ವೇಣೂರು: ವೇಣೂರು-ಮೂಡಬಿದಿರೆ ರಾಜ್ಯಹೆದ್ದಾರಿ 70ರ ಪಡ್ಡಂದಡ್ಕ ಬಳಿ ಇದ್ದ ಅಪಾಯಕಾರಿ ಹೆದ್ದಾರಿ ಗುಂಡಿಗಳನ್ನು ಇಲ್ಲಿಯ ರಿಕ್ಷಾ ಚಾಲಕರು ಶ್ರಮದಾನದ ಮೂಲಕ ಮುಚ್ಚಿದ್ದಾರೆ.

ಪೆಟ್ರೋಲ್ ಪಂಪಿನ ಹತ್ತಿರ ತಿರುವ ರಸ್ತೆಯಲ್ಲಿ ದೊಡ್ಡದಾದ ಹೊಂಡ ನಿರ್ಮಾಣವಾಗಿತ್ತು. ವಿಶೇಷವಾಗಿ ದ್ವಿಚಕ್ರ ವಾಹನಗಳಿಗೆ ಇದು ಕಂಟಕವಾಗಿತ್ತು. ಅಪಾಯವನ್ನರಿತ
ಪಡ್ಡಂದಡ್ಕ ರಿಕ್ಷಾ ಚಾಲಕರು ಹೊಯಿಗೆ, ಜಲ್ಲಿ ತಂದು ಗುಂಡಿ ಮುಚ್ಚಿದ್ದಾರೆ. ಶ್ರಮದಾನದಲ್ಲಿ ಬಸೀರ್ ಕೆಪಿ, ರಂಜಿತ್, ರಾಜು, ನಿತಿನ್, ಇಸ್ಮಾಯಿಲ್, ದಿನೇಶ, ಮಹಮ್ಮದ್ ಮತ್ತಿರರು ಸಹಕರಿಸಿದ್ದರು. ಆ ರಸ್ತೆಯಲ್ಲಿರುವ ಹಲವು ಅಪಾಯಕಾರಿ ಗುಂಡಿಗಳನ್ನು ಮುಚ್ಚಿ ತಾತ್ಕಾಲಿಕ ಪರಿಹಾರ ಮಾಡಿದ್ದು ಲೋಕೋಪಯೋಗಿ ಇಲಾಖೆ ಈ ಬಗ್ಗೆ ಗಮನ ನೀಡಬೇಕಾಗಿದೆ. ಗುರುವಾಯನಕೆರೆಯಿಂದ ವೇಣೂರು-ಹೊಸಂಗಡಿವರೆಗೆ ಹಲವು ಅಪಾಯಕಾರಿ ಗುಂಡಿಗಳಿವೆ.



