ವೇಣೂರು: ಕಾಶಿಪಟ್ಣದ ಮಹೇಶ್ ಕಂಪೌಂಡ್ ಶ್ರೀ ರಾಮರತ್ನ ಮನೆಯಂಗಲದಲ್ಲಿ ಹಾಕಲಾಗಿರುವ ಭವ್ಯ ರಂಗ ಮಂಟಪದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ಫೆ. 2ರಂದು ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ.
ಅಂದು ಸಂಜೆ 6-00 ಗಂಟೆ ಚೌಕಿಪೂಜೆಯ ಬಳಿಕ ಯಕ್ಷಗಾನ ಆರಂಭವಾಗಲಿದೆ ಎಂದು ಸೇವಾರ್ಥಿಗಳಾದ ಶ್ರೀಮತಿ ಶುಭವಿ ಮತ್ತು ಮನೋಜ್ ಕೋಟ್ಯಾನ್ ಹಾಗೂ ಶ್ರೀಮತಿ ರತ್ನ ಕುದುರು ಕಾಶಿಪಟ್ಣ ಅವರು ತಿಳಿಸಿದ್ದಾರೆ.






