ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಧನಲಕ್ಷ್ಮೀ ಪೂಜಾರಿ ಭಾಗಿ
ಆರಂಬೋಡಿ: ಬಿರ್ವೆರ್ ಕೂಟ ಆರಂಬೋಡಿ ಇವರ ಆಶ್ರಯದಲ್ಲಿ ದ್ವಿತೀಯ ವರ್ಷದ ಬೆನ್ನಿದ ಕಂಡೊಡು ಕೆಸರ್ದ ಗೊಬ್ಬು ಕೆಸರುಗದ್ದೆ ಕ್ರೀಡಾಕೂಟವು ಜು. 5ರಂದು ಆರಂಬೋಡಿಯ ದೇಲೋಡಿ ಬರ್ಕೆ ಬಾಕಿಮಾರು ಗದ್ದೆಯಲ್ಲಿ ಬೆಳಿಗ್ಗೆ 8-30ರಿಂದ ನಡೆಯಲಿದೆ.

ಕ್ರೀಡಾಕೂಟದಲ್ಲಿ ಪುರುಷರು ಮತ್ತು ಮಹಿಳೆಯರು ಹಾಗೂ ಮಕ್ಕಳಿಗೆ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿದೆ. ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ, ರಿಲೇ ಹಾಗೂ ಇತರ ಆಟೋಪ ಹಾಗೂ ಮನೊರಂಜನ ಸ್ಪರ್ಧೆಗಳು ಕೆಸರುಗದ್ದೆಯಲ್ಲಿ ನಡೆಯಲಿದೆ.
ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಟ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ನಟ ಭೋಜರಾಜ ವಾಮಂಜೂರು, ನಿರ್ದೇಶಕ ಅನೀಶ್ ಪೂಜಾರಿ ವೇಣೂರು ಹಾಗೂ ರಾಷ್ಟ್ರೀಯ ಮಟ್ಟದ ಕಬ್ಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವಿದೆ ಎಂದು ಆಯೋಜಕರಲ್ಲಿ ಓರ್ವರಾದ ಕಿರಣ್ ಕುಮಾರ್ ಮಂಜಿಲ ತಿಳಿಸಿದ್ದಾರೆ.



