ್ ಶಾಲೆಗಳು ದಸರಾ ಹಬ್ಬಕ್ಕೆ ಹೆಚ್ಚು ರಜೆಯನ್ನು ಕೊಡಬೇಕು. ಆದ್ರೆ ಕ್ರಿಸ್ ಮಸ್ ಹಬ್ಬ ಒಂದೇ ದಿನ ಇರೋದು. ಆದ್ರೆ ಯಾಕೆ ಹೆಚ್ಚು ದಿನ ರಜೆ ಕೊಡ್ತಾರೆ. ಈ ಮೂಲಕ ಕ್ರಿಶ್ಚಿಯನ್ ಧರ್ಮ ಹೇರುತ್ತಾ ಕನ್ವರ್ಟ್ ಮಾಡುತ್ತಿದ್ದಾರೆ. ಇದು ನಿಲ್ಲದಿದ್ರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಮಂಗಳೂರಿನಲ್ಲಿ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.





