ಮಳೆಗಾಲ ಶುರುವಾದರೆ ಸಾಕು ಪ್ರವಾಸಿ ತಾಣಗಳು, ಧುಮ್ಮಿಕ್ಕುವ ಜಲಪಾತಗಳು ಕಾಣಬೇಕೆಂಬ ಹಂಬಲ ಅನೇಕರಲ್ಲಿರುತ್ತದೆ. ಪ್ರವಾಸಿ ಸ್ಥಳಗಳಲ್ಲಿ ಜನರ ಗುಂಪೇ ಕಾಣಿಸುತ್ತದೆ. ಕೆಲವೊಮ್ಮೆ ಹಸಿರಿನಿ ಮಧ್ಯೆ ಹಾಲಿನ ನೊರೆಯಂತೆ ಹರಿಯುವ ಜಲಪಾತ ನೋಡಲು ಹೋಗಿ, ಜೀವಕ್ಕೆ ಆಪತ್ತು ತಂದುಕೊಂಡಿರುತ್ತೇವೆ. ಅಂಥದ್ದೇ ಭಯಾನಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಜಲಪಾತದ ತುತ್ತ ತುದಿಯಲ್ಲಿ ಸಿಲುಕಿ ಸಾವಿನ ದವಡೆಯಿಂದ ಯುವಕನೋರ್ವ ಪಾರಾಗಿದ್ದಾನೆ. ಆತನ ಸ್ನೇಹಿತರ ಸಾಹಸದ ದೃಶ್ಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಬುದ್ಧಿವಾದ ಹೇಳಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಮಾಲ್ಶೇಜ್ ಘಾಟ್ನಲ್ಲಿನ ಸುಂದರ ಜಲಪಾತ ನೋಡಲು ಅನೇಕರು ತೆರಳಿದ್ದಾರೆ. ಈ ವೇಳೆ ಯುವಕರ ಗುಂಪು ಸಹ ಜಲಪಾತ ವೀಕ್ಷಣೆಗೆ ಹೋದಾಗ ಈ ಅವಘಡ ನಡೆದಿದೆ. ಒಬ್ಬ ಯುಕವ ಮೇಲಿಂದ ಕೆಳಗ ಬೀಳುವ ಜಲಪಾತದ ತುತ್ತ ತುದಿಯಲ್ಲಿ ಸಿಲುಕಿದ್ದಾನೆ. ನೀರಿನ ರಭಸ ತಡೆದು ನಿಂತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ತಪ್ಪಿದ ದುರಂತ!
ಎರಡು ಬಂಡೆಗಳ ನಡುವೆ ಹರಿಯುವ ಜಲಪಾತದ ನಡುವೆ ಸಿಲುಕಿ ಅವಸ್ಥೆ ಪಡುತ್ತಿದ್ದ. ಆತನ ಸ್ನೇಹಿತರು ಜೀವದ ಹಂಗೂ ತೊರೆದು ಸಾವಿನ ದವಡೆಯಲ್ಲಿದ್ದ ಆತನನ್ನು ಕಾಪಾಡಿದ್ದಾರೆ. ತುಂಡು ಹಗ್ಗ, ಕೈಗೆ ಸಿಕ್ಕ ವಸ್ತುಗಳು, ಬಟ್ಟೆ ಸಮೇತ ಬಂದು ಬಂಡೆಗಳ ಮೇಲೆ ನಿಂತು ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ಫಾಲ್ಸನ್ ತುದಿಗೆ ನಿಂತವನಿಗೆ ಎಸೆದಿದ್ದಾರೆ. ಆತ ಅದನ್ನು ಹಿಡಿದುಕೊಂಡು ಬಂಡ ಏರಿದ್ದಾನೆ. ಇದೆಲ್ಲವು ವಿಡಿಯೋದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಸಂಭನೀಯ ಮಹಾದುರಂತವೊಂದು ತಪ್ಪಿಹೋಗಿದೆ.
ಅಪಾಯಕಾರಿ ತಾಣಗಳಿಗೆ ಬಂದಾಗ ಸಾರ್ವಜನಿಕರಾದವರು ಸಹ ಎಚ್ಚರಿಕೆಯಿಂದ ವರ್ತಿಸಬೇಕು. ಸೆಲ್ಫಿ ಪೋಟೋ, ವಿಡಿಯೋ ಹುಚ್ಚಾಟದಲ್ಲಿ ಮೈ ಮರೆತರೆ ಜೀವಕ್ಕೆ ಅಪಾಯ ತಂದೊಡ್ಡಬಹುದು. ಒಂದು ಕ್ಷಣ ನಿರ್ಲಕ್ಷ್ಯದಿಂದ ಅನಿರೀಕ್ಷಿತ ಘಟನೆಗಳು ಎದುರಾಗಿಬಿಡುತ್ತವೆ. ಪ್ರಸ್ತುತ ಘಟನೆಯಲ್ಲಿ ಈ ಯುವಕ ಜಲಾಪಾತ ತುದಿಗೆ ಹೋಗಿದ್ದೇಗೆ? ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ. ದಾಟುವಾಗ ನೀರು ಬಂತಾ, ಅಥವಾ ಎರಡು ಬಂಡೆಗಳ ನಡುವೆ ಕಾಲಿಟ್ಟು ಜಾರಿ ತುದಿಗೆ ಹೋಗಿ ಬ್ಯಾಲೆನ್ಸ್ ಮಾಡಿ ನಿಂತನಾ? ಎಂಬುದು ಗೊತ್ತಾಗಬೇಕಿದೆ.



