ವೇಣೂರು: ಬೆಳ್ತಂಗಡಿ ತಾಲೂಕಿನ ಬಜಿರೆ ಸರಕಾರಿ ಪಿಎಂಶ್ರೀ ಕೆಪಿಎಸ್ ಶಾಲೆಗೆ ನೂತನ ಹಿರಿಯ ಪದವೀಧರೇತರ ಮುಖ್ಯ ಶಿಕ್ಷಕರ ನೇಮಕವಾಗಿದ್ದು, ಇಂದು (ಸೆ. 24) ಅಧಿಕಾರ ವಹಿಸಿಕೊಂಡರು.
ಬಳಂಜ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ರಂಗಸ್ವಾಮಿ ಸಿ.ಆರ್. ಅವರು ಹಿರಿಯ ಮುಖ್ಯ ಶಿಕ್ಷಕರಾಗಿ ಭಡ್ತಿಹೊಂದಿ ಬಜಿರೆ ಶಾಲೆಗೆ ವರ್ಗಾವಣೆಗೊಂಡು ಇಂದು ಅಧಿಕಾರ ಸ್ವೀಕರಿಸಿದರು. ಪ್ರಭಾರ ಮುಖ್ಯ ಶಿಕ್ಷಕಿಯಾಗಿದ್ದ ರಶ್ಮಿ ಶೆಟ್ಟಿ ಅವರು ರಂಗಸ್ವಾಮಿ ಸಿ.ಆರ್. ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಈ ಹಿಂದೆ ಕಮಲಾಜಿ ಎಸ್. ಜೈನ್ ಅವರು ಮುಖ್ಯ ಶಿಕ್ಷಕರಾಗಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ವರ್ಗಾವಣೆ ಬಳಿಕ ಖಾಯಂ ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಇದ್ದು, ರಶ್ಮಿ ಶೆಟ್ಟಿ ಅವರು ಪ್ರಭಾರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ರಶ್ಮಿ ಶೆಟ್ಟಿ ಹಾಗೂ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ ರಂಗಸ್ವಾಮಿ ಸಿ.ಆರ್. ಆತ್ಮೀಯವಾಗಿ ಬರಮಾಡಿಕೊಂಡು ಸ್ವಾಗತಿಸಿದರು.





